For Quick Alerts
ALLOW NOTIFICATIONS  
For Daily Alerts

ಮುಖದ ಸೌಂದರ್ಯವನ್ನು ವೃದ್ಧಿಸುವ ಪರಿಣಾಮಕಾರಿ ವಿಧಾನಗಳು

|

ಹೆಂಗಳೆಯರಿಗೆ ತಮ್ಮ ಸೌಂದರ್ಯದ ಮೇಲೆ ಏನೋ ಒಂದು ವಿಶಿಷ್ಟ ಅಭಿಮಾನ. ತಾವು ಸುಂದರವಾಗಿ ಕಾಣಬೇಕು, ಮುಖದಲ್ಲಿ ಮೊಡವೆ ಕಲೆಗಳು ಇರಬಾರದು, ಕಣ್ಣ ಸುತ್ತ ಕಪ್ಪು ಇರಬಾರದು ಮುಂತಾಗಿ ತಮ್ಮ ಮುಖದ ಸೌಂದರ್ಯಕ್ಕೆ ಪ್ರಮುಖ ಆದ್ಯತೆಯನ್ನು ನೀಡುತ್ತಾರೆ.

ನೈಸರ್ಗಿಕವಾಗಿ ಮನೆಯಲ್ಲೇ ತಯಾರಿಸಬಹುದಾದ ಸೌಂದರ್ಯವರ್ಧಕಗಳಿಂದ ಹಿಡಿದು ದುಬಾರಿ ಮಾರುಕಟ್ಟೆಯ ಉತ್ಪನ್ನಗಳನ್ನು ಕೂಡ ನಾವು ಪ್ರಯತ್ನಿಸುತ್ತೇವೆ. ಆದರೆ ಇದು ಹೆಚ್ಚಿನ ಹೊಳಪನ್ನು ನಮಗೆ ನೀಡದಿದ್ದರೂ ನಮ್ಮ ಸೌಂದರ್ಯವನ್ನು ಎದ್ದುಗಾಣುವಂತೆ ಮಾಡುತ್ತದೆ. ಆದರೆ ನೈಸರ್ಗಿಕದಂತಹ ಪರಿಣಾಮಕಾರಿ ಪ್ರಯೋಜನವನ್ನು ಈ ಮಾರುಕಟ್ಟೆ ಉತ್ಪನ್ನಗಳು ಮಾಡುವುದಿಲ್ಲ ಎಂಬುದನ್ನು ಕೂಡ ನೀವು ಗಮನದಲ್ಲಿಟ್ಟುಕೊಳ್ಳಬೇಕು. ಹಾಗಿದ್ದರೆ ಇಂದಿನ ಲೇಖನದಲ್ಲಿ ನೈಸರ್ಗಿಕ ವಿಧಾನಗಳ ಮೂಲಕ ನಿಮ್ಮ ಮುಖದ ಸೌಂದರ್ಯವನ್ನು ವೃದ್ಧಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

Natural facial for beautiful face

ಅರಶಿನ
ಅರಶಿನವು ಸೌಂದರ್ಯಕ್ಕೆ ಹೆಚ್ಚಿನ ಮಹತ್ವವಾದ ಕೊಡುಗೆಯನ್ನು ನೀಡಿದೆ. ಮುಖದಲ್ಲಿ ಮೂಡುವ ಮೊಡವೆಗಳು, ಕಲೆಗಳ ನಿವಾರಣೆಗೆ ಅರಶಿನವು ಉಪಯುಕ್ತವಾಗಿದ್ದು, ಕೆನೆಹಾಲಿನ ಜೊತೆಗೆ ಅರಶಿನವನ್ನು ಹಚ್ಚುವುದರಿಂದ ಮುಖವು ಕಾಂತಿಯುತವಾಗಿ ಕಾಣುತ್ತದೆ.
ಅರಶಿನ ಅಥವಾ ಅರಶಿನ ಕೊಂಬನ್ನು ತೇಯ್ದು ಮುಖಕ್ಕೆ ಲೇಪಿಸಿ ಅರ್ಧ ಗಂಟೆಯ ನಂತರ ಇದನ್ನು ತೊಳೆದುಕೊಳ್ಳಿ. ಇದು ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸಿ ನಿಮ್ಮ ಸೌಂದರ್ಯವನ್ನು ವೃದ್ಧಿಸುತ್ತದೆ. ಅರಶಿನವನ್ನು ಅರೆದು ಹಾಲಿನ ಕೆನೆಯನ್ನು ಮಿಶ್ರ ಮಾಡಿ ಈ ಮಿಶ್ರಣವನ್ನು ಕೂಡ ನೀವು ಮುಖಕ್ಕೆ ಲೇಪಿಸಬಹುದು. ಇದರಿಂದ ನಿಮ್ಮ ಎಣ್ಣೆಯುಕ್ತ ಮುಖವು ಶುಭ್ರಗೊಳ್ಳುತ್ತದೆ.

ಭಾರತೀಯ ಮಹಿಳೆಯರಿಗೆ ಟಾಪ್ 10 ಬ್ಯೂಟಿ ಸೀಕ್ರೆಟ್ಸ್!

ಮೊಸರು ಮತ್ತು ಲಿಂಬೆ
ಅರ್ಧ ಕಪ್‌ನಷ್ಟು ಮೊಸರಿಗೆ ಎರಡು ಚಮಚದಷ್ಟು ಲಿಂಬೆ ರಸವನ್ನು ಹಿಂಡಿಕೊಂಡು ಇದನ್ನು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ನಿಮ್ಮ ಮುಖಕ್ಕೆ ಈ ಪೇಸ್ಟ್ ಅನ್ನು ಹಚ್ಚಿಕೊಳ್ಳಿ ಸರಿಯಾಗಿ ಒಂದು ಗಂಟೆಯ ನಂತರ ಮುಖವನ್ನು ತಣ್ಣೀರಿನಿಂದ ತೊಳೆದುಕೊಳ್ಳಿ.

ಕಡಲೆಹಿಟ್ಟು
ನಿಮ್ಮ ಮುಖದ ಸೌಂದರ್ಯವನ್ನು ವೃದ್ಧಿಸುವ ಕಡಲೆ ಹಿಟ್ಟು ಸಾಬೂನಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿದೆ. ನೀವು ಸ್ನಾನ ಮಾಡುವ ಮುಂಚೆ ಕಡಲೆ ಹಿಟ್ಟಿನಿಂದ ನುಣ್ಣನೆ ಪೇಸ್ಟ್ ಅನ್ನು ತಯಾರಿಸಿಕೊಳ್ಳಿ ಮತ್ತು ನಿಮ್ಮ ಮುಖಕ್ಕೆ ಲೇಪಿಸಿಕೊಳ್ಳಿ. ಇದನ್ನು ನೀವು ಪ್ರತಿದಿನ ಕೂಡ ಮಾಡಬಹುದು. ಅಲ್ಲದೆ ಕಡಲೆ ಹಿಟ್ಟಿಗೆ ಹಾಲು ಹಾಕಿ ಮಿಶ್ರಣ ಮಾಡಿ ಅದನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ಮುಖ ತೊಳೆದರೆ ಉತ್ತಮವಾದ ಫಲಿತಾಂಶವನ್ನು ಕಾಣಬಹುದು.

ಬಾಳೆಹಣ್ಣು ಮತ್ತು ಜೇನು
ದಿನಕ್ಕೆ ಒಂದು ಬಾಳೆಹಣ್ಣು ತಿನ್ನುವುದು ಒಳ್ಳೆಯದು. ಏಕೆಂದರೆ ಇದರಲ್ಲಿ ಮ್ಯಾಗ್ನಿಷಿಯಂ ಮತ್ತು ಪೊಟ್ಯಾಷಿಯಂ ಇರುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗಲು ಸಹಾಯ ಮಾಡುತ್ತದೆ. ಇದರಿಂದ ತ್ವಚೆ ಹೊಳಪು ಹೆಚ್ಚುವುದು. ಬಾಳೆಹಣ್ಣು ಕೂಡ ನಿಮ್ಮ ಮುಖಕ್ಕೆ ಒಂದು ಒಳ್ಳೆಯ ಫೇಶಿಯಲ್‌ನಂತೆ ಕೆಲಸ ಮಾಡುತ್ತದೆ. ಬಾಳೆಹಣ್ಣನ್ನು ಜೇನಿನೊಂದಿಗೆ ಚೆನ್ನಾಗಿ ಕಿವುಚಿ ನುಣ್ಣನೆ ಪೇಸ್ಟ್ ಅನ್ನು ತಯಾರಿಸಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ನಂತರ ತೊಳೆದುಕೊಳ್ಳಿ. ನಿಮ್ಮ ಮುಖದ ಕಾಂತಿ ವೃದ್ದಿಸುವುದರಲ್ಲಿ ಸಂದೇಹವೇ ಇಲ್ಲ.

ಮುಲ್ತಾನಿ ಮಿಟ್ಟಿ

ಮುಲ್ತಾನಿ ಮಿಟ್ಟಿಯನ್ನು ನೀರಿನಲ್ಲಿ ಕಲಸಿಕೊಂಡು ನುಣ್ಣಗೆ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿ ಒಂದು ಗಂಟೆಯ ನಂತರ ಮುಖವನ್ನು ತೊಳೆದುಕೊಳ್ಳಿ. ಈ ವಿಧಾನವನ್ನು ವಾರಕ್ಕೊಮ್ಮೆ ಮಾಡಿ ನಿಮಗೆ ಅದ್ಭುತ ಫಲಿತಾಂಶ ದೊರೆಯುವುದು ಖಂಡಿತ.
ಮುಲ್ತಾನಿ ಮಿಟ್ಟಿ ನಿಮ್ಮ ತ್ವಚೆಯ ಚರ್ಮದ ರಚನೆಯನ್ನು ಸುಧಾರಿಸುತ್ತದೆ. ಇದು ಅನಗತ್ಯ ತೇಪೆಗಳನ್ನು ತೆಗೆದು ಚರ್ಮವನ್ನು ಮೃದುವಾಗಿಸುತ್ತದೆ. ಇದರಿಂದ ನಿಮ್ಮ ತ್ವಚೆಯ ಚರ್ಮ ತುಂಬಾ ಸುಸಂಗತ ಮತ್ತು ಬಿಳಿಯಾಗುತ್ತದೆ. ಚರ್ಮದ ಕಾಂತಿ ಹಾಗೂ ರಚನೆ, ಅದರ ಆರೋಗ್ಯಕ್ಕಾಗಿ ಮುಲ್ತಾನಿ ಮಿಟ್ಟಿಯನ್ನು ನಿಯಮಿತವಾಗಿ ಬಳಸಬೇಕು.

ಮುಲ್ತಾನಿ ಮಿಟ್ಟಿಯನ್ನು ಒಳಗೊಂಡಿರುವ ಹಲವಾರು ರೀತಿಯ ಫೇಸ್ ವಾಶ್ ಮತ್ತು ಸೋಪುಗಳು ಮೈಬಣ್ಣ ಹೆಚ್ಚಿಸುತ್ತದೆ. ಮುಲ್ತಾನಿ ಮಿಟ್ಟಿ ವರ್ಣದ್ರವ್ಯ ಕಡಿಮೆ ಮಾಡಿ ಚರ್ಮವನ್ನು ಶುದ್ಧ ಹಾಗೂ ಸ್ಪಷ್ಟವಾಗಿಡುತ್ತದೆ. ದದ್ದು ಹಾಗೂ ಉರಿಯೂತದಿಂದ ಉಂಟಾಗಿರುವ ಕೆಂಪುಕಲೆಯನ್ನು ಮುಲ್ತಾನಿ ಮಿಟ್ಟಿ ಕಡಿಮೆ ಮಾಡುತ್ತದೆ. ಇದೆಲ್ಲವೂ ಮುಲ್ತಾನಿ ಮಿಟ್ಟಿಯ ಕೆಲವೊಂದು ಅತೀ ಮುಖ್ಯ ಲಾಭಗಳು.

ನಿಂಬೆ ಮತ್ತು ಕಿತ್ತಳೆ ಸಿಪ್ಪೆ

ಇವುಗಳಲ್ಲಿನ ಸಿಟ್ರಸ್ ಅಂಶ ತ್ವಚೆಯ ಕಾಂತಿಗೆ ಹೆಚ್ಚು ಉಪಯುಕ್ತ. ಸ್ಕ್ರಬ್ ನಂತೆ ಕೆಲಸ ನಿರ್ವಹಿಸುವ ಈ ಸಿಪ್ಪೆಗಳನ್ನು ಬೇಕಾದಾಗ ಬಳಸಿಕೊಳ್ಳಬಹುದು. ಈ ಸಿಪ್ಪೆಗಳನ್ನು ಒಣಗಿಸಿ ಪುಡಿ ಮಾಡಿಕೊಂಡು ಬೇಕೆಂದಾಗ ಹಾಲು ಮತ್ತು ಸ್ವಲ್ಪ ಓಟ್ ಪೌಡರ್ ನೊಂದಿಗೆ ಬೆರೆಸಿಕೊಂಡು ಮುಖಕ್ಕೆ ಲೇಪಿಸಿಕೊಳ್ಳಬೇಕು. ಇದು ಸೌಂದರ್ಯಕ್ಕಷ್ಟೇ ಅಲ್ಲ ಔಷಧೀಯ ಗುಣಗಳೂ ಇದರಲ್ಲಿರುವ ಕಾರಣ ಇದರ ಬಳಕೆಯಿಂದ ದ್ವಿಗುಣ ಲಾಭ ಪಡೆಯಬಹುದು.

ಈ ವಿಧಾನಗಳಲ್ಲಿ ಯಾವುದಾದರೂ ಒಂದನ್ನಾದರೂ ವಾರಕ್ಕೊಮ್ಮೆ ನೀವು ಅನುಸರಿಸಿದಲ್ಲಿ ನಿಮಗೆ ಅದ್ಭುತ ಫಲಿತಾಂಶ ಖಾತ್ರಿ. ನಿಮ್ಮ ಸೌಂದರ್ಯದ ವೃದ್ಧಿಗೊಳಿಸುವಿಕೆ ನಿಮ್ಮ ಕೈಯಲ್ಲೇ ಇರುವುದರಿಂದ ಇದರಲ್ಲಿ ಯಾವುದೇ ರಾಜಿಯನ್ನು ನೀವು ಮಾಡಿಕೊಳ್ಳಬೇಡಿ. ನಿಮ್ಮಲ್ಲಿ ಸಹಜ ಸೌಂದರ್ಯವನ್ನು ವೃದ್ಧಿಸುವ ಈ ಪರಿಣಾಮಕಾರಿ ವಿಧಾನಗಳು ನಿಮಗೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ.

English summary

Natural facial for beautiful face

Beauty is considered as very important ornament of women. By using natural products we can maintain our face beauty without any harm. Some homely beauty remedies mentioned here can make magic on your face. This is best for ever.
X
Desktop Bottom Promotion