ದಿನನಿತ್ಯ ಮೇಕಪ್ ಬಿಟ್ಟಾಕಿ-ಖಂಡಿತ ಸುಂದರವಾಗಿ ಕಾಣುವಿರಿ!

By: Hemanth
Subscribe to Boldsky

ಪ್ರತೀ ದಿನ ಒಂದೊಂದು ರೀತಿಯಲ್ಲಿ ಮೇಕಪ್ ಮಾಡಿಕೊಂಡು ಹೋಗದೆ ಇದ್ದರೆ ಕಚೇರಿಯಲ್ಲಿ ಬೇರೆಯವರ ಎದುರು ನಿಲ್ಲಲು ಹಿಂಜರಿಕೆಯಾಗುತ್ತದೆ. ಹಾಗಾಗಿ ಪ್ರತೀ ದಿನ ಆಫೀಸ್‌ಗೆ ಹೋಗುವ ಮುನ್ನ ಕನ್ನಡಿ ಮುಂದೆ ಗಂಟೆಗಟ್ಟಲೆ ಕುಳಿತುಕೊಂಡು ಮೇಕಪ್ ಮಾಡಿಕೊಳ್ಳಬೇಕಾಗುತ್ತದೆ. ಆದರೆ ಸಮಯದ ಅಭಾವದಿಂದಾಗಿ ಕೆಲವೊಮ್ಮೆ ಮೇಕಪ್ ಕೆಟ್ಟದಾಗಿ ಕಾಣಿಸುತ್ತದೆ.

Makeup
 

ಮಾರುಕಟ್ಟೆಯಲ್ಲಿ ಸಿಗುವಂತಹ ಮೇಕಪ್ ಸಾಮಗ್ರಿಗಳು ತುಂಬಾ ದುಬಾರಿ ಹಾಗೂ ಅದರಲ್ಲಿ ಹಲವಾರು ರೀತಿಯ ರಾಸಾಯನಿಕಗಳನ್ನು ಹಾಕಿರುವ ಕಾರಣದಿಂದ ದಿನಾಲೂ ಬಳಸಿದರೆ ಮುಂದೆ ನಿಮ್ಮ ಚರ್ಮದ ಮೇಲೆ ಅದರ ಪರಿಣಾಮ ಉಂಟಾಗಬಹುದು. ದುಂಡಗಿನ ಮುಖಕ್ಕೆ ಸೂಕ್ತವಾಗಿರುವ 7 ಮೇಕಪ್ ಸಲಹೆಗಳು  

Without Makeup
 

ಇದಕ್ಕಾಗಿ ಯಾವುದೇ ಮೇಕಪ್ ಹಾಕಿಕೊಳ್ಳದೆ ಸುಂದರವಾಗಿ ಕಾಣಿಸಿಕೊಳ್ಳುವ ಬಗ್ಗೆ ನಾವು ಈ ಲೇಖನದಲ್ಲಿ ಹೇಳಿಕೊಡಲಿದ್ದೇವೆ. ಈ ಸರಳ ಸೂತ್ರಗಳನ್ನು ಅಳವಡಿಸಿಕೊಂಡರೆ ನೀವು ಮೇಕಪ್ ಇಲ್ಲದೆಯೂ ಸುಂದರವಾಗಿ ಕಾಣಿಸಿಬಹುದು. ಹದಿಹರೆಯಕ್ಕೆ ಕಾಲಿಡುವ ಹುಡುಗಿಯರಿಗೆ ಮೇಕಪ್ ಟಿಪ್ಸ್ 
1.ಮೇಕಪ್ ಇಲ್ಲದೆ ಇರಬೇಕೆಂದರೆ ನೀವು ಮುಖಕ್ಕೆ ಕ್ಲೆನ್ಸಿಂಗ್, ಪದರ ತೆಗೆಯುತ್ತಿರಬೇಕು ಮತ್ತು ಮುಖದಲ್ಲಿ ತೇವಾಂಶವಿರುವಂತೆ ನೋಡಿಕೊಳ್ಳಬೇಕು.
2. ಪದರ ತೆಗೆದು ಹಾಕುವುದರಿಂದ ಕಾಂತಿಯುತವಾದ ಚರ್ಮವನ್ನು ಪಡೆಯಬಹುದು. ಇದರಿಂದ ನೀವು ಫೌಂಡೇಶನ್ ಮೇಲೆ ನಿರ್ಬರವಾಗಿರಬೇಕಿಲ್ಲ.
3.ತುಟಿಗಳ ಪದರಗಳನ್ನು ತೆಗೆದುಹಾಕಲು ವಾರದಲ್ಲಿ ಕೆಲವು ಸಲ ಹಲ್ಲುಜ್ಜುವ ಬ್ರಶ್ ನಿಂದ ತುಟಿಗಳನ್ನು ಉಜ್ಜಿಕೊಳ್ಳಿ. ಇದರಿಂದ ನೈಸರ್ಗಿಕವಾಗಿ ಗುಲಾಬಿ ತುಟಿಯು ನಿಮ್ಮದಾಗುವುದು.

Without Makeup

4.ಬೆರಳುಗಳನ್ನು ಬಳಸಿಕೊಂಡು ಪ್ರತೀ ದಿನ ರಾತ್ರಿ ವೇಳೆ ಮುಖಕ್ಕೆ ಮಸಾಜ್ ಮಾಡಿಕೊಳ್ಳೂವುದರಿಂದ ಮೇಕಪ್ ಇಲ್ಲದೆಯೂ ಸುಂದರವಾಗಿ ಕಾಣಿಸಿಕೊಳ್ಳಬಹುದು.
5.ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಇದಕ್ಕಾಗಿ ದಿನಾಲೂ ಹಲ್ಲುಜ್ಜಿ. ಇದರಿಂದ ಹಲ್ಲುಗಳು ಹೊಳೆಯುವುದು.
Without Makeup

6.ಕಣ್ಣಿನ ರೆಪ್ಪೆಗಳು ಸುಂದರವಾಗಿ ಕಾಣಬೇಕಾದರೆ ನೈಸರ್ಗಿಕವಾಗಿ ನೀವು ಪೆಟ್ರೋಲಿಯಂ ಜೆಲ್ ಅನ್ನು ಬಳಸಬಹುದು.
7.ಮೇಕಪ್ ಇಲ್ಲದೆಯೂ ಸುಂದರವಾಗಿ ಕಾಣಬೇಕಾದರೆ ಕೂದಲು ಒಂದೇ ರೀತಿಯಾಗಿರಲು ನೀವು ಮಾಯಿಶ್ಚಿರೈಸರ್ ಅನ್ನು ಬಳಸಿ. ಮೇಕಪ್ ತಪ್ಪು: ಇಂಗು ತಿಂದ ಮಂಗನಂತೆ ಆಗಬೇಡಿ! 

Story first published: Tuesday, September 27, 2016, 13:18 [IST]
English summary

Simple Tips To Look Amazing Without Makeup

Do you feel that your daily makeup routine is taking up a lot of your time? If yes, then worry not, as there are ways to look great without using makeup! Yes, wearing makeup each time you have to step out of the house can be quite a tedious process and can consume a lot of your time. So, here are a few tips that can help you look amazing without makeup, have a look!
Please Wait while comments are loading...
Subscribe Newsletter