For Quick Alerts
ALLOW NOTIFICATIONS  
For Daily Alerts

ಮನೆಯಲ್ಲೇ ರೆಡಿ ಮಾಡಿ ಬಾಡಿ ಲೋಶನ್

|
Body lotion
ಬಾಡಿ ಲೋಶನ್ ಗಳು ಚರ್ಮವನ್ನು ಮೃದು ಮತ್ತು ಆರೋಗ್ಯಕರವಾಗಿ ಇಡುತ್ತವೆ. ಲೋಶನ್ ಬಳಕೆಯಿಂದ ಒಣ ಚರ್ಮದಿಂದ ಮುಕ್ತಿ ಹೊಂದಿ ಸುಕೋಮಲ ತ್ವಚೆ ಪಡೆಯಬಹುದು. ಆದರೆ ಲೋಶನ್ ಗಳಿಗೆಂದು ಹಣವನ್ನು ಹೆಚ್ಚು ಖರ್ಚು ಮಾಡುವ ಅವಶ್ಯಕತೆ ಇಲ್ಲ.

ಮನೆಯಲ್ಲೇ ಲೋಶನ್ ಗಳನ್ನು ನೀವೂ ತಯಾರಿಸಬಹುದು. ತ್ವಚೆಯ ಸಂಪೂರ್ಣ ಪೋಷಣೆಗೆ ಲೋಶನ್ ಗಳು ಹೆಚ್ಚು ಉಪಯೋಗಕ್ಕೆ ಬರುತ್ತವೆ.

ಮನೆಯಲ್ಲೇ ಲೋಶನ್ ಗಳನ್ನು ಹೇಗೆ ತಯಾರಿಸಬಹುದು ಎಂದು ತಿಳಿದುಕೊಳ್ಳಿ:

* ಹಾಲಿನ ಲೋಶನ್:
ಎಲ್ಲರಿಗೂ ತಿಳಿದಿರುವಂತೆ ಹಾಲು ನೈಸರ್ಗಿಕ ಬಾಡಿ ಲೋಶನ್. ಎರಡು ಕಪ್ ಬೆಚ್ಚಗಿನ ಹಾಲಿಗೆ ಒಂದು ಚಮಚ ಉಪ್ಪನ್ನು ಬೆರೆಸಿ ಚೆನ್ನಾಗಿ ಕದಡಿ ಮಿಶ್ರಣವನ್ನು ದೇಹಕ್ಕೆ ಮೇಲ್ಮುಖವಾಗಿ ಮಸಾಜ್ ಮಾಡಿಕೊಳ್ಳಬೇಕು. ಇದು ಕಪ್ಪು ಕಲೆಗಳನ್ನು ಹೋಗಲಾಡಿಸುತ್ತದೆ. 15 ನಿಮಿಷದ ನಂತರ ತೊಳೆದುಕೊಂಡರೆ ತ್ವಚೆ ತಾಜಾ ಆಗಿರುವಂತೆ ಗೋಚರಿಸುತ್ತದೆ.

* ರೋಸ್ ವಾಟರ್ ಹ್ಯಾಂಡ್ ಲೋಶನ್: 1/3 ಕಪ್ ಗ್ಲಿಸರಿನ್ ಮತ್ತು 2/3 ಕಪ್ ರೋಸ್ ವಾಟರ್ ಬೆರೆಸಿಕೊಂಡು ಬಾಟಲಿಗೆ ಸುರಿದುಕೊಂಡು ಬೆಚ್ಚಗಿನ ವಾತಾವರಣವಿರುವ ಜಾಗದಲ್ಲಿ ಇಡಬೇಕು. ಬಳಸುವ ಮುನ್ನ ಚೆನ್ನಾಗಿ ಕದಡಿ ಕೈಗಳಿಗೆ ಆಗಾಗ್ಗೆ ಲೇಪಿಸಿಕೊಳ್ಳುತ್ತಿರಬೇಕು. ಇದು ಕೈಗಳು ಸುಂದರವಾಗಿ ಕಾಣುವಂತೆ ಮಾಡುತ್ತವೆ.

* ಮೊಸರಿನ ಲೋಶನ್ : ಚರ್ಮ ಸೂರ್ಯನ ಕಿರಣಗಳಿಂದ ಕಪ್ಪಗಾಗಿದ್ದರೆ ಅದನ್ನು ನಿವಾರಿಸುವಲ್ಲಿ ಈ ಮೊಸರಿನ ಲೋಶನ್ ತುಂಬಾ ಪ್ರಭಾವಕಾರಿ. 1 ಕಪ್ ಮೊಸರಿಗೆ ಸ್ವಲ್ಪ ನಿಂಬೆ ರಸ ಬೆರೆಸಿ ಚೆನ್ನಾಗಿ ಕಲಸಿ ಈ ಮಿಶ್ರಣವನ್ನು ನಿಮಗೆ ಬೇಕಾದ ಕಡೆ ಲೇಪಿಸಿಕೊಳ್ಳಬೇಕು. ಚೆನ್ನಾಗಿ ಮಸಾಜ್ ಮಾಡಿದ ನಂತರ 10-15 ನಿಮಿಷ ಬಿಟ್ಟು ತೊಳೆದುಕೊಳ್ಳಬೇಕು. ಇದು ಚರ್ಮವನ್ನು ಮೃದುಗೊಳಿಸುವುದಲ್ಲದೆ ಟ್ಯಾನ್ ಕೂಡ ಹೋಗಲಾಡಿಸುತ್ತದೆ.

* ಬಾಳೆಹಣ್ಣಿನ ಲೋಶನ್: ಬಾಳೆಹಣ್ಣಿಗೆ ಜೇನು, ನಿಂಬೆರಸ ಮತ್ತು ಬೆಣ್ಣೆಯನ್ನು ಬೆರೆಸಿ ಚೆನ್ನಾಗಿ ಕಲೆಸಿ ಸ್ವಲ್ಪ ಹೊತ್ತು ಬಿಟ್ಟು ಹಚ್ಚಿಕೊಂಡು 2 ಗಂಟೆ ಹಾಗೆ ಬಿಡಬೇಕು. ಹಾಲಿನಲ್ಲಿ ಹತ್ತಿಯನ್ನು ಅದ್ದಿ ಅದರಿಂದ ಒರೆಸಬೇಕು. ನಂತರ ನೀರಿನಿಂದ ತೊಳೆದುಕೊಳ್ಳಬೇಕು. ಇದನ್ನು ವಾರಕ್ಕೊಮ್ಮೆಯಾದರೂ ಮಾಡುತ್ತಿದ್ದರೆ ನಿಮ್ಮ ಚರ್ಮದಲ್ಲಾದ ಬದಲಾವಣೆ ನಿಮ್ಮನ್ನು ಆಶ್ಚರ್ಯಗೊಳಿಸುತ್ತದೆ.

English summary

Home made Body Lotions | Body lotions for beautiful skin | ಮನೆಯಲ್ಲೇ ತಯಾರಿಸಬಹುದಾದ ಬಾಡಿ ಲೋಶನ್ | ಸುಂದರ ತ್ವಚೆಗೆ ಬಾಡಿ ಲೋಶನ್

Did you know how to make body lotions at home? Check out some best homemade hand lotion recipe which can also be used on the body. These homemade body lotions are natural for proper skin care. Take a look.
Story first published: Friday, August 26, 2011, 12:43 [IST]
X
Desktop Bottom Promotion