For Quick Alerts
ALLOW NOTIFICATIONS  
For Daily Alerts

ಮೇಕಪ್‌ ಉತ್ಪನ್ನಗಳಲ್ಲಿ ಅಡಗಿರುವ ಸೈಲೆಂಟ್ ಕಿಲ್ಲರ್...

By Suma
|

ನೀವು ಯಾವುದೇ ಮನೆಗೆ ಭೇಟಿ ನೀಡಿ. ಅಲ್ಲಿ ಏನಿಲ್ಲದಿದ್ದರೂ ಮೇಕಪ್ ಗೆ ಬೇಕಾಗುವ ವಸ್ತುಗಳು ಅಥವಾ ಉತ್ಪನ್ನಗಳು ನಿಮಗೆ ಖಂಡಿತವಾಗಿಯೂ ಕಾಣಿಸುತ್ತವೆ. ಹೌದು, ಹಿಂದಿನ ಕಾಲಘಟ್ಟದಲ್ಲಿ ಅಲ್ಪಸ್ವಲ್ಪ ಸಾಮಗ್ರಿಗಳನ್ನು ಬಳಸಿ ಮೇಕಪ್ ಮಾಡಿಕೊಳ್ಳುತ್ತಿದ್ದರು. ಆದರೆ ಈಗಿನ ಆಧುನಿಕ ಕಾಲಘಟ್ಟದಲ್ಲಿ ಎಲ್ಲವೂ ಬದಲಾವಣೆಯಾದಂತೆ ಮೇಕಪ್ ವಿಧಾನಗಳೂ ಸಹ ಬದಲಾಗಿ ಬಗೆಬಗೆಯ ಮೇಕಪ್ ಉತ್ಪನ್ನಗಳ ಬಳಕೆಗೆ ಹೆಚ್ಚು ಒತ್ತು ನೀಡುತ್ತಿರುವುದು ಗಮನಾರ್ಹ ಸಂಗತಿ.

ಯಾವುದೇ ಸಮಾರಂಭವಿರಲಿ ಅಥವಾ ಕಾರ್ಯಕ್ರಮವಿರಲಿ ಮೇಕಪ್ ಹಾಕದೇ ತೆರಳುವುದೇ ಇಲ್ಲ. ಯಾರ ಮುಖ ನೋಡಿದರೂ ಮೇಕಪ್ ನಿಂದ ಕಂಗೊಳಿಸುತ್ತಿರುತ್ತದೆ. ಮೇಕಪ್ ಗೆ ಅವಶ್ಯಕವಿರುವ ಎಲ್ಲಾ ಸಾಮಗ್ರಿಗಳು ಎಲ್ಲಾ ಕಡೆಗಳಲ್ಲಿ ಪ್ರಸ್ತುತ ಲಭ್ಯವಿದೆ. ಹಳ್ಳಿಯಿರಲಿ ದಿಲ್ಲಿಯಿರಲಿ ಮೇಕಪ್ ಮಾತ್ರ ಇದ್ದೇ ಇರಲಿ ಎಂಬುದು ಈಗಿನವರ ಮಾತುಗಳು. ಹೌದು, ನೀವೂ ಸಹ ಮೇಕಪ್ ಸಾಮಗ್ರಿಗಳನ್ನು ಖರೀದಿಸಿಯೇ ಇರುತ್ತೀರಿ. ಮೈನಡುಗಿಸುವ ಮೇಕಪ್ ಹಿಂದಿರುವ ಕರಾಳ ಸತ್ಯ!

ಆದರೆ ಈ ಉತ್ಪನ್ನಗಳಲ್ಲಿ ನಿಜವಾಗಿಯೂ ನಿಮ್ಮ ಚರ್ಮದ ಆರೈಕೆಗೆ ನೆರವಾಗುವ ಅಂಶಗಳು ಇವೆಯೇ ಎಂಬುದು ನಿಮಗೆ ತಿಳಿದಿದೆಯೇ. ಹೆಚ್ಚಿನವರಿಗೆ ಈ ಬಗ್ಗೆ ಅರಿವೇ ಇರುವುದಿಲ್ಲ. ಕೇವಲ ಬಾಯಿಂದ ಬಾಯಿಗೆ ಹರಡುವ ಮಾತುಗಳಲ್ಲಿ ಕೇಳಿದಂತಹ ಉತ್ಪನ್ನಗಳನ್ನು ಒಮ್ಮೆ ಪ್ರಯತ್ನಿಸಲು ನೀವು ಖರೀದಿಸಿರುತ್ತೀರ. ಆದರೆ ಈ ಉತ್ಪನ್ನಗಳಲ್ಲಿ ನಿಮ್ಮ ತ್ವಚೆಗೆ ಹಾನಿಯಾಗುವಂತಹ ರಾಸಾಯನಿಕ ಸತ್ವಗಳೂ ಸಹ ಇವೆ ಎಂಬುದು ನಿಮಗೆ ತಿಳಿದಿರಲಿ. ಅದಕ್ಕಾಗಿಯೇ ಈ ಲೇಖನದಲ್ಲಿ ನಿಮಗಾಗಿ ಈ ರೀತಿಯ ಹಾನಿಕಾರಕ ಅಂಶಗಳ ಬಗ್ಗೆ ಕೆಲವು ಸಂಗತಿಗಳನ್ನು ಬಿತ್ತರಿಸಲಾಗಿದೆ. ವಿವರಗಳಿಗೆ ಮುಂದೆ ಓದಿ...

Potentially harmful ingredients in your make-up products

ಸಲ್ಫೇಟ್ಸ್
ಸಲ್ಫೇಟ್ ಅಂಶವು ನಿಮ್ಮ ದೇಹಕ್ಕೆ ಸಾಬೂನಿನಿಂದ ಮತ್ತು ಶಾಂಪೂವಿನಿಂದ ನೊರೆಯುಂಟಾಗಲು ಕಾರಣವಾಗುತ್ತದೆ. ಆದರೆ ಈ ನೊರೆ ಬರುವ ಅಂಶವು ಹೆಚ್ಚಾದರೆ ನಿಮ್ಮ ಚರ್ಮಕ್ಕೆ ನವೆ ಅಥವಾ ತುರಿಕೆ ಬಂದು ಚರ್ಮವು ಹಾನಿಯಾಗುತ್ತದೆ. ಆದ್ದರಿಂದ ಈ ಅಂಶವಿರುವ ಉತ್ಪನ್ನಗಳನ್ನು ಖರೀದಿಸದಿರಿ.

ಪಾರಾಬೆನ್ಸ್
ಮೇಕಪ್ ಉತ್ಪನ್ನಗಳು ಕೆಡದಂತೆ ಸಂರಕ್ಷಿಸಲು ಪಾರಾಬೆನ್ಸ್ ಅನ್ನು ಸೇರಿಸಲಾಗಿರುತ್ತದೆ. ಬ್ಯಾಕ್ಟೀರಿಯಾಗಳ ಉತ್ಪತ್ತಿಯನ್ನು ತಡೆಯಲು ಇದನ್ನು ಉಪಯೋಗಿಸಲಾಗುತ್ತದೆ. ಆದರೆ ಈ ಅಂಶದಿಂದ ಉಪಯೋಗಕ್ಕಿಂತ ಅಪಾಯವೇ ಹೆಚ್ಚು. ಅಲ್ಲದೆ, ಇದು ನಿಮ್ಮ ಚರ್ಮಕ್ಕೆ ನವೆ ಉಂಟಾಗಿ ಕಡಿತ ಹೆಚ್ಚಾಗಲು ಕಾರಣವಾಗುತ್ತದೆ. ಹಾಗಾಗಿ ನೀವು ಖರೀದಿಸಿದ ಉತ್ಪನ್ನದಲ್ಲಿ ಪಾರಾಬೆನ್ ಇದೆಯೇ ಎಂಬುದನ್ನು ಗಮನಿಸಲು ಮೀಥೈಲ್ ಪಾರಾಬೆನ್, ಬ್ಯೂಟೈಲ್ ಪಾರಾಬೆನ್ ಮತ್ತು ಪ್ರೊಫೈಲ್ ಪಾರಾಬೆನ್ ಎಂಬ ಹೆಸರುಗಳಿರುವ ಉತ್ಪನ್ನಗಳನ್ನು ಖರೀದಿಸದಿರಿ.

ಥಾಲೇಟ್ಸ್
ನೀವು ಖರೀದಿಸುವ ಸುವಾಸನಾವರ್ಧಕಗಳು, ಸೌಂದರ್ಯವರ್ಧಕಗಳು, ಉಗುರುಲೇಪನಗಳಂತಹ ಉತ್ಪನ್ನಗಳಲ್ಲಿ ಅವುಗಳನ್ನು ಮೃದುಗೊಳಿಸಲು ಮತ್ತು ದೀರ್ಘಕಾಲ ಬಾಳಿಕೆ ಬರಲು ಥಾಲೇಟ್ಸ್ ಎಂಬ ಅಂಶವನ್ನು ಬಳಸಲಾಗುತ್ತದೆ. ಆದರೆ ಈ ಅಂಶವು ನವಜಾತ ಶಿಶುಗಳಿಗೆ ಅಸ್ತಮಾ ಮತ್ತು ಬುದ್ಧಿಬೆಳವಣಿಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಖನಿಜಯುಕ್ತ ತೈಲ
ಪೆಟ್ರೋಲಿಯಮ್ ಉತ್ಪನ್ನಗಳಿಂದ ಖನಿಜಯುಕ್ತ ತೈಲ ಅಥವಾ ಮಿನರಲ್ ಆಯಿಲ್ ಅನ್ನು ತಯಾರಿಸಲಾಗುತ್ತದೆ. ಈ ತೈಲವು ಮೊಡವೆ ಮತ್ತು ಕಪ್ಪು ಕಲೆಗಳ ರಂಧ್ರಗಳನ್ನು ಹೆಪ್ಪುಗಟ್ಟುವಂತೆ ಮಾಡುತ್ತದೆ. ಆದ್ದರಿಂದ ಪ್ಯಾರಾಫೀನ್ ಮತ್ತು ಪೆಟ್ರೋಲಿಯಂ ದ್ರಾವಕ ಹೊಂದಿರುವ ಉತ್ಪನ್ನಗಳನ್ನು ಖರೀದಿಸದಿರಿ. ಈ ರೀತಿಯ ಮಿನರಲ್ ಆಯಿಲ್‌ಗಳ ಬಳಕೆಯಿಂದ ಚರ್ಮ ಉರಿಯುವಿಕೆ, ಕೆಂಪು ಕಲೆ ಮತ್ತು ಚರ್ಮ ಚುಚ್ಚುವಂತೆ ತೊಂದರೆಗಳಾಗುತ್ತದೆ.

English summary

Potentially harmful ingredients in your make-up products

Most of us use make-up and beauty products without giving a second thought. What we don’t pay attention to while buying the products are the potentially harmful ingredients present in them. While they may make you look and feel good, but beauty experts suggest not to buy products which contain these ingredients
X
Desktop Bottom Promotion