For Quick Alerts
ALLOW NOTIFICATIONS  
For Daily Alerts

ಸೌಂದರ್ಯ ಹೆಣ್ಣಿಗೆ ಮಾತ್ರ ಸೀಮಿತವಲ್ಲ! ಪುರುಷರಿಗೂ ಬೇಕು...

By Arshad
|

ಸಾಮಾನ್ಯವಾಗಿ ಅಲಂಕಾರ ಎಂದರೆ ಮಹಿಳೆಯರಿಗೆ ಮೀಸಲು ಎಂದೇ ಪುರುಷರು ತಿಳಿದುಕೊಂಡಿದ್ದಾರೆ. ವಾಸ್ತವವಾಗಿ ಅಲಂಕಾರ ಆರೈಕೆಯ ರೂಪದಲ್ಲಿದ್ದಾಗ ಇದು ಎಲ್ಲರಿಗೂ ಅಗತ್ಯವಾಗಿರುತ್ತದೆ. ವಿಶೇಷವಾಗಿ ಚಳಿಗಾಲದಲ್ಲಿ ಪುರುಷರಿಗೂ ತ್ವಚೆಯ ಆರೈಕೆ ಇದ್ದು ಹೆಚ್ಚಿನವರು 'ನಮಗ್ಯಾಕೆ ಇದೆಲ್ಲಾ' ಎಂಬ ಆಸಡ್ಡೆಯ ಭಾವನೆ ಹೊಂದಿರುತ್ತಾರೆ.

ಆದರೆ ಆರೋಗ್ಯದ ಬಗ್ಗೆ ಕಾಳಜಿ ಇರುವ ಯಾವುದೇ ಪುರುಷರು ತಮ್ಮ ನಿತ್ಯದ ಅಗತ್ಯದ ವಸ್ತುಗಳ ಬಗ್ಗೆ ಹೆಚ್ಚಿನ ಜಾಗರೂಕತೆ ವಹಿಸಿ ಕೇವಲ ಉತ್ತಮ ಗುಣಮಟ್ಟದ ಪ್ರಸಾಧನಗಳನ್ನು ಮಾತ್ರ ಬಳಸುತ್ತಾರೆ. ವಿಶೇಷವಾಗಿ ಕ್ಷೌರದ ಅಗತ್ಯದ ಶೇವಿಂಗ್ ಕ್ರೀಂ ಮತ್ತು ಮುಖ ತೊಳೆಯಲು ಫೇಸ್ ವಾಶ್ ಪ್ರಸಾಧಗಳ ಬಗ್ಗೆ ವಿ.ಜಾನ್ ಗ್ರೂಪ್ ಸಂಸ್ಥೆಯ ವೈಯಕ್ತಿಕ ಕಾಳಜಿ ವಿಭಾಗದ ತಜ್ಞರಾದ ಅಚಿನ್ ಕೋಚ್ಚಾರ್ ರವರು ಈ ಬಗ್ಗೆ ಹಲವು ಅಮೂಲ್ಯ ಮಾಹಿತಿಗಳನ್ನು ನೀಡಿದ್ದು ಇದನ್ನು ಪ್ರಸ್ತುತಪಡಿಸಲು ಬೋಲ್ಡ್ ಸ್ಕೈ ತಂಡ ಹೆಮ್ಮೆ ಪಡುತ್ತಿದೆ, ಮುಂದೆ ಓದಿ....

mens face cream

ಉತ್ತಮ ಫೇಸ್ ವಾಶ್ ಬಳಸಿ:
ಸಾಮಾನ್ಯವಾಗಿ ಮೈಗೆ ಉಜ್ಜುವ ಸೋಪನ್ನೇ ಇದುವರೆಗೆ ಪುರುಷರು ಮುಖಕ್ಕೂ ಬಳಸುತ್ತಾ ಬಂದಿದ್ದಾರೆ. ಆದರೆ ಈ ಸೋಪು ಹೆಚ್ಚು ಪ್ರಬಲವಾದ ಕಾರಣ ಇದು ಮುಖದ ಚರ್ಮದ ಅಡಿಯಿಂದ ಅಗತ್ಯವಾದ ತೈಲವನ್ನೂ ತೊಳೆದು ಹಾಕುತ್ತದೆ. ಇದರಿಂದ ಮುಖದ ಚರ್ಮ ವಿಪರೀತ ಒಣಗುತ್ತದೆ. ಆದ್ದರಿಂದ ಕೊಂಚ ದುಬಾರಿಯಾದರೂ ಪರವಾಗಿಲ್ಲ, ಉತ್ತಮ ಗುಣಮಟ್ಟದ ಫೇಸ್ ವಾಶ್ ದ್ರಾವಣ ಅಥವಾ ಸೋಪನ್ನು ಕೊಂಡು ಕೇವಲ ತಣ್ಣೀರು ಅಥವಾ ಉಗುರುಬೆಚ್ಚನೆಯ ನೀರಿನಿಂದ ಮುಖ ತೊಳೆದುಕೊಳ್ಳಿ. ಬಿಸಿನೀರು ಸರ್ವಥಾ ಬಳಸಬೇಡಿ. ಕ್ಷಣಾರ್ಧದಲ್ಲಿ ಪುರುಷರ ತ್ವಚೆಯ ಕಾಂತಿ ಹೆಚ್ಚಿಸುವ ಬಿಬಿ ಕ್ರೀಮ್!

ಚಳಿಗಾಲದ ಕ್ರೀಂ ಬಳಸಿ
ಚಳಿಗಾಲದಲ್ಲಿ ಮುಖ ತೊಳೆದುಕೊಂಡ ಬಳಿಕ ದಪ್ಪ ಟವೆಲ್ಲಿನಿಂದ ಒತ್ತಿಕೊಂಡು ಒರೆಸಿಕೊಂಡು ಚಳಿಗಾದ ಕ್ರೀಂ ಹಚ್ಚಿಕೊಳ್ಳಿ. ಇದರಿಂದ ಚಳಿಗಾಲದಲ್ಲಿ ಗಾಳಿಯಿಂದ ಲಭ್ಯವಾಗದ ಆರ್ದ್ರತೆಯನ್ನು ಚರ್ಮ ಈ ಕ್ರೀಂ ನಿಂದ ಪಡೆದುಕೊಳ್ಳುತ್ತದೆ. ವಿಶೇಷವಾಗಿ ಒಣಚರ್ಮದವರಿಗೆ ಇದು ಅನಿವಾರ್ಯ. ಆರ್ದ್ರತೆಯ ಕೊರತೆಯಿಂದ ಚರ್ಮ ಸೂರ್ಯನ ಬೆಳಕಿಗೆ ಒಡ್ಡಿ ಇನ್ನಷ್ಟು ಘಾಸಿಗೊಳಗಾಗುತ್ತದೆ. ತೆರೆದ ಸೂಕ್ಷ್ಮರಂಧ್ರಗಳಲ್ಲಿ ಕೊಳೆ, ಸೂಕ್ಷ್ಮಜೀವಿಗಳು ಸೇರಿಕೊಂಡು ಸೋಂಕು ಆವರಿಸುವ ಸಾಧ್ಯತೆ ಹೆಚ್ಚುತ್ತದೆ.

ಉತ್ತಮ ಗುಣಮಟ್ಟದ ರೇಜರ್ ಬಳಸಿ
ನಿಮ್ಮ ಚರ್ಮಕ್ಕೆ ಅನುಗುಣವಾದ ರೇಜರ್ ಮಾತ್ರ ಬಳಸಿ. ಸಾಮಾನ್ಯವಾಗಿ ಹೆಚ್ಚಿನ ಪುರುಷರು ನಿತ್ಯವೂ ತಪ್ಪಿದರೆ ದಿನ ಬಿಟ್ಟು ದಿನ ಶೇವಿಂಗ್ ಮಾಡಿಕೊಳ್ಳುತ್ತಾರೆ. ಆದ್ದರಿಂದ ನಿಮ್ಮ ಚರ್ಮಕ್ಕೆ ಹೊಂದುವಂತಹ ರೇಜರ್ ಬಳಸುವುದೇ ಸರಿ. ತೀರಾ ಸೂಕ್ಷ್ಮಸಂವೇದಿ ಚರ್ಮದ ಪುರುಷರು ರೇಜರ್ ಬದಲಿಗೆ ಟ್ರಿಮ್ಮರ್ ಬಳಸಿ ಕೂದಲನ್ನು ಗಿಡ್ಡವಾಗಿರಿಸಬಹುದು. ಯಾವುದೇ ರೇಜರ್ ಬಳಸಿದಾಗ ನಿಮ್ಮ ತಪ್ಪಿಲ್ಲದೇ ಗಾಯವಾದರೆ ಇದು ನಿಮಗೆ ಸೂಕ್ತವಲ್ಲ ಎಂದು ತಿಳಿದುಕೊಳ್ಳಬಹುದು.

ಟೀ ಟ್ರೀ ಆಯಿಲ್ ಇರುವ ಶೇವಿಂಗ್ ಕ್ರೀಂ ಬಳಸಿ
ಶೇವಿಂಗ್ ಗೂ ಮೊದಲು ಮುಖವನ್ನು ಫೇಸ್ ವಾಶ್ ಬಳಸಿ ತೊಳೆದುಕೊಂಡು ಟವೆಲ್ ಒತ್ತಿ ಒರೆಸಿಕೊಳ್ಳಿ. ಬಳಿಕವೇ ಶೇವಿಂಗ್ ಕ್ರೀಂ ನೊರೆಯಾಗಿಸಿ ಗಡ್ಡಕ್ಕೆ ಹಚ್ಚಿಕೊಳ್ಳಿ. ಈ ನೊರೆಯಿಂದ ಎರಡು ರೀತಿಯ ಪ್ರಯೋಜನಗಳಿವೆ. ಇದು ಕೂದಲನ್ನು ಮಾತ್ರ ಮೃದುಗೊಳಿಸಿ ಸುಲಭವಾಗಿ ಬ್ಲೇಡಿನ ಹರಿತಕ್ಕೆ ಕತ್ತರಿಸಲು ಸಾಧ್ಯವಾಗುತ್ತದೆ. ಇನ್ನೊಂದು ಈ ನೊರೆ ಬ್ಲೇಡು ಚರ್ಮದ ಮೇಲೆ ಸುಲಭವಾಗಿ ಜಾರಲು ಜಾರುಕದಂತೆ ವರ್ತಿಸುತ್ತದೆ. ಶೇವಿಂಗ್ ಮಾಡಿಕೊಳ್ಳುವ ಮುನ್ನ, ಇಂತಹ ತಪ್ಪನ್ನು ಮಾಡದಿರಿ

ಅಂದರೆ ಬ್ಲೇಡು ಚರ್ಮಕ್ಕೆ ನೇರವಾಗಿ ಸ್ಪರ್ಷಿಸದೇ ತೆಳುವಾದ ಈ ನೊರೆಯ ಪದರದ ಮೇಲೆ ಜಾರುತ್ತದೆ. ಈ ನೊರೆಯಲ್ಲಿರುವ ಟೀ ಟ್ರೀ ಆಯಿಲ್ ಬ್ಯಾಕ್ಟ್ರೀರಿಯಾ ನಿವಾರಕ ಗುಣ ಹೊಂದಿದ್ದು ಕೂದಲ ಬುಡದ ಚರ್ಮವನ್ನು ಹಿಸಿಯುವಾಗ ಸೋಂಕಾಗದಂತೆ ರಕ್ಷಿಸುತ್ತದೆ ಹಾಗೂ ಚರ್ಮಕ್ಕೆ ಪೋಷಣೆ ನೀಡುತ್ತದೆ. ಪರಿಣಾಮವಾಗಿ ಶೇವ್ ಮಾಡಿದ ಬಳಿಕ ಉರಿ ಕಾಣಿಸಿಕೊಳ್ಳುವುದಿಲ್ಲ ಹಾಗೂ ಚರ್ಮ ತನ್ನ ಮೃದುತ್ವವನ್ನು ಉಳಿಸಿಕೊಳ್ಳುತ್ತದೆ. ಶೇವಿಂಗ್ ಬಳಿಕ ಕಾಡುವ ತ್ವಚೆಯ ಸಮಸ್ಯೆಗೆ ಏನು ಮಾಡಲಿ?

English summary

Winter skincare guide for men

Men too must take care of their skin in the winter season, and they can begin by choosing the right facewash and shaving cream. So today boldsky has shared tips for a daily skin care routine for men, have a look
Story first published: Sunday, February 5, 2017, 13:16 [IST]
X
Desktop Bottom Promotion