For Quick Alerts
ALLOW NOTIFICATIONS  
For Daily Alerts

ಭಾರತೀಯ ಮಹಿಳೆಯರಿಗೆ ಟಾಪ್ 10 ಬ್ಯೂಟಿ ಸೀಕ್ರೆಟ್ಸ್!

By Poornima Hegde
|

ಇದನ್ನು ಯಾರಾದರೂ ಒಪ್ಪಿಕೊಳ್ಳಲೇ ಬೇಕು! ಭಾರತೀಯ ಮಹಿಳೆಯರು ಅತ್ಯಂತ ಸುಂದರ ಮಹಿಳೆಯರು. ಎಲ್ಲಾ ಮಹಿಳೆಯರೂ ಅಷ್ಟೇ, ಪ್ರಪಂಚದ ಯಾವುದೇ ಭಾಗದಲ್ಲಿರಲಿ, ಮಹಿಳೆಯರು ಯಾವಾಗಲೂ ಸುಂದರ ಮತ್ತು ಆರೋಗ್ಯಕರವಾಗಿಯೇ ಕಾಣಲು ಇಷ್ಟಪಡುತ್ತಾರೆ. ಅದರಲ್ಲೂ ಭಾರತದ ಮಹಿಳೆಯರ ಸೌಂದರ್ಯವಂತೂ ವಿಶೇಷವೇ!

ಭಾರತೀಯ ಸೌಂದರ್ಯ ವಗ್ಗೆ ಯೋಚಿಸಿದ್ದೀರೆ? ಉದ್ದ ಕೂದಲು ಮತ್ತು ಮಿನುಗುತ್ತಿರುವ ಸೂಕ್ಷ್ಮ ಚರ್ಮದ ಒಂದು ವಿನಮ್ರ, ಸಾಂಪ್ರದಾಯಿಕ ಮಹಿಳೆಯ ಚಿತ್ರವನ್ನು ಕಲ್ಪಿಸಿಕೊಂಡಾಗ ಮನಸ್ಸಿಗೆ ಏನನ್ನಿಸುತ್ತದೆ?ಹೇಗೆ ಭಾರತೀಯ ಮಹಿಳೆಯರು ಶತಮಾನಗಳಿಂದ ಈ ಚಿತ್ರವನ್ನೇ ಎಲ್ಲರ ಮನಸ್ಸಿನಲ್ಲಿ ಉಳಿಸಿದ್ದಾರೆ ಎಂದು ತಿಳಿಯಲು ಬಯಸುವಿರಾ? ಹಾಗಾದರೆ ಬನ್ನಿ, ಇಲ್ಲಿದೆ ಉತ್ತರ.

ಎಣ್ಣೆಯುಕ್ತ ತ್ವಚೆಗೆ ಇಲ್ಲಿದೆ 10 ಬೇಸಿಗೆ ಮೇಕಪ್‌ಗಳು

 ನೆಲ್ಲಿ/ಆಮ್ಲ ಎಣ್ಣೆ:

ನೆಲ್ಲಿ/ಆಮ್ಲ ಎಣ್ಣೆ:

ಆಮ್ಲವನ್ನು ಗೂಸ್ ಬೆರ್ರಿ ಎಂದು ಕೂಡ ಕರೆಯಲಾಗುತ್ತದೆ. ಈ ಹಣ್ಣಿನಿಂದ ತಯಾರಿಸಲಾಗುವ ತೈಲ ವಿಟಮಿನ್ ಸಿ ಅಂಶದ ಸಮೃದ್ಧ ಮೂಲವಾಗಿದೆ. ಇದು ಬಲವಾದ, ದಪ್ಪವಾಗಿರುವ ಮತ್ತು ಸುಂದರ ಕೂದಲನ್ನು ನೀಡುತ್ತದೆ. ಇದು ಅನೇಕ ಕೂದಲು ಮತ್ತು ನೆತ್ತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತೊಡೆದುಹಾಕಲು ಒಂದು ಉಪಯುಕ್ತ ಪರಿಹಾರ. ನೀವು ಉತ್ತಮ ಪರಿಣಾಮಕಾರಿ ಫಲಿತಾಂಶಕ್ಕಾಗಿ ದಿನವೂ ಈ ತೈಲವನ್ನು ಕೂದಲಿಗೆ ಅನ್ವಯಿಸಬಹುದು.

ಅರಿಶಿನ:

ಅರಿಶಿನ:

ಅರಶಿನ ಅನೇಕ ವರ್ಷಗಳ ಹಿಂದಿನಿಂದಲೂ ಚರ್ಮದ ಉರಿಯೂತ, ಚರ್ಮ ರೋಗಗಳಿಗೆ, ಸೋಂಕು ಅಥವಾ ತುರಿಕೆ ಚಿಕಿತ್ಸೆ ನೀಡಲು ಬಳಸಲಾಗುವ ಭಾರತದ ಒಂದು ಪ್ರಸಿದ್ಧ ಮಸಾಲೆ ಪದಾರ್ಥ. ಅರಿಶಿನ, ಚರ್ಮದ ಕಂದು ಕಲೆಯನ್ನು ತೆಗೆಯಲು, ಚರ್ಮಕ್ಕೆ ಹೊಳಪನ್ನು ನೀಡಲು ಭಾರತೀಯ ಹುಡುಗಿಯರು ಬಳಸಬಹುದಾದ ಇನ್ನೊಂದು ಅದ್ಭುತ ಸೌಂದರ್ಯ ಸಲಹೆಯಾಗಿದೆ. ಇದು ಕಡಿಮೆ ವರ್ಣದ್ರವ್ಯಗಳ ಮತ್ತು ಮುಖದ ಕೂದಲು ಬೆಳವಣಿಗೆಗೆಯನ್ನು ತಡೆಯಲು ಪರಿಣಾಮಕಾರಿ ಮನೆಮದ್ದು.

ಕೇಸರ / ಕೇಸರಿ:

ಕೇಸರ / ಕೇಸರಿ:

ಕೇಸರಿ, ಭಾರತೀಯ ಮಸಾಲೆಯಾಗಿದ್ದು ಕಾಶ್ಮೀರ ಕಣಿವೆಯಲ್ಲಿ ಬೆಳೆಯಲಾಗುತ್ತದೆ. ಈ ದುಬಾರಿ ಸೌಂದರ್ಯ ಘಟಕಾಂಶ ಒಣ ಚರ್ಮ ಮತ್ತು ಅನೇಕ ಚರ್ಮದ ಇತರ ಸಮಸ್ಯೆಗಳನ್ನು ಗುಣಪಡಿಸಲು ಸಹಾಯಕವಾಗಿದೆ. ಇದು ಚರ್ಮದ ಟೋನ್ ಸರಿಪಡಿಸಲು ಮತ್ತು ಹೊಳಪಿನ ಮೈಬಣ್ಣ ನೀಡುತ್ತದೆ.

ರೋಸ್ ವಾಟರ್:

ರೋಸ್ ವಾಟರ್:

ತಾಜಾ ಗುಲಾಬಿ ದಳಗಳಿಂದ ಗುಲಾಬಿ ನೀರನ್ನು ತಯಾರು ಮಾಡಲಾಗುತ್ತದೆ. ಇದು ತ್ವಚೆಗೆ ರಿಲಾಕ್ಸೆಂಟ್, ಟೋನರ್ ಮತ್ತು ಡಾರ್ಕ್ ಕಲೆ/ ವಲಯಗಳನ್ನು ಸ್ವಚ್ಛಗೊಳಿಸುತ್ತದೆ. ಇದು ಮುಖದ ತೈಲ ಮತ್ತು ಕೊಳೆಯನ್ನು ತೆಗೆಯಲು ಭಾರತೀಯ ಮಹಿಳೆಯರು ಅನೇಕ ಫೇಸ್ ಪ್ಯಾಕ್ ಗಳಲ್ಲಿ ಬಳಸುತ್ತಾರೆ.

ಚಂದನ:

ಚಂದನ:

ಚಂದನ, ಭಾರತೀಯ ಆಚರಣೆಗಳಲ್ಲಿ ಒಂದು ಧಾರ್ಮಿಕ ಮಹತ್ವವನ್ನು ಪಡೆದಿದೆ. ಇದು ಶತಮಾನಗಳಿಂದ ಸೌಂದರ್ಯ ಮತ್ತು ಔಷಧೀಯ ಉತ್ಪನ್ನಗಳಾಗಿ ಬಳಕೆಯಾಗುತ್ತಿದೆ. ಚಂದನದ ಪೇಸ್ಟ್ ಮತ್ತು ತೈಲ, ಭಾರತೀಯ ಮಹಿಳೆಯರು ಮತ್ತು ಪುರುಷರು ಎಲ್ಲರ ತ್ವಚೆಗೂ ಬಳಸಲಾಗುತ್ತದೆ. ಇದು ಕಲೆಗಳು , ಗುಳ್ಳೆಗಳು ಮತ್ತು ಮುಖದಲ್ಲಿನ ಕಪ್ಪುಕಲೆಗಳು ಮೊದಲಾದವನ್ನು ತೊಡೆದುಹಾಕಲು ಸಹಾಯಕಾರಿ.

ಶಿಕೇಕಾಯಿ:

ಶಿಕೇಕಾಯಿ:

ಇದನ್ನು ಆಯುರ್ವೇದದಲ್ಲಿ " ಕೂದಲ ಹಣ್ಣು" ಎಂದೇ ಕರೆಯಲಾಗುತ್ತದೆ. ಇದು ತಲೆ ಹೊಟ್ಟು ಮತ್ತು ದುರ್ಬಲ ಕೂದಲ ಬೇರುಗಳನ್ನು ಬಲಗೊಳಿಸುವಲ್ಲಿ ಒಂದು ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಮೊಸರು:

ಮೊಸರು:

ಇದು ಅನೇಕ ಸೌಂದರ್ಯ ಪ್ರಯೋಜನಗಳನ್ನು ಹೊಂದಿದೆ ಮತ್ತು ಭಾರತೀಯ ಮಹಿಳೆಯರು ವಿವಿಧ ಫೇಸ್ ಪ್ಯಾಕ್ ತಯಾರಿಸಲು ಬಳಸುತ್ತಾರೆ. ಜೀರ್ಣಕ್ರಿಯೆಗೆ ಮತ್ತು ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸಬಹುದಾದ ಮೊಸರನ್ನು ನಿಮ್ಮ ದಿನನಿತ್ಯದ ಆಹಾರದಲ್ಲಿ ಸೇವಿಸುವುದು ಒಳ್ಳೆಯದು.

ತುಟಿ ರಕ್ಷಣೆ:

ತುಟಿ ರಕ್ಷಣೆ:

ಭಾರತೀಯ ಮಹಿಳೆಯರು ಪರಿಪೂರ್ಣ ತುಟಿಗಳನ್ನು ಹೊಂದಿದ್ದಾರೆ! ಅವರು ವಿಶೇಷವಾಗಿ, ವಿಶೇಷ ಸಂದರ್ಭಗಳಲ್ಲಿ ಲಿಪ್ಸ್ಟಿಕ್ ಅನ್ವಯಿಸಲು ಇಷ್ಟಪಡುತ್ತಾರೆ.

ಬಿಂದಿ:

ಬಿಂದಿ:

ಯಾವುದೇ ಭಾರತೀಯ ಮೇಕಪ್ ಬಿಂದಿಯಿಲ್ಲದೆ ಸಂಪೂರ್ಣವಾಗುವುದೇ ಇಲ್ಲ! ಈ ಹಣೆಯ ಮಧ್ಯ ಭಾಗದಲ್ಲಿ ಒಂದು ಪ್ರಕಾಶಮಾನವಾದ ಕೆಂಪು ಬಣ್ಣದ ಚುಕ್ಕೆಯನ್ನು ಇಡುತ್ತಾರೆ. ಇವು ಅನೇಕ ಆಕಾರಗಳಲ್ಲಿ ಲಭ್ಯ ಮತ್ತು ಭಾರತೀಯ ಮೇಕಪ್ ಅಂತಿಮ ಸ್ಪರ್ಶವಾಗಿ ಬಿಂದಿಯನ್ನೇ ಬಳಸಲಾಗುತ್ತದೆ.

X
Desktop Bottom Promotion