For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ತ್ವಚೆ ರಕ್ಷಣೆಗೆ ಕಿತ್ತಳೆಯ 5 ಫೇಸ್ ಮಾಸ್ಕ್

|

ಸೀಸನ್ ಫುಡ್ಸ್ ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಕೇಳಿರಬಹುದು. ಅದರಲ್ಲಿ ಕಿತ್ತಳೆ ಚಳಿಗಾಲದ ಸೀಸನ್ ಫುಡ್ ಆಗಿದೆ. ಕಿತ್ತಳೆ ತಿಂದರೆ ಆರೋಗ್ಯಕ್ಕೆ ಮಾತ್ರವಲ್ಲ ತ್ವಚೆಗೂ ಒಳ್ಳೆಯದು. ಕಿತ್ತಳೆಯ ಸಿಪ್ಪೆಯನ್ನು ಬಿಸಾಡದೆ ಅದರಿಂದ ಫೇಸ್ ಮಾಸ್ಕ್ ತಯಾರಿಸಿದರೆ ತ್ವಚೆಯ ಹೊಳಪನನ್ನು ಹೆಚ್ಚಿಸಬಹುದು. ಕಿತ್ತಳೆಯಿಂದ ಈ ಕೆಳಗಿನಂತೆ ಫೇಸ್ ಮಾಸ್ಕ್ ಮಾಡಿ ನಿಮ್ಮ ತ್ವಚೆ ಅಂದವನ್ನು ಹೆಚ್ಚಿಸಿಕೊಳ್ಳಬಹುದು.

1. ಕಿತ್ತಳೆ ರಸದ ಫೇಸ್ ಮಾಸ್ಕ್: ಕಿತ್ತಳೆ ರಸವನ್ನು ಮುಖಕ್ಕೆ ಹಚ್ಚಿ 5 ನಿಮಿಷದ ಬಳಿಕ ತಣ್ಣೀರಿನಿಂದ ಮುಖ ತೊಳೆಯಿರಿ. ಈ ಫೇಸ್ ಪ್ಯಾಕ್ ಮುಖದ ತ್ವಚೆಯನ್ನು ಬಿಗಿಗೊಳಿಸುತ್ತದೆ. ಈ ಫೇಸ್ ಮಾಸ್ಕ್ ಅನ್ನು ಪ್ರತಿದಿನ ಸ್ನಾನ ಮಾಡುವ ಮೊದಲು ಮಾಡಿದರೆ ಮುಖ ದಿನವಿಡೀ ತಾಜಾತನದಿಂದ ಕೂಡಿರುತ್ತದೆ.

Homemade Orange Face Packs

2. ಕಿತ್ತಳೆ ರಸ ಮತ್ತು ಹಾಲಿನಿಂದ ಕ್ಲೆನ್ಸಿಂಗ್ ಮಾಡುವುದು: ಪ್ರತಿದಿನ ಮುವನ್ನು ಕ್ಲೆನ್ಸ್ ಮಾಡಿದರೆ ಮುಖದಲ್ಲಿರುವ ಕಶ್ಮಲಗಳನ್ನು ಹೋಗಲಾಡಿಸಬಹುದು. ಪ್ರತಿದಿನ ರಾತ್ರಿ ಕಿತ್ತಳೆ ರಸ ಮತ್ತು ಹಾಲನ್ನು ಮಿಶ್ರಣ ಮಾಡಿ ಹತ್ತಿಯನ್ನು ಅದರಲ್ಲಿ ಅದ್ದಿ ಅದರಿಂದ ಮುಖ ಉಜ್ಜಬೇಕು. ಈ ರೀತಿ ಮಾಡಿದರೆ ದೂಳಿನಿಂದ ಮುಖ ಹಾಳಾಗುವುದನ್ನು ತಡೆಯಬಹುದು.

3. ಕಿತ್ತಳೆ ಸಿಪ್ಪೆ ಮತ್ತು ಮೊಸರು: ಈ ಫೇಸ್ ಸ್ಕ್ರಬ್ ಅನ್ನು ಮಹಿಳೆಯರು ಮಾತ್ರವಲ್ಲ ಪುರುಷರೂ ಮಾಡಬಹುದು. ಕಿತ್ತಳೆ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಬೇಕು. ನಂತರ ಅದನ್ನು ಅರೆದು ಮೊಸರಿನಲ್ಲಿ ಮಿಶ್ರಣ ಮಾಡಿ, ಅರ್ಧ ಚಮಚ ನಿಂಬೆ ರಸ ಸೇರಿಸಿ ಮುಖಕ್ಕೆ ಹಚ್ಚಬೇಕು. ನಂತರ ಅರ್ಧ ಗಂಟೆಯ ಬಳಿಕ ಮುಖ ತೊಳೆಯಬೇಕು. ಈ ರೀತಿ ವಾರಕ್ಕೊಮ್ಮೆ ಮಾಡುತ್ತಾ ಬಂದರೆ ಮುಖದಲ್ಲಿ ಕಪ್ಪುಕಲೆ, ಮೊಡವೆ ಈ ರೀತಿಯ ಸಮಸ್ಯೆಗಳು ಕಂಡು ಬರುವುದಿಲ್ಲ.

5. ಕಿತ್ತಳೆ ರಸ, ನಿಂಬೆ ರಸ ಮತ್ತು ಮೊಸರು: ಈ 3 ವಸ್ತುಗಳನ್ನು ಸಮ ಪ್ರಮಾಣದಲ್ಲಿ ಹಾಕಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ 10 ನಿಮಿಷದ ಬಳಿಕ ತಣ್ಣೀರಿನಿಂದ ಮುಖ ತೊಳೆಯಬೇಕು. ಈ ರೀತಿ ಮಾಡಿದರೆ ಮುಖದ ಅಂದ ಹೆಚ್ಚಾಗುವುದು.

6. ಕಿತ್ತಳೆ ಸಿಪ್ಪೆ ಮತ್ತು ಓಟ್ಸ್: ಕಿತ್ತಳೆ ಸಿಪ್ಪೆಯನ್ನು ಪೇಸ್ಟ್ ಮಾಡಿ , ಓಟ್ಸ್ ಅನ್ನು ನುಣ್ಣಗೆ ಪುಡಿ ಮಾಡಿ ಅದನ್ನು ಹಾಲಿನಲ್ಲಿ ಮಿಶ್ರಣ ಮಾಡಿ ಇದರಿಂದ ಮುಖವನ್ನು ಸ್ಕ್ರಬ್ ಮಾಡಬಹುದು.

ಈ ವಿಧಾನಗಳು ತ್ವಚೆ ಸಮಸ್ಯೆಯನ್ನು ದೂರವಿಡುವಲ್ಲಿ ತುಂಬಾ ಸಹಾಯಕಾರಿಯಾಗಿವೆ.

English summary

Homemade Orange Face Packs | Tips For Skin Care | ಚಳಿಗಾಲದಲ್ಲಿ ತ್ವಚೆ ರಕ್ಷಣೆಗೆ ಕಿತ್ತಳೆಯ ಫೇಸ್ ಮಾಸ್ಕ್ | ತ್ವಚೆ ಆರೈಕೆಗೆ ಕೆಲ ಸಲಹೆಗಳು

Oranges are a rich source of vitamin C. This vitamin improves the texture of the skin, fights tanning and slows ageing. You can either use orange pulp or grind the peel (after drying under the sun) to make homemade face packs. Want to try this wonder fruit to get a glowing skin in winter?
X
Desktop Bottom Promotion