ಕಾಂತಿಯುತ ತ್ವಚೆ ಪಡೆಯಲು ಈ ಹಣ್ಣು ತಿನ್ನಿ!

By:
Subscribe to Boldsky

ಪ್ರತಿಯೊಬ್ಬರು 'ನಾನು ಅಂದವಾಗಿ ಕಾಣಬೇಕು' ಎಂದು ಆಸೆ ಪಡುವುದು ಸಹಜ. ಅಂದವಾಗಿ ಕಾಣಿಸಲು ಡ್ರೆಸ್ಸಿಂಗ್ ಚೆನ್ನಾಗಿರಬೇಕು, ಮೇಕಪ್ ಮಾಡಬೇಕು ಇವೆಲ್ಲಾ ನಿಜ. ಆದರೆ ಇವೆಲ್ಲಾಕ್ಕಿಂತ ಹೆಚ್ಚಾಗಿ ತ್ವಚೆ ಅಕರ್ಷಕವಾಗಿರಬೇಕು. ತ್ವಚೆ ಕಾಂತಿಯನ್ನು ಕಾಪಾಡಿಕೊಳ್ಳುವಲ್ಲಿ ನಮ್ಮ ಜೀವನ ಶೈಲಿ ಕೂಡ ಪ್ರಮುಖವಾದ ಅಂಶವಾಗಿರುತ್ತದೆ.

ಮುಖದ ಹೊಳಪನ್ನು ಹೆಚ್ಚಿಸಲು ಕ್ರೀಮ್ ಹಚ್ಚಬೇಕೆಂದು ಯೋಚಿಸುತ್ತೇವೆ ಹೊರತು ಯಾವ ಹಣ್ಣು ತಿಂದು ತ್ವಚೆಯ ಅಂದವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಯೋಚಿಸುವುದಿಲ್ಲ. ಈ ಕೆಳಗೆ ಕೆಲವೊಂದು ಹಣ್ಣುಗಳ ಬಗ್ಗೆ ಹೇಳಲಾಗಿದೆ. ಇವುಗಳನ್ನು ಪ್ರತಿನಿತ್ಯ ತಿಂದರೆ ಸಾಕು ನಿಮ್ಮ ಮುಖದ ಅಂದವನ್ನು ಹೆಚ್ಚಿಸಲು ಯಾವ ಕ್ರೀಮ್ ನ ಅಗತ್ಯವಿಲ್ಲ:

1. ಕಿವಿ ಹಣ್ಣು

ಕಿವಿ ಹಣ್ಣಿನಲ್ಲಿ ಪೆಕ್ಟಿನ್ ಮತ್ತು ನಾರಿನಂಶವಿದ್ದು ನಿಮ್ಮ ಆರೋಗ್ಯವನ್ನು ಹೆಚ್ಚಿಸುವುದರ ಜೊತೆಗೆ ಸ್ವಚ್ಛವಾದ ತ್ವಚೆಯನ್ನು ಪಡೆಯಬಹುದು ಹಾಗೂ ಮುಖದ ಕಾಂತಿಯ್ನನು ಹೆಚ್ಚಿಸಿಕೊಳ್ಳಬಹುದು.

2. ದಾಳಿಂಬೆ

ದಾಳಿಂಬೆಯಲ್ಲಿ antioxidants ಅಂಶವಿದ್ದು ತ್ವಚೆಯ ಆರೋಗ್ಯವನ್ನು ಹೆಚ್ಚಿಸುತ್ತದೆ ಹಾಗೂ ಮುಖದಲ್ಲಿ ಅಕಾಲಿಕ ನೆರಿಗೆ ಬೀಳುವುದನ್ನು ತಡೆಗಟ್ಟುತ್ತದೆ.

3. ಪಪ್ಪಾಯಿ

ಇದರಲ್ಲಿ ವಿಟಮಿನ್ ಎ ಅಂಶವಿದ್ದು ತ್ವಚೆಯಲ್ಲಿರುವ ಕಲೆಯನ್ನು ಹೋಗಲಾಡಿಸಲು ಸಹಕಾರಿಯಾಗಿದೆ. ಇದರಿಂದ ಫೇಶಿಯಲ್ ಮಾಡಿದರೆ ತ್ವಚೆಯ ಹೊಳಪು ಹೆಚ್ಚುವುದು.

4. ನಿಂಬೆ ಹಣ್ಣು

ನಿಂಬೆರಸ ತ್ವಚೆ ಕಾಂತಿ ಹೆಚ್ಚುವಂತೆ ಮಾಡುತ್ತದೆ. ಪ್ರತಿದಿನ ಒಂದು ಲೋಟ ನಿಂಬೆ ಪಾನಕ ಕುಡಿದರೆ ದೇಹ ಹಾಗೂ ತ್ವಚೆಯ ಆರೋಗ್ಯಕ್ಕೆ ಒಳ್ಳೆಯದು.

5. ಬೆರ್ರಿ

ಬೆರಿ ಹಣ್ಣುಗಳು ದೇಹದಲ್ಲಿರುವ ಅಧಿಕ ಕೊಬ್ಬನ್ನು ಕರಗಿಸಿ ದೇಹದ ಆರೋಗ್ಯವನ್ನು ಹೆಚ್ಚಿಸುತ್ತದೆ. ಇವುಗಳನ್ನು ಒಂದು ವಾರಗಳ ಕಾಲ ತಿಂದು ನೋಡಿ ನಿಮ್ಮ ಮುಖದಲ್ಲಿನ ಹೊಳಪು ಹೆಚ್ಚುವುದನ್ನು ನೀವು ಗಮನಿಸಬಹುದು.

6. ಸೇಬು

ಸೇಬನ್ನು ತಿನ್ನುವುದರಿಂದ ಮೃದುವಾದ ಹಾಗೂ ಕಾಂತಿಯುತ ತ್ವಚೆಯನ್ನು ಪಡೆಯಬಹುದು. ಇದು ಮೊಡವೆಯನ್ನು ಕಡಿಮೆ ಮಾಡುತ್ತದೆ. ಸೇಬಿನಿಂದ ಸ್ಕ್ರಬ್ ಮಾಡಿ ತ್ವಚೆಯ ಮೇಲ್ಭಾಗದಲ್ಲಿರುವ ಕಶ್ಮಲವನ್ನು ಹೋಗಲಾಡಿಸಬಹುದು.

7. ಬಾಳೆ ಹಣ್ಣು

ಬಾಳೆ ಹಣ್ಣಿನಿಂದ ಫೇಶಿಯಲ್ ಮಾಡಿದರೆ ತ್ವಚೆ ಕಾಂತಿ ಹೆಚ್ಚುವುದು. ಇದನ್ನು ತಿನ್ನುವುದರಿಂದ ಆಂತರಿಕವಾಗಿ ತ್ವಚೆ ಕಾಂತಿ ಹೆಚ್ಚುವಂತೆ ಮಾಡುತ್ತದೆ.

Story first published: Friday, December 14, 2012, 17:01 [IST]
English summary

7 Fruits That Will Helps To et Glowing Skin | Tips For Skin Care | ತ್ವಚೆ ಕಾಂತಿ ಹೆಚ್ಚಿಸುವ 7 ಹಣ್ಣುಗಳು | ತ್ವಚೆ ಆರೈಕೆಗೆ ಕೆಲ ಸಲಹೆಗಳು

We think cream only can help to increase our skin glow. But all the cream will not help to get beautiful skin. But some fruits are there, if you eat them, naturally you will get glowing skin.
Please Wait while comments are loading...
Subscribe Newsletter