For Quick Alerts
ALLOW NOTIFICATIONS  
For Daily Alerts

ಒಣ ತ್ವಚೆಗೆ ಅತ್ಯುತ್ತಮವಾದ ಮಾಯಿಶ್ಚರೈಸರ್

|
Dry Skin Moisturizer
ಶುಭ್ರವಾದ ತ್ವಚೆ ಬೇಕೆಂದು ಬಯಸದವರು ಯಾರು? ಕಲೆ, ಕಪ್ಪುಕಲೆ, ಮೊಡವೆ, ನಿರ್ಜೀವ ತ್ವಚೆ, ರಂಧ್ರ ಇವುಗಳಿಂದ ಮುಕ್ತವಾದ ತ್ವಚೆ ಬೇಕೆಂದರೆ ಸರಿಯಾದ ಮಾಯಿಶ್ಚರೈಸರ್ ಬಳಸಬೇಕು. ನೈಸರ್ಗಿಕವಾಗಿ ಸಿಗುವ ಹಣ್ಣುಗಳನ್ನು ಬಳಸಿ ಮಾಯಿಶ್ಚರೈಸರ್ ಮಾಡಬಹುದು. ಇವತ್ತು ನಾವು ಒಣ ತ್ವಚೆಗೆ ಯಾವ ರೀತಿಯ ಮಾಯಿಶ್ಚರೈಸರ್ ಬಳಸಿದರೆ ಒಳ್ಳೆಯದು ಎಂದು ನೋಡೋಣ ಬನ್ನಿ.

ಪರಿಣಾಮಕಾರಿ ಮಾಯಿಶ್ಚರೈಸರ್:
1. * ಆಲಿವ್ ಎಣ್ಣೆ 1 ಚಮಚ
* ನಿಂಬೆ ರಸ 1/2 ಚಮಚ
* ಮೊಟ್ಟೆಯ ಬಿಳಿ
ಈ ಎಲ್ಲಾ ವಸ್ತುಗಳನ್ನು ಮಿಶ್ರ ಮಾಡಿ ಮುಖ ಮತ್ತು ಕೈಕಾಲುಗಳಿಗೆ ಹಚ್ಚಬೇಕು. ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿದರೆ ತ್ವಚೆ ಮೃದುವಾಗುವುದು.

2. * ಬೇಯಿಸಿದ ಓಟ್ಸ್ (ಮುಖಕ್ಕೆಹಚ್ಚಲು ಸಾಕಾಗುವಷ್ಟು)
* ಜೇನು ಒಂದು ಚಮಚ
ಈ ಎರಡನ್ನು ಮಿಶ್ರ ಮಾಡಿ ಮುಖಕ್ಕೆ ಹಚ್ಚಿಕೊಂಡು ನಂತರ ಹದಬಿಸಿ ನೀರಿನಿಂದ ಮುಖ ತೊಳೆದರೆ ಮುಖ ಶುಭ್ರವಾಗಿ ಕಾಣುವುದು.

3. * ಆಲೀವ್ ಎಣ್ಣೆ 1 ಚಮಚ
* ಬೆಣ್ಣೆ 3 ಚಮಚ
* ತೆಂಗಿನೆಣ್ಣೆ
ಈ ವಸ್ತಗಳನ್ನು ಮಿಶ್ರ ಮಾಡಿ ಮುಖಕ್ಕೆ ಹಚ್ಚಿ ಒಣಗಲು ಬಿಡಬೇಕು. ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆದರೆ ಒಣ ತ್ವಚೆ ಸಮಸ್ಯೆ ನಿವಾರಣೆ ಆಗುವುದು.

ಸಾಮಾನ್ಯ ತ್ವಚೆಗೆ ಮಾಯಿಶ್ಚರೈಸರ್ ಮಾಡುವ ಬಗ್ಗೆ ಸದ್ಯದಲ್ಲಿಯೆ ನೀಡಲಾಗುವುದು. ನಿರೀಕ್ಷಿಸಿ.

English summary

Best Moisturizer For Dry Skin | Tips for beauty | ಒಣ ತ್ವಚೆಗೆ ಮಾಯಿಶ್ಚರೈಸರ್ | ಸೌಂದರ್ಯಕ್ಕಾಗಿ ಕೆಲ ಸಲಹೆ

Dry Skin will lose the charm of beauty. If you want smooth skin moisturizer is the best method for dry skin. To moisture the skin natural method is the best way. Take a look.
Story first published: Monday, February 27, 2012, 12:08 [IST]
X
Desktop Bottom Promotion