For Quick Alerts
ALLOW NOTIFICATIONS  
For Daily Alerts

ಅಂದವಾದ ತ್ವಚೆಗೆ ಬೇಕು ಆಲೀವ್ ಎಣ್ಣೆಯ ಆರೈಕೆ

By Super
|
Tips For Skin Car
ತ್ವಚೆಯ ತಾರುಣ್ಯ ಕಾಪಾಡುವಲ್ಲಿ ಎಣ್ಣೆಯ ಮಾಯಿಶ್ಚರೈಸರ್ ಅಥವಾ ಮಸಾಜ್ ಪ್ರಮುಖ ಪಾತ್ರವಹಿಸುತ್ತದೆ. ಅದರಲ್ಲೂ ಆಲೀವ್ ಎಣ್ಣೆ ಕೂದಲು ಮತ್ತು ತ್ವಚೆ ಆರೈಕೆಯಲ್ಲಿ ಬಳಸಲು ಸೂಕ್ತವಾದ ಎಣ್ಣೆಯಾಗಿದೆ. ಈ ಎಣ್ಣೆ ಉಪಯೋಗಿಸಿದರೆ ಇದರಿಂದ ಉಪಕಾರವೆ ಹೊರತು ಯಾವುದೇ ಅಡ್ಡಪರಿಣಾಮ ಉಂಟಾಗುವುದಿಲ್ಲ. ಆಲೀವ್ ಎಣ್ಣೆಯ ಪ್ರಯೋಜನಗಳ ಕುರಿತು ತಿಳಿಯಲು ಮುಂದೆ ಓದಿ.

* ಫೇಸ್ ವಾಶ್: ರಾಸಾಯನಿಕವಿರುವ ಫೇಸ್ ವಾಶ್ ಬಳಸುವ ಬದಲು ಆಲೀವ್ ಎಣ್ಣೆಯನ್ನು ಫೇಸ್ ವಾಶ್ ಆಗಿ ಬಳಸಬಹುದು. ಈ ಎಣ್ಣೆಯಿಂದ ಕ್ಲೆನ್ಸಿಂಗ್ ಮಾಡಿ ಮುಖದಲ್ಲಿರುವ ಮೇಕಪ್ ತೆಗೆಯುವುದರಿಂದ ಮೇಕಪ್‌ನಿಂದ ಮುಖ ಹಾಳಾಗುವುದನ್ನು ತಡೆಯಬಹುದು. ತ್ವಚೆ ರಂಧ್ರದಲ್ಲಿರುವ ಕಶ್ಮಲಗಳನ್ನು ಹೋಗಲಾಡಿಸಬಹುದು. ಅಲ್ಲದೆ ದಿನವೂ ಈ ಎಣ್ಣೆಯಿಂದ ಕ್ಲೆನ್ಸ್ ಮಾಡಿದರೆ ತಾಜಾ ಮತ್ತು ಮೃದುವಾದ ತ್ವಚೆ ನಿಮ್ಮದಾಗುವುದು.

* ಫೇಸ್ ಮಾಸ್ಕ್: ಆಲೀವ್ ಎಣ್ಣೆಯನ್ನು ಫೇಸ್ ಮಾಸ್ಕ್ ಆಗಿ ಬಳಸಬಹುದು. ಇದನ್ನು ಫೇಸ್ ಮಾಸ್ಕ್ ಆಗಿ ಬಳಸುವುದರಿಂದ ಮೊಡವೆ,ಇತರ ತ್ವಚೆ ಸಮಸ್ಯೆಗಳು ಬರದಂತೆ ತಡೆದು ಮುಖದ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಇದರಿಂದ ಫೇಸ್ಸ್ ಮಾಸ್ಕ್ ತಯಾರಿಸುವ ವಿಧಾನ ನೋಡಿ ಇಲ್ಲಿದೆ.
ಫೇಸ್ ಮಾಸ್ಕ್ ಸಾಮಾಗ್ರಿಗಳು:
1 ಚಮಚ ಆಲೀವ್ ಎಣ್ಣೆ
1 ಚಮಚ ಗಟ್ಟಿಯಾದ ಹಾಲು
1/2 ಚಮಚ ಉಪ್ಪು
ಈ 3 ವಸ್ತುಗಳನ್ನು ಮಿಶ್ರ ಮಾಡಿ ಮುಖಕ್ಕೆ ಹಚ್ಚಿ 15 ನಿಮಿಷದ ಬಳಿಕ ಮುಖ ತೊಳೆಯಬೇಕು.

* ತಾರುಣ್ಯಭರಿತ ತ್ವಚೆ:
ವಯಸ್ಸಾದಂತೆ ಮುಖದಲ್ಲಿ ನೆರಿಗೆಗಳು ಬರುವುದು ಸಹಜ. ಆದರೆ ಅಕಾಲಿಕ ನೆರಿಗೆಯನ್ನು ತಡೆಗಟ್ಟಲು ಆಲೀವ್ ಎಣ್ಣೆಯನ್ನು ಬಳಸುವುದು ಒಳ್ಳೆಯದು. ಒಣ ತ್ವಚೆ ಇರುವವರು ಆಲೀವ್ ಎಣ್ಣೆಯಿಂದ ಮಾಯಿಶ್ಚರೈಸರ್ ಮಾಡಿಕೊಳ್ಳುವುದು ಒಳ್ಳೆಯದು.
ಅನೇಕ ಜನರು ಆಲೀವ್ ಎಣ್ಣೆ ಬಳಸಿದರೆ ಮುಖದಲ್ಲಿ ಎಣ್ಣೆ ಪಸೆ ಹೆಚ್ಚಾಗಿ ಮೊಡವೆ ಹೆಚ್ಚಾಗುತ್ತದೆ ಎಂದು ಭಾವಿಸುತ್ತಾರೆ. ಆದರೆ ಈ ಎಣ್ಣೆ ಮೊಡವೆ ಬರದಂತೆ ತಡೆದು ತ್ವಚೆ ಕಾಂತಿ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.

English summary

Main 3 Skin Benefit Of Olive Oil | Tips For Skin Care | ತ್ವಚೆ ಆರೈಕೆಗೆ ಆಲೀವ್ ಎಣ್ಣೆ | ತ್ವಚೆ ಆರೈಕೆಗೆ ಕೆಲ ಸಲಹೆಗಳು

Oil will use for moisturizer the skin. In that olive oil is best for the skin, it act against aging in the early age and increase the attraction of the skin.
X
Desktop Bottom Promotion