ಎಣ್ಣೆ ತ್ವಚೆ ಇದ್ದವರು ಪೌಂಡೇಶನ್ ಹಚ್ಚಿದರೆ ಒಳ್ಳೆಯದು. ಒಣ ತ್ವಚೆಗೆ ಮಾಯಿಶ್ಚರೈಸರ್ ಹಚ್ಚಿ ಎಂದು ಬೋಲ್ಡ್ ಸ್ಕೈಯಿಂದ ಸಲಹೆಗಳನ್ನು ಕೊಡುತ್ತೇವೆ.
ಆದರೆ ಎಷ್ಟೋ ಜನರಿಗೆ ತಮ್ ತ್ವಚೆ ಬಗ್ಗೆ ತಿಳಿಯುವ ಗೋಜಿಗೆ ಹೋಗುವುದಿಲ್ಲ ಎಂದು ಮೊನ್ನೆ ನನ್ನ ಗೆಳತಿಯೊಬ್ಬಳನ್ನು ನೋಡಿದಾಗ ಗೊತ್ತಾಯಿತು. ಅವಳು ಕ್ರೀಮ್ ಕೊಳ್ಳಲು ಹೋದಾಗ ಅಂಗಡಿಯವ 'ಆಯ್ಲಿ ಸ್ಕಿನ್ ಮತ್ತು ಡ್ರೈ ಸ್ಕಿನ್ ಗೆ ಬೇರೆ -ಬೇರೆ ಕ್ರೀಮ್ ಇದೆ ಯಾವುದು ಕೊಡಲಿ' ಎಂದು ಕೇಳಿದ. ಅವಳಿಗಂತೂ ಅವಳ ತ್ವಚೆ ಇದರಲ್ಲಿ ಯಾವ ವರ್ಗಕ್ಕೆ ಸೇರಿದ್ದು ಎಂದು ತಿಳಿಯದೆ ಕಕ್ಕಾಬಿಕ್ಕಿ.
ಅವಳಂತೆಯೆ ಅನೇಕರಿಗೆ ತಮ್ಮ ತ್ವಚೆ ಬಗ್ಗೆ ತಿಳಿದಿರುವುದಿಲ್ಲ. ಇದರಿಂದಲೇ ಮೊಡವೆ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಇಲ್ಲಿದೆ ನಿಮ್ಮ ತ್ವಚೆ ಬಗ್ಗೆ ತಿಳಿಯಲು ಸರಳ ಉಪಾಯ. ಇದನ್ನು ತಿಳಿದರೆ ನಿಮಗೆ ತ್ವಚೆ ಆರೈಕೆ ಮಾಡುವುದು ಮತ್ತಷ್ಟು ಸುಲಭವಾಗುವುದು.
ತ್ವಚೆಯ ಬಗೆಗಳು:
1. ಎಣ್ಣೆ ತ್ವಚೆ: ಮುಖ ಬೇಗನೆ ಎಣ್ಣೆ-ಎಣ್ಣೆಯಾದರೆ ನಿಮ್ಮದು ಎಣ್ಣೆ ತ್ವಚೆಯಾಗಿದೆ. ಈ ರೀತಿ ತ್ವಚೆ ಇದ್ದವರು ಟಿಶ್ಯೂ ಪೇಪರಿನಿಂದ ಮೂಗಿನ ಬದಿಗಳನ್ನು ಉಜ್ಜಿ ನೋಡಿದರೆ ಟಿಶ್ಯೂ ಪೇಪರ್ ನಲ್ಲಿ ಎಣ್ಣೆ ಪಸೆ ಕಾಣಬಹುದು.
2. ಒಣ ತ್ವಚೆ: ನೀವು ಒಣ ತ್ವಚೆಯನ್ನು ಹೊಂದಿರುವರೇ ಎಂದು ಪರೀಕ್ಷಿಸಲು ಮಾಯಿಶ್ಚರೈಸರ್ ಮುಖಕ್ಕೆ ಹಚ್ಚದೆ ಒಂದು ದಿನ ಹಾಗೆ ಇರಿ. ರಾತ್ರಿಯಾದಾಗ ತ್ವಚೆ ಒಣಗಿ, ಮುಖ ಒಂಥರಾ ಬಿಗಿಯಾದರೆ ನೀವು ಒಣ ತ್ವಚೆಯನ್ನು ಹೊಂದಿರುವಿರಿ.
3. ಸೂಕ್ಷ್ಮವಾದ ತ್ವಚೆ: ಸೂಕ್ಷ್ಮವಾದ ತ್ವಚೆಗೆ ಬೇಗನೆ ಅಲರ್ಜಿಯಾಗುತ್ತದೆ. ಬಿಸಿಲಿಗೆ, ಬೆಂಕಿ ಹತ್ತಿರ ಹೋದಾಗ ಮುಖ ಬೇಗನೆ ಕೆಂಪಾಗುತ್ತದೆ. ಈ ರೀತಿ ತ್ವಚೆ ಇರುವವರು ಬಿಸಿಲಿಗೆ ಹೋಗುವಾಗ ಸನ್ ಸ್ಕ್ರೀನ್ ಲೋಷನ್ ಹಚ್ಚಲು ಮರೆಯಬಾರದು. ದೇಹದಲ್ಲಿ ಅಧಿಕ ಹಿಸ್ಟಾಮೈನ್ ಇದ್ದರೆ ತ್ವಚೆ ಸೂಕ್ಷ್ಮವಾಗುತ್ತದೆ.
4. ಮೊಡವೆ ತ್ವಚೆ: ಮೊಡವೆ ವಂಶವಾಹಿನಿಯಾಗಿ ಕೂಡ ಬರುತ್ತದೆ. ಮುಖದಲ್ಲಿ ಮೊಡವೆಗಳು ಉಂಟಾದರೆ ಚರ್ಮ ರೋಗ ತಜ್ಞರನ್ನು ಸಂಪರ್ಕಿಸಿ ಚಿಕಿತ್ಸೆಯನ್ನು ಪಡೆಯುವುದು ಒಳ್ಳೆಯದು.
5. ಕಾಂತಿ ರಹಿತ ತ್ವಚೆ: ಪರಿಸರ ಮಾಲಿನ್ಯ, ಪೌಷ್ಟಿಕ ಆಹಾರದ ಕೊರತೆ, ತ್ವಚೆಯ ಆರೈಕೆ ಮಾಡದಿರುವುದು ಇವುಗಳಿಂದ ಮುಖದಲ್ಲಿ ನೆರಿಗೆ ಬೇಗನೆ ಬೀಳುವುದು. ಆದ್ದರಿಂದ ತ್ವಚೆ ಪೋಷಣೆ ತಾರುಣ್ಯದ ಚೆಲುವಿಗೆ ಅಗತ್ಯ.