For Quick Alerts
ALLOW NOTIFICATIONS  
For Daily Alerts

ನಿಂಬೆ ರಸ ಬಳಸಿ ಬ್ಲ್ಯಾಕ್ ಹೆಡ್ಸ್ ಹೋಗಲಾಡಿಸಿ!

|

ನಿಂಬೆ ಹಣ್ಣಿನಲ್ಲಿ ಸೌಂದರ್ಯ ಸಮಸ್ಯೆಗಳನ್ನು ಹೋಗಲಾಡಿಸುವ ಮಾಂತ್ರಿಕ ಶಕ್ತಿಯಿದೆ ಅನ್ನುವುದು ತಿಳಿದಿರುವ ವಿಷಯ. ಇದನ್ನು ತ್ವಚೆ ಹೊಳಪನ್ನು ಹೆಚ್ಚಿಸಲು ಹಾಗೂ ಮುಖದಲ್ಲಿ ಮೊಡವೆಗಳಿದ್ದರೆ ಅವುಗಳನ್ನು ಹೋಗಲಾಡಿಸಲು ಹೆಚ್ಚಾಗಿ ಬಳಸಲಾಗುವುದು.

ಆದರೆ ಇದರ ಸೌಂದರ್ಯವರ್ಧಕ ಗುಣ ಇಷ್ಟಕ್ಕೆ ಸೀಮಿತವಾಗಿಲ್ಲ, ಇದು ಮುಖದಲ್ಲಿರುವ ಬ್ಲ್ಯಾಕ್ ಹೆಡ್ಸ್ ಅನ್ನು ಹೋಗಲಾಡಿಸುತ್ತದೆ. ನಿಂಬೆಹಣ್ಣು ಬಳಸಿ ಬ್ಲ್ಯಾಕ್ ಹೆಡ್ಸ್ ಹೊಗಲಾಡಿಸುವುದು ಹೇಗೆ ಎಂದು ತಿಳಿಯಲು ಮುಂದೆ ಓದಿ:

Remove Blackheads Using Lemon Juice

ನಿಂಬೆ ಹಣ್ಣಿನ ಸ್ಕ್ರಬ್: ಮುಖವನ್ನು ಬಿಸಿ ನೀರಿನಿಂದ ತೊಳೆಯಬೇಕು. ನಂತರ ನಿಂಬೆ ಹಣ್ಣನ್ನು ಕತ್ತರಿಸಿ, ಒಂದು ಭಾಗವನ್ನು ತೆಗೆದುಕೊಂಡು ಮುಖಕ್ಕೆ 3-4 ನಿಮಿಷ ಉಜ್ಜಬೇಕು. ನಂತರ ತಣ್ಣೀರಿನಿಂದ ಮುಖ ತಣ್ಣೀರಿನಿಂದ ಮುಖ ತೊಳೆಯಬೇಕು. ಈ ರೀತಿ ದಿನದಲ್ಲಿ 2 ಭಾರಿ ಮಾಡಿದರೆ ಕಪ್ಪು ಕಲೆಗಳು ಕಡಿಮೆಯಾಗುವುದು.

ನಿಂಬೆ ಮತ್ತು ಸಕ್ಕರೆಯ ಸ್ಕ್ರಬ್: ಈ ಸ್ಕ್ರಬ್ ಮಾಡಿದರೆ ಮುಖದಲ್ಲಿರುವ ಬ್ಲ್ಯಾಕ್ ಹೆಡ್ಸ್ ಬೇಗನೆ ಗುಣವಾಗುತ್ತದೆ. ನಿಂಬೆ ರಸಕ್ಕೆ ಸ್ವಲ್ಪ ಸಕ್ಕರೆ ಹಾಕಿ ಅದರಿಂದ ಮುಖವನ್ನು ತಿಕ್ಕಿ ನಂತರ ಹದ ಬಿಸಿ ನೀರಿನಿಂದ ಮುಖ ತೊಳೆಯಬೇಕು.

ನಿಂಬೆ ರಸ ಮತ್ತು ಮೊಟ್ಟೆಯ ಬಿಳಿ: ಮೊಟ್ಟೆಯ ಬಿಳಿಗೆ ಸ್ವಲ್ಪ ನಿಂಬೆ ರಸವನ್ನು ಹಿಂಡಿ, ನಂತರ ಹತ್ತಿಯ ಉಂಡೆಯನ್ನು ಈ ಮಿಶ್ರಣದಲ್ಲಿ ಅದ್ದಿ ಅದರಿಂದ ಮುಖವನ್ನು ಸ್ಕ್ರಬ್ ಮಾಡಿ. ಈ ರೀತಿ ವಾರದಲ್ಲಿ ಎರಡು ದಿನ ಮಾಡುತ್ತಾ ಬಂದರೆ ಬ್ಲ್ಯಾಕ್ ಹೆಡ್ಸ್ ಅನ್ನು ಸಂಪೂರ್ಣವಾಗಿ ಹೋಗಲಾಡಿಸಬಹುದು.

ನಿಂಬೆ ರಸ ಮತ್ತು ರೋಸ್ ವಾಟರ್: ಸ್ವಲ್ಪ ರೋಸ್ ವಾಟರ್ ಅನ್ನು 1/2 ಚಮಚ ನಿಂಬೆರಸದ ಜೊತೆ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಒಣಗಿದ ಬಳಿಕ ಮುಖ ತೊಳೆಯಬೇಕು. ಈ ರೀತಿ ಪ್ರತಿದಿನ ಮಾಡುತ್ತಾ ಬಂದರೆ ಮುಖದಲ್ಲಿರುವ ಕಪ್ಪು ಕಲೆಗಳು ಕಡಿಮೆಯಾಗಿ ಮುಖದ ಕಾಂತಿ ಹೆಚ್ಚುವುದು.

English summary

Remove Blackheads Using Lemon Juice | Tips For Skin Care | ನಿಂಬೆ ರಸ ಬಳಸಿ ಬ್ಲ್ಯಾಕ್ ಹೆಡ್ಸ್ ಹೋಗಲಾಡಿಸಿ! | ತ್ವಚೆ ಆರೈಕೆಗೆ ಕೆಲ ಸಲಹೆಗಳು

Lemon is a natural bleach for your face. The natural citrus juice of this fruit can be very good for the skin. You can either use it as a bleach or scrub a fresh slice lemon on your face to remove dead skin, blackhead and heal open pores.
X
Desktop Bottom Promotion