For Quick Alerts
ALLOW NOTIFICATIONS  
For Daily Alerts

ಬ್ಲ್ಯಾಕ್ ಹೆಡ್ ನಿವಾರಣೆಗೆ ಏನು ಮಾಡಬಹುದು?

|
Homemade Face Scrub
ಬ್ಲ್ಯಾಕ್ ಹೆಡ್ ಮುಖದ ಅಂದಕ್ಕೆ ಮಾರಕ. ಕೊಳೆಯಂತೆ ಭಾಸವಾಗುವ ಬ್ಲ್ಯಾಕ್ ಹೆಡ್ ಸೌಂದರ್ಯವನ್ನೇ ಹಾಳುಮಾಡುತ್ತೆ. ಬ್ಲಾಕ್ ಹೆಡ್ ನಿವಾರಣೆಗೆ ಅನೇಕ ಸ್ಕ್ರಬ್ ಬಳಸಿ ಫಲಿತಾಂಶ ಕಂಡುಬಂದಿಲ್ಲವಾದರೆ ಮನೆಯಲ್ಲೇ ಪಾಲಿಸಬಹುದಾದ ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

ಬ್ಲ್ಯಾಕ್ ಹೆಡ್ ನಿವಾರಣೆಗೆ ಮನೆಯಲ್ಲೇ ಸ್ಕ್ರಬ್:

* ನೀರು: ಯಾವುದೇ ಸ್ಕ್ರಬ್ ಗಳನ್ನು ಬಳಸುವ ಮುನ್ನ ಮುಖವನ್ನು ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಬೇಕು. ಇದರಿಂದ ಸ್ಕ್ರಬಿಂಗ್ ನಂತರ ತ್ವಚೆ ಒಣಗುವುದನ್ನು ತಡೆಯಬಹುದು.

* ಉಪ್ಪು ಮತ್ತು ಜೇನು: ಉಪ್ಪು ಮತ್ತು ಜೇನನ್ನು ಬೆರೆಸಿ ಹಚ್ಚಿಕೊಂಡರೆ ಬ್ಲ್ಯಾಕ್ ಹೆಡ್ ನಿವಾರಣೆಗೆ ಸಹಕಾರಿ. ಈ ಮಿಶ್ರಣವನ್ನು ಹಚ್ಚಿಕೊಂಡು 4-6 ನಿಮಿಷ ಮಸಾಜ್ ಮಾಡಿ ತಣ್ಣಗಿನ ನೀರಿನಲ್ಲಿ ತೊಳೆದುಕೊಂಡರೆ ಒಣ ತ್ವಚೆ ನಿವಾರಣೆಯಾಗುತ್ತದೆ, ಬ್ಲ್ಯಾಕ್ ಹೆಡ್ ಕೂಡ ಹೋಗುತ್ತದೆ.

* ಅಡುಗೆ ಸೋಡಾ: ಅಡುಗೆ ಸೋಡಾ ಬ್ಲಾಕ್ ಹೆಡ್ ಮತ್ತು ನಿರ್ಜೀವ ತ್ವಚೆ ನಿವಾರಣೆ ಮಾಡುವಲ್ಲಿ ಹೆಚ್ಚು ಸಹಕಾರಿ. ಅಡುಗೆ ಸೋಡಾವನ್ನು ನೀರಿನೊಂದಿಗೆ ಬೆರೆಸಿ 2-3 ನಿಮಿಷ ಮಸಾಜ್ ಮಾಡಿಕೊಳ್ಳಬೇಕು. ಒಂದು ನಿಮಿಷ ಬಿಟ್ಟು ತಣ್ಣಗಿನ ನೀರಿನಲ್ಲಿ ತೊಳೆದುಕೊಳ್ಳಬೇಕು. ಅಡುಗೆ ಸೋಡಾ ಒಂದು ನಿಮಿಷಕ್ಕಿಂತ ಹೆಚ್ಚು ಕಾಲ ತ್ವಚೆಯ ಮೇಲೆ ಉಳಿದುಕೊಳ್ಳಲು ಬಿಡಬಾರದು.

* ನಿಂಬೆಹೋಳು: ನಿಂಬೆಹೋಳಿನ ಮೇಲೆ ಉಪ್ಪನ್ನು ಉದುರಿಸಿ ಮುಖದ ಮೇಲೆ ಉಜ್ಜಿಕೊಳ್ಳಬೇಕು. 3-4 ನಿಮಿಷ ಮಸಾಜ್ ಮಾಡಿಕೊಂಡು 4-5 ನಿಮಿಷ ಬಿಡಬೇಕು. ನಂತರ ಬೆಚ್ಚಗಿನ ನೀರಿನಲ್ಲಿ ತೊಳೆದುಕೊಂಡರೆ ನಿರ್ಜೀವ ತ್ವಚೆ ಮಾಯವಾಗುತ್ತದೆ. ಕಾಂತಿಯೂ ಹೆಚ್ಚುತ್ತದೆ.

* ಕಿತ್ತಳೆ ಸಿಪ್ಪೆ: ಕಿತ್ತಳೆ ಸಿಪ್ಪೆಯನ್ನು ಪುಡಿ ಮಾಡಿ ಹಾಲು ಮತ್ತು ಕೆನೆ ಬೆರೆಸಿ ಹಚ್ಚಿಕೊಂಡು 5-10 ನಿಮಿಷ ಬಿಟ್ಟು ನಂತರ ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಬೇಕು. ಇದರಿಂದ ಬ್ಲ್ಯಾಕ್ ಹೆಡ್ ನಿವಾರಣೆಯಾಗುವುದಲ್ಲದೆ ತ್ವಚೆ ಹೆಚ್ಚು ಕಂಗೊಳಿಸುತ್ತದೆ.

English summary

Homemade Face Scrub | Remove Blackheads | ಮನೆಯಲ್ಲೇ ಫೇಸ್ ಸ್ಕ್ರಬ್ ತಯಾರಿಸುವ ವಿಧಾನ | ಬ್ಲ್ಯಾಕ್ ಹೆಡ್ ನಿವಾರಣೆ

Face scrubs are easy and an effective remedy to cleanse out blackheads and other dark spots from face. If you are tired of scrubbing your nose with different scrubs just to remove those stubborn blackheads, then try these simple homemade face scrub masks recipes to get rid of blackheads. Read on....
Story first published: Monday, January 2, 2012, 13:02 [IST]
X
Desktop Bottom Promotion