For Quick Alerts
ALLOW NOTIFICATIONS  
For Daily Alerts

ಗುಣಾತ್ಮಕ ಮೇಕಪ್ ಹೆಚ್ಚಿಸಲಿದೆ ನಿಮ್ಮ ಮುಖದ ಗೆಟಪ್

By Suma
|

ಸಣ್ಣ ಹುಡುಗಿಯಿಂದ ಹಿಡಿದು ವಯಸ್ಸಾದ ಮಹಿಳೆಯ ತನಕ ಮೇಕಪ್ ಮಾಡಿಕೊಂಡು ತಾನು ಅಂದವಾಗಿ ಕಾಣಬೇಕೆಂಬ ಹಂಬಲ. ಮೇಕಪ್ ಮಾಡಿಕೊಳ್ಳುವುದು ಮಹಿಳೆಯರ ದೈನಂದಿನ ಜೀವನಶೈಲಿಗಳಲ್ಲಿ ಒಂದು ಭಾಗವಾಗಿ ಹೋಗಿದೆ. ತಾನು ಎಲ್ಲರಿಗಿಂತಲೂ ಸುಂದರವಾಗಿ ಕಾಣಬೇಕೆಂಬ ಬಯಕೆ ಎಲ್ಲರಲ್ಲಿಯೂ ಇದೆ.

ಈಗೀಗಂತೂ ಮೇಕಪ್ ಬಗ್ಗೆ ವಿಶೇಷವಾದ ಕಾಳಜಿ ಮನೆಮಾಡಿದೆ. ಈ ನಿಟ್ಟಿನಲ್ಲಿ ಹೆಚ್ಚಿನವರು ಬ್ಯೂಟಿಪಾರ್ಲರ್ ಗಳಿಗೆ ತೆರಳಿ ಸಲಹೆ ಪಡೆಯುತ್ತಿದ್ದಾರೆ. ಮೇಕಪ್ ಮಾಡಿಕೊಳ್ಳುವುದೂ ಸಹ ಒಂದು ಕಲೆ ಎಂದರೆ ತಪ್ಪಾಗಲಾರದು. ಈ ನಿಟ್ಟಿನಲ್ಲಿ ನಾವು ನೀಡುವ ಸಲಹೆಗಳನ್ನು ಬಳಸಿಕೊಂಡು ಕೆಲವೇ ಹೊತ್ತಿನಲ್ಲಿ ಥಳಥಳಿಸುವಂತೆ ಮುಖದ ಅಂದವನ್ನು ಹೆಚ್ಚಿಸಬಹುದಾಗಿದೆ.

ಕೆಲವರು ಮೇಕಪ್ ಮಾಡಿಕೊಂಡರೆ ಮಾತ್ರ ತಾನು ತುಂಬಾ ಪ್ರಕಾಶಮಾನವಾಗಿ ಕಂಡು ಎಲ್ಲರನ್ನೂ ಆಕರ್ಷಿಸಬಹುದೆಂದು ಅಂದುಕೊಂಡಿದ್ದಾರೆ. ಆದರೆ ಇವರು ಕೆಲವು ನಖಲಿ ಪದಾರ್ಥಗಳನ್ನು ಮಾರುಕಟ್ಟೆಯಲ್ಲಿ ಕೊಂಡು ಮೋಸ ಹೋಗುತ್ತಿದ್ದಾರೆ. ಆದರೆ ನಾವು ನೀಡುವ ಕೆಲವು ಸಲಹೆಗಳನ್ನು ಒಮ್ಮೆ ಅವಲೋಕಿಸಿ. ಈ ಸರಳ ವಿಧಾನಗಳಿಂದ ನಿಮ್ಮ ವದನದ ಕಾಂತಿಯನ್ನು ಹೆಚ್ಚಿಸಿಕೊಳ್ಳಿ. ಇದು ನಿಜಕ್ಕೂ ಪರಿಣಾಮಕಾರಿ ವಿಧಾನವಾಗಿದೆ.

ಡಿ ಕ್ಲಂಪ್ ಮಸ್ಕರಾ

ಡಿ ಕ್ಲಂಪ್ ಮಸ್ಕರಾ

ನಿಮ್ಮ ಮಸ್ಕರಾ ಗಟ್ಟಿಯಾಗಿದೆ ಇಲ್ಲವೇ ಹಚ್ಚಿಕೊಂಡದ್ದು ಕಾಣಿಸುತ್ತಿಲ್ಲ ಎಂಬ ಕೊರಗು ನಿಮ್ಮದಾಗಿದೆ ಎಂದಾದಲ್ಲಿ ಮಸ್ಕರಾಗೆ ವಿಸಿನ್ ಅನ್ನು ಸೇರಿಸಿ. ಮಸ್ಕರಾದ ಗಂಟುಕಟ್ಟುವಿಕೆಯನ್ನು ಇದು ಬಿಡಿಸಿಕೊಡುತ್ತದೆ ಮತ್ತು ನಿಮ್ಮ ಮಸ್ಕರಾ ಹೊಸದರಂತೆ ಕಾರ್ಯನಿರ್ವಹಿಸುತ್ತದೆ ಅದನ್ನು ಬದಲಾಯಿಸಬೇಕಾದ ಅಗತ್ಯ ನಿಮಗಿರುವುದಿಲ್ಲ.

ಕ್ವಿಕ್ ಸ್ಮೋಕಿ ಐಸ್

ಕ್ವಿಕ್ ಸ್ಮೋಕಿ ಐಸ್

ಸ್ಮೋಕಿ ಐಸ್ ಎಂಬುದು ಕಣ್ಣಿನ ಸೌಂದರ್ಯವನ್ನು ಹೆಚ್ಚಿಸುವ ಮೇಕಪ್ ಆಗಿರುತ್ತದೆ. ಕ್ವಿಕ್ ಸ್ಮೋಕಿ ಐಸ್ ಎಂಬುದು ಒಂದು ನಿಮಿಷದಲ್ಲಿ ಮಾಡಿಕೊಳ್ಳುವ ಮೇಕಪ್ ಹಾಗಿರುತ್ತದೆ. ಇದಕ್ಕಾಗಿ ಕ್ರೀಮ್ ಅಥವಾ ಜೆಲ್ ಲೈನರ್ ಬಳಸಿ ಸಾಕು. ಸಾಮಾನ್ಯವಾಗಿ ಲೇಪಿಸುವಂತೆ ಜೆಲ್ ಲೈನರ್ ಅನ್ನು ಬೆರಳ ತುದಿಯಿಂದ ಲೇಪಿಸಿ. ನಿಮ್ಮ ಐಶಾಡೋ ಜೊತೆಗೆ ಬ್ಲೆಂಡ್ ಮಾಡಿ.

ಟೈಟ್ ಲೈನಿಂಗ್

ಟೈಟ್ ಲೈನಿಂಗ್

ಉದ್ದವಾದ, ದಪ್ಪನೆಯ ಮತ್ತು ಪೂರ್ಣ ಪ್ರಮಾಣದ ಲ್ಯಾಶಸ್‎ಗಳಿಗಾಗಿ ಸುಲಭವಾದ ವಿಧಾನವೊಂದಿದ್ದು ಟೈಟ್ ಲೈನಿಂಗ್ ಅನ್ನು ಮಾಡುವುದರ ಮೂಲಕ ನಿಮ್ಮ ಈ ಬಯಕೆಗಳನ್ನು ಈಡೇರಿಸಿಕೊಳ್ಳಬಹುದಾಗಿದೆ. ಕಣ್ಣ ರೆಪ್ಪೆಯ ಕೆಳಭಾಗದಲ್ಲಿ ದಪ್ಪನಾಗಿ ಲೈನಿಂಗ್ ಹಚ್ಚಿಕೊಳ್ಳುವುದರಿಂದ ಕಣ್ಣಿನ ಸೌಂದರ್ಯ ಎದ್ದುಗಾಣುತ್ತದೆ.

ತುಟಿಗಳಿಗಾಗಿ ಸರಳ ಸಲಹೆಗಳು

ತುಟಿಗಳಿಗಾಗಿ ಸರಳ ಸಲಹೆಗಳು

ತುಟಿಯ ತುದಿಯಲ್ಲಿ ಮತ್ತು ಮೇಲ್ತುಟಿಯ ಮೇಲೆ ಸ್ವಲ್ಪ ಕನ್ಸೀಲರನ್ನು ಲೇಪಿಸಿ. ಲಿಪ್‌ಸ್ಟಿಕ್ ಹಚ್ಚುವ ಮೊದಲು ಅದನ್ನು ಅಕ್ಕ-ಪಕ್ಕಕ್ಕೆ ವಿಸ್ತರಿಸುವಂತೆ ಉಜ್ಜಿಕೊಳ್ಳಿ. ಆಗ ಅದರ ಮೇಲೆ ಲಿಪ್‌ಸ್ಟಿಕ್ ಹಚ್ಚಿಕೊಳ್ಳಿ, ಲಿಪ್‌ಸ್ಟಿಕ್ ಹಚ್ಚಿಕೊಂಡ ಮೇಲೆ ಲಿಪ್ ಲೈನರ್ ಹಚ್ಚಿಕೊಳ್ಳುವ ಅವಶ್ಯಕತೆ ಇರುವುದಿಲ್ಲ.

ಮುಖವು ತಾಜಾ ಆಗಿ ಕಾಣಿಸಿಕೊಳ್ಳಬೇಕೇ..?

ಮುಖವು ತಾಜಾ ಆಗಿ ಕಾಣಿಸಿಕೊಳ್ಳಬೇಕೇ..?

ಬೆಳಗ್ಗೆ ಎದ್ದ ಕೂಡಲೆ ನಿಮ್ಮ ಮುಖವು ತಾಜಾ ಆಗಿ ಕಾಣಿಸಿಕೊಳ್ಳಬೇಕು ಎಂದು ಯಾರು ತಾನೇ ಬಯಸುವುದಿಲ್ಲ. ಒಂದು ವೇಳೆ ನೀವು ಸರಿಯಾಗಿ ನಿದ್ದೆ ಮಾಡಲಿಲ್ಲವಾದಲ್ಲಿ, ನಿಮ್ಮ ತ್ವಚೆಯು ಸಹ ಇದರಿಂದ ಮಂಕಾಗುತ್ತದೆ. ಇದಕ್ಕಾಗಿ ಕನ್ಸೀಲರ್ ಅನ್ನು ಬಳಸಿ. ಕಣ್ಣಿನ ಒಳ ವೃತ್ತಗಳ ಸುತ್ತ ಲೇಪಿಸಿ, ಇದರಿಂದ ಕಣ್ಣುಗಳು ಮತ್ತೆ ಲವಲವಿಕೆಯಿಂದ ಕಾಣಿಸಿಕೊಳ್ಳುತ್ತವೆ.

ಲ್ಯಾಶಸ್‍‎ಗಳ ಮೇಲೆ ಪೌಡರ್ ಬಳಕೆ

ಲ್ಯಾಶಸ್‍‎ಗಳ ಮೇಲೆ ಪೌಡರ್ ಬಳಕೆ

ನಿಮ್ಮ ಲ್ಯಾಶಸ್‎ಗಳ ಮೇಲೆ ಸ್ವಲ್ಪ ಬೇಬಿ ಪೌಡರ್ ಅನ್ನು ಬಳಕೆ ಮಾಡಿ. ಮಸ್ಕರಾ ಬಳಸುವ ಮುನ್ನ ಪೌಡರ್ ಹಚ್ಚಿಕೊಳ್ಳಿ. ಈ ಪೌಡರ್‎ನ ಬಳಕೆಯಿಂದ ಮಸ್ಕರಾದ ಮೇಲೆ ಯಾವ ರೀತಿಯ ಪರಿಣಾಮವಾಗುತ್ತದೆ ಎಂಬುದನ್ನು ಇದನ್ನು ಪ್ರಯತ್ನಿಸಿದ ಮೇಲೆ ನೋಡಿ.

English summary

Makeup Tips Nobody Told You About

Apply your makeup faster, get the natural look and camouflage those imperfections or blemishes with this list of jaw droppingly amazing tips, ...
Story first published: Monday, January 11, 2016, 20:23 [IST]
X
Desktop Bottom Promotion