For Quick Alerts
ALLOW NOTIFICATIONS  
For Daily Alerts

ಗಡ್ಡಕ್ಕೂ, ಆರೋಗ್ಯಕ್ಕೂ ಬಿಡಿಸಲಾಗದ ನಂಟಿದೆಯಂತೆ!

By Arshad
|

ಸಾಮಾನ್ಯವಾಗಿ ಗಡ್ಡ ಬಿಡುವುದೆಂದರೆ ಅದಕ್ಕೆ ಕೆಲವು ಕಾರಣಗಳಿರಬೇಕೆಂದೇ ಜನರು ತಿಳಿದುಕೊಂಡಿದ್ದಾರೆ. ವಿಫಲವಾದ ಪ್ರೇಮ, ದೇವರಿಗೆ ಬಿಟ್ಟಿದ್ದು, ತಮ್ಮ ನೆಚ್ಚಿನ ನಟನ ಅನುಕರಣೆ, ಧಾರ್ಮಿಕ ಅಗತ್ಯತೆ ಮೊದಲಾದವು ಸಾಮಾನ್ಯವಾದ ಕಾರಣಗಳಾಗಿವೆ. ಆದರೆ ಇಂದು ಗಡ್ಡ ಬಿಡುವುದು ಈ ಕಾರಣಗಳನ್ನೆಲ್ಲಾ ಮೀರಿ ಒಂದು ಫ್ಯಾಷನ್ ಎನಿಸಿಕೊಳ್ಳುತ್ತಿದೆ.

ನಿಯಮಿತವಾಗಿ ಒಪ್ಪ ಓರಣ ಮಾಡಿಸಿಕೊಂಡಿರುವ ಜನರ ಗಡ್ಡ ಆಕರ್ಷಕವಾಗಿದ್ದು ಅವರ ಸ್ವಚ್ಛತಾ ಕಾಳಜಿಯನ್ನು ಪ್ರಕಟಿಸಿದರೆ ಗಡ್ಡವನ್ನು ಎರ್ರಾಬಿರ್ರಿ ಬೆಳೆಯಲು ಬಿಟ್ಟು ಯಾವುದೇ ಆರೈಕೆಯಿಲ್ಲದೇ ಇರದಂತಿರುವವರನ್ನು ಒಂದೇ ಅಪ್ಪಟ ಸೋಮಾರಿ ಅಥವಾ ತಪಸ್ಸಿನಲ್ಲಿರುವ ಸನ್ಯಾಸಿ ಎಂದು ನಿರ್ಧರಿಸಿಬಿಡಬಹುದು. ಫ್ಯಾಷನ್ ಬದಲಾಗಿದೆ, ಇನ್ನು ಎರ್ರಾಬಿರ್ರಿ ಗಡ್ಡ ಬೆಳೆಸಿಕೊಳ್ಳಬೇಡಿ!

ಆದರೆ ಗಡ್ಡ ಬಿಡುವುದು ಆರೋಗ್ಯಕರ ಎಂದು ಇತ್ತೀಚಿನ ಸಂಶೋಧನೆಗಳು ತಿಳಿಸುತ್ತಿವೆ. ಇವು ಯಾವುದು ಎಂಬ ಕುತೂಹಲ ಮೂಡಿತೇ? ಕೆಳಗಿನ ಸ್ಲೈಡ್ ಶೋ ನೋಡಿ ಕುತೂಹಲ ತಣಿಸಿಕೊಳ್ಳಿ..

ಸೂರ್ಯನ ಬಾಧೆಯಿಂದ ರಕ್ಷಿಸುತ್ತದೆ

ಸೂರ್ಯನ ಬಾಧೆಯಿಂದ ರಕ್ಷಿಸುತ್ತದೆ

ಸೂರ್ಯನ ಪ್ರಖರ ಕಿರಣಗಳು ಮುಖದ ಚರ್ಮದ ಮೇಲೆ ಬಿದ್ದಾಗ ಕಪ್ಪಾಗುವ ಸಂಭವನ್ನು ಕಡಿಮೆಗೊಳಿಸುತ್ತದೆ. ಈ ಸ್ಥಿತಿಗೆ basal cell carcinoma ಎಂದು ಕರೆಯಲಾಗುತ್ತದೆ. ಸಾಮಾನ್ಯವಾದ ಗಡ್ಡವೂ ಈ ಪರಿಣಾಮವನ್ನು ಶೇಖಡಾ ತೊಂಭತ್ತೈದರಷ್ಟು ಕಡಿಮೆಗೊಳಿಸುತ್ತದೆ. ಆದ್ದರಿಂದ ಬಿಸಿಲಿಗೆ ಹೆಚ್ಚು ಕಾಲ ಮುಖ ಒಡ್ಡುವವರು ಗಡ್ಡ ಬಿಡುವುದು ಒಳಿತು.

ಕಲೆಯಿಲ್ಲದ ಚರ್ಮ ನಿಮ್ಮದಾಗುತ್ತದೆ

ಕಲೆಯಿಲ್ಲದ ಚರ್ಮ ನಿಮ್ಮದಾಗುತ್ತದೆ

ಎಷ್ಟೇ ಕಾಳಜಿ ವಹಿಸಿ ಗಡ್ಡ ಹೆರೆದುಕೊಂಡರೂ ಯಾವುದೋ ಮಾಯದಲ್ಲಿ ರೇಜರ್ ನ ಅಲಗು ತಾಗಿ ಗಾಯವಾಗಿಯೇ ಆಗುತ್ತದೆ. ಇದು ಚರ್ಮದಲ್ಲಿ ಅಲ್ಲಲ್ಲಿ ಚಿಕ್ಕ ಚಿಕ್ಕ ಗೀರುಗಳಂತಹ ಕಲೆಗಳನ್ನು ಉಂಟುಮಾಡುತ್ತದೆ. ಗಡ್ಡ ಬಿಡುವುದರಿಂದ ರೇಜರ್ ಕೆನ್ನೆ ಸವರುವ ಅವಕಾಶವನ್ನು ಕಳೆದುಕೊಳ್ಳುವ ಮೂಲಕ ಕಲೆ ಮೂಡಿಸುವ ಅವಕಾಶವನ್ನೂ ಕಳೆದುಕೊಳ್ಳುತ್ತದೆ. ಪರಿಣಾಮವಾಗಿ ಕಲೆಯಿಲ್ಲದ, ಸುಂದರ ಚರ್ಮ ನಿಮ್ಮದಾಗುತ್ತದೆ.

ಪುರುಷಕಳೆ ಹೆಚ್ಚುತ್ತದೆ

ಪುರುಷಕಳೆ ಹೆಚ್ಚುತ್ತದೆ

ಗಡ್ಡ ಮೀಸೆಗಳು ಪುರುಷರ ಲಕ್ಷಣವಾಗಿವೆ. ಗಡ್ಡ ಬಿಟ್ಟು ನಿಯಮಿತವಾಗಿ ಸುಂದರವಾದ ವಿನ್ಯಾಸವನ್ನು ಹೊಂದಿರುವುದು ನಿಮ್ಮ ವ್ಯಕ್ತಿತ್ವಕ್ಕೆ ವಿಶಿಷ್ಟ ಕಳೆ ನೀಡುತ್ತದೆ. ಅದರಲ್ಲೂ ಕೊಂಚ ನೀಳವಾದ ಗಡ್ಡ ಅಥವಾ ಸುಂದರವಾದ ವಿನ್ಯಾಸದಲ್ಲಿ ಟ್ರಿಮ್ ಮಾಡಿರುವ ಗಡ್ಡ ಮಹಿಳೆಯರ ಆಕರ್ಷಣೆಯನ್ನು ಸುಲಭವಾಗಿ ಪಡೆಯುತ್ತದೆ. ಮುಂದೆ ಓದಿ

ಪುರುಷಕಳೆ ಹೆಚ್ಚುತ್ತದೆ

ಪುರುಷಕಳೆ ಹೆಚ್ಚುತ್ತದೆ

ಗಡ್ಡ ಮೀಸೆಗಳಿಲ್ಲದ ಪುರುಷರಿಗಿಂತ ಹೆಚ್ಚಾಗಿ ಮೀಸೆ, ಅಥವಾ ಮೀಸೆ ಮತ್ತು ಗಡ್ಡವಿರುವ ಪುರುಷರಿಗೇ ಮಹಿಳೆಯರು ಆಕರ್ಷಿತರಾಗುತ್ತಾರೆ.

ನೈಸರ್ಗಿಕ ಆರ್ದ್ರತೆ ನೀಡುತ್ತದೆ

ನೈಸರ್ಗಿಕ ಆರ್ದ್ರತೆ ನೀಡುತ್ತದೆ

ನಮ್ಮ ಮುಖದ ಚರ್ಮದಲ್ಲಿ ದೇಹದ ಇತರ ಭಾಗಕ್ಕಿಂತಲೂ ಹೆಚ್ಚಿನ ನರಾಗ್ರ ಮತ್ತು ಸೂಕ್ಷ್ಮ ರಂಧ್ರಗಳಿವೆ. ಮುಖದಲ್ಲಿಯೇ ಹೆಚ್ಚು ಮೊಡವೆಗಳು ಮೂಡುವುದು ಮತ್ತು ನಾಚಿಕೆಯಿಂದ ಕೆನ್ನೆ ಕೆಂಪಗಾಗುವುದಕ್ಕೆ ಸಹಾ ಇದೇ ಕಾರಣ. ಈ ರಂಧ್ರಗಳಿಂದ ಕೆಲವು ನೈಸರ್ಗಿಕ ತೈಲಗಳು ಹೊರಸೂಸುತ್ತಲೇ ಇರುತ್ತವೆ. ಗಡ್ಡ ಬಿಟ್ಟವರ ಚರ್ಮದಲ್ಲಿ ಇದು ಸುಲಭವಾಗಿ ಆವಿಯಾಗದೇ ಚರ್ಮದ ಪೋಷಣೆಗೆ ನೆರವಾಗುತ್ತದೆ.

ನೈಸರ್ಗಿಕ ಆರ್ದ್ರತೆ ನೀಡುತ್ತದೆ

ನೈಸರ್ಗಿಕ ಆರ್ದ್ರತೆ ನೀಡುತ್ತದೆ

ನಯವಾಗಿ ಹೆರೆದುಕೊಂಡವರ ಚರ್ಮದಿಂದ ಈ ಅಮೂಲ್ಯ ತೈಲ ಸೋರಿಹೋಗಿ ಚರ್ಮ ವಿವಿಧ ತೊಂದರೆಗಳಿಗೆ ಎದುರಾಗಬಹುದು. ಗಡ್ಡ ಬಿಟ್ಟರೆ ಚರ್ಮದ ಎಣ್ಣೆ ಅಂಶವೇನೋ ಉಳಿದುಕೊಳ್ಳುತ್ತದೆ, ಆದರೆ ಇದು ಕೀಟಾಣುಗಳನ್ನು ಆಕರ್ಷಿಸಿ ಹೊಟ್ಟು ಆಗಲೂ ಕಾರಣವಾಗಬಹುದು. ಆದ್ದರಿಂದ ದಿನಕ್ಕೆರಡು ಬಾರಿ ಗಡ್ಡವನ್ನೂ ಸ್ವಚ್ಛವಾಗಿ ತೊಳೆದುಕೊಳ್ಳುತ್ತಲೇ ಇರಬೇಕು.

ಗಾಳಿಯನ್ನು ಶೋಧಿಸುತ್ತದೆ

ಗಾಳಿಯನ್ನು ಶೋಧಿಸುತ್ತದೆ

ನಮ್ಮ ಮೂಗಿನ ಹೊಳ್ಳೆಗಳ ಒಳಗೂ, ಕಿವಿತೂತಿನ ಒಳಗೂ ದಟ್ಟವಾಗಿ ಕೂದಲುಗಳಿವೆ. ಇವುಗಳ ಕೆಲಸವೇನೆಂದರೆ ಗಾಳಿಯಲ್ಲಿ ಬರುವ ಸೂಕ್ಷ್ಮಕಣ, ಧೂಳು, ಪರಾಗ ಮೊದಲಾದವುಗಳನ್ನು ಆಕರ್ಷಿಸಿ ಮೂಗಿನ ಒಳಗೆ ಪ್ರವೇಶಿಸದಂತೆ ತಡೆಯುವುದು. ಅಂತೆಯೇ ಗಡ್ಡ ಮೀಸೆಗಳೂ ಗಾಳಿಯಲ್ಲಿರುವ ಸೂಕ್ಷ್ಮಕಣಗಳನ್ನು ಇನ್ನಷ್ಟು ಹೆಚ್ಚಿನ ಮಟ್ಟಿಗೆ ಸೋಸಿ ಸ್ವಚ್ಛಗಾಳಿಯನ್ನು ಉಸಿರಾಡಲು ನೆರವಾಗುತ್ತವೆ. ಆದ್ದರಿಂದಲೇ ಗಡ್ಡಮೀಸೆಗಳನ್ನು ಆಗಾಗ ತೊಳೆಯುತ್ತಿರಬೇಕಾದುದು ಅಗತ್ಯವಾಗಿದೆ.

ವಿನಂತಿ: ನಿಮ್ಮಲ್ಲಿ ಗಡ್ಡದ ಕುರಿತಾಗಿ ಇನ್ನೂ ಹೆಚ್ಚಿನ ಮತ್ತು ಮಹತ್ವದ ಮಾಹಿತಿ ಇದ್ದರೆ ನಮ್ಮೊಂದಿಗೆ ಹಚ್ಚಿಕೊಳ್ಳಿ.

English summary

Benefits Of Having Beard

When we often see men with beards, our opinion changes about them based on how they have maintained it. If the guy sports a shabby beard then we think he is a lazy person and if the person has clean and neatly shaped beard, we think he is a serious type of guy.
X
Desktop Bottom Promotion