For Quick Alerts
ALLOW NOTIFICATIONS  
For Daily Alerts

ಕೂದಲಿನ ಕಾಳಜಿ ಮಹಿಳೆಯರಿಗೆ ಮಾತ್ರವಲ್ಲ, ಪುರುಷರಿಗೂ ಬೇಕು!

By Arshad
|

ಮಹಿಳೆಯರ ಕೂದಲಿನಷ್ಟು ಅಲ್ಲದಿದ್ದರೂ ಪುರುಷರ ಕೂದಲಿಗೂ ಆರೈಕೆಯ ಅಗತ್ಯವಿದೆ. ಕೆಲವರಿಗೆ ಕೂದಲನ್ನು ಒಪ್ಪ ಓರಣವಾಗಿಸಿಕೊಳ್ಳಲು ನಿತ್ಯವೂ ಕಷ್ಟಪಡಬೇಕಾಗುತ್ತದೆ. ಇದಕ್ಕೆ ಕಾರಣ ಕೂದಲನ್ನು ಹೇಗೆ ಸಂರಕ್ಷಿಸಿಕೊಳ್ಳಬೇಕು ಎಂಬ ವಿಷಯದ ಬಗ್ಗೆ ಇವರಿಗೆ ತಿಳಿವಳಿಕೆ ಇಲ್ಲದಿರುವುದೇ ಕಾರಣ. ಪುರುಷರ ಬೊಕ್ಕತಲೆಯಲ್ಲಿ ಕೂದಲು ಚಿಗುರಿಸುವ ಮನೆ ಔಷಧಿ

ಬನ್ನಿ, ದಿನದ ಮುಂದಿನ ಅವಧಿಯಲ್ಲಿಯೂ ನಿಮ್ಮ ಕೂದಲ ಸೌಂದರ್ಯ ಉಳಿದುಕೊಳ್ಳಬೇಕೆಂದರೆ ಕೇಶತಜ್ಞರು ನೀಡಿರುವ ಕೆಳಗಿನ ಮಾಹಿತಿಗಳನ್ನು ಅನುಸರಿಸಿ.

men bathing

ಬಿಸಿನೀರಿನಿಂದ ತಲೆಸ್ನಾನ ಮಾಡಬೇಡಿ
ಬಿಸಿನೀರು ತಲೆಯ ಚರ್ಮದ ನೈಸರ್ಗಿಕ ತೈಲಗಳನ್ನು ಬಸಿದು ಬಿಡುತ್ತದೆ. ಪರಿಣಾಮವಾಗಿ ಕೂದಲ ಬುಡದಲ್ಲಿ ಆರ್ದ್ರತೆಯ ಕೊರತೆಯಾಗುತ್ತದೆ. ಇದರಿಂದ ತಲೆಹೊಟ್ಟು, ತುರಿಕೆ ಚರ್ಮ ಒಣಗುವುದು, ಕೂದಲು ಸಡಿಲವಾಗಿ ಉದುರುವುದು, ಕೂದಲ ಕಾಂತಿ ಕಳೆದುಕೊಳ್ಳುವುದು ಮೊದಲಾದ ತೊಂದರೆಗಳು ಎದುರಾಗುತ್ತದೆ.

ಬದಲಿಗೆ ತಲೆಗೂದಲನ್ನು ತೊಳೆದುಕೊಳ್ಳಲು ಉಗುರುಬೆಚ್ಚನೆಯ ನೀರನ್ನು ಮಾತ್ರ ಬಳಸಿ. ಸಾಧ್ಯವಾದರೆ ತಣ್ಣೀರನ್ನೇ ಬಳಸುವುದು ಇನ್ನೂ ಉತ್ತಮ. ಇದರಿಂದ ನಿಮ್ಮ ಕೂದಲಿನ ಆರೋಗ್ಯ ಉತ್ತಮವಾಗಿರುತ್ತದೆ.

ಟವೆಲ್ಲಿನಿಂದ ಒರೆಸಿಕೊಳ್ಳುವಾಗ ಆತುರ ಬೇಡ
ಕೆಲವರಿಗೆ ಸ್ನಾನದ ಬಳಿಕ ಟವೆಲ್ಲಿನಿಂದ ಜೋರಾಗಿ, ಹೆಚ್ಚಿನ ಒತ್ತಡದಿಂದ ಒರೆಸಿಕೊಳ್ಳುವ ಅಭ್ಯಾಸವಿರುತ್ತದೆ. ಇದು ಅತ್ಯಂತ ಅಪಾರಕರ ವಿಧಾನವಾಗಿದೆ. ಏಕೆಂದರೆ ಸ್ನಾನದ ಬಳಿಕ ಕೂದಲು ಮೃದುವಾಗಿದ್ದು ಸುಲಭವಾಗಿ ತುಂಡಾಗುತ್ತದೆ. ಬದಲಿಗೆ ಬೆರಳುಗಳಿಂದ ನಯವಾಗಿ ಒತ್ತಿ ಹೆಚ್ಚಿನ ನೀರನ್ನು ಬಸಿದು ತೆಗೆಯಿರಿ.

ಕೂದಲು ಯಾವ ದಿಕ್ಕಿನತ್ತ ಬೆಳೆಯುತ್ತಿದೆಯೋ ಆ ದಿಕ್ಕಿನಲ್ಲಿಯೇ ಬೆರಳುಗಳನ್ನು ಮುಂದುವರೆಸಿ. ಒಂದು ವೇಳೆ ಇದಕ್ಕೆ ಹೆಚ್ಚಿನ ಸಮಯ ಹಿಡಿಯುತ್ತಿದ್ದರೆ ಅಗಲ ಹಲ್ಲಿನ ಬಾಚಣಿಗೆಯನ್ನು ಬಳಸಿಯೂ ನೀರನ್ನು ಬಸಿಯಬಹುದು. ಬಳಿಕ ಟವೆಲ್ಲನ್ನು ಒತ್ತಿ ನೀರನ್ನು ಹೀರಿಕೊಳ್ಳುವಂತೆ ಮಾಡಿ. ಪುರುಷರ ಉದ್ದ ಕೂದಲಿನ ಆರೈಕೆ- ಇಲ್ಲಿದೆ ಸರಳ ಟಿಪ್ಸ್

ಕೂದಲನ್ನು ನಿಯಮಿತವಾಗಿ ಕತ್ತರಿಸಿಕೊಳ್ಳುತ್ತಿರಿ
ಕೂದಲ ಆರೈಕೆಗೆ ನಿಯಮಿತವಾದ ಕೌರವೂ ಅಗತ್ಯ. ನಿಮಗೆ ಉದ್ದ ಕೂದಲು ಇರಿಸಿಕೊಳ್ಳಲು ಇಷ್ಟವಿದ್ದರೂ ಅತಿ ಹೆಚ್ಚಿನ ಕೂದಲಿದ್ದರೆ ಇದರ ಆರೈಕೆಯೂ ಕಷ್ಟಕರವಾಗುತ್ತದೆ. ಬದಲಿಗೆ ಪ್ರತಿ ನಾಲ್ಕರಿಂದ ಐದು ವಾರಗಳ ಅಂತರದಲ್ಲಿ ನಿಮಗೆ ಆರೈಕೆ ಮಾಡಿಕೊಳ್ಳಲು ಸುಲಭವಾಗುವಷ್ಟು ಮಾತ್ರ ಉದ್ದಕ್ಕೆ ಕೂದಲನ್ನು ಕತ್ತರಿಸಿಕೊಳ್ಳಿ. ಪುರುಷರ ಕೂದಲುದುರುವ ಸಮಸ್ಯೆಗೆ ಫಲಪ್ರದ ಮನೆಮದ್ದು

ಸ್ನಾನದ ತಕ್ಷಣ ಕೂದಲು ಬಾಚಬೇಡಿ
ಸ್ನಾನದ ತಕ್ಷಣ ಕೂದಲು ಒಣಗುವ ಮುನ್ನವೇ ಎಂದಿಗೂ ಬಾಚಬೇಡಿ. ಒಂದು ವೇಳೆ ಸಮಯವಿಲ್ಲದಿದ್ದರೆ ಅಗಲ ಹಲ್ಲುಗಳ ಬಾಚಣಿಗೆಯನ್ನು ಮಾತ್ರ ಬಳಸಿ. ಅಲ್ಲದೇ ಬಾಚಿಕೊಳ್ಳುವ ವೇಳೆ ಅಧಿಕ ಒತ್ತಡ ಹೇರಬೇಡಿ.

ನಿಯಮಿತವಾಗಿ ತಲೆಸ್ನಾನ ಮಾಡಿ
ನಿತ್ಯವೂ ಸ್ನಾನ ಮಾಡಿದರೂ ನಿತ್ಯ ತಲೆಸ್ನಾನ ಮಾಡಬೇಡಿ. ಬದಲಿಗೆ ದಿನ ಬಿಟ್ಟು ದಿನ ತಲೆಸ್ನಾನ ಮಾಡಿ. ನಿಮ್ಮ ಕೂದಲ ಬಗೆಯನ್ನು ಅನುಸರಿಸಿ ಅದಕ್ಕೆ ಸೂಕ್ತವಾದ ಶಾಂಪೂವನ್ನು ಮಾತ್ರವೇ ಬಳಸಿ. ಒಂದು ವೇಳೆ ನಿಮ್ಮ ಕೂದಲು ಒಣಗೂದಲಾಗಿದ್ದರೆ ಶಾಂಪೂ ಬದಲಿಗೆ ತೇವಕಾರಕ ವಿರುವ ಕಂಡೀಶನರ್ ಅನ್ನೇ ಬಳಸಿ. ಸ್ವಲ್ಪ ಕೇಳಿ, ಕೂದಲು ಉದುರುತ್ತಿದೆ ಎಂದು ಚಿಂತಿಸಬೇಡಿ

English summary

Tips for men to avoid bad hair days

Is your hair often in a mess and does it take a lot of time for you to set your hair in the morning? So what your hair it short you need to take some steps to avoid bad hair days. Follow these tips by hair and beauty expert
X
Desktop Bottom Promotion