For Quick Alerts
ALLOW NOTIFICATIONS  
For Daily Alerts

ಕುಳ್ಳಗಿನ ವ್ಯಕ್ತಿಗಳಿಗೆ ಉಡುಪಿನ ಟಿಪ್ಸ್‌ಗಳು

By Hemanth P
|

ಕುಳ್ಳಗಿರುವ ವ್ಯಕ್ತಿಗಳು ಉದ್ದಗಿನ ವ್ಯಕ್ತಿಗಳಿಗಿಂತ ಕಡಿಮೆ ಆತ್ಮವಿಶ್ವಾಸ ಹಾಗೂ ಮನೋಭಾವ ಹೊಂದಿರುತ್ತಾರೆ ಎನ್ನುವುದು ತಿಳಿದಿರುವ ಸತ್ಯ. ಆದಾಗ್ಯೂ, ಕುಳ್ಳಗಿರುವ ಕಾರಣ ವಿಶ್ವವೇ ಮುಳುಗಿ ಹೋಗುವುದಿಲ್ಲ ಎನ್ನುವುದು ಅತಿ ಮುಖ್ಯ ವಿಷಯ. ನಿಮ್ಮ ಆಯ್ಕೆಗೆ ಹಲವಾರು ರೀತಿಯ ಡ್ರೆಸ್ ಆಯ್ಕೆಯಿದೆ ಮತ್ತು ಇದನ್ನು ಅನುಕರಣೆ ಮಾಡುವುದರಿಂದ ನೀವು ಒಳ್ಳೆಯ ಶೈಲಿ, ಉತ್ತಮವಾಗಿ ಕಾಣಿಸಿಕೊಂಡು ಆತ್ಮವಿಶ್ವಾಸ ಹೆಚ್ಚಿಸಬಹುದು.

ಡ್ರೆಸ್ ನಲ್ಲಿ ನೀವು ತುಂಬಾ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಲು ಕಿಸೆಗೆ ತೂತು ಮಾಡಬೇಕೆಂದಿಲ್ಲ. ಆದರೆ ನೀವು ಪ್ರಜ್ಞಾಪೂರ್ವಕ ಶ್ರಮವಹಿಸಿ, ಸರಿಯಾದ ಉಡುಪುಗಳನ್ನು ಆಯ್ಕೆ ಮಾಡಿದರೆ ಆಗ ನೀವು ಉದ್ದ ಕಾಣುವಂತಾಗಬಹುದು. ಸರಳ ಆಯ್ಕೆಗಳಾದ ಸರಿಯಾದ ಫಿಟ್ಟಿಂಗ್ ಇರುವ ಪ್ಯಾಂಟ್ ಗಳನ್ನು ಆಯ್ಕೆ ಮಾಡಿದರೆ ಆಗ ನೀವು ಸಡಿಲವಾಗಿರುವ ಪ್ಯಾಂಟ್ ಧರಿಸುವುದಕ್ಕಿಂತ ಸ್ವಲ್ಪ ಉದ್ದ ಕಾಣಿಸುತ್ತೀರಿ.

Dressing tips for short men

ನೀವು ಯಾವಾಗಲೂ ಹೈ ಹೀಲ್ಡ್ ಇರುವ ಶೂ ಧರಿಸಬೇಕು, ಆದರೆ ಇದು ಮಹಿಳೆಯರು ಧರಿಸುವಂತಹ ಹೈಹೀಲ್ಡ್ ಚಪ್ಪಲಿಯಷ್ಟು ಇರಬಾರದು. ಹೈ ಹೀಲ್ಡ್ ಧರಿಸುವುದರಿಂದ ನಿಮ್ಮ ಉದ್ದ ಮತ್ತು ಆತ್ಮವಿಶ್ವಾಸ ಹೆಚ್ಚುತ್ತದೆ.

ಪುರುಷರ ಫ್ಯಾಷನ್ ಕುರಿತು ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಪುರುಷರು ಮಾಡಬಾರದ 10 ಫ್ಯಾಷನ್ ಮಿಸ್ಟೇಕ್ಸ್

ಮಾದರಿ ಮತ್ತು ಶೈಲಿಗೆ ಬಂದರೆ ಆಗ ನೀವು ಶರ್ಟ್ ಮತ್ತು ಪ್ಯಾಂಟ್ ಗಳು ಲಂಬ ಗೆರೆಯಿರುವ ಮಾದರಿಯಲ್ಲಿರಲಿ. ಇದು ನಿಮ್ಮನ್ನು ಉದ್ದವಾಗಿ ಕಾಣುವಂತೆ ಮಾಡಿ, ನೀವು ಕುಳ್ಳಗಿರುವುದನ್ನು ಮರೆಮಾಚುತ್ತದೆ. ನೀವು ಸಂಪೂರ್ಣವಾಗಿ ವಿಭಿನ್ನ ರೀತಿಯಲ್ಲಿ ಕಾಣಿಸಿಕೊಳ್ಳಲು ಕೆಲವೊಂದು ಆಭರಣಗಳನ್ನು ಕೂಡ ಬಳಸಬಹುದು. ನಿಮ್ಮ ಕಾಲಿನಿಂದ ಹಿಡಿದು ಕುತ್ತಿಗೆಯ ತನಕ ಆಕರ್ಷಿಸುವಂತ ಬಟ್ಟೆ ಹಾಗೂ ಆಭರಣಗಳನ್ನು ಬಳಸಬೇಕು.

1. ಲಂಬ ಗೆರೆಗಳಿರುವ ಮಾದರಿ
ಲಂಬ ಗೆರೆಗಳಿರುವ ಮಾದರಿಯ ಬಟ್ಟೆಗಳು ನಿಮ್ಮನ್ನು ಉದ್ದ ಕಾಣುವಂತೆ ಮಾಡುತ್ತದೆ. ಯಾಕೆಂದರೆ ನಿಮ್ಮ ದೇಹದ ಉದ್ದದಂತೆ ಕಣ್ಣುಗಳು ಬಟ್ಟೆಯ ಮಾದರಿಯನ್ನು ಹಿಂಬಾಲಿಸುತ್ತದೆ. ನಿಮ್ಮ ಉದ್ದ ಹೆಚ್ಚು ಕಾಣುವಂತೆ ಮಾಡಲು ತಡೆಯಿಲ್ಲದ ಲಂಬ ಗೆರೆಗಳ ಬಟ್ಟೆ ಅತ್ಯುತ್ತಮ ವಿಧಾನ. ನೀವು ಅತ್ಯಾಕರ್ಷಕ ಹಾಗೂ ಎತ್ತರವಾಗಿ ಕಾಣಿಸಲು ವಿಸಿಬಲ್ ಅಪ್ ಆ್ಯಂಡ್ ಡೌನ್ ಮಾದರಿ ತುಂಬಾ ನೆರವಾಗಲಿದೆ.

2. ಸರಿಯಾಗಿ ಫಿಟ್ ಇರುವ ಬಟ್ಟೆಗಳು
ಸರಿಯಾಗಿ ಫಿಟ್ ಇರುವಂತಹ ಉಡುಪುಗಳನ್ನು ಆಯ್ಕೆ ಮಾಡಿ ಮತ್ತು ಅದು ತುಂಬಾ ಸಡಿಲವಾಗಿರದೆ ನಿಮ್ಮನ್ನು ಅಂಟಿಕೊಂಡಿರಲಿ. ಪ್ರತಿಯೊಂದು ಬ್ರಾಂಡ್ ಗೂ ತನ್ನದೇ ಆದ ಫಿಟ್ ಇರುತ್ತದೆ. ಇದರಿಂದ ನೀವು ಹೆಚ್ಚಾಗಿ ಸ್ಲಿಮ್ ಫಿಟ್ ನ್ನು ಆಯ್ಕೆ ಮಾಡಿಕೊಂಡರೆ ಆಗ ನಿಮ್ಮ ದೇಹಕ್ಕೆ ಇದು ಹೊಂದಿಕೊಳ್ಳಬಹುದು. ಕೆಲವು ಬ್ರಾಂಡ್ ನ ರೆಡಿಮೇಡ್ ಉಡುಪು ನಿಮಗೆ ಹೊಂದಿಕೊಳ್ಳದಿದ್ದರೆ ನಿಮ್ಮ ದೇಹಕ್ಕೆ ಫಿಟ್ ಆಗುವಂತಹ ಉಡುಪನ್ನು ಟೈಲರ್ ಮೂಲಕ ಹೊಲಿಸಿಕೊಳ್ಳಿ.

3. ಏಕವರ್ಣ
ನಿಮ್ಮ ಉಡುಪಿನಲ್ಲಿರುವ ವ್ಯತಿರಿಕ್ತ ಬಣ್ಣಗಳನ್ನು ತೆಗೆದುಹಾಕಿದರೆ ಆಗ ನೀವು ತುಂಬಾ ಚೆನ್ನಾಗಿ ಕಾಣಿಸಬಹುದು. ಒಂದೇ ಬಣ್ಣದ ಬಟ್ಟೆ ಧರಿಸುವುದರಿಂದ ದೃಷ್ಟಿಗೋಚರ ಗೊಂದಲ ಕಡಿಮೆ ಮಾಡಲು ನೆರವಾಗಬಹುದು. ಏಕವರ್ಣದ ಉಡುಪು, ಅದರಲ್ಲೂ ಕಡುವರ್ಣದ ಬಟ್ಟೆಗಳು ನಿಮ್ಮ ಎತ್ತರ ಹೆಚ್ಚು ಕಾಣುವಂತೆ ಮಾಡುತ್ತದೆ.

4. ಸಣ್ಣ ಪ್ರಮಾಣ
ನಿಮ್ಮ ಉಡುಪುಗಳು ಒಂದರ ಮೇಲೊಂದು ಮಡಚಿಕೊಂಡಿದ್ದರೆ ಆಗ ಅದು ದೃಷ್ಟಿಗೋಚರದ ಮೇಲೆ ಕೊಡುಗೆ ನೀಡಲಿದೆ. ನಿಮ್ಮ ದೇಹದ ಮೇಲ್ಭಾಗದ ಅಂಗ, ಅದರಲ್ಲೂ ಶರ್ಟ್ ನ ಕಾಲರ್ ಮತ್ತು ಜಾಕೆಟ್ ಧರಿಸಿದ್ದರೆ ಜಾಕೆಟ್ ನ ಲಪಲ್. ಇದೆರಡನ್ನು ಕಿರಿದಾದ ಭಾಗದಲ್ಲಿ ಇರಿಸಿಕೊಳ್ಳಲು ಪ್ರಯತ್ನಿಸಿ.

5. ಸೂಕ್ತ ಉಡುಪು
ಸ್ಪೋರ್ಟ್ಸ್ ಜಾಕೆಟ್ ಅಥವಾ ಸೂಟ್ ಜಾಕೆಟ್ ಧರಿಸಿದರೆ ಆಗ ನಿಮ್ಮ ಹೆಗಲು ಎತ್ತರ ಮತ್ತು ಎದ್ದುಕಾಣುವಂತೆ ಮಾಡುತ್ತದೆ. ಪ್ಯಾಂಟ್ ನ್ನು ಸ್ವಾಭಾವಿಕ ಸೊಂಟದಲ್ಲೇ ಧರಿಸಿ, ಅದಕ್ಕಿಂತ ಕೆಳಗೆ ಧರಿಸಿದರೆ ಆಗ ನಿಮ್ಮ ಕಾಲುಗಳು ದಪ್ಪಗೆ ಕಾಣಿಸುತ್ತದೆ. ಉದ್ದಗಿರುವ ವ್ಯಕ್ತಿಗಳಿಗೆ ಹೋಲಿಸಿದರೆ ಕುಳ್ಳಗಿನ ವ್ಯಕ್ತಿಗಳ ಅಂಗಾಂಗಗಳು ಸಣ್ಣದಾಗಿ ಇರುವುದರಿಂದ ಕುಳ್ಳಗೆ ಕಾಣುತ್ತಾರೆ. ಇದರಿಂದ ನಿಮ್ಮ ದೇಹದ ಮೇಲ್ಬಾಗದ ಉಡುಪಿನತ್ತ ದೃಷ್ಟಿ ಹರಿಸಿ.

6. ಸ್ವಲ್ಪ ಉದ್ದ ಸೇರಿಸಿ
ಒಂದು ಮಧ್ಯಮ ವಿಧಾನದಿಂದ ನಿಮ್ಮ ಎತ್ತರಕ್ಕೆ ಕೆಲವು ಪದರಗಳನ್ನು ಸೇರಿಸಲು ಪ್ರಯತ್ನಿಸಿ. ಇದರಲ್ಲಿ ಒಂದು ವಿಧಾನವೆಂದರೆ ಎತ್ತರ ಹೆಚ್ಚಿಸುವಂತಹ ಪಾದರಕ್ಷೆಗಳನ್ನು ಧರಿಸುವುದು ಅಥವಾ ದಪ್ಪ ಅಡಿಯಿರುವ ಶೂ, ಲಿಫ್ಟ್ ಶೂಗಳನ್ನು ಧರಿಸುವ ಮೂಲಕ ನೀವು ಎತ್ತರವಾಗಿ ಕಾಣಿಸಬಹುದು.

English summary

Dressing tips for short men

It is a known fact that most men who are short tend to lack in confidence and attitude that taller counterparts carry with ease. However, it is important to note that being on shorter side of height factor is by no means the end of the world.
Story first published: Friday, January 10, 2014, 16:44 [IST]
X
Desktop Bottom Promotion