For Quick Alerts
ALLOW NOTIFICATIONS  
For Daily Alerts

ನೈಸರ್ಗಿಕ ಆಫ್ಟರ್ ಶೇವ್ ಲೋಷನ್-ಮನೆಯಲ್ಲೇ ತಯಾರಿಸಿ!

By Arshad
|

ಶೇವಿಂಗ್ ಅಥವಾ ಮುಖಕ್ಷೌರ ಇಂದು ನಿತ್ಯದ ಒಂದು ಕರ್ಮವಾಗಿಬಿಟ್ಟಿದೆ. ಸುಲಭಬೆಲೆಯಲ್ಲಿ ಸಿಗುವ ಮತ್ತು ಬಳಸಿ ಬಿಸಾಕುವಂತಹ ರೇಜರ್ ಗಳು ಬಂದ ಬಳಿಕ ಹೆಚ್ಚಿನವರು ಸ್ವತಃ ಮುಖಕ್ಷೌರ ಮಾಡಿಕೊಳ್ಳುತ್ತಿದ್ದಾರೆ. ಅಂತೆಯೇ ಮುಖಕ್ಷೌರದ ಬಳಿಕ ಎದುರಾಗುವ ಉರಿಯನ್ನು ಮತ್ತು ಸೋಂಕನ್ನು ತಡೆಗಟ್ಟಲು ಆಫ್ಟರ್ ಶೇವ್ ಲೋಷನ್‌ಗಳೂ ವಿವಿಧ ಮಾದರಿಗಳಲ್ಲಿ ಸಿಗುತ್ತಿವೆ.

ಆದರೆ ಇವುಗಳಲ್ಲಿ ಹೆಚ್ಚಿನವುಗಳಲ್ಲಿ ಮದ್ಯಸಾರ ಅಥವಾ ಪ್ರಬಲ ಆಲ್ಕೋಹಾಲ್ ಇದ್ದು ಚರ್ಮದ ಮೇಲ್ಭಾಗದ ಪದರಕ್ಕೆ ಘಾಸಿ ಯುಂಟುಮಾಡಬಹುದು. ಕೆಲವು ಲೋಶನ್‌ಗಳಲ್ಲಿ ಚರ್ಮಕ್ಕೆ ಉರಿಯನ್ನು ಕಡಿಮೆ ಮಾಡುವ ಜೊತೆಗೇ ಆರ್ದ್ರತೆ ನೀಡುವ ರಾಸಾಯನಿಕಗಳನ್ನೂ, ಕೊಂಚ ಸುಗಂಧ ಬರುವ ರಾಸಾಯನಿಕಗಳನ್ನೂ ಸೇರಿಸಿರುತ್ತಾರೆ. ಆದರೆ ಇವುಗಳ ಒಟ್ಟಾರೆ ಪರಿಣಾಮ ಒಳ್ಳೆಯದು ಮಾಡುವುದಕ್ಕಿಂತ ಕೆಟ್ಟದ್ದೇ ಹೆಚ್ಚಿದೆ. ಅದರಲ್ಲೂ ಪುರುಷರಿಗಾಗಿಯೇ ಇರುವ ಈ ಉತ್ಪನ್ನಗಳ ಜಾಹೀರಾತುಗಳಲ್ಲಿ ಯಾವುದೇ ಸಂಬಂಧವೇ ಇಲ್ಲದ ಯುವತಿಯರನ್ನು ಬಳಸಿ ಯುವಕರ ಮನಸ್ಸನ್ನು ಇನ್ನಷ್ಟು ಕೆಡಿಸುತ್ತಾರೆ. ನೈಸರ್ಗಿಕ ಶೇವಿಂಗ್ ಕ್ರೀಮ್ -ಮನೆಯಲ್ಲೇ ತಯಾರಿಸಿಕೊಳ್ಳಿ!

ಆದ್ದರಿಂದ ಕಠಿಣ ರಾಸಾಯನಿಕಗಳಿಂದ ಮಾಡಿದ ದುಬಾರಿ ಲೋಶನ್‌ಗಳ ಬದಲಿಗೆ ಮನೆಯಲ್ಲಿಯೇ ತಯಾರಿಸಿ ಹಚ್ಚಿಕೊಳ್ಳಬಹುದಾದ ಲೋಶನ್ ಅನ್ನು ಇಂದು ಬೋಲ್ಡ್ ಸ್ಕೈ ತಂಡ ಪ್ರಸ್ತುತಪಡಿಸುತ್ತಿದೆ. ಇದರ ಪರಿಕರಗಳಿಗಾಗಿ ರಾಸಾಯನಿಕಗಳ ಅಂಗಡಿಗೆ ತಡಕಾಡಬೇಕಾಗಿಲ್ಲ. ಬದಲಿಗೆ ಮನೆಯಲ್ಲಿಯೇ ಸಿಗುವ ಸಾಮಾನ್ಯ ಮತ್ತು ಅಗ್ಗವಾದ ಪರಿಕರಗಳೇ ಸಾಕು.

Simple Homemade Aftershave Lotion To Soothe Your Skin

ಅವೆಂದರೆ, ಕೊಬ್ಬರಿ ಎಣ್ಣೆ, ಆಲಿವ್ ಎಣ್ಣೆ, ಜೇನುಮೇಣ, ಲೋಳೆಸರದ ರಸ ಮತ್ತು ಕೊಂಚ ನಿಮ್ಮ ಆಯ್ಕೆಯ ಯಾವುದೇ ಅವಶ್ಯಕ ತೈಲ. ಈ ಸಾಮಾಗ್ರಿಗಳಲ್ಲಿ ಹಲವು ವಿಶೇಷ ಗುಣಗಳಿವೆ. ಪ್ರಮುಖವಾಗಿ ಬ್ಯಾಕ್ಟೀರಿಯಾ ನಿವಾರಕ ಗುಣ ಚರ್ಮದಲ್ಲಿ ಬ್ಯಾಕ್ಟೀರಿಯಾಗಳು ಆವರಿಸದಂತೆ ತಡೆಯುತ್ತದೆ. ಅಲ್ಲದೇ ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಚರ್ಮದ ರಕ್ಷಣೆ ಮತ್ತು ಪೋಷಣೆಗೆ ನೆರವಾಗುತ್ತವೆ. ಇವೆಲ್ಲಾ ಗುಣಗಳು ಚರ್ಮಕ್ಕೆ ನೀಡುವ ಆರೈಕೆಯ ಫಲಿತಾಂಶ ನಿಮ್ಮನ್ನು ದಂಗುಬಡಿಸಬಹುದು. ಶೇವಿಂಗ್ ಉರಿ ಶಮನಕ್ಕೆ ಇಲ್ಲಿದೆ ಸೂತ್ರ

ಈ ಲೋಷನ್‌ನ ಪ್ರಥಮ ಕಾರ್ಯವೆಂದರೆ ಚರ್ಮದ ಅಡಿಯಿಂದ ಆರ್ದ್ರತೆ ನೀಡುವುದು. ಇದರಿಂದ ಮುಖಕ್ಷೌರದ ಬಳಿಕ ಆಗುವ ಉರಿ ಮೂಲದಲ್ಲಿಯೇ ಇಲ್ಲವಾಗುವ ಕಾರಣ ಇತರ ರಾಸಾಯನಿಕ ಲೋಶನ್‌ಗಳನ್ನು ಹಚ್ಚಿದಾಕ್ಷಣ ಎದುರಾಗುವ ಚರ್ಮದ ಉರಿ ಇಲ್ಲಿ ಉಂಟಾಗುವುದಿಲ್ಲ. ಬದಲಿಗೆ ತಂಪಾದ ಅನುಭವ ನೀಡುತ್ತದೆ. ಬನ್ನಿ, ಈ ಅದ್ಭುತ ಲೋಶನ್ ತಯಾರಿಸುವ ಬಗೆಯನ್ನುನೋಡೋಣ:

ಅಗತ್ಯವಿರುವ ಸಾಮಗ್ರಿಗಳು
*4-5 ದೊಡ್ಡ ಚಮಚ ಕೊಬ್ಬರಿ ಎಣ್ಣೆ
*2-3 ದೊಡ್ಡ ಚಮಚ ಆಲಿವ್ ಎಣ್ಣೆ
*2 ಚಿಕ್ಕಚಮಚ ಜೇನುಮೇಣ
*3 ಚಿಕ್ಕಚಮಚ ಲೋಳೆಸರದ ರಸ
*5-6 ಹನಿ ಅವಶ್ಯಕ ತೈಲ, ಪೆಪ್ಪರ್ ಮಿಂಟ್ ಅಥವಾ ನಿಮ್ಮ ಆಯ್ಕೆಯ ಬೇರೆ ಯಾವುದೂ ಸರಿ.

ತಯಾರಿಸುವ ವಿಧಾನ
1) ಮೊದಲು ಕೊಬ್ಬರಿ ಎಣ್ಣೆ ಮತ್ತು ಜೇನುಮೇಣವನ್ನು ಒಂದು ಚಿಕ್ಕ ಗಾಜಿನ ಬೋಗುಣಿಯಲ್ಲಿ ಚೆನ್ನಾಗಿ ಬೆರೆಸಿ
2) ಈ ಬೋಗುಣಿಯನ್ನು ಮೈಕ್ರೋವೇವ್ ನಲ್ಲಿರಿಸಿ 30-40 ಸೆಕೆಂಡುಗಳ ಕಾಲ ಬಿಸಿಮಾಡಿ.
3) ಬಳಿಕ ಇತರ ಪರಿಕರಗಳನ್ನು ಬೆರೆಸಿ ಮಿಕ್ಸಿಯ ಚಿಕ್ಕ ಜಾರ್‌ನಲ್ಲಿ ನುಣ್ಣಗೆ ಅರೆಯಿರಿ.
4) ಈ ಲೇಪನವನ್ನು ಗಾಳಿಯಾಡದ ಚಿಕ್ಕ ಜಾರ್‌ನಲ್ಲಿ ತುಂಬಿಸಿ ತಣ್ಣನೆಯ ಸ್ಥಳದಲ್ಲಿ ಸಂಗ್ರಹಿಸಿ.
5) ಪ್ರತಿ ಬಾರಿ ಕ್ಷೌರ ಮಾಡಿಕೊಂಡ ಬಳಿಕ ಕೊಂಚ ಪ್ರಮಾಣವನ್ನು ಚರ್ಮದ ಮೇಲೆ ಹಚ್ಚಿ ಒಣಗಲು ಬಿಡಿ. ಇದರಿಂದ ಉರಿ ಕಡಿಮೆಯಾಗುವ ಜೊತೆಗೇ ಉತ್ತಮ ಆರೈಕೆಯನ್ನೂ ಪಡೆಯಿರಿ. ಶೇವಿಂಗ್ ಬಳಿಕ ಕಾಡುವ ತ್ವಚೆಯ ಸಮಸ್ಯೆಗೆ ಏನು ಮಾಡಲಿ?

English summary

Simple Homemade Aftershave Lotion To Soothe Your Skin

Most of the store-bought aftershave lotions are infused with alcohol and other chemicals that can cause a potential damage to your skin. The main purpose of these lotions is to prevent any infection that occurs because of shaving. Also, it is a must-to-do thing after shaving, to soothe and moisturise your skin better.
Story first published: Saturday, June 4, 2016, 19:46 [IST]
X
Desktop Bottom Promotion