For Quick Alerts
ALLOW NOTIFICATIONS  
For Daily Alerts

ಮದುಮಗಳ ಅಂದದ ಕಣ್ಣಿನ ಚೆಂದ ಹೆಚ್ಚಿಸಲು ಸೂಕ್ತ ಸಲಹೆಗಳು

By Super
|

ಮದುವೆ ಎಂದ ಕೂಡಲೇ ಮದುಮಗಳ ಕೆನ್ನೆ ರಂಗೇರುತ್ತದೆ. ಅದು ಆಕೆಯ ಜೀವನದ ಅತ್ಯಂತ ಸಂತೋಷದ ಘಳಿಗೆ. ತಾನು ಓರ್ವರ ಪತ್ನಿಯಾಗುತ್ತಿದ್ದೇನೆ, ತನ್ನ ಕನಸಿನ ರಾಜಕುಮಾರನೊಂದಿಗೆ ಮುಂದಿನ ಜೀವನ ಕಳೆಯಲಿದ್ದೇನೆ ಎಂಬ ಸಂತೋಷದಲ್ಲಿ ಮನ ಪ್ರಫುಲ್ಲವಾಗಿರುತ್ತದೆ. ಕಣ್ಣುಗಳು ಹೊಳೆಯುತ್ತಿರುತ್ತವೆ.

ತನ್ನ ಜೀವನದ ಅತ್ಯಂತ ಪ್ರಮುಖ ದಿನದಲ್ಲಿ ತಾನು ಅತ್ಯಂತ ಸುಂದರಳಾಗಿ ಕಾಣಿಸಿಕೊಳ್ಳಬೇಕೆಂಬುದು ಪ್ರತಿ ವಧುವಿನ ಕನಸಾಗಿರುತ್ತದೆ. ಇದಕ್ಕಾಗಿ ಹಲವು ನುರಿತ ಹಾಗೂ ವೃತ್ತಿನಿರತರು ಲಭ್ಯರಿದ್ದಾರೆ. ಆದರೆ ಕೆಲವೊಮ್ಮೆ ಮುಖದ ಮೇಲಿನ ಬಣ್ಣಗಳು ಎಷ್ಟೊಂದು ಪ್ರಖರವಾಗಿರುತ್ತವೆ ಎಂದರೆ ಮುಖದ ನೈಜ ಹೊಳಪೇ ಕಾಣೆಯಾಗುತ್ತದೆ. ವೈನ್ ಬಳಸಿ ಸೌಂದರ್ಯ ಹೆಚ್ಚಿಸಿಕೊಳ್ಳಿ

ಒಂದು ವೇಳೆ ವಧು ಬ್ಯೂಟಿ ಪಾರ್ಲರಿನಲ್ಲಿ ಅಲಂಕೃತಳಾಗಬಯಸಿದರೆ ಒಳ್ಳೆಯದೇ ಆದರೆ ಅದಕ್ಕಾಗಿ ಅವರು ನೀಡುವ ಮೊತ್ತದ ಬಿಲ್ ಮಾತ್ರ ತುಂಬಾ ಭಾರಿಯಾಗಿರುತ್ತದೆ. ಒಂದು ವೇಳೆ ವಧು ತನ್ನ ಮನೆಯಲ್ಲಿಯೇ ಸ್ವತಃ ಅಲಂಕೃತಳಾಗಬಯಸಿದರೆ ಅದಕ್ಕೂ ಹಲವು ವಿಧಾನಗಳಿವೆ. ಅದರಲ್ಲೂ ಕಣ್ಣಿನ ಅಲಂಕಾರ ತುಂಬಾ ಸೂಕ್ಷ್ಮವಾಗಿದ್ದು ತುಂಬಾ ನಾಜೂಕಿನಿಂದ ನೆರವೇರಿಸಬೇಕಾಗುತ್ತದೆ.

ನಿಮ್ಮ ಕಣ್ಣಿನ ರಕ್ಷಣೆಗೆ ಹೆಚ್ಚಿನ ಕಾಳಜಿ ವಹಿಸುವ ಹಾಗೂ ಸೂಕ್ತ ಬಣ್ಣ ಮತ್ತು ಪ್ರಸಾದನಗಳನ್ನು ಉಪಯೋಗಿಸುವ ಮೂಲಕ ವೃತ್ತಿನಿರತರು ನೀಡುವ ಸೌಂದರ್ಯಕ್ಕಿಂತಲೂ ಮಿಗಿಲಾದ ಸ್ವಾಭಾವಿಕ ಸೌಂದರ್ಯವನ್ನು ನೀವೇ ನಿಮ್ಮ ಕೈಯಾರೆ ಪಡೆದುಕೊಳ್ಳಬಹುದು. ಅದಕ್ಕಾಗಿ ಕೆಲವು ಸಲಹೆಗಳು ಹೀಗಿವೆ: ತ್ವಚೆ ಹಾಗೂ ಕೂದಲನ್ನು ಮಳೆಯಿ೦ದ ರಕ್ಷಿಸಿಕೊಳ್ಳುವುದು ಹೇಗೆ?

ಮೊದಲು ಮರೆಮಾಚುವ ಮೇಕಪ್ (Concealer)ನಿಂದ ಪ್ರಾರಂಭಗೊಳಿಸಿ

ಕಣ್ಣಿನ ಮೇಕಪ್ ನಲ್ಲಿ ಮರೆಮಾಚುವ ಮೇಕಪ್ ತುಂಬಾ ಪ್ರಮುಖವಾಗಿದೆ. ಇದು ಕಣ್ಣಿನ ರೆಪ್ಪೆ ಮತ್ತು ಸುತ್ತಲಿನ ಚರ್ಮದ ಮೇಲೆ ಮೊದಲು ಕುಳಿತುಕೊಳ್ಳುವ ಪದರವಾಗಿದ್ದು ಚರ್ಮವನ್ನು ಹಾನಿಗೊಳಿಸುವಂತಿರ ಬಾರದು. ಮೊದಲು ನಿಮ್ಮ ದೇಹದ ಇತರ ಭಾಗದಲ್ಲಿ ಸ್ವಲ್ಪ ಹಚ್ಚಿಕೊಂಡು ಯಾವುದೇ ಅಲರ್ಜಿ ಇಲ್ಲವೆಂದು ಖಚಿತಪಡಿಸಿದ ಬಳಿಕವೇ ಕಣ್ಣುಗಳಿಗೆ ಹಚ್ಚಬೇಕು. ಮೊದಲು ಕಣುರೆಪ್ಪೆಗಳಿಂದ ಪ್ರಾರಂಭಗೊಳಿಸಿ ಬಳಿಕ ಇತರೆಡೆ ಹರಡಿಸಿ. ಇದು ಹುಬ್ಬುಗಳವರೆಗೂ ಮುಂದುವರೆಯಲಿ. ಈ ಪದರ ಎಲ್ಲಾ ಕಡೆ ತೆಳುವಾಗಿ, ಏಕಪ್ರಕಾರವಾಗಿರುವುದು ಅಗತ್ಯ. ಕಣ್ಣುಗಳ ಕೆಳಗಿನ ಕಪ್ಪುಭಾಗವನ್ನು ಸಹಾ ಇದು ಮರೆಮಾಚಬೇಕು, ಅಷ್ಟು ಮಾತ್ರ ಹಚ್ಚಿರಿ. ಇದು ಮುಂದಿನ ಮೇಕಪ್ ಗೆ ಸುದೃಢವಾದ ಅಡಿಪಾಯವನ್ನು ನೀಡುತ್ತದೆ.

ಬಳಿಕ ಕೇಂದ್ರಭಾಗದಲ್ಲಿ ಐ ಷಾಡೋ ಹಚ್ಚಿರಿ
ಬಳಿಕ ಬೆಳ್ಳಿಯ ಬಣ್ಣದ ಅಥವಾ ಇತರ ಯಾವುದೇ ಹೊಳೆಯುವ ಹಾಗೂ ಗಾಢವಲ್ಲದ ಬಣ್ಣದ ಐ ಷಾಡೋವನ್ನು ಕಣ್ಣುರೆಪ್ಪೆಗಳ ಮೇಲೆ ಹಾಗೂ ಕೊಂಚ ಮಾತ್ರ ಮೇಲೆ ಮತ್ತು ಕೆಳಭಾಗ ಆವರಿಸುವಂತೆ ಹಚ್ಚಿರಿ. ಗಾಢ ಬಣ್ಣಗಳನ್ನು ಹಚ್ಚಬೇಡಿರಿ. ಇದರಿಂದ ನಿಮ್ಮ ಕಣ್ಣುಗಳು ಮುಖದ ಪ್ರಮುಖ ಆಕರ್ಷಣೆಯಾಗಿ ಕಾಣಲ್ಪಡುತ್ತದೆ. ಇದಕ್ಕಾಗಿ ಉತ್ತಮ ಗುಣಮಟ್ಟದ ಐ ಷಾಡೋವನ್ನೇ ಉಪಯೋಗಿಸಿರಿ.

ಈಗ ಗಾಢ ಬಣ್ಣದ ಅಂಚು ನೀಡಿರಿ
ಪ್ರಖರವಾದ ಐ ಷಾಡೋ ಇನ್ನಷ್ಟು ಪ್ರಖರವಾಗಿ ಕಾಣಲು ಇದರ ಪಕ್ಕ ಕೊಂಚ ಗಾಢ ಬಣ್ಣದ ಲೇಪನವನ್ನು ಹಚ್ಚಿ. ಇದಕ್ಕೆ ಗಾಢ ಕೆಂಪು, ಗಾಢ ಹಸಿರು ಅಥವಾ ಗಾಢ ಕಂದು ಬಣ್ಣಗಳು ಸೂಕ್ತ. ಈ ಪದರ ಒಮ್ಮೆಲೇ ಪ್ರಾರಂಭವಾಗುವಂತಿರಬಾರದು, ಪ್ರಖರ ಬಣ್ಣ ಸಾವಕಾಶವಾಗಿ ಮಿಳಿತವಾದಂತಿರಬೇಕು. ಇದು ಒಂದು ರೀತಿಯ ಹೊಗೆಯಂತಹಾ ವಿಶಿಷ್ಟ ಮೆರುಗನ್ನು ನೀಡುತ್ತದೆ.

ಬಳಿಕ ಲೈನರ್ ಹಚ್ಚಿ
ಈಗ ಕಣ್ಣುಗಳ ಮೇಲಿನ ಮತ್ತು ಕೆಳರೆಪ್ಪೆಗಳ ಅಂಚಿಗೆ ಲೈನರ್ ಅಥವಾ ಕಾಡಿಗೆ ಹಚ್ಚಿ. ಇದು ಕಪ್ಪು ಅಥವಾ ಗಾಢ ಕಂದು ಅಥವಾ ಗಾಢ ಹಸಿರು ಬಣ್ಣದ್ದಾಗಿರಲಿ.

ಈಗ ಮಸ್ಕಾರಾದಿಂದ ಕಣ್ಣರೆಪ್ಪೆಗಳ ಕೂದಲಿಗೆ ಮೆರುಗು ನೀಡಿ
ಲೈನರ್ ಹಚ್ಚಿಯಾದ ಬಳಿಕ ಉತ್ತಮ ಗುಣಮಟ್ಟದ ಮಸ್ಕಾರಾ ದಿಂದ ಕಣ್ಣುರೆಪ್ಪೆಗಳ ಕೂದಲುಗಳಿಗೆ ಹಚ್ಚಿ. ಮೊದಲು ಮೇಲಿನ ರೆಪ್ಪೆಗಳ ಕೂದಲುಗಳ ಮೇಲುಭಾಗವನ್ನು ಮಸ್ಕಾರಾ ಬ್ರಶ್ ಅನ್ನು ತಿರುಗಿಸುತ್ತಾ ಹಚ್ಚಿ. ಬಳಿಕ ಕೆಳಭಾಗಕ್ಕೆ ಮಸ್ಕಾರಾ ಬ್ರಶ್ ಅನ್ನು ವಿರುದ್ಧ ದಿಕ್ಕಿನಲ್ಲಿ ತಿರುಗಿಸುತ್ತಾ ಹಚ್ಚಿ. ಬಳಿಕ ಕೆಳರೆಪ್ಪೆಗಳ ಕೂದಲುಗಳಿಗೂ ಹಚ್ಚಿ. ನೆನಪಿರಲಿ, ಈ ಭಾಗ ತುಂಬಾ ತುಂಬಾ ಸೂಕ್ಷ್ಮವಾಗಿದೆ. ಮಸ್ಕಾರಾವನ್ನು ಕನಿಷ್ಟ ಎರಡರಿಂದ ಮೂರು ಬಾರಿ ಹಚ್ಚುವುದರಿಂದ ಯಾವುದಾದರೂ ಭಾಗ ಬಿಟ್ಟುಹೋಗಿದ್ದುದು ಪೂರ್ಣವಾದಂತಾಗುತ್ತದೆ.
ಮೇಕಪ್ ಪೂರ್‍ಣವಾದ ಬಳಿಕ ಕಣ್ಣುಗಳನ್ನು ಸಡಿಲವಾಗಿ ಮುಚ್ಚಿಕೊಂಡು ಕೊಂಚಕಾಲ ವಿಶ್ರಾಂತಿ ಪಡೆಯಿರಿ. ಬಳಿಕ ಪಟಪಟನೇ ಕಣ್ಣು ಬಡಿಯಬೇಡಿ, ಕೊಂಚ ತುರಿಕೆಯಾದರೂ ಉಜ್ಜಿಕೊಳ್ಳಲು ಸುತಾರಾಂ ಹೋಗಬೇಡಿ. ಒಂದು ವೇಳೆ ಸ್ವಲ್ಪ ಕೈತಾಕಿದರೂ ಇಷ್ಟು ಹೊತ್ತಿನ ಶ್ರಮವೆಲ್ಲಾ ವ್ಯರ್ಥವಾಗುತ್ತದೆ.

ನೀರು ಚಿಮುಕಿಸುವುದು ಮಾಡಬೇಡಿ ಅಥವಾ ವೇಗವಾಗಿ ಬೀಸುತ್ತಿರುವ ಫ್ಯಾನ್‌ಗೆ ಎದುರಾಗಿ ಕುಳಿತುಕೊಳ್ಳಬೇಡಿ. ಏಕೆಂದರೆ ಮೇಕಪ್ ನ ನುಣುಪಾದ ಪುಡಿ ಕಣ್ಣುಗಳ ಒಳಗೆ ನುಸುಳಬಹುದು. ಇನ್ನೊಂದು ವಿಷಯ, ಮದುವೆಯ ಧಾರೆಯ ಸಮಯಕ್ಕಿಂತಲೂ ಒಂದು ಘಂಟೆ ಮೊದಲೇ ಸಿದ್ಧರಾಗಿ. ಇದರಿಂದ ನಿಮಗೆ ಮಾನಸಿಕವಾಗಿ ಸಿದ್ಧರಾಗಲೂ, ವಧುವಿನ ಅಲಂಕಾರದೊಡನೆ ಭಾರೀ ತೂಕದ ವಸ್ತ್ರಗಳ ಜೊತೆ ಹೊಂದಿಕೊಳ್ಳಲೂ ಸಾಧ್ಯವಾಗುತ್ತದೆ.

English summary

Eye Makeup Tips For The Wedding Day

Wedding is the bride’s day! It is that day when bride wants to look amazingly beautiful and wishes to have all eyes on her. Makeup plays an important role for the bride to look beautiful. Wedding makeup is pretty heavy, or that is what the big fat Indian weddings claim.
X
Desktop Bottom Promotion