For Quick Alerts
ALLOW NOTIFICATIONS  
For Daily Alerts

ಮೇಕಪ್ ಹಚ್ಚಿರಿ, ಮೊಡವೆ ಕಲೆಗಳನ್ನು ಮರೆಮಾಚಿ

ಮುಖದಲ್ಲಿ ಸಣ್ಣ ಕಲೆ ಉಂಟಾದರೂ ಇಲ್ಲವೇ ಮೊಡವೆ ಮೂಡಿದರೂ ಅದುವೇ ದೊಡ್ಡದಾಗಿ ಗೋಚರವಾಗುತ್ತದೆ. ಕೆಲವೊಮ್ಮೆ ಇದು ನಮ್ಮ ಸೌಂದರ್ಯಕ್ಕೆ ಕಪ್ಪು ಚುಕ್ಕೆಯಾಗಿ ಮಾರ್ಪಡುತ್ತದೆ....

By Jaya Subramanya
|

ಪ್ರತಿಯೊಬ್ಬ ಹೆಣ್ಣಿಗೂ ಕೂಡ ಸೌಂದರ್ಯ ಎಂಬುದು ಹಿರಿಮೆಯಾಗಿರುತ್ತದೆ. ಯಾವುದೇ ಕಲೆ ಇಲ್ಲದೆ ಹಾಲು ಬಿಳುಪಾದ ಸೊಗಸಾದ ಸೌಂದರ್ಯವನ್ನು ಪಡೆದುಕೊಳ್ಳುವುದು ಎಂದರೆ ಅದು ಹೆಣ್ಣಿಗೆ ಹಿರಿಮೆಯ ವಿಷಯವಾಗಿದೆ. ಆದರೆ ಇಂದಿನ ವಾತಾವರಣದಲ್ಲಿ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಸವಾಲಿನ ಕೆಲಸವಾಗಿದೆ.

ಮುಖದಲ್ಲಿ ಸಣ್ಣ ಕಲೆ ಉಂಟಾದರೂ ಇಲ್ಲವೇ ಮೊಡವೆ ಮೂಡಿದರೂ ಅದುವೇ ದೊಡ್ಡದಾಗಿ ಗೋಚರವಾಗುತ್ತದೆ. ಕೆಲವೊಮ್ಮೆ ಇದು ನಮ್ಮ ಸೌಂದರ್ಯಕ್ಕೆ ಕಪ್ಪು ಚುಕ್ಕೆಯಾಗಿ ಮಾರ್ಪಡುತ್ತದೆ. ಈ ಸಮಯದಲ್ಲಂತೂ ಮೇಕಪ್ ಮಾಡಿಕೊಳ್ಳುವುದು ಎಂದರೆ ಕಲೆಗಳನ್ನು ಎದ್ದುಗಾಣಿಸಿದಂತಾಗುತ್ತದೆ. ಆದರೆ ಇಂದಿನ ಲೇಖನದಲ್ಲಿ ನಾವು ನೀಡುತ್ತಿರುವ ಟಿಪ್ಸ್‌ಗಳು ಮೇಕಪ್‌ನಲ್ಲೇ ಈ ಮೊಡವೆ ಅಥವಾ ಇನ್ನಿತರ ಕಲೆಗಳನ್ನು ಮಾಯವಾಗಿಸುವುದೆಂತು ಎಂದಾಗಿದೆ. ಗುಣಾತ್ಮಕ ಮೇಕಪ್ ಹೆಚ್ಚಿಸಲಿದೆ ನಿಮ್ಮ ಮುಖದ ಗೆಟಪ್

Makeup

ಈ ಮೇಕಪ್ ಟಿಪ್ಸ್ ನಿಮ್ಮ ಮುಖದಲ್ಲಿನ ಮೊಡವೆಗಳನ್ನು ಮರೆಮಾಚಿ ಕಲೆಗಳೇ ಇಲ್ಲದೆ ಸುಂದರ ಮುಖಾರವಿಂದವನ್ನು ನೀಡುತ್ತದೆ. ಹಾಗಿದ್ದರೆ ಬನ್ನಿ ಆ ಟಿಪ್ಸ್‌ಗಳೇನು ಎಂಬುದನ್ನು ಅರಿತುಕೊಳ್ಳೋಣ.

ಮೇಕಪ್‌ನಲ್ಲಿ ಮೊಡವೆ ಕಲೆಗಳನ್ನು ಮರೆಮಾಚುವುದು ಹೆಚ್ಚು ಸುಲಭವಾಗಿದ್ದು ನೀವು ಇದಕ್ಕಾಗಿ ಉನ್ನತ ಗುಣಮಟ್ಟದ ಪ್ರಸಾಧನ ಸಾಮಾಗ್ರಿಗಳನ್ನು ಬಳಸಿಕೊಳ್ಳಬೇಕಾಗುತ್ತದೆ. ಕಲರ್ ಕರೆಕ್ಟಿಂಗ್ ಎಂದಾಗಿ ಇದನ್ನು ಕರೆಯಲಾಗುತ್ತದೆ. ಇದು ಕಲೆಗಳನ್ನು ಮರೆಮಾಚುವಲ್ಲಿ ನೆರವಾಗಲಿದೆ.

ಮೊಡವೆಗಳಿಗಾಗಿ, ನೀವು ಹಸಿರು ಬಣ್ಣದ ಕರೆಕ್ಟರ್ ಅನ್ನು ಆಯ್ಕೆಮಾಡಬೇಕು ಇದು ಕೆಂಪು ಬಣ್ಣದಂತೆ ಕಾರ್ಯನಿರ್ವಹಿಸಲಿದೆ. ಇನ್ನು ಮೊಡವೆಗಳ ಕಲೆಗಳಿಗಾಗಿ ಕಿತ್ತಳೆ ಬಣ್ಣದ ಕರೆಕ್ಟರ್ ಅನ್ನು ಆರಿಸಿ. ಇದೇ ಬಣ್ಣದ ಲಿಪ್‌ಸ್ಟಿಕ್ ಹೇಗೆ ಕಾರ್ಯನಿರ್ವಹಿಸಲಿದೆಯೋ ಅಂತೆಯೇ ಕರೆಕ್ಟರ್ ಕೂಡ ಕೆಲಸ ಮಾಡಲಿದೆ. ಹಾಗಿದ್ದರೆ ಇಲ್ಲಿದೆ ಹಂತ ಹಂತದ ವಿವರಗಳನ್ನೊಳಗೊಂಡ ಸಂಪೂರ್ಣ ಮಾಹಿತಿ. ಅತಿಯಾದ ಮೇಕಪ್ ಕೂಡ ತ್ವಚೆಗೆ ಶತ್ರುವಾಗಬಹುದು

ಬೇಸ್
ಮೊದಲು ಫೌಂಡೇಶನ್ ಅನ್ನು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ಇನ್ನು ಫೌಂಡೇಶನ್ ಅನ್ನು ಸರಿಯಾಗಿ ಬಳಸಿಕೊಂಡಿದ್ದೀರಿ ಎಂದಾದಲ್ಲಿ ಕರೆಕ್ಟರ್ ಅನ್ನು ಮಿತವಾಗಿ ಬಳಸಿದರೂ ಸಾಕು

ಕರೆಕ್ಟರ್‌
ಕಿತ್ತಳೆ ಅಥವಾ ಹಸಿರು ಬಣ್ಣದ ಕರೆಕ್ಟರ್‌ನಲ್ಲಿ ಬ್ರಶ್ ಅನ್ನು ಅದ್ದಿಕೊಳ್ಳಿ ಮತ್ತು ನಿಮ್ಮ ಮೊಡವೆ ಹೇಗೆ ಕಾಣಿಸುತ್ತದೆ ಎಂಬುದನ್ನು ಆಧರಿಸಿ ಬಣ್ಣವನ್ನು ಆರಿಸಿ.

ಮಿಶ್ರಣ
ಇನ್ನು ನಿಮ್ಮ ಬೆರಳುಗಳ ತುದಿಯನ್ನು ಬಳಸಿಕೊಂಡು ಕರೆಕ್ಟರ್ (corrector) ಅನ್ನು ಮಿಶ್ರಣ ಮಾಡಿಕೊಳ್ಳಿ.

ಕನ್ಸೀಲ್
ಕಲರ್ ಕರೆಕ್ಟರ್ ಅನ್ನು ಬಳಸಿಕೊಂಡ ನಂತರ, ಕನ್ಸೆಲರ್ ಅನ್ನು ಹಚ್ಚಿರಿ ಮತ್ತು ಮೇಕಪ್ ಸ್ಪಾಂಜ್ ಬಳಸಿಕೊಂಡು ಇದನ್ನು ಬ್ಲೆಂಡ್ ಮಾಡಿ. ಇದು ಸಂಪೂರ್ಣ ಫಿನಿಶಿಂಗ್ ಲುಕ್ ಅನ್ನು ನೀಡಲಿದೆ.

ಸೆಟ್
ಸೆಟ್ಟಿಂಗ್ ಪೌಡರ್ ಅನ್ನು ಬಳಸಿಕೊಂಡು ನಿಮ್ಮ ಮೇಕಪ್ ಅನ್ನು ಸೆಟ್ ಮಾಡಿ. ನಿಮ್ಮ ಮೇಕಪ್ ಕರಗುವುದಿಲ್ಲ ಮತ್ತು ದಿನಪೂರ್ತಿ ಹಾಗೆಯೇ ಇರುತ್ತದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

English summary

How To Hide Pimple Marks Using Makeup

Hiding pimple marks is one of the most basic skills to learn in makeup and also one of the most important. It is also one of the widest asked questions by people who are venturing into the world of makeup. So here's a step by step guide to hide your pimple marks using makeup!
Story first published: Thursday, December 15, 2016, 19:30 [IST]
X
Desktop Bottom Promotion