For Quick Alerts
ALLOW NOTIFICATIONS  
For Daily Alerts

ಮುಖದ ಮೇಲಿನ ವೈಟ್ ಹೆಡ್ ನಿವಾರಣೆ ಹೇಗೆ?

|
Whiteheads Removal Easy Tips
ಕೇವಲ ಬ್ಲಾಕ್ ಹೆಡ್ ಮಾತ್ರವಲ್ಲ, ವೈಟ್ ಹೆಡ್ ಕೂಡ ಮುಖದ ಶುದ್ಧತೆಯನ್ನು ಹಾಳು ಮಾಡಿ ಅಂದಗೆಡಿಸುತ್ತೆ. ಅದನ್ನು ಹಿಸುಕಿದರೆ ಇನ್ನೊಂದು ಕಡೆಯೂ ಪಸರಿಸಿಸುತ್ತೆ. ಆದ್ದರಿಂದ ವೈಟ್ ಹೆಡ್ ನಿವಾರಿಸುವ ಕೆಲವು ಟಿಪ್ಸ್ ಗಳನ್ನು ಇಲ್ಲಿ ನೀಡಲಾಗಿದೆ.

ವೈಟ್ ಹೆಡ್ ನಿವಾರಿಸುವ ವಿಧಾನ:

1. ಚೆನ್ನಾಗಿ ಮುಖ ತೊಳೆದ ನಂತರ ಮುಖಕ್ಕೆ ಹಬೆ ತೆಗೆದುಕೊಂಡು ನಂತರ ಹತ್ತಿಯಿಂದ ಮೃದುವಾಗಿ ಒರೆಸಬೇಕು. ಇದು ವೈಟ್ ಹೆಡ್ ಹೋಗಿಸುವ ಸುಲಭ ವಿಧಾನ.

2. ಹತ್ತಿಯಿಂದ ವೈಟ್ ಹೆಡ್ ಒರೆಸಿಕೊಂಡು ಅದರ ಮೇಲೆ ಆಂಟಿ ಬ್ಯಾಕ್ಟೀರಿಯಲ್ ಕ್ರೀಂ ಹಚ್ಚಿಕೊಂಡರೆ ವೈಟ್ ಹೆಡ್ ಕಲೆ ಉಳಿಸದಂತೆ ಮಾಡುತ್ತೆ.

3. ವಾರದಲ್ಲಿ 2-3 ಬಾರಿ ಮುಖಕ್ಕೆ ಸ್ಕ್ರಬ್ ಮಾಡಿಕೊಂಡರೆ ಸೋಂಕನ್ನುಂಟುಮಾಡುವ ನಿರ್ಜೀವ ಕಣವನ್ನು ತೊಲಗಿಸುವುದಲ್ಲದೆ ವೈಟ್ ಹೆಡ್ ಬರುವುದನ್ನೂ ತಡೆಯುತ್ತದೆ.

4. ನಿಂಬೆರಸದಲ್ಲಿ ಹತ್ತಿ ಅದ್ದಿ ಅದರಿಂದ ವೈಟ್ ಹೆಡ್ ಒರೆಸಿಕೊಂಡರೆ ಕಲೆ ಉಳಿಯದಂತೆ ವೈಟ್ ಹೆಡ್ ಮಾಯವಾಗುತ್ತದೆ.

5. ಲೋಳೆಸರವನ್ನು ಅಥವಾ ತುರಿದ ಆಲೂಗಡ್ಡೆ ರಸವನ್ನು ವೈಟ್ ಹೆಡ್ ಮೇಲೆ ಹಚ್ಚಿಕೊಂಡರೆ ಅದು ಕಡಿಮೆಯಾಗುವುದಷ್ಟೇ ಅಲ್ಲ, ಕಲೆಯೂ ಉಳಿಯುವುದಿಲ್ಲ.

6. ರೆಡಿನಾಯಿಡ್ ಅಥವಾ ಸ್ಯಾಲಿಸೈಕ್ಲಿಕ್ ಆಸಿಡ್ ಮತ್ತು ಬೆನ್ ಝಾಯಿಲ್ ಪೆರಾಕ್ಸೈಡ್ ಒಳಗೊಂಡ ಕ್ರೀಂಗಳನ್ನು ಹಚ್ಚಿಕೊಳ್ಳಬಹುದು.

7. ವಿಟಮಿನ್ ಎ ಪೂರಿತ ಹಣ್ಣು ಮತ್ತು ತರಕಾರಿ ಸೇವನೆಯಿಂದ ಮತ್ತು ನೀರನ್ನು ಹೆಚ್ಚು ಕುಡಿಯುವುದರಿಂದ ಚರ್ಮ ಆರೋಗ್ಯಕರವಾಗಿರುತ್ತದೆ.

English summary

Whiteheads Removal Easy Tips | Skin Treatment | ವೈಟ್ ಹೆಡ್ ಹೋಗಿಸುವ ಸುಲಭ ವಿಧಾನ | ತ್ವಚೆಯ ಪೋಷಣೆ

To get rid of white heads, we generally squeeze and that is not correct as the nails may contain dirt that may react with the sebum and spread the infection all over the skin. Here is what you need to do.
Story first published: Saturday, November 5, 2011, 10:23 [IST]
X
Desktop Bottom Promotion