For Quick Alerts
ALLOW NOTIFICATIONS  
For Daily Alerts

ಹುಡುಗಿಯರು ಕನ್ನಡಕ ಧರಿಸುವಾಗ ಮಾಡಬೇಕಾದ ಕಣ್ಣಿನ ಮೇಕಪ್

|

ದೃಷ್ಟಿದೋಷವಿರುವವರು ಮಾತ್ರ ಕನ್ನಡಕ ಧರಿಸುವಂತಹ ಕಾಲ ಹೀಗಿಲ್ಲ. ಈಗ ಏನಿದ್ದರೂ ಫ್ಯಾಶನ್ ಕಾಲ. ಪ್ರತಿಯೊಂದರಲ್ಲೂ ಫ್ಯಾಶನ್ ಮಾಡಲು ಹೊರಟಿರುವ ಯುವ ಸಮೂಹಕ್ಕಾಗಿಯೇ ವಿವಿಧ ರೀತಿಯ ಕನ್ನಡಕಗಳು ಬರುತ್ತಿವೆ.

ಇದರ ಫ್ರೇಮ್ ಗಳು ತುಂಬಾ ಚಿಕ್, ಗ್ಲ್ಯಾಮರಸ್ ಮತ್ತು ಬೋಲ್ಡ್ ಆಗಿರುತ್ತದೆ. ಇದರ ಪರಿಣಾಮವೇ ಕನ್ನಡಕಗಳಿಗಾಗಿ ಕಣ್ಣಿನ ಮೇಕಪ್ ಕೂಡ ಪರಿಗಣಿಸಬೇಕಾದ ಪ್ರಾಮುಖ್ಯ ಅಂಶ.

ನಿಮ್ಮ ದೃಷ್ಟಿಯನ್ನು ಜತೆಯಾಗಿ ತರದಿರಲು ನೀವು ನಿರ್ಧರಿಸಿದ್ದರೆ ಅಥವಾ ಇದನ್ನು ಜತೆಯಾಗಿರಿಸಲು ನಿಮಗೆ ಅಲಸ್ಯವಾಗಿರಬಹುದು. ಆದರೆ ಕಣ್ಣನ್ನು ಸುಂದರಗೊಳಿಸಲು ಯಾರು ಕೂಡ ಮರೆಯಬಾರದು. ಇದು ಸೌಂದರ್ಯದ ಪ್ರಮುಖ ಅಂಗವಾಗಿದೆ.

Eye makeup tips for girls with glasses

ರೆಡ್ ಲಿಪ್‌ಸ್ಟಿಕ್ ಹಚ್ಚುವವರು ಪಾಲಿಸಲೇಬೇಕಾದ ನಿಯಮಗಳು

ಕೆಳಗೆ ಪಟ್ಟಿ ಮಾಡಲಾಗಿರುವ ಕೆಲವೊಂದು ಟಿಪ್ಸ್ ಮತ್ತು ತಂತ್ರಗಳು ಕನ್ನಡಕ ಧರಿಸುವಾಗ ಮಾಡಬೇಕಾದ ಸರಳ ಕಣ್ಣಿನ ಮೇಕಪ್ ನಿಮ್ಮನ್ನು ಮತ್ತಷ್ಟು ಸುಂದರವಾಗಿ ಕಾಣುವಂತೆ ಮಾಡಬಹುದು.

1. ಅತ್ಯಂತ ಮುಖ್ಯ ತಂತ್ರದೊಂದಿಗೆ ಆರಂಭಿಸಲು ಬಯಸುವುದಾದರೆ ನಿಮ್ಮ ಹುಬ್ಬುಗಳನ್ನು ಯಾವಾಗಲೂ ಅಂದ ಮಾಡಿಕೊಳ್ಳಿ. ನಿಮ್ಮ ಹುಬ್ಬುಗಳೊಂದಿಗೆ ಕನ್ನಡಕ ಸ್ಪರ್ಧೆ ಮಾಡಬಾರದು. ನಿಮ್ಮ ಹುಬ್ಬುಗಳನ್ನು ವ್ಯವಸ್ಥಿತವಾಗಿಡಲು ನೀವು ವೃತ್ತಿಪರರನ್ನು ನಿಯಮಿತವಾಗಿ ಭೇಟಿಯಾಗುತ್ತಿರಿ. ಈ ಮೂಲಕ ಕನ್ನಡಕಕ್ಕೆ ಹೊಂದಿಕೊಳ್ಳುವಂತಹ ಕಣ್ಣಿನ ಮೇಕಪ್ ಮಾಡಬಹುದು.

2) ಒಳ್ಳೆಯ ಪ್ರೈಮರ್ ಬಳಸಿ. ಕನ್ನಡಕದೊಂದಿಗೆ ಕಣ್ಣಿನ ಮೇಕಪ್ ಹೇಗೆ ಮಾಡಬಹುದೆಂದು ಇದು ದೃಢಪಡಿಸುತ್ತದೆ. ನಿಮ್ಮ ಕಣ್ಣುಗಳು ತಿರುಚುವಿಕೆ ಮತ್ತು ಮರೆಯಾಗುವುದನ್ನು ಪರಿಪೂರ್ಣವಾಗಿ ಕಡಿಮೆ ಮಾಡುತ್ತದೆ.

ನೈಸರ್ಗಿಕವಾಗಿ ಮೇಕಪ್ ಬ್ರಶ್‌ಗಳನ್ನು ಸ್ವಚ್ಛಗೊಳಿಸಿ

3) ಕಣ್ಣಿನ ರೆಪ್ಪೆಯ ಕೂದಲನ್ನು ಸುರುಳಿ ಮಾಡಿ. ನೀವು ಮಸ್ಕರಾದಲ್ಲಿ ತೊಡಗಿಸಿ ಕೊನೆಗೊಳಿಸಬೇಕೆಂದಿಲ್ಲ. ಕೆಲವೊಂದು ಮೂಲ ಸುರುಳಿ ಮಾಡುವ ಸಾಧನಗಳು ಕನ್ನಡಕ್ಕಾಗಿ ಮೇಕಪ್ ಮಾಡುವಾಗ ಕಣ್ಣಿನ ರೆಪ್ಪೆ ಕೂದಲನ್ನು ಸುರುಳಿ ಮಾಡಲು ಬಳಸಬಹುದು.

4. ನಿಮಗೆ ಸಾಧ್ಯವಾದರೆ ಐ ಶ್ಯಾಡೂ ತಪ್ಪಿಸಿ. ಇದಕ್ಕೆ ಕಟ್ಟುನಿಟ್ಟಾಗಿ ನೋ ಹೇಳಿ. ಯಾಕೆಂದರೆ ನಿಮ್ಮ ಕನ್ನಡಕದ ಹಿಂದಿನ ಜಾಗವು ತುಂಬಾ ಗಲೀಜಾಗಿ ಕಾಣುತ್ತದೆ. ಕನ್ನಡಕ ಧರಿಸುವಾಗ ಕಡೆಗಣಿಸಬೇಕಾದ ಕಣ್ಣಿನ ಮೇಕಪ್ ಇದಾಗಿದೆ.

5. ಒಳ್ಳೆಯ ಗುಣಮಟ್ಟದ ಐ ಲೈನರ್ ಬಳಸಿ. ಕೆಲವೊಂದು ವಿಶೇಷ ವಿನ್ಯಾಸದ ಕ್ಯಾಟ್ ಐ ಅಥವಾ ವಿಂಗ್ಡ್ ಶೇಪ್ ಹಾಕಿಕೊಳ್ಳಿ. ಇದರಲ್ಲಿ ಯಾವುದಾದರೂ ನಿಮ್ಮ ಕಣ್ಣುಗಳು ಎದ್ದುಕಾಣುವಂತೆ ಮಾಡುತ್ತದೆ ಮತ್ತು ಕನ್ನಡಕಕ್ಕೆ ನಿಮ್ಮ ಕಣ್ಣಿನ ಮೇಕಪ್ ಪೂರಕವಾಗುವಂತೆ ಮಾಡುತ್ತದೆ.

6. ಕನ್ನಡಕ ಧರಿಸುವಾಗ ಮಾಡಬಹುದಾದ ಕಣ್ಣಿನ ಮೇಕಪ್ ಬಗ್ಗೆ ತಿಳಿಯುವಾಗ ನೀವು ಕನ್ನಡಕದ ಗಾತ್ರ, ಅದರಿಂದ ನಿಮ್ಮ ಕಣ್ಣುಗಳನ್ನು ತುಂಬಾ ಸಣ್ಣದು ಅಥವಾ ದೊಡ್ಡದಾಗಿ ಕಾಣಿಸುತ್ತದೆಯಾ ಎಂದು ತಿಳಿದುಕೊಳ್ಳಿ.

ಎಣ್ಣೆಯುಕ್ತ ತ್ವಚೆಗೆ ಇಲ್ಲಿದೆ 10 ಬೇಸಿಗೆ ಮೇಕಪ್‌ಗಳು

7. ಕನ್ನಡಕ ಧರಿಸುವಾಗ ನೀವು ಮಾಡುವಂತಹ ಕಣ್ಣಿನ ಮೇಕಪ್ ನಿಂದ ನಿಮ್ಮ ಕಣ್ಣುಗಳು ತುಂಬಾ ಸಣ್ಣದಾಗಿ ಕಾಣಿಸುತ್ತಿದ್ದರೆ ನಿಮ್ಮ ಕಣ್ಣಿನ ಸುತ್ತ ಐ ಲೈನರ್ ಬಳಸಿ. ಇದರಿಂದ ನಿಮ್ಮ ಕಣ್ಣು ಅದ್ಭುತವಾಗಿ ಕಾಣುತ್ತದೆ.

8. ಕನ್ನಡಕ ಧರಿಸುವಾಗ ನಿಮ್ಮ ಕಣ್ಣುಗಳು ತುಂಬಾ ದೊಡ್ಡದಾಗಿ ಕಾಣುತ್ತಿದ್ದರೆ ಆಗ ತುಂಬಾ ಗಾಢ ಐ ಲೈನರ್ ಬಳಸಬೇಡಿ. ತುಂಬಾ ಸರಳವಾಗಿದ್ದರೆ ನಿಮ್ಮ ಕಣ್ಣುಗಳು ತುಂಬಾ ಸಣ್ಣ ಹಾಗೂ ನಯವಾಗಿ ಕಾಣುತ್ತದೆ.

9. ಚಿಕ್, ಬೋಲ್ಡ್ ಮತ್ತು ಅತ್ಯಾಕರ್ಷಕವಾಗಿ ಕಾಣಿಸಿಕೊಳ್ಳಲು ನೀವು ಗಾಢವಾದ ಲಿಪ್ ಸ್ಟಿಕ್ ಬಳಸಬೇಕು. ಅದರಲ್ಲೂ ಕೆಂಪು, ಕೋರಲ್ ಮತ್ತು ಹಾಟ್ ಪಿಂಕ್ ಬಳಸಿ. ಇದರಿಂದ ನೀವು ಕನ್ನಡಕ ಧರಿಸುವಾಗ ಮಾಡುವ ಮೇಕಪ್ ನಿಮ್ಮ ಮುಖವು ಹೆಚ್ಚು ಶ್ರಮಪಡದೆ ಎದ್ದುಕಾಣುವಂತೆ ಮಾಡುತ್ತದೆ.

10. ನೀವು ಬ್ಲಶರ್ ಬಳಸುವುದನ್ನು ಯಾವತ್ತೂ ಮರೆಯಬೇಡಿ. ಕೆನ್ನೆಯ ಮೇಲೆ ಸ್ವಲ್ಪ ಗುಲಾಬಿ ಬಣ್ಣವನ್ನು ಹಚ್ಚಿದರೆ ಆಗ ನೀವು ಕನ್ನಡಕ ಧರಿಸುವಾಗ ಮಾಡುವಂತಹ ಮೇಕಪ್ ತಪ್ಪಾಗಲು ಸಾಧ್ಯವೇ ಇಲ್ಲ.

ಎಲ್ಲವನ್ನೂ ಹೇಳಿಯಾಗಿದೆ. ಆದರೆ ಆರೋಗ್ಯಕರ ತ್ವಚೆಗಿಂತ ಒಳ್ಳೆಯ ಸೌಂದರ್ಯ ಮತ್ತೊಂದಿಲ್ಲ. ಹೆಚ್ಚಿನ ನೀರು ಕುಡಿಯಿರಿ ಮತ್ತು ಒಳ್ಳೆಯ ಆಹಾರ ತಿಂದರೆ ನಿಮ್ಮ ಸೌಂದರ್ಯ ಯಾವಾಗಲೂ ಎದ್ದುಕಾಣುವಂತಾಗುತ್ತದೆ.

English summary

Eye makeup tips for girls with glasses

Glasses are no more the 'nerds-must-have' accessory as, they have suddenly become the 'in-thing'. The frames have become more chic, glamorous and bold. As a result, eye makeup for glasses has become an important point of consideration.
X
Desktop Bottom Promotion