For Quick Alerts
ALLOW NOTIFICATIONS  
For Daily Alerts

ಗಡ್ಡ ಬೆಳೆಸುವ ಸುಲಭ ದಾರಿಗಳು

By Poornima Heggade
|

ನೀಟಾದ ಶೇವ್ ಎನ್ನುವುದು ಬಹಳ ಪ್ರಖ್ಯಾತ ಸಾಲು. ನೀಟಾಗಿ ಕ್ಲೀನಾಗಿ ಶೇವ್ ಮಾಡಿದರೆ ಎಲ್ಲರಿಗೂ ಇಷ್ಟವಾಗುತ್ತದೆ ಎನ್ನುವುದು ನಿಜ. ಆದರೆ ನೀಟಾದ ಶೇವ್ ಇಷ್ಟ ಪಡುವಷ್ಟೇ ಮಂದಿ ತಮ್ಮ ಗಡ್ಡದ ಆಕಾರಗಳೊಂದಿಗೆ ವಿಭಿನ್ನ ರೂಪಗಳನ್ನು ಸೃಷ್ಟಿಸಲು ತವಕ ಪಡುತ್ತಾರೆ. ಇದಕ್ಕೆ ದಪ್ಪನೆಯ ಗಡ್ಡ ಇಲ್ಲದೆ ಇದ್ದರೆ ಆಗುವುದಿಲ್ಲ. ಹಾಗಾಗಿ ಗಡ್ಡ ಸರಿಯಾಗಿ ಬಂದರಷ್ಟೇ ಇದೆಲ್ಲಾ ಸಾಧ್ಯ.

ಐತಿಹಾಸಿಕವಾಗಿ ನೋಡಿದರೂ ಗಡ್ಡವನ್ನು ಶಕ್ತಿಯ ಪ್ರತೀಕ ಎಂದು ನಂಬಲಾಗುತ್ತದೆ. ಗಟ್ಟಿತನ ಮತ್ತು ಶೌರ್ಯ ಗಡ್ಡದೊಂದಿಗೆ ಹೊಂದಿಕೆ ಆಗುವ ಶಬ್ದಗಳು. ಗಡ್ಡ ಗಂಡಸುತನದ ಪ್ರತಿಬಿಂಬ ಎಂದು ನಂಬಿದ ಜನರೂ ಇದ್ದಾರೆ ಹಾಗೂ ಎಲ್ಲರಿಗೂ ಹೀಗೆ ಗಡ್ಡ ಬೆಳೆಸಲು ಸಾಧ್ಯವಿಲ್ಲ.

Faster beard growth tips

ಗಡ್ಡವನ್ನು ಬೆಳೆಸುವುದು ಒಂದು ರೀತಿಯ ಮೋಜೂ ಹೌದು. ಇದು ಒಂದು ಮಹತ್ವದ ಸಾಧನೆಯೂ ಆಗಿದೆ. ಎಲ್ಲರ ಮುಖದಲ್ಲೂ ಇಂತಹ ದಪ್ಪನೆಯ ಗಡ್ಡ ಬೆಳೆದಿರುವುದಿಲ್ಲ. ಸರಿಯಾಗಿ ಗಡ್ಡ ಬಾರದೇ ಹೋದರೆ ನೀಟಾಗಿ ಶೇವ್ ಮಾಡುವುದಷ್ಟೇ ಆಯ್ಕೆಯಾಗಿ ಉಳಿಯುತ್ತದೆ. ಆದರೆ ಹೀಗೆ ಗಡ್ಡ ಸರಿಯಾಗಿ ಬೆಳೆಯದೇ ಹೋದರೆ ಬೆಳೆಸಲು ಮಾಡಬಹುದಾದ ಕೆಲವು ದಾರಿಗಳಿವೆ. ಗಡ್ಡದ ದಪ್ಪ ಮತ್ತು ಬೆಳವಣಿಗೆ ನಿಮ್ಮ ವಯಸ್ಸು ಮತ್ತು ನೀವು ಬಳುವಳಿಯಾಗಿ ಪಡೆದ ನಿಮ್ಮ ವಂಶವಾಹಿಗಳನ್ನು ಅವಲಂಬಿಸಿದೆ. ನಿಮ್ಮ ವಯಸ್ಸಿಗೆ ಮೀರಿದ ಗಡ್ಡವನ್ನು ಬೆಳೆಸಲು ಕೆಲವು ದಾರಿಗಳಿವೆ.

ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಿನ್ನಷ್ಟು ಓದಿ : ಪರ್ಫೆಕ್ಟ್ ಶೇವ್ ಗಾಗಿ ಸರಳ 6 ಸ್ಟೆಪ್

ನೀವು ನಿಮ್ಮ ಗಡ್ಡದ ಆರೈಕೆಯನ್ನು ಸರಿಯಾಗಿ ಮಾಡಿದರಷ್ಟೇ ಇದು ಸಾಧ್ಯ. ಬದುಕಿನ ಬೇರೆಲ್ಲದರಂತೆ ಇದಕ್ಕೂ ನೀವು ಗಮನ ಕೊಟ್ಟು ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿದರಷ್ಟೇ ಸರಿಯಾದ ಗಡ್ಡ ಬೆಳೆಯಲು ಸಾಧ್ಯ. ನಿಮ್ಮ ಮುಖದ ಪದರವನ್ನು ವಾರಕ್ಕೊಮ್ಮೆ ತೆಗೆಯುವುದು ಮುಂತಾದ ಕೆಲವು ಚಟುವಟಿಕೆಗಳನ್ನು ಮಾಡಿದರೆ ನಿಮ್ಮ ಗಡ್ಡ ವೇಗವಾಗಿ ಬೆಳೆಯುತ್ತದೆ. ಮುಖದ ಮೇಲೆ ಕೆಲವು ನಿರ್ದಿಷ್ಟ ಎಣ್ಣೆಗಳ ಮೂಲಕ ಮಸಾಜ್ ಮಾಡಿದರೆ ಬಹಳ ನೆರವಾಗುತ್ತದೆ.

1.ಆಹಾರ: ಹೆಚ್ಚಿನ ಪೋಷಕಾಂಶಗಳಿರುವ ಆಹಾರ ಹಾಗೂ ಕಡಿಮೆ ಒತ್ತಡ ಹಾಗೂ ಹೆಚ್ಚು ನಿದ್ದೆ ನಿಮಗೆ ಬೇಗನೆ ಗಡ್ಡವನ್ನು ಬೆಳೆಸಲು ಸಹಾಯಕ. ಹಾಗೂ ನಿದ್ದೆ ಮಾಡುವುದರಿಂದಾಗಿ ಪ್ರೊಟೀನ್ ಸರಿಯಾಗಿ ಕೆಲಸ ಮಾಡಲು ನೆರವಾಗುತ್ತದೆ. ಎಲ್ಲರೂ ಹೇಳುವಂತೆ ದಿನಕ್ಕೆ ಎಂಟು ಗ್ಲಾಸುಗಳಷ್ಟು ನೀರು ಕುಡಿಯುವುದು ಬಹಳ ಅಗತ್ಯ. ಇದರಿಂದಾಗಿ ದಪ್ಪನೆಯ ಗಡ್ಡ ಬರುತ್ತದೆ. ಒತ್ತಡ ಹೆಚ್ಚಾದಷ್ಟು ದೇಹದ ಕೂದಲು ಬಲಹೀನಗೊಳ್ಳುತ್ತದೆ ಹಾಗಾಗಿ ಒತ್ತಡದಿಂದರದಂತೆ ನೋಡಿಕೊಳ್ಳಬೇಕು.

2.ಬೆಳೆಯಲು ಬಿಡಿ: ಸಣ್ಣದಾಗಿ ಬೆಳೆದ ಗಡ್ಡ ಅಷ್ಟೊಂದು ಸುಂದರವಾಗಿ ಕಾಣದೇ ಇದ್ದರೂ ಹಾಗೆಯೇ ಬೆಳೆಯಲು ಬಿಡಿ ಗಡ್ಡ ಬೆಳೆದು ಕೂದಲು ಉದ್ದಗೆ ಬೆಳೆದಂತೆ ಮೈಯ ಚರ್ಮ ಮುಚ್ಚಿ ಹೋಗಿ ಅಂದ ಕಾಣಿಸುತ್ತದೆ. ಹೀಗಾಗಿ ತಾಳ್ಮೆ ಇರಲಿ ಸಣ್ಣಗೆ ಬೆಳೆದ ಕೂದಲು ನೋಡಿ ಅಂದ ಕಾಣದು ಎಂದೆನ್ನಬೇಡಿ.

3.ಚರ್ಮದ ಮೇಲ್ಪದ ತೆಗೆಯುವಿಕೆ: ನಿಮ್ಮ ಜೀವನ ಶೈಲಿಗೆ ಅನುಗುಣವಾಗಿ ಚರ್ಮದ ಮೇಲ್ಪದರವನ್ನು ತೆಗೆಯುತ್ತಿರಿ. ಇದಕ್ಕಾಗಿ ಪುರುಷರಿಗಾಗಿ ಮಾಡಲಾದ ಕೆಲವು ಚರ್ಮ ನಿರ್ಮೂಲಕಗಳಿವೆ ಅವನ್ನೇ ಬಳಸಿ. ಸತ್ತು ಹೋದ ಜೀವಕಣಗಳನ್ನು ತೆಗೆಯುವುದರಿಂದ ಕೂದಲಿನ ಬೆಳವಣಿಗೆ ಬಹಳ ಬೇಗನೆ ಆಗುತ್ತದೆ.

4.ಕಂಡೀಷನಿಂಗ್: ಒಮ್ಮೆ ಗಡ್ಡ ಬೆಳೆದ ಮೇಲೆ ಅದನ್ನು ಕಂಡೀಷನರ್ ಬಳಸಿ ಸರಿಯಾದ ಸ್ಥಿತಿಯಲ್ಲಿಡುವುದು ಬಹಳ ಅಗತ್ಯ. ಕಾಸ್ಟರ್ ಎಣ್ಣೆಯಂತಹ ಕೆಲವು ಕಂಡೀಷನರ್ ಗಳು ಲಭ್ಯವಿವೆ ಇದನ್ನು ಬಳಸಿ ಕಂಡೀಷನಿಂಗ್ ಮಾಡಿದರೆ ಉತ್ತಮ. ಇದು ನಿಮ್ಮ ಗಡ್ಡವನ್ನು ಸರಿಯಾಗಿ ಬೆಳೆಯಲು ಹಾಗೂ ಸರಿಯಾದ ದಿಕ್ಕಿನಲ್ಲಿ ಬೆಳೆಯಲು ಸಹಾಯಕ. ಆಲೀವ್ ಎಣ್ಣೆ, ತೆಂಗಿನ ಎಣ್ಣೆ, ಪುದಿನ ಎಣ್ಣೆ ಮುಖದ ಕೂದಲಿನ ಬೆಳವಣಿಗೆಗೆ ಅಗತ್ಯ.

5.ವಿಟಮಿನ್ ಗಳು: ವಿಟಮಿನ್ ಬಿ ಅನ್ನು ನಿಮ್ಮ ನಿತ್ಯದ ಆಹಾರದಲ್ಲಿ ಹೆಚ್ಚಾಗಿ ಹೋಗುವಂತೆ ನೋಡಿಕೊಳ್ಳಿ. ವಿಟಮಿನ್ ಬಿ1, ಬಿ6 ಮತ್ತು ಬಿ 12 ಮುಖ್ಯವಾಗಿ ನಮ್ಮ ಗಡ್ಡದ ಬೆಳವಣಿಗೆಗೆ ಬಹಳ ಸಹಾಯಕ. ಬಯೋಟಿನ್ ಅನ್ನು ಪ್ರತಿನಿತ್ಯ ಸೇವಿಸಿದರೆ ಉತ್ತಮ. ಇದು ಕೂದಲು ಮತ್ತು ಉಗುರಿನ ಬೆಳವಣಿಗೆಗೆ ಸಹಾಯಕ. ಬಯೋಟಿನ್ ಯಕೃತ್ತು, ಸಿಂಪಿ, ಹೂಕೋಸು, ಬೀನ್ಸ್, ಮೀನು, ಕ್ಯಾರೆಟ್, ಬಾಳೆಹಣ್ಣು, ಸೋಯಾ ಹಿಟ್ಟು, ಮೊಟ್ಟೆಯ ಹಳದಿ, ಧಾನ್ಯಗಳಲ್ಲಿ ಲಭ್ಯವಿದೆ.

English summary

Faster beard growth tips

Even though clean plain and smooth beardless face is a chick magnet, most men love to sport beard. Large number of men love to play with their beard style and grow them in various forms.
X
Desktop Bottom Promotion