For Quick Alerts
ALLOW NOTIFICATIONS  
For Daily Alerts

ಸುಮಬಾಲೆಯ ತ್ವಚೆಗೆ ಹೂವಿನ ಫೇಸ್ ಪ್ಯಾಕ್

|
Top 4 Flower Face Pack
ಹಣ್ಣಿನಂತೆಯೇ ಕೆಲವು ಹೂವುಗಳೂ ತ್ವಚೆಯ ಕಾಂತಿಗೆ ಸಹಕಾರಿ. ಗುಲಾಬಿ ಮುಖಕ್ಕೆ ಹೊಳಪು ನೀಡಿದರೆ ಮಲ್ಲಿಗೆ ಕಣ್ಣಿಗೆ ಹಿತವಾಗುತ್ತದೆ. ಈ ಚಳಿಗಾಲದಲ್ಲಿ ಯಾವ ಹೂವುಗಳಿಂದ ನಿಮ್ಮ ತ್ವಚೆಯನ್ನು ಪೋಷಣೆ ಮಾಡಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಈ ಹೂವಿನ ಫೇಸ್ ಪ್ಯಾಕ್ ತಕ್ಷಣವೇ ಫಲಿತಾಂಶ ತೋರದಿದ್ದರೂ ಕ್ರಮೇಣ ಪರಿಣಾಮ ಗೋಚರಿಸುತ್ತೆ. ಆದರೆ ಹೂವಿನ ಪೇಸ್ ಪ್ಯಾಕ್ ಹಾಕಿಕೊಂಡ ನಂತರ ಸೂರ್ಯನ ಕಿರಣಗಳಿಗೆ ಮುಖವನ್ನು ಒಡ್ಡಬಾರದು ಮತ್ತು ಕೆಮಿಕಲ್ ಮಿಶ್ರಿತ ಸಾಧನಗಳನ್ನು ಬಳಸಬಾರದು, ಹೀಗಿದ್ದರೆ ಹೂವಿನ ಫೇಸ್ ಪ್ಯಾಕ್ ನ ಸಂಪೂರ್ಣ ಉಪಯೋಗವನ್ನು ಪಡೆಯಬಹುದು.

ಚಳಿಗಾಲದಲ್ಲಿ ತಯಾರಿಸಬಹುದಾದ 4 ಬಗೆಯ ಹೂವಿನ ಫೇಸ್ ಪ್ಯಾಕ್

* ಗುಲಾಬಿ ಫೇಸ್ ಪ್ಯಾಕ್: ಗುಲಾಬಿ ದಳಗಳನ್ನು (ಒಣಗಿರಲೂ ಬಹುದು, ತಾಜಾ ಇರಲೂಬಹುದು) ಹಾಲು ಮತ್ತು ಚೆನ್ನಾಗಿ ಪುಡಿ ಮಾಡಿದ ವೀಟ್ ಫ್ಲೇಕ್ ಗಳೊಂದಿಗೆ ಬೆರೆಸಿ ಕ್ಲೆನ್ಸಿಂಗ್ ನಂತರ ಫೇಸ್ ಪ್ಯಾಕ್ ನಂತೆ ಹಚ್ಚಿಕೊಳ್ಳಬೇಕು. ಹೀಗೆ ಮಾಡಿದರೆ ತ್ವಚೆ ರಂಧ್ರ ತೆರೆದುಕೊಂಡು ತ್ವಚೆ ಶುದ್ಧ ಮತ್ತು ಆರೋಗ್ಯಕರವಾಗುತ್ತದೆ.

* ಚೆಂಡು ಹೂವಿನ ಫೇಸ್ ಮಾಸ್ಕ್: ಮುಖದ ಬಣ್ಣ ಕುಂದಿದ್ದರೆ ಚೆಂಡು ಹೂವಿನ ಫೇಸ್ ಪ್ಯಾಕ್ ಹೆಚ್ಚು ಉಪಯುಕ್ತ. ಚೆಂಡು ಹೂವಿನ ದಳಗಳಲ್ಲಿ ಉರಿನಿವಾರಕ ಅಂಶಗಳಿದ್ದು, ನೈಸರ್ಗಿಕವಾಗಿ ತ್ವಚೆಯ ಜೀವ ಕಣಗಳಿಗೆ ಚೈತನ್ಯ ತುಂಬುತ್ತೆ. ಚೆಂಡು ಹೂವಿನ ದಳದೊಂದಿಗೆ ಹಾಲಿನ ಪುಡಿ ಅಥವಾ ಮೊಸರು ಮತ್ತು ತುರಿದ ಕ್ಯಾರೆಟ್ ಬೆರೆಸಿ ಮುಖಕ್ಕೆ ಹಚ್ಚಿಕೊಂಡರೆ ಚಳಿಗಾಲದಲ್ಲಿ ಮುಖ ಕಂಗೊಳಿಸುವಂತೆ ಮಾಡಬಹುದು.

* ಮಲ್ಲಿಗೆ ಫೇಸ್ ಪ್ಯಾಕ್: ಸುವಾಸನೆ ಭರಿತ ಮಲ್ಲಿಗೆ ಹೂವು ಒಣ ತ್ವಚೆ ಹೊಂದಿದ್ದವರಿಗೆ ತುಂಬಾ ಒಳ್ಳೆಯದು. ಮಲ್ಲಿಗೆ ಹೂವಿನ ದಳಗಳನ್ನು ಸ್ವಲ್ಪ ನೀರಿನೊಂದಿಗೆ ಬೆರೆಸಿ ಫ್ರೀಡ್ಜ್ ನಲ್ಲಿಟ್ಟು ಅದಕ್ಕೆ ಸ್ವಲ್ಪ ಹಾಲಿನ ಕೆನೆ ಬೆರೆಸಿ ಪೇಸ್ಟ್ ಮಾಡಿ ಹಚ್ಚಿಕೊಂಡರೆ ಸೂರ್ಯನ ಕಿರಣಗಳಿಂದ ಕಪ್ಪಾಗುವುದು ಹೋಗುವುದಲ್ಲದೆ ತ್ವಚೆ ಒಣಗುವಿಕೆ ತಡೆದು ಕಣ್ಣಿಗೂ ಹಿತವೆನಿಸುತ್ತೆ.

* ದಾಸವಾಳ ಮತ್ತು ಗೆರಾನಿಯಂ ಹೂವಿನ ಫೇಸ್ ಪ್ಯಾಕ್:
ಚಳಿಗಾಲದಲ್ಲಿ ಮೊಡವೆ ಸಮಸ್ಯೆ ಸಾಮಾನ್ಯ. ಥಂಡಿ ವಾತಾವರಣದಲ್ಲಿ ತ್ವಚೆ ರಂಧ್ರ ಮುಚ್ಚಿಕೊಳ್ಳುವುದರಿಂದ ಮೊಡವೆ ಗುಳ್ಳೆ ಸಹಜ. ಈ ಹೂವುಗಳನ್ನು ಫೇಸ್ ಪ್ಯಾಕ್ ನಂತೆ ಬಳಸುವುದರಿಂದ ಯ್ವಚೆಯಲ್ಲಿನ ಕೊಳೆಯನ್ನು ಸಂಪೂರ್ಣ ಕಿತ್ತುಹಾಕುತ್ತದೆ. ಇದರಿಂದ ಮೊಡವೆಗಳೂ ಬರುವುದು ಕಡಿಮೆಯಾಗುತ್ತದೆ. ಈ ಹೂವಿನ ದಳಗಳನ್ನು ಕೆಂಪಕ್ಕಿ ಪುಡಿ ಮತ್ತು ವಿಟಮಿನ್ ಇ ಎಣ್ಣೆಯೊಂದಿಗೆ ಬೆರೆಸಿ ಹಚ್ಚಿಕೊಂಡರೆ ದುಪ್ಪಟ್ಟು ಫಲಿತಾಂಶ ಹೊಂದಬಹುದು.

English summary

Top 4 Flower Face Pack | Flower Face Pack for Beautiful Skin | 4 ರೀತಿಯ ಹೂವಿನ ಫೇಸ್ ಪ್ಯಾಕ್ | ಸುಂದರ ತ್ವಚೆಗೆ ಹೂವಿನ ಫೇಸ್ ಪ್ಯಾಕ್

Just like fruits, even flowers are best ingredients to bring glow to face. If rose brings fairness to face, then jasmine soothes the eyes. All in all, the best choices for face care this winter. Even though there isn't instant difference on face, it is gradually effective. See which are the top 4 flower face packs for winter skin care.
Story first published: Friday, December 2, 2011, 13:40 [IST]
X
Desktop Bottom Promotion