ಬೆಳ್ಳುಳ್ಳಿಯಲ್ಲಿದೆ 7 ಸೌಂದರ್ಯವರ್ಧಕ ಗುಣಗಳು!

By:
Subscribe to Boldsky

Beauty Benefits From Garlic
ದೇಹದ ಆರೋಗ್ಯಕ್ಕೆ ಬೆಳ್ಳುಳ್ಳಿ ತಿಂದರೆ ಒಳ್ಳೆಯದು ಎನ್ನುವುದು ತಿಳಿದಿರುವ ವಿಷಯ. ಆದರೆ ಬೆಳ್ಳುಳ್ಳಿಗೆ ತ್ವಚೆಯ ದೇಹದ ಆರೋಗ್ಯ ಮಾತ್ರವಲ್ಲ ತ್ವಚೆಯ ಆರೋಗ್ಯವನ್ನು ಹೆಚ್ಚಿಸುತ್ತದೆ. ಬೆಳ್ಳುಳ್ಳಿಯಲ್ಲಿರುವ ಈ ಕೆಳಗಿನ ಗುಣಗಳಿಂದಾಗಿ ಇದೊಂದು ಅತ್ಯಂತ ಪರಿಣಾಮಕಾರಿಯಾದ ಸೌಂದರ್ಯವರ್ಧಕ ವಸ್ತು ಎಂದು ಗುರುತಿಸಲ್ಪಟ್ಟಿದೆ.

1. ಮೊಡವೆಯನ್ನು ಗುಣಪಡಿಸುತ್ತದೆ: ಮೊಡವೆ ಇರುವ ಜಾಗಕ್ಕೆ ಬೆಳ್ಳುಳ್ಳಿಯ ರಸವನ್ನು ಹಚ್ಚಿದರೆ ಮೊಡವೆ ಕಡಿಮೆಯಾಗುವುದು. ಬರೀ ಬೆಳ್ಳುಳ್ಳಿ ರಸ ಹಚ್ಚಿದರೆ ಮುಖ ಉರಿಯಬಹುದು, ಆದ್ದರಿಂದ ಬೆಳ್ಳುಳ್ಳಿ ರಸವನ್ನು ಜೇನಿನ ಜೊತೆ ಅಥವಾ ಸೇಬಿನ ಪೇಸ್ಟ್ ಜೊತೆ ಮಿಶ್ರಣ ಮಾಡಿ ಹಚ್ಚಿ.

2. ತ್ವಚೆಯನ್ನು ಮೃದುವಾಗಿದುತ್ತದೆ: ಫೇಸ್ ಮಾಸ್ಕ್ ಜೊತೆ ಒಂದು ಎಸಳು ಬೆಳ್ಳುಳ್ಳಿಯನ್ನು ಪೇಸ್ಟ್ ಮಾಡಿ ಅದರ ಜೊತೆ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿದರೆ ಮುಖ ತ್ವಚೆ ಮೃದುವಾಗುವುದು.

3. ತಾರುಣ್ಯವನ್ನು ಕಾಪಾಡುತ್ತದೆ: ವಾರಕ್ಕೆ ಒಮ್ಮೆ ಫೇಸ್ ಮಾಸ್ಕ್ ನಲ್ಲಿ ಒಂದು ಎಸಳು ಬೆಳ್ಳುಳ್ಳಿಯನ್ನು ಚೆನ್ನಾಗಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿದರೆ ಮುಖದಲ್ಲಿ ಅಕಾಲಿಕ ನೆರಿಗೆ ಬೀಳುವುದಿಲ್ಲ ಹಾಗೂ ಬೆಳ್ಳುಳ್ಳಿ ತಾರುಣ್ಯವನ್ನು ಕಾಪಾಡುತ್ತದೆ.

4. ಬ್ಲ್ಯಾಕ್ ಹೆಡ್ಸ್ ವಿರುದ್ಧ ಹೋರಾಡುತ್ತದೆ: ಬೆಳ್ಳುಳ್ಳಿಯನ್ನು ಆಹಾರಕ್ರಮದಲ್ಲಿ ಸೇರಿಸುವುದರಿಂದ ಮತ್ತು ಫೇಸ್ ಮಾಸ್ಕ್ ನ ಜೊತೆ ಬಳಸುವುದರಿಂದ ಮುಖದಲ್ಲಿ ಬ್ಲ್ಯಾಕ್ ಹೆಡ್ಸ್ ಸಮಸ್ಯೆ ಕಂಡುಬರುವುದಿಲ್ಲ.

5. ಕಲೆ ಹೋಗಲಾಡಿಸುತ್ತದೆ: ಬೇಡದ ಮಚ್ಚೆ ಅಥವಾ ಕಲೆಗಳಿದ್ದರೆ ಆ ಭಾಗಕ್ಕೆ ಬೆಳ್ಳುಳ್ಳಿ ಹಚ್ಚಿದರೆ ಕಲೆ ಮಾಯವಾಗುತ್ತದೆ.

6. ಸ್ಟ್ರೆಚ್ ಮಾರ್ಕ್ಸ್ ಅನ್ನು ಹೋಗಲಾಡಿಸುತ್ತದೆ: ಹೆರಿಗೆಯ ನಂತರ ಸ್ಟ್ರೆಚ್ ಮಾರ್ಕ್ಸ್ ಬೀಳುವುದು ಸಹಜ. ಈ ರೀತಿ ಸ್ಟ್ರೆಚ್ ಮಾರ್ಕ್ಸ್ ಬಿದ್ದಿದ್ದರೆ ಆ ಭಾಗಕ್ಕೆ ಬೆಳ್ಳುಳ್ಳಿ ರಸವನ್ನು ಹಾಲಿನ ಜೊತೆ ಮಿಶ್ರಣ ಮಾಡಿ ಹಚ್ಚುತ್ತಾ ಬಂದರೆ ಸ್ಟ್ರೆಚ್ ಮಾರ್ಕ್ಸ್ ಕಡಿಮೆಯಾಗುವುದು. ಒಂದು ಎಸಳು ಬೆಳ್ಳುಳ್ಳಿ ಪೇಸ್ಟ್ ಮಾಡಿ ಹಚ್ಚಿದರೆ ಸಾಕು.

7. ಕೂದಲಿನ ಆರೈಕೆಗೆ: ಬೆಳ್ಳುಳ್ಳಿ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಸೂಚನೆ: ತುಂಬಾ ಬೆಳ್ಳುಳ್ಳಿ ಹಚ್ಚಿದರೆ ಚರ್ಮ ಸುಟ್ಟು ಹೋಗುತ್ತದೆ.

Story first published: Wednesday, September 26, 2012, 16:43 [IST]
English summary

Beauty Benefits From Garlic | Tips For Beauty | ಬೆಳ್ಳುಳ್ಳಿಯಲ್ಲಿರುವ ಸೌಂದರ್ಯವರ್ಧಕ ಗುಣಗಳು | ಸೌಂದರ್ಯಕ್ಕಾಗಿ ಕೆಲ ಸಲಹೆಗಳು

Garlic is magical food is also good for your hair and heart. So, do not forget to include this ingredient. However, do not apply garlic on a regular basis. Although it has skin benefits, excessive appliance can be harmful for the skin.
Please Wait while comments are loading...
Subscribe Newsletter