For Quick Alerts
ALLOW NOTIFICATIONS  
For Daily Alerts

ಅತಿಯಾದ ಮೇಕಪ್ ಕೂಡ ತ್ವಚೆಗೆ ಶತ್ರುವಾಗಬಹುದು

|

ಸೌಂದರ್ಯ ಎಂಬುದು ಹೆಣ್ಣಿಗೆ ಭೂಷಣ. ಅಲಂಕಾರ ಪ್ರಿಯಳೂ ಆಗಿರುವ ನಾರಿಯ ಸಹಜ ಸೌಂದರ್ಯವನ್ನು ಇಮ್ಮಡಿಗೊಳಿಸುವುದು ಸೌಂದರ್ಯ ಪ್ರಸಾಧನಗಳಾಗಿವೆ. ಕಣ್ಣಿಗೆ ಕಣ್ಣುಗಪ್ಪು, ತುಟಿಗೆ ತೆಳುವಾಗಿ ಲೇಪಿಸಿದ ಲಿಪ್‌ಸ್ಟಿಕ್, ಮುಖದಲ್ಲಿ ಮಿರುಗುವ ಕಾಂಪ್ಯಾಕ್ಟ್ ಮೆರುಗು, ಐ ಲ್ಯಾಶಸ್ ಹೀಗೆ ಆಧುನಿಕ ಸ್ತ್ರೀಯರ ಸೌಂದರ್ಯ ಕವಾಟ ತೆರೆದುಕೊಂಡು ಹೋಗುತ್ತದೆ.

ಈ ರೀತಿಯ ಅಲಂಕಾರ ವಿಧಾನಗಳನ್ನು ಆಧುನಿಕ ಸ್ತ್ರೀಯರು ಅನುಸರಿಸಿದರೆ ನಮ್ಮ ಹಿಂದಿನವರೂ ಅಲಂಕಾರಕ್ಕೆ ಹೆಚ್ಚು ಪ್ರಾಮುಖ್ಯ ನೀಡುತ್ತಿದ್ದರು. ಈಗಿನಂತೆ ನವೀನ ಪ್ರಸಾಧನಗಳು ಆ ಕಾಲದಲ್ಲಿ ಬಳಕೆಯಲ್ಲಿಲ್ಲದಿದ್ದರೂ ಕಣ್ಣು ಕಪ್ಪು, ಪುಡಿ ಕುಂಕುಮದ ಮೆರುಗು ಹೆಣ್ಣಿನ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತಿತ್ತು. ಅವರ ಸೌಂದರ್ಯ ತೊಳೆದಿಟ್ಟ ಕನ್ನಡಿಯಂತಿತ್ತು. ಅಂದರೆ ದಿನದಿಂದ ದಿನಕ್ಕೆ ಮೆರುಗನ್ನು ಪಡೆದುಕೊಳ್ಳುತ್ತಿತ್ತು.

ಆದರೆ ಇಂದಿನ ಯವಜನತೆ ಮಾರುಕಟ್ಟೆಯಲ್ಲಿ ದೊರೆಯುವ ನಾನಾ ಬಗೆಯ ರಾಸಾಯನಿಕ ಸೌಂದರ್ಯವರ್ಧಕ ಮೊರೆ ಹೋಗಿ ತಮ್ಮ ತ್ವಚೆಯ ಕಾಂತಿಯನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಆದರೆ ಮೇಕಪ್ ಕುರಿತು ಸರಿಯಾದ ಕಾಳಜಿವಹಿಸದಿದ್ದರೆ ಈ ಸಂಗಾತಿಯೇ ನಿಮ್ಮ ಶತ್ರು ಆಗುವುದರಲ್ಲಿ ಸಂಶಯವಿಲ್ಲ! ಮೇಕಪ್ ಕಿಟ್ ಅನ್ನು ವ್ಯವಸ್ಥಿತವಾಗಿರಿಸಲು ಟಾಪ್ ಸಲಹೆಗಳು

ಹೌದು ಇತ್ತೀಚಿನ ದಿನಗಳಲ್ಲಿ ಮೇಕಪ್ ಇಲ್ಲದೆ ಯಾರೂ ಕೂಡ ಹೊರ ಹೊರಡುವುದಿಲ್ಲ, ಯಾವುದೇ ಕಾರ್ಯಕ್ರಮ, ಅಥವಾ ಮದುವೆ ಸಮಾರಂಭಕ್ಕೆ ಹೋಗಬೇಕಾದರೂ ಕೂಡ ಸಾಕಷ್ಟು ಬಾರಿ ಕನ್ನಡಿ ಮುಂದೆ ನಿಂತು ಮೇಕಪ್‌ನ ಮೊರೆಹೋಗುತ್ತಾರೆ, ಅದರಲ್ಲೂ ಹುಡುಗಿಯರಂತೂ ಕೇಳುವುದೇಬೇಡ, ಆದರೆ ಇದರ ಪರಿಣಾಮ ಮಾತ್ರ ನೇರವಾಗಿ ನಿಮ್ಮ ತ್ವಚೆಯ ಮೇಲೆ ಬೀಳುತ್ತದೆ. ಇಂತಹ ಮೇಕಪ್ ಸಾಕಷ್ಟು ಸಮಯ ಹಚ್ಚಿಕೊಂಡಿರುವುದರಿಂದ ರಾಸಾಯನಿಕ ವಸ್ತುಗಳು ಮುಖವನ್ನು ಹಾಳು ಮಾಡಿಬಿಡುತ್ತವೆ. ಹಾಗಾಗಿ ಮೇಕಪ್ ಅನ್ನು ಆದಷ್ಟು ಬೇಗ ಸ್ವಚ್ಛಮಾಡಿಕೊಳ್ಳುವುದನ್ನು ಮಾತ್ರ ಮರೆಯಬೇಡಿ..ಬನ್ನಿ ಮೇಕಪ್ ಅನ್ನು ನೈಸರ್ಗಿಕವಾಗಿ ನಿವಾರಿಸುವುದು ಹೇಗೆ ಎಂಬುದನ್ನು ತಿಳಿಸಿದ್ದೇವೆ ಮುಂದೆ ಓದಿ...

Make-Up Removal Mistakes To Avoid

ಮಸ್ಕರಾವನ್ನು ನೀರಿನಲ್ಲಿ ತೊಳೆಯುವುದು
ಮಸ್ಕರಾವನ್ನು ನೀರಿನಲ್ಲಿ ತೊಳೆಯುವುದರಿಂದ ಅದು ಕಣ್ಣಿಗೆ ಹೋಗಬಹುದು. ಆದ್ದರಿಂದ ನೀರಿನಲ್ಲಿ ತೊಳೆಯಬೇಡಿ. ಆಲೀವ್ ಎಣ್ಣೆಯಲ್ಲಿ ಹತ್ತಿಯನ್ನು ನೆನೆಸಿ ಕಣ್ಣಿನ ರೆಪ್ಪೆಯನ್ನು ಒರೆಸಿ. ಈ ರೀತಿ ಮಾಡುವುದರಿಂದ ಸಂಪೂರ್ಣವಾಗಿ ಮಸ್ಕರಾವನ್ನು ಕಣ್ಣಿನಿಂದ ತೆಗೆಯಬಹುದು.

ಮೇಕಪ್ ವೈಪ್ಸ್ ಬಳಕೆ
ಮೇಕಪ್ ತೆಗೆಯಲು ವೈಪ್ಸ್ ಮಾತ್ರ ಬಳಸುವುದರಿಂದ ಮುಖದಲ್ಲಿ ಕಲೆ, ಮೊಡವೆಗಳಾಗಿ ಮುಖ ಹಾನಿಯಾಗುವ ಸಂಭವವಿರುತ್ತದೆ. ಮೇಕಪ್ ಸಂಪೂರ್ಣವಾಗಿ ತೊಳೆಯಲು ವೈಪ್ಸ್ ಸಾಕಾಗುವುದಿಲ್ಲ. ವೈಪ್ಸ್ ಉಪಯೋಗಿಸುವುದರಿಂದ ಮುಖದ ರಂದ್ರಗಳಲ್ಲಿ ಮೇಕಪ್ ಸೇರಿಕೊಂಡುಬಿಡುವ ಸಂಭವವಿರುತ್ತದೆ.ಆದ್ದರಿಂದ ಡೀಪ್ ಕ್ಲೀನ್ ಮಾಡಲು ಮೊದಲು ಕ್ಲೀನ್ಸರ್ ಉಪಯೋಗಿಸುವುದು ಸೂಕ್ತ.

ತಣ್ಣೀರಿನಲ್ಲಿ ಮುಖ ತೊಳೆಯುವುದು
ಕ್ಲೀನ್ಸರ್ ನಲ್ಲಿ ಮುಖ ತೊಳೆದ ನಂತರ ಹದವಾದ ಬಿಸಿ ನೀರಿನಲ್ಲಿ ಮುಖ ತೊಳೆಯಿರಿ. ತಣ್ಣೀರಿನಲ್ಲಿ ಮುಖ ತೊಳೆಯುವುದರಿಂದ ಮುಖದ ರಂದ್ರಗಳು ಮುಚ್ಚಿಕೊಂಡು ಮೇಕಪ್ ಒಳಗೆ ಹೋಗಿ ಮೊಡವೆಗಳಾಗುತ್ತವೆ

ನೈಸರ್ಗಿಕ ಪರಿಹಾರ
ಮೇಕಪ್ ತೆಗೆಯಲು ನೈಸರ್ಗಿಕ ಅಂಶವೆಂದರೆ ಮೊದಲು ತಣ್ಣಗಿನ ನೀರಿನಿಂದ ಮುಖ ತೊಳೆದುಕೊಂಡು ಹಾಲು ಅಥವಾ ಮೊಸರನ್ನು ಹತ್ತಿಯ ಸಹಾಯದಿಂದ ಮುಖಕ್ಕೆ ಹಚ್ಚಿ ಕೆಲ ನಿಮಿಷದ ನಂತರ ಉಗುರುಬೆಚ್ಚಗಿನ ನೀರಿನಲ್ಲಿ ತೊಳೆದುಕೊಂಡರೆ ತ್ವಚೆ ತಾಜಾ ಆಗಿ, ಮೇಕಪ್ ಒಂದಿಷ್ಟೂ ಉಳಿಯದೆ ಹೋಗುತ್ತದೆ.

English summary

Make-Up Removal Mistakes To Avoid

Make-up is an important asset of beauty. Nobody steps out these days without wearing make-up. Make-up makes you look more beautiful and defines your facial features. However, wearing make-up on your skin for a longer time can damage your skin as it is made up of chemical products.
X
Desktop Bottom Promotion