For Quick Alerts
ALLOW NOTIFICATIONS  
For Daily Alerts

ಡಬ್ಲ್ಯೂಐಎಫ್‌ಡಬ್ಲ್ಯೂ 2014 ಪರೊಮಿತಾ ಬ್ಯಾನರ್ಜಿ ಕಮಾಲ್

|

ಭಾರತೀಯ ಕೈಮಗ್ಗ, ನೇಯ್ಗೆ, ಬಣ್ಣಗಳನ್ನು ಆಚರಿಸುತ್ತಾ ಪರೊಮಿತಾ ಬ್ಯಾನರ್ಜಿ ವಿಲ್ಸಿ ಇಂಡಿಯಾ ಫ್ಯಾಶನ್ ವೀಕ್ 2014 ರಾಂಪ್‌ನ ಮೂರನೇ ದಿನದಂದು ಫ್ಯಾಶನ್ ಲೋಕದ ಹೊಸ ದೃಶ್ಯಾವಳಿಯನ್ನೇ ಕಣ್ಣಿಗೆ ಕಟ್ಟುವಂತೆ ಮಾಡಿದರು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಪ್ರತಿಮಾ ಪಾಂಡೆ ವಿನ್ಯಾಸದಲ್ಲಿ ಮಿಂಚಿದ ಡಬ್ಲ್ಯೂಐಎಫ್‌ಡಬ್ಲ್ಯೂ

ಖಾದಿ ಮತ್ತು ಹತ್ತಿಯಲ್ಲಿ ಬಣ್ಣ ಬಣ್ಣದ ಮುದ್ರಣಗಳು ವಿನ್ಯಾಸಗಳನ್ನು ಬಳಸಲಾಗಿದ್ದು ಧರಿಸಲು ಸುಲಭವಾಗುವಂತೆ ನೋಡಲು ಕಣ್ಮನಸೆಳೆಯವ ರೀತಿಯಲ್ಲಿ ಬಟ್ಟೆಗಳಿಗೆ ಹೊಸ ರೂಪವನ್ನು ಪರೊಮಿತಾ ನೀಡಿದ್ದಾರೆ.

ಪ್ರಿಂಟೆಡ್ ಶಾಲ್‌ಗಳು, ಟ್ರೆಂಚ್ ಕೋಟ್ಸ್, ಕುರ್ತಾ, ಜಾಕೆಟ್ಸ್, ಎಂಪಯರ್ ಲೈನ್ಸ್, ಪೈಜಾಮ ಹೀಗೆ ಬಟ್ಟೆಗಳ ವೈವಿಧ್ಯಮಯ ಪ್ರದರ್ಶನವೇ ಅಲ್ಲಿ ನಡೆದಿತ್ತು.

WIFW 2014 Day 3: Paromita Banerjee

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಡಬ್ಲ್ಯೂಐಎಫ್‌ಡಬ್ಲ್ಯೂನಲ್ಲಿ ಕಲ್ಲೋಲ್ ದತ್ತಾ ಫ್ಯಾಶನ್ ಝಲಕ್

ಬಟ್ಟೆಗಳನ್ನು ಈ ರೀತಿಯಾಗಿ ವೈವಿಧ್ಯಮಯವಾಗಿ ಪ್ರದರ್ಶಿಸಿರುವ ಪರೊಮಿತಾ ಹಿತಮಿತವಾದ ಬಣ್ಣಗಳನ್ನು ಸುಂದರ ವಿನ್ಯಾಸಗಳನ್ನು ತಮ್ಮ ಧಿರಿಸುಗಳಲ್ಲಿ ತೋರಿಸಿದ್ದಾರೆ.

ಮಿಡ್‌ನೈಟ್ ಬ್ಲೂ ಹಾಗೂ ಗ್ರೇ ಬಣ್ಣಗಳನ್ನು ಬಳಸಿರುವ ಪರೊಮಿತಾ ಹೆಚ್ಚು ಸಿಲ್ಕ್ ಬಟ್ಟೆಗಳಿಗೆ ಆದ್ಯತೆ ನೀಡಿರುವುದು ಕಂಡುಬರುತ್ತಿದೆ. ಕೆಲವೊಂದು ಧಿರಿಸುಗಳು ಹ್ಯಾಂಡ್ ಬ್ಲೋಕ್‌ನಂತೆ ಕಂಡುಬರುತ್ತಿದ್ದರೂ ನೈಸರ್ಗಿಕ ಅಜರ್ಕಾದಿಂದ ಧಿರಿಸುಗಳು ಶೋಭಾಯಮಾನವಾಗಿವೆ.

ಪುರುಷ ಹಾಗೂ ಮಹಿಳೆಯರಿಗೆ ಧರಿಸಲು ಯೋಗ್ಯವಾಗಿರುವಂತಹ ಶಾಲುಗಳೂ ಕೂಡ ಪ್ರದರ್ಶನದಲ್ಲಿ ಕಂಡುಬಂದಿದ್ದವು.

English summary

WIFW 2014 Day 3: Paromita Banerjee

Celebrating Indian handlooms, weaves and colours, Paromita presented a nomadic fashion streak of silhouettes on the Day 3 of ongoing Wills India Fashion Week 2014 ramp.
X
Desktop Bottom Promotion