For Quick Alerts
ALLOW NOTIFICATIONS  
For Daily Alerts

ಸುಕ್ಕು ತಡೆಗಟ್ಟಲು ಇಲ್ಲಿದೆ ನೈಸರ್ಗಿಕ ಮಾರ್ಗ

|
Anti aging diet
ವಯಸ್ಸಾಗೋದು ನಾವು ಬದುಕಿರುವಷ್ಟೇ ಸತ್ಯವಾದ ವಿಚಾರ. ಅದನ್ನ ಸಂಪೂರ್ಣವಾಗಿ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ವಯಸ್ಸಾದಂತೆ ಚರ್ಮದ ಮೇಲೆ ಬೇಗ ಸುಕ್ಕು ಮೂಡುವುದನ್ನು ತಾತ್ಕಾಲಿಕವಾಗಿ ತಡೆಯಬಹುದು.

ಸುಕ್ಕು ತಡೆಯಲು ಕೆಮಿಕಲ್ ಮಿಶ್ರಿತ ಕ್ರೀಂಗಳ ಮೊರೆಹೋಗುವ ಬದಲು ನೈಸರ್ಗಿಕವಾಗಿ ತ್ವಚೆಯನ್ನು ಸಂರಕ್ಷಿಸಿಕೊಳ್ಳುವ ಸುಲಭ ವಿಧಾನವೊಂದು ಇಲ್ಲಿದೆ. ನಾವು ಸೇವಿಸುವ ಆಹಾರದಿಂದಲೇ ನಮ್ಮ ಚರ್ಮದ ಮೇಲಿನ ಸುಕ್ಕುಗಳನ್ನು ನಿಯಂತ್ರಿಸಬಹುದು.

ತಾಜಾ ತ್ವಚೆಗೆ ನೈಸರ್ಗಿಕ ಮಾರ್ಗ:

1. ಹಸಿರು ತರಕಾರಿಗಳು: ಪಾಲಾಕ್, ಹೂಕೊಸು, ಕೊತ್ತಂಬರಿ, ಕರಿಬೇವು ಇನ್ನೂ ಮುಂತಾದವು ಚರ್ಮದ ರಕ್ಷಣೆಯಲ್ಲಿ ಅತಿ ಹೆಚ್ಚು ಅವಶ್ಯಕ. ಇದರಲ್ಲಿ ಹಾನಿಯುಂಟು ಮಾಡುವ ಯಾವುದೇ ಅಂಶಗಳು ಇಲ್ಲದಿರುವುದರಿಂದ ಮತ್ತು ಇವುಗಳ ನಾರಿನಂಶ ಜೀರ್ಣಕ್ರಿಯೆಯನ್ನು ಸುಲಭಗೊಳಿಸುವುದರಿಂದ ದೇಹವನ್ನೂ ಶುದ್ಧವಾಗಿಟ್ಟು, ತ್ವಚೆಯ ರಕ್ಷಣೆಗೆ ಮುಂದಾಗುತ್ತದೆ.

2. ಚರ್ಮದ ಸ್ವಾಸ್ಥ್ಯಕ್ಕೆ ವಿಟಮಿನ್: ವಿಟಮಿನ್ ಸಿ ಮತ್ತು ಇ ಇವೆರಡೂ ತ್ವಚೆ ಸುಕ್ಕುಗಟ್ಟುವುದನ್ನು ತಡೆಯುವ ಅತ್ಯಮೂಲ್ಯ ವಿಟಮಿನ್ ಗಳು. ಇವು ಚರ್ಮದ ಜೀವಕಣಗಳ ಪುನರುತ್ಪತ್ತಿಯನ್ನು ಹೆಚ್ಚುಗೊಳಿಸಿ ನಿರ್ಜೀವ ತ್ವಚೆಯನ್ನು ಸರಿಗೊಳಿಸುವಲ್ಲಿ ಸಹಾಯಕವಾಗುತ್ತದೆ. ವಿಟಮಿನ್ ಇ ತ್ವಚೆಗೆ ಎಣ್ಣೆಯಂಶ ಒದಗಿಸಿ ಚರ್ಮಕ್ಕೆ ತಾರುಣ್ಯ ನೀಡುತ್ತದೆ. ಬಿಸಿಲು, ಪ್ರದೂಷಣೆ, ಹೊಗೆ ಧೂಳಿನಿಂದ ಚರ್ಮದ ಮೇಲೆ ಹಾನಿಯಾಗದಂತೆ ತಡೆಯುತ್ತವೆ. ಕಿತ್ತಳೆ, ದ್ರಾಕ್ಷಿ, ನಿಂಬೆ, ಬಾದಾಮಿ, ಮತ್ತು ಇನ್ನಿತರ ಒಣಹಣ್ಣುಗಳ ಸೇವನೆ ತ್ವಚೆ ರಕ್ಷಣೆಗೆ ಅವಶ್ಯಕ.

3. ಸಿಪ್ಪೆಗಳು: ತ್ವಚೆ ಬೇಗ ಕಳೆಗುಂದಿ ನಿರ್ಜೀವವಾಗಿ ಕಾಣುವಂತೆ ಆಗುವುದನ್ನು ತಡೆಯಲು ತರಕಾರಿ ಮತ್ತು ಹಣ್ಣಿನ ಸಿಪ್ಪೆಯ ಸೇವನೆ ಮಾಡುವುದು ಮುಖ್ಯ. ಸೇಬು, ಚೆರ್ರಿ, ದ್ರಾಕ್ಷಿ ಮುಂತಾದ ಹಣ್ಣುಗಳ ಸೇವನೆಯಿಂದ ಇದರಲ್ಲಿನ ಸುಕ್ಕು ನಿವಾರಕ ಅಂಶ ತ್ವಚೆಗೆ ತಾಜಾತನ ನೀಡುತ್ತದೆ.

4. ಸಾಂಬಾರು ಪದಾರ್ಥ: ಲವಂಗ ಮತ್ತು ಮೆಣಸಿನಲ್ಲಿ ಚರ್ಮದ ಜೀವಕಣಗಳ ಪುನರುತ್ಪತ್ತಿ ಮಾಡುವ ಅತ್ಯಮೂಲ್ಯ ಅಂಶವಿದೆ. ಇವುಗಳನ್ನು ಆದಷ್ಟೂ ಅಡುಗೆಗೆ ಹೆಚ್ಚು ಬಳಸಿ ಸೇವಿಸಿದರೆ ಸುಕ್ಕನ್ನು ಮತ್ತು ಇನ್ನಿತರ ಚರ್ಮ ಸಂಬಂಧಿ ತೊಂದರೆಗಳನ್ನು ಕಡಿಮೆಮಾಡಬಹುದು.

ಈ ಎಲ್ಲ ತರಕಾರಿ, ಹಣ್ಣು ಮತ್ತು ಸಾಂಬಾರು ಪದಾರ್ಥಗಳನ್ನು ದಿನನಿತ್ಯ ಸ್ವಲ್ಪವಾದರೂ ಬಳಸಿ ನೋಡಿ, ನಿಮ್ಮ ಚರ್ಮದಲ್ಲಿನ ಬದಲಾವಣೆ ನಿಮಗೆ ಗೋಚರವಾಗುತ್ತದೆ.

English summary

Natural anti aging | Anti aging foods and vitamins | ತ್ವಚೆ ಸುಕ್ಕು ತಡೆಯಲು ನೈಸರ್ಗಿಕ ವಿಧಾನ | ತಾಜಾ ತ್ವಚೆಗೆ ತರಕಾರಿ, ಹಣ್ಣು ಮತ್ತು ವಿಟಮಿನ್

Aging is a as much of a reality as living. it cannot be totally eliminated. what we can do is defer the process of aging temporarily. This can be done by ingredients with natural anti aging properties that must be included in your diet. Take a look at some of the anti aging vegetable, fruits and vitamins.
Story first published: Wednesday, August 10, 2011, 12:57 [IST]
X
Desktop Bottom Promotion