For Quick Alerts
ALLOW NOTIFICATIONS  
For Daily Alerts

ಮೇಕಪ್ ಪ್ರಿಯರೇ ಕೇಳಿ ಇಲ್ಲಿ, 'ಮೇಕಪ್‌ ಕಿಟ್‌' ಬಗ್ಗೆ ಇರಲಿ ಎಚ್ಚರ!

ಮೇಕಪ್ ಕಿಟ್ ಇಟ್ಕೊಳ್ಳೋ ಪ್ರತಿ ಮಹಿಳೆಯೂ ತನ್ನ ಮೇಕಪ್ ಕಿಟ್ ಸ್ವಚ್ಛವಾಗಿದ್ಯಾ ಅನ್ನೋದನ್ನು ಖಾತ್ರಿ ಮಾಡ್ಕೊಳ್ಳಿ!

By Hemanth
|

ಕೆಲವು ಮಹಿಳೆಯರು ಮೇಕಪ್ ಮಾಡದೆ ಹೊರಗಡೆ ಹೋಗುವುದೇ ಇಲ್ಲ. ಮೇಕಪ್ ಅಂದರೆ ಅವರಿಗೆ ಪಂಚಪ್ರಾಣ. ಮೇಕಪ್ ಅತಿಯಾದರೆ ಅದು ಮುಖವನ್ನು ಕೆಡಿಸುತ್ತದೆ. ಹಿತಮಿತವಾಗಿ ಮೇಕಪ್ ಮಾಡಿಕೊಂಡರೆ ಅದರಿಂದ ಸೌಂದರ್ಯವು ಎದ್ದು ಕಾಣುವುದು ಮತ್ತು ಪ್ರತಿಯೊಬ್ಬರನ್ನು ಆಕರ್ಷಿಸಲು ನೆರವಾಗುವುದು. ಮೇಕಪ್ ಮಾಡಿಕೊಳ್ಳುವುದು ಪ್ರತಿಯೊಬ್ಬರಿಗೂ ಸುಲಭ ಕೆಲಸವಾಗಿರಬಹುದು. ನೆನಪಿಡಿ: ಮಲಗುವ ಮೊದಲು ಹಾಕಿದ ಮೇಕಪ್ ತೆಗೆದುಬಿಡಿ!

ಆದರೆ ಮೇಕಪ್ ಮಾಡಿಕೊಳ್ಳುವ ಸಾಧನಗಳ ಬಗ್ಗೆ ನೀವು ಯಾವತ್ತಾದರೂ ಗಮನಹರಿಸಿದ್ದೀರಾ? ಇಲ್ಲ ತಾನೇ? ಹಾಗಾದರೆ ಬೋಲ್ಡ್ ಸ್ಕೈ ನೀಡುತ್ತಿರುವ ಈ ಲೇಖನವನ್ನು ಓದಿಕೊಂಡು ಆದಷ್ಟು ಬೇಗ ನಿಮ್ಮ ಮೇಕಪ್ ಸಾಮಗ್ರಿಗಳ ಗಮನಹರಿಸಬೇಕು. ಮೇಕಪ್ ಸಾಮಗ್ರಿಗಳನ್ನು ನೇರವಾಗಿ ಚರ್ಮಕ್ಕೆ ಹಚ್ಚಿಕೊಳ್ಳುವ ಕಾರಣದಿಂದಾಗಿ ಅವುಗಳನ್ನು ಸರಿಯಾಗಿಟ್ಟುಕೊಳ್ಳುವುದು ಅತೀ ಅಗತ್ಯ. ಮೇಕಪ್ ಸಾಮಗ್ರಿಗಳನ್ನು ಯಾವ ರೀತಿಯಿಂದ ಇಟ್ಟುಕೊಳ್ಳಬಹುದು ಎನ್ನುವ ಸಂಪೂರ್ಣ ಮಾಹಿತಿ ಬಗ್ಗೆ ತಿಳಿಯಲು ಮುಂದೆ ಓದುತ್ತಾ ಹೋಗಿ....

ಅವಧಿ ಮುಗಿಯುವ ದಿನಾಂಕ

ಅವಧಿ ಮುಗಿಯುವ ದಿನಾಂಕ

ನೀವು ಬಳಸುತ್ತಿರುವ ಕಾಸ್ಮೆಟಿಕ್ ಮತ್ತು ಮೇಕಪ್ ಸಾಮಗ್ರಿಗಳ ಅವಧಿ ಮುಗಿಯುವ ದಿನಾಂಕವನ್ನು ಖಂಡಿತವಾಗಿಯೂ ಪರೀಕ್ಷಿಸಬೇಕು. ಅವಧಿ ಮುಗಿದಿರುವ ಉತ್ಪನ್ನಗಳನ್ನು ಬಳಸಿದರೆ ಅದರಿಂದ ನಿಮ್ಮ ಚರ್ಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಲಿಪ್ ಸ್ಟಿಕ್, ಐಲೈನರ್, ಮಸ್ಕರಾ, ಕ್ರೀಮ್ ಫೌಂಡೇಶನ್ ಇತ್ಯಾದಿಗಳು ಬ್ಯಾಕ್ಟೀರಿಯಾದ ಪ್ರತಿಕ್ರಿಯೆಯಿಂದಾಗಿ ಬೇಗನೆ ಅವಧಿ ಮುಗಿಯುವಂತಹ ಉತ್ಪನ್ನಗಳು. ಈ ಉತ್ಪನ್ನಗಳ ಅವಧಿ ಮುಗಿಯುವ ದಿನಾಂಕವನ್ನು ಪರೀಕ್ಷಿಸುತ್ತಾ ಇರಬೇಕು.ಈ ಮೇಕಪ್ ಟಿಪ್ಸ್-ಕನ್ನಡಕ ಹಾಕುವ ಹುಡುಗಿಯರಿಗೆ ಮಾತ್ರ!

ಮೇಕಪ್ ಬ್ರಷ್‌ಗಳು

ಮೇಕಪ್ ಬ್ರಷ್‌ಗಳು

ಮುಖದ ಮೇಲೆ ಅಂತಿಮ ಬಣ್ಣವನ್ನು ಬಳಿಯುವಂತಹ ಮೇಕಪ್ ಬ್ರಷ್ ಗಳ ಪಾತ್ರ ತುಂಬಾ ಮಹತ್ವದ್ದಾಗಿದೆ. ಮೇಕಪ್ ಬ್ರಷ್ ಗಳನ್ನು ಬಳಸುವ ಬಗ್ಗೆ ಹೆಚ್ಚಿನ ಅಭ್ಯಾಸ ಬೇಕು. ಇಷ್ಟು ಮಾತ್ರವಲ್ಲದೆ ಅದರ ಬಗ್ಗೆ ಗಮನ ಕೂಡ ವಹಿಸಬೇಕು. ಮೇಕಪ್ ಬ್ರಷ್ ಗಳ ಬಗ್ಗೆ ನೀವು ಆದಷ್ಟು ಗಮಹರಿಸಬೇಕು. ಯಾಕೆಂದರೆ ಇದು ಬೇಗನೆ ಕಲುಷಿತಗೊಳ್ಳುತ್ತದೆ. ವಾರದಲ್ಲಿ ಒಂದು ಅಥವಾ ಎರಡು ದಿನ ಮೇಕಪ್ ಬ್ರಷ್ ಗಳನ್ನು ತೊಳೆದುಕೊಳ್ಳಬೇಕು. ಇದರಿಂದ ಅದು ಒಳ್ಳೆಯದಾಗಿ ಹಾಗೂ ಸುರಕ್ಷಿತವಾಗಿರುತ್ತದೆ. ಬ್ರಷ್ ಗಳನ್ನು ಶಾಂಪೂ ನೀರು ಅಥವಾ ಬೇರೆ ಸ್ವಚ್ಛಗೊಳಿಸುವ ಉತ್ಪನ್ನಗಳನ್ನು ಬಳಸಿ ಸ್ವಚ್ಛಗೊಳಿಸಬಹುದು. ಅವುಗಳನ್ನು ಸ್ವಚ್ಛಗೊಳಿಸಿದ ಬಳಿಕ ಒಣಗಿಸಿಕೊಂಡು ಸರಿಯಾದ ಜಾಗದಲ್ಲಿಡಿ.

ಮೇಕಪ್ ರಚನೆ ಬಗ್ಗೆ ಗಮನವಿರಲಿ

ಮೇಕಪ್ ರಚನೆ ಬಗ್ಗೆ ಗಮನವಿರಲಿ

ಮೇಕಪ್ ಉತ್ಪನ್ನಗಳ ರಚನೆ ಮತ್ತು ಅವುಗಳ ಸುವಾಸನೆ ಬಗ್ಗೆ ನೀವು ಗಮನಹರಿಸಬೇಕು. ಕೆಲವೊಂದು ಸಲ ಅತಿಯಾದ ಉಷ್ಣತೆ, ಸರಿಯಾಗಿ ಶೇಖರಣೆ ಮಾಡದಿರುವುದು ಮತ್ತು ಬ್ಯಾಕ್ಟೀರಿಯಾದ ಪರಿಣಾಮ ಅವಧಿಗೆ ಮೊದಲೇ ಈ ಮೇಕಪ್ ಸಾಮಗ್ರಿಗಳು ನಿಷ್ಪ್ರಯೋಜಕವಾಗುತ್ತದೆ. ಇಂತಹ ಮೇಕಪ್ ಸಾಮಗ್ರಿಗಳನ್ನು ಬಳಸುವುದು ತುಂಬಾ ಹಾನಿಕಾರಕ. ಲಿಪ್ ಸ್ಟಿಕ್, ಕ್ರೀಮ್, ಫೌಂಡೇಶನ್, ಲೋಷನ್ ಇತ್ಯಾದಿಗಳ ರಚನೆ ಹಾಗೂ ಸುವಾಸನೆ ಬಗ್ಗೆ ಗಮನಹರಿಸಬೇಕು. ರಚನೆ ಬದಲಾಗಿರುವ ಮೇಕಪ್ ಸಾಮಗ್ರಿಗಳನ್ನು ಬಳಸಬೇಡಿ.

ಮೇಕಪ್ ಪೆನ್ಸಿಲ್ ಬಗ್ಗೆ ಗಮನಹರಿಸಿ

ಮೇಕಪ್ ಪೆನ್ಸಿಲ್ ಬಗ್ಗೆ ಗಮನಹರಿಸಿ

ಮೇಕಪ್ ಪೆನ್ಸಿಲ್ ಗಳನ್ನು ಸರಿಯಾಗಿ ಚೂಪು ಮಾಡಿಕೊಂಡು ಬಳಸುವುದರಿಂದ ಅದರ ಪರಿಣಾಮ ಒಳ್ಳೆಯ ರೀತಿಯಿಂದ ಇರುತ್ತದೆ. ಲಿಪ್ ಲೈನರ್, ಕಾಜಲ್ ಪೆನ್ಸಿಲ್ ಅಥವಾ ಬೇರೆ ಯಾವುದೇ ಪೆನ್ಸಿಲ್ ಆಗಿದ್ದರೂ ಅದು ಯಾವಾಗಲೂ ಚೂಪಾಗಿರಬೇಕು.ಇದನ್ನು ವಾರಕ್ಕೊಮ್ಮೆ ಚೂಪು ಮಾಡಿಕೊಂಡರೆ ಅದರಲ್ಲಿ ಫಂಗಸ್ ಶೇಖರಣೆಯಾಗುವುದು ತಪ್ಪುತ್ತದೆ. ಪೆನ್ಸಿಲ್ ತುಂಬಾ ಮೃಧುವಾಗಿದ್ದರೆ 30-45 ನಿಮಿಷ ಕಾಲ ಅದನ್ನು ಫ್ರಿಡ್ಜ್ ನಲ್ಲಿಡಿ. ತುದಿ ಬಿಳಿಯಾಗಿರುವಂತಹ ಪೆನ್ಸಿಲ್ ಗಳನ್ನು ಬಳಸಬೇಡಿ. ಇದು ಅವಧಿ ಮುಗಿದಿರುವುವಂತದ್ದಾಗಿದೆ.ಮೇಕಪ್ ಟ್ರಿಕ್ಸ್- ಪ್ರತಿಯೊಬ್ಬ ಮಹಿಳೆಯೂ ತಿಳಿದಿರಲೇ ಬೇಕು!

English summary

A Complete Guide: How To Take Care Of Your Makeup

You need to know how to take care of your makeup products properly because it is one among those products that you apply on your skin directly. Also, you should consider the fact that makeup products do not go for longer and hence, taking care of them is equally important as taking care of your skin is.
X
Desktop Bottom Promotion