For Quick Alerts
ALLOW NOTIFICATIONS  
For Daily Alerts

ಲಿಪ್‌ಸ್ಟಿಕ್ ಪ್ರಿಯ ನೀರೆಯರಿಗೆ ಒಂದಿಷ್ಟು ಸರಳೋಪಾಯಗಳು

By Arshad
|

ಮುಖದ ಮೇಕಪ್‌ನಲ್ಲಿ ತುಟಿ ಮತ್ತು ಕಣ್ಣುಗಳ ಬಣ್ಣಕ್ಕೆ ಹೆಚ್ಚಿನ ಪ್ರಾಧಾನ್ಯತೆ ಇದೆ. ಅದರಲ್ಲೂ ತುಟಿಗೆ ಹಚ್ಚುವ ಬಣ್ಣ ಆಯಾ ಸಂದರ್ಭಗಳನ್ನು ಅನುಸರಿಸಿ ಬದಲಾಗುತ್ತಾ ಇರಬೇಕು. ಆದರೆ ಹೆಚ್ಚಿನವರು ಲಿಪ್ ಸ್ಟಿಕ್ ಬಳಸುವುದೆಂದರೆ ಜಂಬದ ಚೀಲದಿಂದ ಲಿಪ್ ಸ್ಟಿಕ್‌ನ ಯಾವುದೋ ಒಂದು ಪ್ರಸಾಧನವನ್ನು ತೆರೆದು ನೇರವಾಗಿ ತುಟಿಗಳಿಗೆ ಹಚ್ಚಿ ಎರಡೂ ತುಟಿಗಳನ್ನು ಒಂದಕ್ಕೊಂದು ಒತ್ತಿ ತಾಕಿಸಿಕೊಂಡರೆ ಸಾಕು ಎಂಬ ಅಭಿಪ್ರಾಯ ಹೊಂದಿದ್ದಾರೆ.

ವಾಸ್ತವವಾಗಿ ಇದು ತಪ್ಪು ಅಭಿಪ್ರಾಯವಾಗಿದೆ. ಯಾವುದೇ ಸೌಂದರ್ಯ ಪ್ರಸಾಧನದಂತೆಯೇ ಲಿಪ್ ಸ್ಟಿಕ್ ಹಚ್ಚಲೂ ಒಂದು ಸರಿಯಾದ ಕ್ರಮವಿದೆ. ಅಲ್ಲದೇ ತುಟಿಯಂಚಿನಿಂದ ಹೊರಬರದಂತೆ ಹಚ್ಚಿಕೊಳ್ಳುವುದು, ಮತ್ತು ಎಲ್ಲೆಡೆ ಏಕಪ್ರಕಾರವಾಗಿ ತೆಳುವಾಗಿ ಹಚ್ಚಿಕೊಳ್ಳುವುದು ಸಹಾ ಒಂದು ಕಲೆ. ಇವನ್ನು ಅನುಸರಿಸಿದರೆ ಮಾತ್ರ ಈ ಅಲಂಕಾರಕ್ಕೆ ನೂರ್ಮಡಿ ಬೆಲೆ ಬರುತ್ತದೆ. ಇಲ್ಲದಿದ್ದರೆ ಕೋಡಂಗಿಯವತಾರ ಕಂಡಂತಾಗುತ್ತದೆ. ತುಟಿಯ ರಂಗು ಬೇಗನೆ ಮಾಸದಿರಲು ಬ್ಯೂಟಿ ಟಿಪ್ಸ್

ಲಿಪ್ ಸ್ಟಿಕ್ ಹಚ್ಚುವ ಸರಿಯಾದ ಕ್ರಮವನ್ನು ಇದುವರೆಗೆ ಕೇವಲ ವೃತ್ತಿಪರ ಸೌಂದರ್ಯಕಾರ್ತಿಯರಿಗೆ ಮೀಸಲಾದ ಕೆಲಸವಾಗಿತ್ತು. ಆದರೆ ಎಲ್ಲಾ ಸಂದರ್ಭಗಳಲ್ಲಿ ಅವರನ್ನೆಲ್ಲಿ ಹುಡುಕಿಕೊಂಡು ಹೋಗೋಣ? ಬದಲಿಗೆ ನಾವೇ ಸರಿಯಾದ ಕ್ರಮ ಅನುಸರಿಸಿದರೆ ಸಾಲದೇ ಎಂದು ಪ್ರಶ್ನಿಸುವ ಅಲಂಕಾರಪ್ರಿಯ ಮಹಿಳೆಯರಿಗೆ ಕೆಳಗಿನ ಸ್ಲೈಡ್ ಶೋ ನೆರವಾಗಲಿದೆ..

 ಹೊಳೆಯುವ ಚುಕ್ಕಿಗಳನ್ನು ಬಳಸಬೇಡಿ

ಹೊಳೆಯುವ ಚುಕ್ಕಿಗಳನ್ನು ಬಳಸಬೇಡಿ

ನಮ್ಮ ದೇಹದ ಇತರ ಯಾವುದೇ ಭಾಗದ ಚರ್ಮದಂತೆಯೇ ತುಟಿಯ ಚರ್ಮದ ಹೊರಭಾಗದ ಜೀವಕೋಶಗಳು ಸಾಯುತ್ತವೆ. ಬದಲಿಗೆ ಹೊಸ ಜೀವಕೋಶಗಳು ಹುಟ್ಟುತ್ತವೆ. ಸತ್ತ ಜೀವಕೋಶಗಳು ತೆಳುವಾದ ಪುಡಿಯಂತೆ ಅಂಟಿಕೊಂಡಿರುತ್ತದೆ. ಒಣಗಿದಾಗ ಉದುರಿಹೋಗುವ ಈ ಪುಡಿ ಮೇಕಪ್ ಮತ್ತು ಇತರ ಕಾರಣಗಳಿಂದಾಗಿ ಅಲ್ಲಿಯೇ ಉಳಿದುಕೊಳ್ಳುತ್ತದೆ. ಇದರ ಮೇಲೆ ಲೇಪಿಸುವ ಲಿಪ್ ಸ್ಟಿಕ್ ಸರಿಯಾಗಿ ಕುಳಿತುಕೊಳ್ಳುವುದಿಲ್ಲ. ಆದ್ದರಿಂದ ಈ ಒಣಪುಡಿಯನ್ನು ನಿವಾರಿಸುವುದು ಅಗತ್ಯವೂ ಆರೋಗ್ಯಕರವೂ ಆಗಿದೆ. ಇದಕ್ಕಾಗಿ ಲಿಪ್ ಬಾಮ್ ಒಂದನ್ನು ಹಚ್ಚಿ ಆರ್ದ್ರತೆಯನ್ನು ಹೆಚ್ಚಿಸಿ.

ಸಂದರ್ಭಕ್ಕನುಸಾರವಾದ ಲಿಪ್ ಸ್ಟಿಕ್ ಆರಿಸಿ

ಸಂದರ್ಭಕ್ಕನುಸಾರವಾದ ಲಿಪ್ ಸ್ಟಿಕ್ ಆರಿಸಿ

ಒಂದು ವೇಳೆ ಹಗಲಿನ ಕಾರ್ಯಕ್ರಮವಾದರೆ ಮುಖದ ಮೇಕಪ್‌ಗೆ ಹೆಚ್ಚಿನ ಪ್ರಾಧಾನ್ಯತೆ ದೊರಕುವುದರಿಂದ ಮುಖದ ಬಣ್ಣಕ್ಕೆ ಅನುಗುಣವಾದ ಬಣ್ಣದ ಲಿಪ್ ಸ್ಟಿಕ್ ಆಯ್ದುಕೊಳ್ಳಿ. ಇದು ಅತಿ ಗಾಢವಾಗಿಯೂ ಇರಬಾರದು ಮತ್ತು ತುಟಿಗಳ ಮೇಲೆ ನೇರವಾಗಿ ಹಚ್ಚಿಕೊಳ್ಳುವಂತಹದ್ದಾಗಿರಬೇಕು. ಒಂದು ವೇಳೆ ರಾತ್ರಿಯ ಕಾರ್ಯಕ್ರಮವಾದರೆ ಮುಖದ ಬಣ್ಣಕ್ಕೆ ವಿರುದ್ಧವಾದ ಅಥವಾ ಎದ್ದು ಕಾಣುವಂತಹ ಬಣ್ಣದ ಲಿಪ್ ಸ್ಟಿಕ್ ಆರಿಸಿಕೊಳ್ಳಿ. ಆದರೆ ಮುಖದ ಮೇಕಪ್ ತೆಳುವಾಗಿರಲಿ.

ಹೊಳೆಯುವ ಚುಕ್ಕಿಗಳನ್ನು ಬಳಸಬೇಡಿ

ಹೊಳೆಯುವ ಚುಕ್ಕಿಗಳನ್ನು ಬಳಸಬೇಡಿ

ಕೆಲವೊಮ್ಮೆ ಲಿಪ್ ಸ್ಟಿಕ್ ನಲ್ಲಿ ಚಿಕ್ಕ ಚಿಕ್ಕ ಲೋಹದ ಚೂರುಗಳನ್ನು ಸೇರಿಸಿ ನೋಡುವವರಿಗೆ ತುಟಿಗಳು ಹೊಳೆಯುವಂತೆ ಮಾಡಲಾಗಿರುತ್ತದೆ. ಆದರೆ ಇದು ನೋಡಲು ಏನೂ ಚೆನ್ನಾಗಿರುವುದಿಲ್ಲ. ಅತೀ ಅಗತ್ಯವಿದ್ದರೆ ಮಾತ್ರ (ನೃತ್ಯ ಕಾರ್ಯಕ್ರಮ ಮೊದಲಾದೆಡೆ) ಅತ್ಯಂತ ಕಡಿಮೆ ಪ್ರಮಾಣದಲ್ಲಿರಲಿ. ಒಂದೇ ಬಣ್ಣದ ಮತ್ತು ನಯವಾದ ಕೆನೆಯಂತಹ ಲಿಪ್ ಸ್ಟಿಕ್ ಉತ್ತಮವಾದ ಆಯ್ಕೆಯಾಗಿದೆ.

ಸೂಕ್ತ ಬಣ್ಣವನ್ನು ಆಯ್ಕೆಮಾಡಿಕೊಳ್ಳಿ

ಸೂಕ್ತ ಬಣ್ಣವನ್ನು ಆಯ್ಕೆಮಾಡಿಕೊಳ್ಳಿ

ಯಾವುದೇ ಸೌಂದರ್ಯಕಾರ್ತಿಗೆ ಸವಾಲೊಡ್ಡುವ ಪ್ರಶ್ನೆಯೆಂದರೆ ಯಾವ ಬಣ್ಣದ ಲಿಪ್ ಸ್ಟಿಕ್ ಉಪಯೋಗಿಸುವುದು? ಇದು ವ್ಯಕ್ತಿಯಿಂದ ವ್ಯಕ್ತಿಗೆ, ಸಂದರ್ಭದಿಂದ ಸಂದರ್ಭಕ್ಕೆ ಬದಲಾಗುತ್ತಾ ಹೋಗುತ್ತದೆ. ಒಂದು ವೇಳೆ ನಿಮ್ಮ ತ್ವಚೆ ಗೌರವರ್ಣವಾಗಿದ್ದರೆ ಗಾಢ ಮತ್ತು ರಕ್ತಬಣ್ಣದ ಕೆಂಪು ಲಿಪ್ ಸ್ಟಿಕ್ ಅಥವಾ ತೆಳುಗುಲಾಬಿ ಮತ್ತು ಕೆಂಪುಬಣ್ಣದ ನಡುವಣ ಯಾವುದೇ ಬಣ್ಣ ಸೂಕ್ತವಾಗಿದೆ. ಒಂದು ವೇಳೆ ನಿಮ್ಮ ಚರ್ಮ ಗೋಧಿ ಅಥವಾ ಗಾಢವರ್ಣದ್ದಾಗಿದ್ದರೆ ಗಾಢಕೆಂಪು ನಿಮಗೆ ಸೂಕ್ತವಾಗಿದೆ. ನಿಮ್ಮ ಉಡುಪು ಮತ್ತು ಸಂದರ್ಭಕ್ಕೆ ತಕ್ಕಂತೆ ರಕ್ತಕೆಂಪು ಮತ್ತು ಗಾಢಕೆಂಪು ನಡುವಣ ಯಾವುದೇ ಬಣ್ಣವನ್ನು ಆಯ್ಕೆ ಮಾಡಿಕೊಳ್ಳಬಹುದು.

ಪ್ರೈಮರ್ ಬಳಸಿ

ಪ್ರೈಮರ್ ಬಳಸಿ

ಯಾವುದೇ ಲಿಪ್ ಸ್ಟಿಕ್ ಬಳಸುವ ಮುನ್ನ ತುಟಿಗಳನ್ನು ಸ್ವಚ್ಛವಾಗಿ ತೊಳೆದುಕೊಂಡು ಒರೆಸಿ ಒಣಗಿಸಿದ ಬಳಿಕ ನಯವಾಗಿ ಪ್ರೈಮರ್ ಹಚ್ಚಿಕೊಳ್ಳುವುದು ಅಗತ್ಯ. ಇದು ಒಂದು ಅಡಿಪಾಯದಂತೆ ಕೆಲಸ ಮಾಡುತ್ತದೆ. ಇದರ ಮೇಲೆ ಲಿಪ್ ಸ್ಟಿಕ್ ಹಚ್ಚಿಕೊಳ್ಳುವುದರಿಂದ ಬಣ್ಣವು ಹೆಚ್ಚು ಪ್ರಖರವಾಗಿರುತ್ತದೆ ಹಾಗೂ ಹೆಚ್ಚು ಕಾಲ ಉಳಿಯುತ್ತದೆ. ಅಲ್ಲದೇ ಒಂದು ವೇಳೆ ಲಿಪ್ ಸ್ಟಿಕ್ ನ ಯಾವುದೋ ಒಂದು ಪ್ರಸಾಧನದಿಂದ ಅಲರ್ಜಿಯುಂಟಾಗಬಹುದಾಗಿದ್ದರೆ ಅದರಿಂದ ಕಾಪಾಡಿದಂತಾಗುತ್ತದೆ.

ಲಿಪ್ ಲೈನರ್ ಬಳಸಿ

ಲಿಪ್ ಲೈನರ್ ಬಳಸಿ

ತುಟಿಯ ಅಂಚುಗಳನ್ನು ಸ್ಪಷ್ಟವಾಗಿ ಮೂಡಿಸುವ ಪ್ರಸಾಧನವೇ ಲಿಪ್ ಲೈನರ್. ಆದರೆ ಇದನ್ನು ಬಳಸುವುದು ಅಷ್ಟು ಸುಲಭವಲ್ಲ. ಕೊಂಚ ತಾಳ್ಮೆ ಮತ್ತು ಕಲಾವಂತಿಕೆ ಅಗತ್ಯ. ಅಲ್ಲದೇ ತುಟಿಗೆ ಹಚ್ಚಿರುವ ಬಣ್ಣಕ್ಕೆ ಕೊಂಚವೇ ಗಾಢವಾಗಿರುವ ಬಣವನ್ನು ಆಯ್ಕೆ ಮಾಡಿಕೊಂಡು ಹೊರ ಅಂಚುಗಳು ಎಲ್ಲೂ ಹೊರಚಾಚದಂತೆ ಎಚ್ಚರಿಕೆ ವಹಿಸಿ ರೇಖೆ ಮೂಡಿಸುವುದು ಒಂದು ಕಲೆ.

ಮೊದಲು ನಡುವಿನಿಂದ ಪ್ರಾರಂಭಿಸಿ

ಮೊದಲು ನಡುವಿನಿಂದ ಪ್ರಾರಂಭಿಸಿ

ಉತ್ತಮ ಪರಿಣಾಮಕ್ಕಾಗಿ ಲಿಪ್ ಸ್ಟಿಕ್ ನ ಯಾವುದೇ ವಿಧಾನಗಳನ್ನು ನಡುವಿನಿಂದ ಪ್ರಾರಂಭಿಸಿ ಅಂಚುಗಳಲ್ಲಿ ಕೊನೆಯಾಗುವಂತೆ ಮಾಡಿ. ಇದಕ್ಕಾಗಿ ನಯವಾದ ಬ್ರಶ್ ಉಪಯೋಗಿಸಿ. ಬ್ರಶ್ ಉಪಯೋಗಿಸಿ ಹಚ್ಚುವ ಮೂಲಕ ತಪ್ಪುಗಳು ಕಡಿಮೆಯಾಗುವುದು ಮಾತ್ರವಲ್ಲ, ಎಲ್ಲೆಡೆ ಏಕಪ್ರಕಾರವಾಗಿ ಹರಡಲೂ ಸಾಧ್ಯವಾಗುತ್ತದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಖಂಡಿತಾ ತಿಳಿಸಿ. ಇದರ ಹೊರತಾಗಿ ನಿಮ್ಮಲ್ಲಿ ಯಾವುದಾದರೂ ಅಮೂಲ್ಯ ಮಾಹಿತಿಯಿದ್ದರೆ ನಮ್ಮೊಂದಿಗೆ ಖಂಡಿತಾ ಹಂಚಿಕೊಳ್ಳಿ.

English summary

Lipstick Rules Every Woman Should Know

In this article today, we are here to share about the basic lipstick rules every woman should know. Applying lipstick in the right form is an art in itself. And getting it right is what matters. The right shade and getting the pout right is a task by itself. So let's discuss about the different lipstick rules that we all need to know before we make ourselves look disastrous. Read on to know more.
X
Desktop Bottom Promotion