For Quick Alerts
ALLOW NOTIFICATIONS  
For Daily Alerts

ನಿಮಿಷಾರ್ಧದಲ್ಲಿ ತ್ವಚೆಯ ಕಾಂತಿ ಹೆಚ್ಚಿಸುವ ಇರಾದೆಯೇ?

By Hemanth
|

ಯಾವುದಾದರೂ ಕಾರ್ಯಕ್ರಮ ಅಥವಾ ಇನ್ನಿತರ ಸಮಾರಂಭಗಳಿಗೆ ಹೋಗಬೇಕಿದ್ದರೆ ಮಹಿಳೆಯರಿಗೆ ತಯಾರಾಗಲು ಗಂಟೆಗಳೇ ಬೇಕಾಗುತ್ತದೆ. ಸುಂದರವಾಗಿ ಕಾಣಿಸಿಕೊಳ್ಳಲು ಗಂಟೆಗಟ್ಟಲೆ ಮೇಕಪ್ ಮಾಡಿಕೊಳ್ಳುವುದು ಅಗತ್ಯ ಕೂಡ. ಸುಂದರವಾಗಿ ಕಾಣಿಸಿಕೊಳ್ಳಲು ನಿಮ್ಮಲ್ಲಿ ತಾಳ್ಮೆ ಕೂಡ ಬೇಕಾಗುತ್ತದೆ.

ಆದರೆ ಇಂದಿನ ವ್ಯಸ್ತ ಜೀವನದಲ್ಲಿ ನಾವು ಕೆಲವೊಂದು ತಂತ್ರ ಹಾಗೂ ವಿಭಿನ್ನತೆಗಳನ್ನು ಪಾಲಿಸಬೇಕಾಗುತ್ತದೆ. ಸಮಯದ ಅಭಾವವಿದ್ದಾಗ ಪ್ರತಿಯೊಬ್ಬ ಯುವತಿಯು ಶಾರ್ಟ್ ಕಟ್‌ಗೆ ಮೊರೆ ಹೋಗುತ್ತಾಳೆ. ಕೆಲವೊಂದು ಸೌಂದರ್ಯದ ತಂತ್ರಗಳು ಹೆಚ್ಚಿನ ಸಮಯ ತೆಗೆದುಕೊಳ್ಳದೆ ನಿಮ್ಮನ್ನು ಸುಂದರವಾಗಿ ಮಾಡಬಲ್ಲದು.

ಹಾಗಾಗಿ ಇವುಗಳನ್ನು ಸೌಂದರ್ಯದ ವಿಭಿನ್ನತೆಗಳು ಎಂದು ಕರೆಯಲಾಗುತ್ತದೆ. ಈ ತಂತ್ರಗಳು ನೀವು ಒಂದು ಗಂಟೆಯಲ್ಲಿ ತಯಾರಾಗುವುದನ್ನು ಕೆಲವೇ ನಿಮಿಷಗಳಲ್ಲಿ ತಯಾರಾಗುವಂತೆ ಮಾಡುತ್ತದೆ...! ಆಶ್ಚರ್ಯವಾಯಿತೇ? ದುಂಡಗಿನ ಮುಖಕ್ಕೆ ಸೂಕ್ತವಾಗಿರುವ 7 ಮೇಕಪ್ ಸಲಹೆಗಳು

ಹೌದು ಮನೆಯಲ್ಲೇ ಇರುವಂತಹ ನೈಸರ್ಗಿಕ ವಸ್ತುಗಳನ್ನು ಬಳಸಿಕೊಂಡು ತಂತ್ರ ಮತ್ತು ವಿಭಿನ್ನತೆಗಳಿಂದ ಪರಿಹರಿಸಬಹುದು. ಇದು ನಿಮಗೆ ಇಷ್ಟವಾದರೆ ಇತರರನ್ನು ಅಚ್ಚರಿಗೀಡುಮಾಡುತ್ತದೆ. ಕೆಲವೊಂದು ಸೌಂದರ್ಯದ ತಂತ್ರಗಳನ್ನು ನೋಡಿ ನೀವು ಇದನ್ನು ಮನೆಯಲ್ಲೇ ಮಾಡಬಹುದು.

How To Look Beautiful In Minutes

ಸೆಲೆಬ್ರಿಟಿಗಳಂತೆ ಕೂದಲ ವಿನ್ಯಾಸ
ನಿಮಗೆ ಸೆಲೆಬ್ರಿಟಿಗಳಂತೆ ಕೂದಲನ್ನು ಅಲೆಅಲೆಯಾಗಿ ವಿನ್ಯಾಸಗೊಳಿಸಬೇಕೆಂಬ ಆಸೆಯಿದ್ದರೆ ಇದನ್ನು ಮಾಡಲು ಸರಳ ವಿಧಾನವಿದೆ. ನಿಮ್ಮ ಒದ್ದೆ ಕೂದಲನ್ನು ಸಣ್ಣ ಸಣ್ಣದಾಗಿ ಹೆಣೆಯಿರಿ ಮತ್ತು ಕೂದಲು ನೇರಗೊಳಿಸುವಂತಹ ಯಂತ್ರದಿಂದ ಕೂದಲನ್ನು ಬಿಸಿ ಮಾಡಿ. ಹೆಣೆಯಲ್ಪಟ್ಟ ಕೂದಲನ್ನು ಬಿಡಿಸಬೇಡಿ ಮತ್ತು ನಿಮ್ಮ ಕೂದಲು ಅಲೆಅಲೆಯಾಗಿ ಕಾಣಿಸುತ್ತದೆ. ಇದು ನಿಮ್ಮ ಮನೆಯಲ್ಲೇ ಮಾಡಬಹುದಾದ ಉಚಿತ ಸೌಂದರ್ಯದ ತಂತ್ರ.

ಕ್ಷಿಪ್ರವಾಗಿ ಹೊಳೆಯುವಂತೆ ಕಾಣಲು
ಬೆಣ್ಣೆ ಹಣ್ಣಿನ ತಿರುಗಳನ್ನು ತೆಗೆದು ಅದಕ್ಕೆ ಎರಡು ಚಮಚ ಮೊಸರನ್ನು ಮಿಶ್ರಣ ಮಾಡಬೇಕು. ಇದನ್ನು ಚೆನ್ನಾಗಿ ಮಿಶ್ರಣ ಮಾಡಿ ಅದನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. ಆರೋಗ್ಯಕರವಾಗಿ ಹೊಳೆಯಲು 15 ನಿಮಿಷ ಹಾಗೆ ಬಿಡಿ. ಇನ್ನು ಬ್ಯೂಟಿ ಪಾರ್ಲರ್‌‌ಗೆ ಹಣ ಸುರಿಯುವುದನ್ನು ನಿಲ್ಲಿಸಿ!

ಎಣ್ಣೆಯಂಶವಿರುವ ತ್ವಚೆಗೆ ಮೇಕಪ್
ಎಣ್ಣೆಯಂಶವಿರುವ ತ್ವಚೆಗೆ ಮೇಕಪ್ ಹಚ್ಚಿಕೊಳ್ಳುವುದು ಕಠಿಣ ಕೆಲಸ. ಮೇಕಪ್ ನ ಎಲ್ಲಾ ಸಾಮಗ್ರಿಗಳು ಒಂದೆಡೆ ಜಮೆಯಾಗಿ ಮುಖವು ತುಂಬಾ ಎಣ್ಣೆಯುಕ್ತ ಮತ್ತು ಅನಾಕರ್ಷಕವಾಗಿ ಕಾಣಿಸಬಹುದು. ಇದನ್ನು ತಡೆಯಲು ಹತ್ತಿಯ ಉಂಡೆಯಿಂದ ಟೋನರ್ ಹಚ್ಚಿ ಮತ್ತು ಇದರ ಬಳಿಕ ಮೇಕಪ್ ಮಾಡಿ.

ಮುಖಕ್ಕೆ ಕಂಡೀಷನರ್
ನಿಮ್ಮ ತ್ವಚೆ ಒಣ ತ್ವಚೆಯಾಗಿದ್ದರೆ ಮತ್ತು ಇದರ ಆರೈಕೆಗೆ ಸಮಯವಿಲ್ಲದಿದ್ದರೆ ನೀವು ಚಿಂತಿಸಬೇಕಿಲ್ಲ. ನಿಮ್ಮ ಮುಖ ಮತ್ತು ದೇಹಕ್ಕೆ ಕಂಡೀಷನರ್ ಹಾಕಿ. 15 ನಿಮಿಷಗಳ ಬಳಿಕ ಸ್ನಾನ ಮಾಡಿ. ನಿಮ್ಮ ತ್ವಚೆಯು ತೇವಾಂಶ ಮತ್ತು ಪೋಷಣೆ ನೀಡುತ್ತದೆ.

ಮೊಡವೆಗೆ ಹಲ್ಲುಜ್ಜುವ ಪೇಸ್ಟ್
ಯಾವುದೇ ಮದುವೆ, ಸಮಾರಂಭ ಅಥವಾ ಸ್ನೇಹಿತರೊಂದಿಗೆ ಪಾರ್ಟಿಗೆ ಹೋಗಬೇಕೆಂದಾಗ ಮುಖದಲ್ಲಿನ ಮೊಡವೆ ಅಂದವನ್ನು ಕೆಡಿಸಿದೆಯಾ? ಮೊಡವೆಯ ಮೇಲೆ ಸ್ವಲ್ಪ ಹಲ್ಲುಜ್ಜುವ ಪೇಸ್ಟ್ ಹಾಕಿ. ಮೊಡವೆ ಒಣಗಿ ಅಲ್ಲಿಂದ ಮಾಯವಾಗುತ್ತದೆ.

ತಾಜಾ ಮತ್ತು ಸಹಜ ತ್ವಚೆ ಪಡೆಯಿರಿ
ಮೂರು ಚಮಚ ಗ್ರೀನ್ ಟೀ, ಎರಡು ಚಮಚ ಸಕ್ಕರೆ ಮತ್ತು ಒಂದು ಚಮಚ ನಿಮ್ಮ ಆಯ್ಕೆಯ ಮೊಶ್ಚರ್ ಕ್ರೀಮ್ ನ್ನು ಸರಿಯಾಗಿ ಕಲಸಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಳ್ಳುತ್ತಾ ನಿಧಾನವಾಗಿ ಸ್ಕ್ರಬ್ ಮಾಡಿ. ಈ ಸ್ಕ್ರಬ್ ನಿಮ್ಮ ಮುಖವನ್ನು ತಾಜಾ, ಹೊಳಪು ಮತ್ತು ಸಹಜವಾಗಿರುವಂತೆ ಮಾಡುತ್ತದೆ. ಈ ನೈಸರ್ಗಿಕ ಸ್ಕ್ರಬ್ ಅನ್ನು ಸಹಜ ಮತ್ತು ಹೊಳೆಯುವ ತ್ವಚೆಗೆ ಬಳಸಿ.

English summary

How To Look Beautiful In Minutes

To look outstandingly beautiful you need to spend your time on it. You need to have a lot of patience to beautify yourself but in today's busy life you must to follow some tricks and hacks to look beautiful. Have a look at some of the beauty tricks that you must do to look beautiful in minutes at home.
Story first published: Thursday, July 23, 2015, 13:04 [IST]
X
Desktop Bottom Promotion