For Quick Alerts
ALLOW NOTIFICATIONS  
For Daily Alerts

ಕಾಲೇಜು ಹುಡುಗಿಯರಿಗೆ ಹೇಳಿ ಮಾಡಿಸಿದ ಸೌಂದರ್ಯದ ಟಿಪ್ಸ್!

By Deepak
|

ತಾರುಣ್ಯದಲ್ಲಿರುವ ಹೆಣ್ಣು ಮಕ್ಕಳಲ್ಲಿ ಹಲವಾರು ಬದಲಾವಣೆಗಳನ್ನು ನಾವು ಕಾಣಬಹುದು. ಅವರ ದೇಹ ಮತ್ತು ಮನಸ್ಸು ಈ ಅವಧಿಯಲ್ಲಿ ತ್ವರಿತ ಗತಿಯಲ್ಲಿ ಬೆಳವಣಿಗೆ ಕಾಣುತ್ತಿರುತ್ತದೆ. ಆದರೆ ಈ ಪ್ರಕೃತಿಯ ವರವು ಹುಡುಗಿಯರನ್ನು ಗೊಂದಲಕ್ಕೆ ಈಡು ಮಾಡಿಬಿಡುತ್ತದೆ. ಇದೇ ಸಮಯದಲ್ಲಿ ಅವರ ದೇಹದಲ್ಲಿ ಸ್ರವಿಸುವ ಆಂಡ್ರೊಜೆನ್ ಪರಿಣಾಮವಾಗಿ ಅವರ ತ್ವಚೆಯು ಮೊಡವೆ, ಗುಳ್ಳೆಗಳು ಮುಂತಾದ ಸಮಸ್ಯೆಗಳಿಂದ ನರಳುತ್ತದೆ. ನಿಮ್ಮ ಹಳೆಯ ಸೌಂದರ್ಯ ಸಾಮಾಗ್ರಿಗಳ ಮರುಬಳಕೆ ಹೇಗೆ?

ತಾರುಣ್ಯದ ಅವಧಿಯಲ್ಲಿ ಇದೆಲ್ಲ ಸಹಜ. ಆದರೆ ಶಾಲೆ, ಕಾಲೇಜು, ಹಬ್ಬ ಹರಿದಿನ, ಪಾರ್ಟಿ ಇತ್ಯಾದಿಗಳಲ್ಲಿ ನೀವು ಚಂದವಾಗಿ ಕಾಣಬೇಕು ಎಂದು ಬಯಸುವುದಿಲ್ಲವೇ? ಬನ್ನಿ ಅದಕ್ಕಾಗಿ ನಾವು ನಿಮಗೆ ಕೆಲವೊಂದು ಸಲಹೆಗಳನ್ನು ಇಂದು ನೀಡುತ್ತೇವೆ.

ಕ್ಲೀನಿಂಗ್, ಟೋನಿಂಗ್ ಮತ್ತು ಮೊಯಿಶ್ಚರೈಸಿಂಗ್

ಕ್ಲೀನಿಂಗ್, ಟೋನಿಂಗ್ ಮತ್ತು ಮೊಯಿಶ್ಚರೈಸಿಂಗ್

ತಾರುಣ್ಯದಲ್ಲಿ ಸುಂದರವಾಗಿ ಕಾಣಲು ಹಲವಾರು ಸರಳ ಮಾರ್ಗಗಳು ಇವೆ. ಈ ಅವಧಿಯಲ್ಲಿ ಹಾರ್ಮೋನ್ ಸ್ರವಿಸುವಿಕೆಯು ನಿಮ್ಮ ತ್ವಚೆಯಲ್ಲಿನ ರಂಧ್ರಗಳನ್ನು ತೆರೆದು ಬಿಡುತ್ತದೆ. ಕೊಳೆ ಮತ್ತು ಮಾಲಿನ್ಯವು ನಿಮ್ಮ ಬದ್ಧ ವೈರಿಯಾಗಿರುತ್ತದೆ. ಆದ್ದರಿಂದ ನಿಮ್ಮ ಮುಖವನ್ನು ಟೋನರ್ ಬಳಸಿ ಸ್ವಚ್ಛಗೊಳಿಸಿಕೊಳ್ಳಿ. ಇದರಿಂದ ಅದಕ್ಕೆ ಹೊಳಪು ಬರುತ್ತದೆ. ಮೊಯಿಶ್ಚರೈಸರ್ ನಿಮ್ಮ ತ್ವಚೆಯ ಆರೋಗ್ಯಕ್ಕೆ ಅತ್ಯಾವಶ್ಯಕ.

ಸರಿಯಾದ ಮೇಕಪ್ ಬಳಸಿ

ಸರಿಯಾದ ಮೇಕಪ್ ಬಳಸಿ

ತಾರುಣ್ಯದಲ್ಲಿರುವ ಹುಡುಗಿಯರು ಮೇಕಪ್ ಬಳಸುವುದು ಸಹಜ. ಆದರೆ ಬಹಳಷ್ಟು ಮಂದಿಗೆ ಇದನ್ನು ಹೇಗೆ ಬಳಸಬೇಕೆಂದು ತಿಳಿದಿರುವುದಿಲ್ಲ. ಮೊದಲಿಗೆ ಮೇಕಪನ್ನು ಕಡಿಮೆ ಬಳಸಿ. ಒಂದು ವೇಳೆ ಹೆಚ್ಚು ಬಳಸಬೇಕೆಂದುಕೊಂಡಲ್ಲಿ, ಅದನ್ನು ಕೊನೆಯಲ್ಲಿ ಪೂರ್ತಿ ತೊಳೆಯಲು ಮರೆಯಬೇಡಿ. ದೇಹದಲ್ಲಿರುವ ಕೂದಲನ್ನು ತೆಗೆಯುವಾದ ಎಚ್ಚರವಹಿಸಿ ತಾರುಣ್ಯದಲ್ಲಿ ದೇಹದ ಕೆಲವೆಡೆ ಕೂದಲು ಬರುವುದು ಸಹಜ. ಅದನ್ನು ತೆಗೆಯುವಾಗ ವ್ಯಾಕ್ಸಿಂಗ್ ಬಳಸಬೇಡಿ. ಕೂದಲುಗಳ ಮೇಲೆ ಸಿಡುಕನ್ನು ಪ್ರದರ್ಶಿಸಬೇಡಿ. ಒಂದು ವೇಳೆ ನಿಮ್ಮ ಮೈಮೇಲೆ ಗೆರೆಗಳು ಇದ್ದಲ್ಲಿ, ಅದರ ಮೇಲೆ ವ್ಯಾಕ್ಸ್ ಬಳಸಬೇಡಿ. ಬಳಸಿದಲ್ಲಿ ಅದರ ಮೇಲೆ ತಣ್ಣೀರಿನ ಸ್ನಾನ ಮಾಡಿ. ಗುಳ್ಳೆಗಳು ಮತ್ತು ತುರಿಕೆ ಬರದಂತೆ ಕಾಪಾಡಿ.

ಲಿಪ್ ಕೇರ್

ಲಿಪ್ ಕೇರ್

ತ್ವಚೆಯ ರಕ್ಷಣೆ ಎಂದರೆ ತುಟಿಯ ರಕ್ಷಣೆಯು ಸಹ ಒಳಗೊಳ್ಳುತ್ತದೆ. ತುಟಿಗಳು ತುಂಬಾ ಸೂಕ್ಷ್ಮ. ಹಾಗಾಗಿ ನೀವು ಅದನ್ನು ಮೃದುಗೊಳಿಸಲು ಎಕ್ಸ್‌ಫೋಲಿಯೇಟ್ ಮಾಡಬೇಕಾಗುತ್ತದೆ. ಇದಕ್ಕಾಗಿ ಜೇನು ತುಪ್ಪ ಮತ್ತು ಸಕ್ಕರೆಯನ್ನು ಬಳಸಿ. ಯಾವಾಗಲು ಮೊಯಿಶ್ಚರೈಸರ್ ಬಳಸುವ ಮೂಲಕ ತುಟಿ ಒಣಗದಂತೆ ತಡೆಯಿರಿ ಮತ್ತು ತುಟಿಯ ಮೇಲೆ ಒಡೆಯುವಿಕೆಯನ್ನು ತಡೆಗಟ್ಟಿ.

ಕೂದಲಿನ ಬುಡದ ರಕ್ಷಣೆ

ಕೂದಲಿನ ಬುಡದ ರಕ್ಷಣೆ

ಹುಡುಗಿಯರು ಅಂದವಾಗಿ ಕಾಣಬೇಕೆಂಡರೆ ಅವರಿಗೆ ಸುಂದರವಾದ ಕೂದಲು ಇರಬೇಕಲ್ಲವೆ? ಆದ್ದರಿಂದ ಕೂದಲಿನ ಬುಡದ ಕಡೆಗೆ ಗಮನ ಹರಿಸುವುದನ್ನು ಮರೆಯಬೇಡಿ. ಮೆದುವಾದ ಶಾಂಪೂವನ್ನು ಬಳಸಿಕೊಂಡು, ಪ್ರತಿದಿನ ಸ್ನಾನ ಮಾಡಿ. ಮನೆಯಲ್ಲಿಯೇ ಮಾಡಿದ ಪ್ಯಾಕ್‍ಗಳನ್ನು ಬಳಸಿ (ಮೊಟ್ಟೆ, ಬಾಳೆಹಣ್ಣಿನ ಪ್ಯಾಕ್ ಇತ್ಯಾದಿ) ಒಡೆದ ತುದಿಯನ್ನು ಕತ್ತರಿಸಿ. ಇದರಿಂದ ಕೂದಲು ಸುಂದರವಾಗಿ ಕಾಣುತ್ತದೆ.

English summary

Beauty Tips For Teenage Girls

Teenage is the time when lots of changes take place in a girl’s life. The body and mind of a teenage girl change in way that many of the girls get confused how to deal with nature’s gift. Here are some skin care tips for teenage gals to make them more attractive than others-
Story first published: Wednesday, April 8, 2015, 19:39 [IST]
X
Desktop Bottom Promotion