ಕಲೆ ಮುಕ್ತ ಹಣೆಗಾಗಿ ಕೆಲ ಸಲಹೆಗಳು

How To Get Clean Forehead
ಹುಬ್ಬುಗಳ ಮಧ್ಯೆದ ಭಾಗ ಮುಖದಲ್ಲಿ ಎದ್ದು ಕಾಣಿಸುವುದರಿಂದ ಆ ಭಾಗ ಕಲೆ ಅಥವಾ ಮೊಡವೆಯಿಲ್ಲದೆ ಸುಂದರವಾಗಿದ್ದರನೆ ನೋಡಲು ಚೆಂದ. ಭಾರತೀಯ ನಾರಿಯರು ಆ ಭಾಗದಲ್ಲಿ ಬಿಂದಿಯನ್ನು ಹಾಕಿದಾಗ ಮುಖದ ಲಕ್ಷಣ ಮತ್ತಷ್ಟು ಹೆಚ್ಚಾಗುತ್ತದೆ. ಆದರೆ ತಲೆಯಲ್ಲಿ ಹೊಟ್ಟು ಅಥವಾ ಎಣ್ಣೆ ತ್ವಚೆಯಿಂದ ಆ ಭಾಗದಲ್ಲಿ ಮೊಡವೆ ಬರುತ್ತದೆ. ಹಣೆ ಮತ್ತು ಹುಬ್ಬಿನ ನಡುವಿನ ಭಾಗವನ್ನು ಆಕರ್ಷಕವಾಗಿಡಲು ಈ ರೀತಿ ಮಾಡಿ.

1. ಸ್ನಾನದ ನಂತರ ಕೆನ್ನೆಗಷ್ಟೇ ಅಲ್ಲ ಹುಬ್ಬಿನ ನಡು ಭಾಗದಲ್ಲಿ ಮತ್ತು ಹಣೆಗೆ ಕ್ರೀಮ್ ಹಚ್ಚಬೇಕು. ಒಣ ತ್ವಚೆ ಇರುವವರು ಮಾಯಿಶ್ಚರೈಸರ್ ಕ್ರೀಮ್ ಹಚ್ಚಬೇಕು.

2. ಬಿಂದಿ ಹಾಕುವವರು ಹತ್ತಿಯನ್ನು ಹಾಲಿನಲ್ಲಿ ನೆನೆಸಿ ಬಿಂದಿ ಹಾಕುವ ಜಾಗವನ್ನು ಮತ್ತು ಹಣೆಯನ್ನು ಕ್ಲೆನ್ಸ್ ಮಾಡಬೇಕು. ಹೀಗೆ ಮಾಡುತ್ತಿದ್ದರೆ ಹಣೆಯಲ್ಲಿ ಬೇಗನೆ ನೆರಿಗೆ ಬೀಳುವುದನ್ನು ತಪ್ಪಿಸಬಹುದು.

3. ವಿಟಮಿನ್ ಇ, ಬಾದಾಮಿ ಎಣ್ಣೆ ಅಥವಾ ತೆಂಗಿನೆಣ್ಣೆಯನ್ನು ಬಿಸಿ ಮಾಡಿ ಪೂರ್ತಿ ಮುಖಕ್ಕೆ ಹಚ್ಚಿ ತ್ವಚೆ ಸೌಂದರ್ಯ ಕಾಪಾಡಿ.

4. ಮುಖದಲ್ಲಿ ಅಲರ್ಜಿ ಆಗಿದ್ದರೆ ತುಳಸಿ, ಪುದೀನಾ ಎಲೆ, ಇಂಗು ಅನ್ನು ಪೇಸ್ಟ್ ಮಾಡಿ ಅದನ್ನು ಐಸ್ ವಾಟರ್ ನಲ್ಲಿ ಹಾಕಿ ಅದರಿಂದ ಮಸಾಜ್ ಮಾಡಿದರೆ ಅಲರ್ಜಿ ನಿವಾರಣೆಯಾಗುತ್ತದೆ.

5. ಹುಬ್ಬುಗಳ ನಡುವೆ ಕೂದಲು ಇದ್ದರೆ ಆ ಭಾಗಕ್ಕೆ ಚಂದನ ಅಥವಾ ಅರಿಶಿಣ ಹಚ್ಚುತ್ತಾ ಬಂದರೆ ಆ ಭಾಗದಲ್ಲಿ ಕೂದಲು ಕ್ರಮೇಣ ಮಾಯವಾಗುತ್ತದೆ.

ಮುಖದಲ್ಲಿ ಮೊಡವೆಯಾದರೆ ಗುಣಮುಖವಾಗುವವರೆಗೆ ಯಾವುದೇ ಕ್ರೀಮ್ ಹಚ್ಚಬೇಡಿ.
User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.