For Quick Alerts
ALLOW NOTIFICATIONS  
For Daily Alerts

ಆಯಾಸಗೊಂಡ ಕಣ್ಣುಗಳ ತ್ವರಿತ ಮೇಕಪ್

By Manohar V
|

ಸರಿಯಾದ ನಿದ್ದೆಯನ್ನು ರಾತ್ರಿ ಮಾಡಿಲ್ಲವೇ? ನಿದ್ದೆ ಬಿಟ್ಟು ರಾತ್ರಿಯೆಲ್ಲಾ ಕೆಲಸ ಮಾಡುತ್ತಿದ್ದೀರಾ? ಇದರ ಪರಿಣಾಮ ಮರುದಿನ ಬೆಳಗ್ಗೆ ನಿಮಗುಂಟಾಗುತ್ತದೆ. ನಿಮಗುಂಟಾಗುವ ಆಯಾಸ ಮತ್ತು ಕಣ್ಣುಗಳು ಆಳಕ್ಕೆ ಇಳಿದಂತೆ ತೋರುವುದು ನಿಮ್ಮ ನಿದ್ರಾ ಹೀನತೆಯನ್ನು ಸರಿಯಾಗಿ ತೋರಿಸುತ್ತದೆ. ನಿಮಗೆ ಶೀತ, ಜ್ವರ, ಕೆಮ್ಮು ಉಂಟಾದಾಗ ಕೂಡ ಈ ಸಮಸ್ಯೆ ಎದುರಾಗುತ್ತದೆ. ದಿನ ಪೂರ್ತಿ ನಿಮ್ಮ ಕಣ್ಣುಗಳು ಆಯಾಸ ಮತ್ತು ಮಂಕಾದಂತೆ ತೋರುತ್ತದೆ.

ನಿಮ್ಮ ಇಡೀ ದಿನದ ಸಂಭ್ರಮವನ್ನು ಈ ಕಣ್ಣುಗಳು ಹಾಳುಮಾಡಿಬಿಡುತ್ತವೆ. ನೀವು ಉತ್ತಮವಾಗಿ ಡ್ರೆಸ್ ಮಾಡಿಕೊಂಡು ನಿಮ್ಮ ಮಂಕಾದ ಕಣ್ಣುಗಳನ್ನು ಕನ್ನಡಕದೊಳಗೆ ಹಿಡಿದಿಟ್ಟುಕೊಂಡಗಾಲೂ ನಿಮ್ಮ ಆಯಾಸ ಪರಿಹಾರವಾಗುವುದಿಲ್ಲ. ಆಯಾಸಗೊಂಡ ಮಂಕಾದ ಕಣ್ಣುಗಳು ನಿಮ್ಮನ್ನು ಕೆಳಮಟ್ಟಕ್ಕೆ ಇಳಿಸುತ್ತವೆ. ದಿನಪೂರ್ತಿ ಒಂದು ರೀತಿಯ ಸುಸ್ತು ನಿಮ್ಮನ್ನು ಆವರಿಸಿಕೊಳ್ಳುತ್ತದೆ. ಆದ್ದರಿಂದ ಈ ಕಣ್ಣುಗಳಿಗೆ ಜೀವಂತಿಕೆ ತರುವಂತಹ ಕೆಲವೊಂದು ಮೇಕಪ್‌ಗಳನ್ನು ಬೋಲ್ಡ್‌ಸ್ಕೈ ಇಂದು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದೆ. ಇದರತ್ತ ನೋಟ ಹರಿಸಿ.

Quick Fixes For Tired Eyes

ಐಲೈನರ್:
ಲೈಟ್ ಮೇಕಪ್ ಅನ್ನು ಮಾಡುವುದು ನಿಮ್ಮ ಕಣ್ಣುಗಳ ಆಯಾಸವನ್ನು ಮರೆಮಾಚಿ ಅದಕ್ಕೊಂದು ಜೀವಂತಿಕೆಯನ್ನು ನೀಡುತ್ತದೆ. ಹೆವಿ ಐ ಮೇಕಪ್‌ಗೆ ಲಕ್ಷ್ಯ ನೀಡದೆ ತಿಳಿಯಾದ ಕಣ್ಣಿನ ಮೇಕಪ್ ಅನ್ನು ಮಾಡಿ. ಸಪೂರ ಗೆರೆಯನ್ನು ಐಲೈನರ್‌ನೊಂದಿಗೆ ಎಳೆದು ಕರ್ಲ್ ಮಾಡಿದ ಐಲ್ಯಾಶಸ್ ಅನ್ನು ಕಣ್ಣಿಗೆ ಹಾಕಿ ಆಯಾಸಗೊಂಡ ಕಣ್ಣುಗಳಿಗೆ ಮರುಕಾಂತಿ ಕೊಡುತ್ತದೆ. ಮೇಲಿನ ಕಣ್ರೆಪ್ಪೆಯ ಭಾಗಕ್ಕೆ ಐಲೈನರ್ ಹಚ್ಚುವುದಕ್ಕೆ ಹೆಚ್ಚಿನ ಒತ್ತು ನೀಡಿ. ಐಶ್ಯಾಡೋವನ್ನು ಹಚ್ಚದಿರಿ ಇದು ಕಣ್ಣಿನ ಆಯಾಸವನ್ನು ಹೆಚ್ಚು ಎದ್ದುಕಾಣುವಂತೆ ಮಾಡುತ್ತದೆ. ಕಾಡಿಗೆಯನ್ನು ಕೂಡ ನೀವು ತೆಳುವಾಗಿ ಹಚ್ಚಿಕೊಳ್ಳಬಹುದು.

ಹೈಡ್ರೇಟಿಂಗ್ ಕ್ರೀಂ:
ಕಣ್ಣಿನ ಸುತ್ತಲಿರುವ ತ್ವಚೆ ಮೃದು ಮತ್ತು ಸೂಕ್ಷ್ಮವಾಗಿರುತ್ತದೆ. ಡೀಹೈಡ್ರೇಶನ್‌ನ ಕೊರತೆಯಿಂದ ಕಣ್ಣಿನ ಸುತ್ತಲಿನ ಕಪ್ಪು ಕಲೆಗಳು ಹೆಚ್ಚು ಎದ್ದುಗಾಣುತ್ತದೆ. ಅದಕ್ಕಾಗಿ ಮಾಯಿಶ್ಚರೈಸಿಂಗ್ ಕ್ರೀಂ ಅನ್ನು ಹಚ್ಚಿಕೊಳ್ಳಿ.

ಪೊಟೇಟೊ ಅಥವಾ ಸೌತೆಕಾಯಿ ತುಂಡುಗಳು:
ಮುಳ್ಳು ಸೌತೆಕಾಯಿಯನ್ನು ತುಂಡು ಮಾಡಿ ಕಣ್ಣಿನ ಸುತ್ತ ಇಟ್ಟುಕೊಳ್ಳುವುದರಿಂದ ಕೂಡ ಕಣ್ಣಿನ ಸುತ್ತಲಿನ ಕಪ್ಪುಕಲೆಗಳು ಮಾಯವಾಗಿ ಕಣ್ಣು ಸುಂದರಗೊಳ್ಳುತ್ತದೆ.ಇದರೊಂದಿಗೆ ಪೊಟೇಟೊವನ್ನು ನೀವು ಪ್ರಯತ್ನಿಸಬಹುದು ಇದು ಒಳಗೊಂಡಿರುವ ಎಂಜೀಮ್ ಕ್ಯಾಟಕೋಲ್ಸ್ ಕಣ್ಣಿನ ಆರೈಕೆಯನ್ನು ಮಾಡುತ್ತದೆ. ಹೆಚ್ಚಿದ ಪೊಟೇಟೊ ತುಂಡನ್ನು ತಂಪು ನೀರಿನಲ್ಲಿ ಮುಳುಗಿಸಿ ನಂತರ ಮುಚ್ಚಿದ ಕಣ್ಣಿನ ಸುತ್ತ ಇದನ್ನು 5-10 ನಿಮಿಷಗಳಷ್ಟು ಕಾಲ ಇರಿಸಿ.

ನಿಮ್ಮ ಹುಬ್ಬುಗಳನ್ನು ಶೇಪ್ ಮಾಡಿಕೊಳ್ಳಿ:
ನಿಮ್ಮ ಹುಬ್ಬುಗಳನ್ನು ಶೇಪ್ ಮಾಡಿಕೊಳ್ಳುವ ಮೂಲಕ ಕಣ್ಣಿಗೆ ಹೊಸ ಲುಕ್ ಅನ್ನು ನೀಡಬಹುದು. ಆಯಾಸಗೊಂಡ ಕಣ್ಣುಗಳಿಗೆ ಇದೊಂದು ಸುಲಭ ಪರಿಹಾರವಾಗಿದೆ.

ಕಾಡಿಗೆ:
ಕಣ್ಣಿಗೆ ಉಪಶಮನವನ್ನು ನೀಡುವ ಮತ್ತೊಂದು ಉತ್ತಮ ವಿಧಾನ ಕಾಡಿಗೆ ಹಚ್ಚಿಕೊಳ್ಳುವುದಾಗಿದೆ. ಕಾಡಿಗೆಯನ್ನು ಹಚ್ಚಿಕೊಂಡು ಕರ್ಲಿಂಗ್ ಐಲ್ಯಾಶ್ ಅನ್ನು ಹಚ್ಚಿ. ಇದು ಕಣ್ಣಿಗೆ ಸುಂದರತೆಯನ್ನು ನೀಡಿ ದೊಡ್ಡದಾಗಿ ಕಾಣುವಂತೆ ಮಾಡುತ್ತದೆ.

ಇವೆಲ್ಲವೂ ನಿಮ್ಮ ಆಯಾಸಗೊಂಡ ಕಣ್ಣುಗಳನ್ನು ಆರೈಕೆ ಮಾಡುವ ಕೆಲವೊಂದು ವಿಧಾನಗಳಾಗಿವೆ. ಒಬ್ಬ ವ್ಯಕ್ತಿಯ ಸೌಂದರ್ಯ ಕಣ್ಣುಗಳಲ್ಲಿ ಅಡಗಿರುವುದರಿಂದ ಅದರ ಆರೈಕೆಯನ್ನು ನಾವು ಉತ್ತಮ ರೀತಿಯಲ್ಲಿ ಮಾಡಬೇಕು.

English summary

Quick Fixes For Tired Eyes

Didn't have a proper sleep last night? Or you had worked too much late in the night to grab some sleep? Then the effect will be seen next morning. You will have tired and puffy eyes which will make you look sick and dull.
Story first published: Thursday, January 9, 2014, 9:11 [IST]
X
Desktop Bottom Promotion