For Quick Alerts
ALLOW NOTIFICATIONS  
For Daily Alerts

ದಾಳಿಂಬೆಯಲ್ಲಿದೆ 3 ಸೌಂದರ್ಯವರ್ಧಕ ಗುಣಗಳು

|

ದಾಳಿಂಬೆ ಹಣ್ಣು ಆರೋಗ್ಯಕ್ಕೆ ಒಳ್ಳೆಯದು ಮಾತ್ರವಲ್ಲದೆ ಸೌಂದರ್ಯ ಹೆಚ್ಚಿಸುವಲ್ಲಿ ತುಂಬಾ ಸಹಕಾರಿಯಾಗಿದೆ. ತ್ವಚೆ ಕಪ್ಪಿರಲಿ, ಬಿಳುಪಿರಲಿ ಕಲೆರಹಿತವಾಗಿ, ಹೊಳಪಿನಿಂದ ಕೂಡಿದ್ದರೆ ನೋಡಲು ಆರ್ಷಕವಾಗಿ ಕಾಣುವಿರಿ. ದಾಳಿಂಬೆಯಲ್ಲಿ ತ್ವಚೆ ಪೋಷಣೆಗೆ ಅಗತ್ಯವಾದ ವಿಟಮಿನ್ ಸಿ ಮತ್ತು ಬಿ5, ಪೊಟಾಷ್ಯಿಯಂ ಈ ಎಲ್ಲಾ ಅಂಶಗಳಿದ್ದು ಇದನ್ನು ಅನೇಕ ಆರೋಗ್ಯ ಸಮಸ್ಯೆಗಳನ್ನು ಹೋಗಲಾಡಿಸಲು ಬಳಸಬಹುದು. ಅದರ ಜೊತೆಗೆ ನಿಮ್ಮ ಚೆಲುವನ್ನು ಹೆಚ್ಚಿಸಿಕೊಳ್ಳುವಲ್ಲಿ ತುಂಬಾ ಪ್ರಯೋಜನಕಾರಿಯಾಗಿದೆ.

ಮೊಡವೆ ಬರುವುದನ್ನು ತಡೆಗಟ್ಟುತ್ತದೆ: ಯೌವನ ಪ್ರಾಯದಲ್ಲಿ ಹೆಚ್ಚಿನವರಲ್ಲಿ ಮೊಡವೆ ಸಮಸ್ಯೆ ಕಂಡು ಬರುತ್ತದೆ. ಇದನ್ನು ಬರದಂತೆ ತಡೆಯಲು ಪ್ರತಿದಿನ ಬೆಳಗ್ಗೆ ದಾಳಿಂಬೆ ಅದರ ಜ್ಯೂಸ್ ಅನ್ನು ಸೇವಿಸುತ್ತಾ ಬಂದರೆ ಒಳ್ಳೆಯದು.ಅದಲ್ಲದೆ ಇದರಲ್ಲಿ ವಿಟಮಿನ್ ಸಿ ಅಂಶ ಇರುವುದರಿಂದ ದೂಳು ಅಥವಾ ರಾಸಾಯನಿಕಗಳು ತ್ವಚೆಯ ಮೇಲೆ ಕೆಟ್ಟ ಪ್ರಭಾವ ಬೀರುವುದನ್ನು ತಡೆಯುತ್ತದೆ.

3 Beauty Benefit of Pomegranate

ಮೊಡವೆ ಇರುವವರು ಇದರ ರಸವನ್ನು ಮುಖದ ಮೇಲೆ ಹಚ್ಚಿ ಅರ್ಧ ಗಂಟೆಯ ಬಳಿಕ ಮುಖ ತೊಳೆಯಬೇಕು. ಈ ರೀತಿ ಮಾಡುತ್ತಾ ಬಂದರೆ ಮೊಡವೆ ಕಡಿಮೆಯಾಗುವುದು ಹಾಗೂ ಅದರಿಂದ ಉಂಟಾದ ಕಲೆಯೂ ಕಡಿಮೆಯಾಗುತ್ತದೆ.

ಮುಖದಲ್ಲಿ ನೆರಿಗೆ ಬೀಳುವುದನ್ನು ತಡೆಗಟ್ಟುತ್ತದೆ: ದಾಳಿಂಬೆಯಲ್ಲಿ ಕೊಲೆಜಿನ್ ಅಂಶ ಇರುವುದರಿಂದ ತ್ವಚೆಗೆ ಉಂಟಾಗುವ ಹಾನಿಯನ್ನು ಸರಿಪಡಿಸಿ ನೆರಿಗೆ ಬೀಳುವುದನ್ನು ತಡೆಯುತ್ತದೆ. ಅಲ್ಲದೆ ತ್ವಚೆಯನ್ನು ತುಂಬಾ ಮೃದುವಾಗಿಸುತ್ತದೆ.

ಗಾಯವನ್ನು ಒಣಗಿಸುತ್ತದೆ: ದಾಳಿಂಬೆಯ ಬೀಜವನ್ನು ಗಾಯವನ್ನು ಒಣಗಿಸುವ ಸಾಮರ್ಥ್ಯ ಹೊಂದಿದೆ ಎಂದು ಸಂಶೋಧನೆಯಿಂದ ದೃಢ ಪಟ್ಟಿದೆ. ಇದರ ಬೀಜದ ಎಣ್ಣೆಯನ್ನು ಗಾಯಾವಾದ ಭಾಗಕ್ಕೆ ಹಚ್ಚುತ್ತಾ ಬಂದರೆ ಕಲೆ ಮಾಯವಾಗುವುದು.

English summary

3 Beauty Benefit Of Pomegranate | Tips For Skin Care | ದಾಳಿಂಬೆಯ ಸೌಂದರ್ಯವರ್ಧಕ ಗುಣಗಳು | ತ್ವಚೆ ಆರೈಕೆಗೆ ಕೆಲ ಸಲಹೆ

The pomegranate has been used to treat several health conditions. It has also been proven so effective for treating various skin conditions.
X
Desktop Bottom Promotion