For Quick Alerts
ALLOW NOTIFICATIONS  
For Daily Alerts

ನಿಮ್ಮ ಹಳೆಯ ಸೌಂದರ್ಯ ಸಾಮಾಗ್ರಿಗಳ ಮರುಬಳಕೆ ಹೇಗೆ?

By Super
|

ಕೆಲವೊಮ್ಮೆ ಒಂದು ವಸ್ತುವನ್ನು ಕೊಂಡ ಬಳಿಕ ಅದರ ಗರಿಷ್ಟ ಬಳಕೆಯ ದಿನಾಂಕದ ವರೆಗೆ ಪೂರ್ಣವಾಗಿ ಖರ್ಚಾಗಿರುವುದೇ ಇಲ್ಲ. ಅನಿವಾರ್ಯವಾಗಿ ಉಳಿದ ವಸ್ತುವನ್ನು ತಿಪ್ಪೆಗೆಸೆಯಬೇಕಾಗುತ್ತದೆ. ಇದಕ್ಕಾಗಿ ನಮಗೆ ಅಗತ್ಯವಿರುವ ಪ್ರಮಾಣದಲ್ಲಿಯೇ ವಸ್ತುವನ್ನು ಕೊಂಡುಕೊಳ್ಳುವುದು ಅಗತ್ಯವಾಗಿದೆ. ಇನ್ನೊಂದು ಸಲಹೆಯೆಂದರೆ ಎಲ್ಲಾ ಅಂಗಡಿಗಳು ಈಗ FEFO (First Expiry First Out) ಎಂಬ ತತ್ವದಲ್ಲಿಯೇ ಮಾರಾಟ ಮಾಡುತ್ತವೆ. ಅಂದರೆ ಮೊದಲ ಮುಗಿತಾಯ (expiry date) ಇರುವ ವಸ್ತು ಮೊದಲು ಮಾರಾಟವಾಗಿ ಹೋಗಬೇಕು. ಹಾಗಾಗಿ ಆ ದಿನಾಂದಕದ ವಸ್ತುವನ್ನು ಎದುರಿಗೆ ಇಡುತ್ತಾರೆ. ಇದು ಖಾಲಿಯಾಗಿ ಹೋದ ಬಳಿಕವೇ ಹೊಸ ದಾಸ್ತಾನು ಹೊರಬರುತ್ತದೆ. ಹಾಗಾಗಿ ಯಾವುದೇ ವಸ್ತುವನ್ನು ಕೊಳ್ಳುವಾಗ ಗರಿಷ್ಟ ಮುಗಿತಾಯವಿರುವುದನ್ನು ನೋಡಿ ಕೊಳ್ಳುವುದು ಒಳ್ಳೆಯದು.

ನಿಮ್ಮ ಪ್ರಸಾಧನ ಸಾಮಾಗ್ರಿಗಳೂ ಹಾಗೇ. ಮುಗಿತಾಯಕ್ಕೂ ಮೊದಲೇ ಪೂರ್ಣವಾಗಿ ಖರ್ಚಾಗದೇ ಉಳಿಯುತ್ತವೆ ಅಥವಾ ಗಾಳಿಗೆ ಗಟ್ಟಿಯಾಗಿಬಿಡುತ್ತವೆ. ಕೊಂಚ ಕಲ್ಪನೆ ಮತ್ತು ಸುಲಭವಾಗಿ ಸಿಗುವ ಸಾಮಾಗ್ರಿಗಳಿಂದ ಈ ಸಾಮಾಗ್ರಿಗಳನ್ನು ಸದುಪಯೋಗಿಸಿಳ್ಳಬಹುದು. ಉದಾಹರಣೆಗೆ ನಿಮ್ಮ ಮಸ್ಕಾರಾ ಬ್ರಶ್ ಹಳೆಯದಾದರೆ ಅದರ ಸವೆದ ಬ್ರಶ್ ತೊಲಗಿಸಿ ಕಣ್ಣಿನ ಪೆನ್ಸಿಲ್ ನಂತೆ ಬಳಸಬಹುದು. ಇಂತಹ ಇನ್ನೂ ಹಲವು ಕಿವಿಮಾತುಗಳನ್ನು ಇಲ್ಲಿ ನೀಡಲಾಗಿದೆ.

Smart Tips To Revive Your Old Makeup Items

ನಿಮ್ಮ ಮೆಚ್ಚಿನ ಬಣ್ಣವನ್ನು ಸಿದ್ದರೂಪದಲ್ಲಿರಿಸಿ
ಒಂದು ವೇಳೆ ನಿಮ್ಮ ಚರ್ಮಕ್ಕೆ ಅತ್ಯಂತ ಸೂಕ್ತವಾದ ಬಣ್ಣವನ್ನು ಯಾವ ಯಾವ ಬಣ್ಣಗಳನ್ನು ಯಾವ ಯಾವ ಪ್ರಮಾಣದಲ್ಲಿ ಬೆರೆಸಿದಾಗ ಸಿಗುತ್ತದೆ ಎಂದು ಖಚಿತವಾಗಿ ತಿಳಿದಿದ್ದಲ್ಲಿ, ಪದೇ ಪದೇ ಮಿಶ್ರಣ ಮಾಡುವ ಅಗತ್ಯವಿಲ್ಲ. ಒಮ್ಮೆ ಕೊಂಚ ಹೆಚ್ಚಿನ ಪ್ರಮಾಣದಲ್ಲಿ ಈ ಬಣ್ಣಗಳನ್ನು ಬೆರೆಸಿ ಬೇರೊಂದು ಚಿಕ್ಕ ಡಬ್ಬಿಯಲ್ಲಿ ಶೇಖರಿಸಿ ಫ್ರಿಜ್ಜಿಲಲ್ಲಿಡಿ. ಉಪಯೋಗದ ಅಗತ್ಯವಿದ್ದಾಗ ಈ ಬಣ್ಣ ಸಿದ್ಧರೂಪದಲ್ಲಿ ಲಭ್ಯವಿರುವುದರಿಂದ ನಿಮ್ಮ ಅಪಾರ ಸಮಯ ಉಳಿಯುತ್ತದೆ.

ಹಳೆಯ ಮೇಕಪ್ ಗಟ್ಟಿಯಾಗಿದ್ದರೆ ಆಲ್ಕೋಹಾಲ್ ಬೆರೆಸಿ
ಗಾಳಿಯಾಡುವ ಕಾರಣ ಯಾವುದೇ ಪ್ರಸಾಧನ ನಿಧಾನವಾಗಿ ಗಟ್ಟಿಯಾಗುತ್ತಾ ಹೋಗುತ್ತದೆ. ಕ್ರಮೇಣ ಬಿರುಕು ಬಿಡುತ್ತದೆ. ಮುಖದ ಪೌಡರ್, ಕಣ್ಣಿನ ಕೆಳಭಾಗದ ಬಣ್ಣ, ಬ್ರಾನ್ಜರ್ ಮೊದಲಾದವು ಇದಕ್ಕೆ ಉದಾಹರಣೆಗಳು. ಈ ಪ್ರಸಾಧನಕ್ಕೆ ಕೊಂಚ ಅಲ್ಕೋಹಾಲ್ ಸೇರಿಸುವುದರಿಂದ ಕೂಡಲೇ ಮೊದಲಿನ ನುಣುಪು ಪಡೆದುಕೊಳ್ಳುತ್ತದೆ. ತ್ವಚೆ ಮತ್ತು ಕೂದಲಿಗೆ ಅಕ್ಕಿ ನೀರಿನಿಂದಾಗುವ ಪ್ರಯೋಜನಗಳೇನು?

ಹಳೆಯ ಪ್ರಸಾಧನ ಬ್ರಶ್ ನಲ್ಲಿ ಉಳಿದುಕೊಂಡಿದ್ದರೆ ಬೆಂಕಿಯ ಜ್ವಾಲೆಯ ಬಿಸಿ ಬಳಸಿ
ಪದೇ ಪದೇ ಒಂದು ಪ್ರಸಾಧನವನ್ನು ಬ್ರಶ್ ಮೂಲಕ ಹಚ್ಚಿಕೊಂಡಿದ್ದರೆ ಕ್ರಮೇಣ ಬ್ರಶ್ ನ ಒಳಭಾಗದಲ್ಲಿ ಆ ಪ್ರಸಾಧನ ಗಟ್ಟಿಯಾಗಿ ಅಂಟಿಕೊಳ್ಳುತ್ತದೆ. ಇದನ್ನು ತೊಲಗಿಸುವುದು ಅಷ್ಟು ಸುಲಭವಲ್ಲ. ಇದಕ್ಕಾಗಿ ಬ್ರಶ್ ಅನ್ನು ಮೇಣದಬತ್ತಿಯ ಜ್ವಾಲೆಯ ಬಳಿ (ತುಂಬಾ ಹತ್ತಿರ ಬೇಡ, ಇದರಿಂದ ಬ್ರಶ್ ನ ಕೂದಲುಗಳೇ ಸುಟ್ಟು ಹೋಗಬಹುದು). ಬಿಸಿಯಿಂದ ಒಳಗಣ ಪ್ರಸಾಧನ ಕರಗಿ ಬೀಳತೊಡಗುತ್ತದೆ. ಇದನ್ನು ಸಂಗ್ರಹಿಸಿ ಪುನರ್ಬಳಕೆ ಮಾಡಿಕೊಳ್ಳಬಹುದು.

ಹಳೆಯ ಲಿಪ್ ಸ್ಟಿಕ್ ಗಳಿಗೆ ವ್ಯಾಸೆಲಿನ್ ಬಳಸಿ
ಲಿಪ್ ಸ್ಟಿಕ್ ಹಳೆಯದಾದರೆ ಕೊಂಚ ಬಿಸಿ ತಾಗಿಸಿ ವ್ಯಾಸೆಲಿನ್ (petroleum jelly) ಹಚ್ಚಿ. ತಣಿದ ಬಳಿಕ ತುಟಿಗೆ ಹಚ್ಚಿಕೊಳ್ಳುವ ಮೂಲಕ ಬಣ್ಣವೂ ಹಚ್ಚಿದಂತಾಗುತ್ತದೆ ಮತ್ತು ತುಟಿಗಳಿಗೆ ಚಳಿಯಿಂದ ವ್ಯಾಸೆಲಿನ್ ರಕ್ಷಣೆಯನ್ನೂ ನೀಡಿದಂತಾಗುತ್ತದೆ.

ಸುಗಂಧ ಬಾಟಲಿಯ ಕಡೆಯ ಬಿಂದುಗಳಿಗಾಗಿ
ಯಾವುದೇ ಸುಗಂಧದ್ರವ್ಯದ ಬಾಟಲಿಯ ಎಲ್ಲಾ ಪ್ರಮಾಣವನ್ನು ಉಪಯೋಗಿಸಲು ಸಾಧ್ಯವಿಲ್ಲ. ಏಕೆಂದರೆ ಕಟ್ಟಕಡೆಯ ಬಿಂದುಗಳು ನಡುವಣ ಕೊಳವೆಗೆ ಸಿಗುವುದೇ ಇಲ್ಲ. ಹಾಗೇ ಎಸೆಯುವ ಮುನ್ನ ಬಲಪ್ರಯೋಗದಿಂದ ಇದರ ಮುಚ್ಚಳವನ್ನು ತೆಗೆದು ತಳದಲ್ಲಿ ಉಳಿದಿದ್ದ ಸುಗಂಧದ್ರವ್ಯದ ಪ್ರಮಾಣವನ್ನು ಮೈಗೆ ಹಚ್ಚುವ ಲೋಷನ್ (body lotion) ಗೆ ಸೇರಿಸುವ ಮೂಲಕ ಸುಗಂಧಮಯವಾಗಿಸಬಹುದು.


ತುಟಿಗೆ ಹಚ್ಚುವ ಬಣ್ಣದ ಬಾಟಲಿಯ ಬಾಯಿಯನ್ನು ಬಿಸಿನೀರಿನಿಂದ ತೊಳೆಯಿರಿ
ತುಟಿಗೆ ಹಚ್ಚುವ ಬಣ್ಣದ ಬಾಟಲಿಯ ಬಾಯಿಯ ಹೊರಭಾಗ ಬಣ್ಣದಿಂದ ಆವೃತ್ತವಾಗಿರುತ್ತದೆ. ಇದು ಕ್ರಮೇಣ ಗಟ್ಟಿಯಾಗಿ ಮುಚ್ಚಳ ಪೂರ್ಣವಾಗಿ ಹಾಕಲು ಆಗುವುದಿಲ್ಲ. ಅಡ್ಡಬಿದ್ದಾಗ ಇನ್ನೂ ಹೆಚ್ಚಿನ ದ್ರವ ಸೋರುತ್ತದೆ. ಇದಕ್ಕಾಗಿ ಬಾಯಿಯ ಹೊರಭಾಗವನ್ನು ಬಿಸಿನೀರು ಉಪಯೋಗಿಸಿ ಒರೆಸಿಬಿಡಿ. ಇದರಿಂದ ಬಣ್ಣದ ದ್ರವ ಪೋಲಾಗಿ ಹೋಗುವುದು ತಪ್ಪುತ್ತದೆ. ಬಿರುಕು ಬಿಟ್ಟ ಪಾದಗಳ ಆರೈಕೆಗಾಗಿ ಸರಳ ಮನೆಮದ್ದುಗಳು

ಸುಗಂಧ ದ್ರವ್ಯದ ದೊಡ್ಡ ಬಾಟಲಿಗೆ ಬದಲಾಗಿ ಕಿರಿಯ ಬಾಟಲಿಯನ್ನು ಜೊತೆಗೊಯ್ಯಿರಿ
ನಿಮ್ಮ ಚೀಲದಲ್ಲಿ ಭಾರಿಯಾದ ಸುಗಂಧದ್ರವ್ಯದ ಬಾಟಲಿಯನ್ನು ಕೊಂಡೊಯ್ಯುವ ಬದಲು ಹಳೆಯದಾದರೂ ಸುಸ್ಥಿತಿಯಲ್ಲಿರುವ ಮತ್ತು ನಿಮಗೆ ಅನುಕೂಲವಾದ ಗಾತ್ರದಲ್ಲಿರುವ ಬಾಟಲಿಯಲ್ಲಿ ಅಗತ್ಯ ಪ್ರಮಾಣದಲ್ಲಿ ಸುಗಂಧ ದ್ರವ್ಯ ತುಂಬಿಸಿ. ಇದರಿಂದ ಅನಾವಶ್ಯಕ ಹೊರೆ ಹೊರುವುದರಿಂದ ತಪ್ಪುತ್ತದೆ.

ಸಾಧ್ಯವಾದುದನ್ನು ಮರುಬಳಕೆ ಮಾಡಿ
ನಿಮ್ಮ ಹಳೆಯ ಪ್ರಸಾಧನದ ಪೆಟ್ಟಿಗೆಯನ್ನು ಎಸೆಯುವ ಮುನ್ನ ಅದರಲ್ಲಿ ಮರುಬಳಕೆ ಮಾಡಬಹುದಾದ ಸಾಧನಗಳನ್ನು ತೆಗೆದಿಡಿ. ಇದರಿಂದ ನಿಮ್ಮ ಮುಂದಿನ ಪ್ರಸಾಧನಗಳನ್ನು ಕೊಳ್ಳುವಾಗ ಅನಗತ್ಯವಾದುದನ್ನು ಕೊಳ್ಳದೇ ಉಳಿತಾಯ ಸಾಧಿಸಬಹುದು.

English summary

Smart Tips To Revive Your Old Makeup Items

It is not that simple to spend too much on makeup items that may expire even before you finish it. You should know different ways to manage it because you are spending a lot of money on items that may be out of trend the very next day.
X
Desktop Bottom Promotion