For Quick Alerts
ALLOW NOTIFICATIONS  
For Daily Alerts

ಮೊಡವೆ ಸಮಸ್ಯೆಗೆ ಸಾಮಾನ್ಯವಾದ ಆರು ಕಾರಣ

|
What Causes Pimples
ಮೊಡವೆ ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆಯಾಗಿದ್ದು ಈ ಮೊಡವೆಯು ಈ ರೀತಿಯ ಕಾರಣಗಳಿಂದ ಉಂಟಾಗುತ್ತದೆ.

1. ಪ್ರೌಢಾವಸ್ಥೆ : ಈ ಅವಸ್ಥೆಯಲ್ಲಿ ದಹದಲ್ಲಿ ಹಾರ್ಮೋನ್ ಗಳ ವ್ಯತ್ಯಾಸ ಉಂಟಾಗುವುದರಿಂದ ತ್ವಚೆಯಲ್ಲಿ ವ್ಯತ್ಯಾಸ ಉಂಟಾಗುತ್ತದೆ, ಆವಗ ಕೆಲವೊಮ್ಮೆ ಬ್ಲಾಕ್ ಹೆಡ್ಸ್ ಗಳು ಬಂದು ಮೊಡವೆ ಉಂಟಾಗುವುದು.

2.ಮಾಲಿನ್ಯ:
ಮಾಲಿನ್ಯವು ಮುಖದ ಮೇಲೆ ಬಂದು ಕೂರುವುದರಿಂದ ತ್ವಚೆಯ ರಂಧ್ರಗಳು ಮುಚ್ಚಿ ಮೊಡವೆಗಳು ಉಂಟಾಗುತ್ತವೆ.

3. ಒತ್ತಡ: ಒತ್ತಡದಿಂದಾಗಿ ದೇಹದ ಹಾರ್ಮೋನ್ ಗಳಲ್ಲಿ ವ್ಯತ್ಯಾಸ ಉಂಟಾಗುತ್ತದೆ ಇದು ನೇರವಾಗಿ ತ್ವಚೆಯ ಮೇಲೆ ಪರಿಣಾಮ ಬೀರುತ್ತದೆ.

4. ಸೌಂದರ್ಯವರ್ಧಕಗಳು :
ಅಧಿಕ ಕೆಮಿಕಲ್ ಇರುವ ವಸ್ತುಗಳನ್ನು ಮುಖಕ್ಕೆ ಹಾಕುವುದರಿಂದ ಮತ್ತು ಮಾಯಿಶ್ಚರ್ ಗಳನ್ನು ತುಂಬಾ ಹಚ್ಚುವುದರಿಂದ ಸಹ ಮುಖದ ರಂಧ್ರಗಳು ಮುಚ್ಚಿ ಮೊಡವೆ ಉಂಟಗುತ್ತದೆ.

5. ವಂಶಪಾರಂಪರ್ಯ: ಒಂದು ವೇಳೆ ಅಪ್ಪ ಅಥವಾ ಅಮ್ಮನಿಗೆ ಮೊಡವೆ ಇದ್ದರೆ ಮಕ್ಕಳಿಗೂ ಬರುತ್ತದೆ.

6. ಸೂಕ್ತವಲ್ಲದ ಆಹಾರ ಕ್ರಮ:
ಅಧಿಕ ಎಣ್ಣೆ ಪದಾರ್ಥ ಮತ್ತು ಕುರುಕಲು ತಿಂಡಿಗಳನ್ನು ತಿನ್ನುವುದರಿಂದ ಜೀರ್ಣಕ್ರಿಯೆದಲ್ಲಿ ತೊಂದರೆ ಉಂಟಾಗಿ ಅದು ದೇಹದ ಮೇಲೆ ಮತ್ತು ತ್ವಚೆಯ ಮೇಲೆ ಪರಿಣಾಮ ಬೀರುತ್ತದೆ.

ಮೊಡವೆ ವಂಶಪರಂಪರೆಯಿಂದ ಬಂದಿದ್ದರೆ ಅದನ್ನು ಗುಣಪಡಿಸಲು ಸ್ವಲ್ಪ ಕಷ್ಟವಾದರೂ ಉತ್ತಮ ಆಹಾರ ಕ್ರಮ ಮತ್ತು ಚಿಕಿತ್ಸೆಯನ್ನು ಪಡೆಯುವುದರಿಂದ ನಿಯಂತ್ರಿಸಬಹುದಾಗಿದೆ.

English summary

What Causes Pimples? | Beauty And Pimple Problem | ಮೊಡವೆ ಉಂಟಾಗಲು ಕಾರಣಗಳೇನು? | ಸೌಂದರ್ಯ ಮತ್ತು ಮೊಡವೆ

Pimple is the common problem among youth. So many things will be the cause for the pimple problem. Steps taken to prevent these can actually lead to cure the occurrence of pimples. Though if it is a hereditary problem, curing it is a problem but it can definitely be reduced. Take a look.
Story first published: Monday, October 31, 2011, 12:02 [IST]
X
Desktop Bottom Promotion