For Quick Alerts
ALLOW NOTIFICATIONS  
For Daily Alerts

ನೈಸರ್ಗಿಕವಾಗಿ ಮೇಕಪ್ ಬ್ರಶ್‌ಗಳನ್ನು ಸ್ವಚ್ಛಗೊಳಿಸಿ

|

ಹೆಂಗಳೆಯರಿಗೆ ಮೇಕಪ್ ಸಾಮಾಗ್ರಿಗಳನ್ನು ಖರೀದಿಸುವ ಬಯಕೆ ತುಸು ಹೆಚ್ಚು. ಆದರೆ ಅವುಗಳನ್ನು ದೀರ್ಘಕಾಲದವರೆಗೆ ಸಂರಕ್ಷಿಸುವ ಕಲೆ ಅವರಲ್ಲಿ ವಿರಳವೇ. ದುಬಾರಿ ವೆಚ್ಚದ ಮೇಕಪ್ ಸಾಮಾಗ್ರಿಗಳನ್ನು ಬಳಸಿ ಅವುಗಳನ್ನು ಸಂರಕ್ಷಿಸದೇ ಇಡುವುದು ಅವುಗಳು ಹಾಳಾಗುವುದಕ್ಕೆ ಕಾರಣವಾಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ.

ಅವುಗಳನ್ನು ಹೊಚ್ಚ ಹೊಸದರಂತೆ ಶುಭ್ರವಾಗಿ ಇರಿಸುವುದು ತಲೆನೋವಿನ ಸಂಗತಿ ಎಂಬುದು ಅನೇಕರ ಭಾವನೆ. ಆದರೆ ಈ ಲೇಖನ ನಿಮ್ಮ ತಲೆನೋವಿಗೆ ಮಂಗಳ ಹಾಡಿ ಮೇಕಪ್ ಸಾಧನಗಳನ್ನು ಹಾಳಾಗದಂತೆ ಕಾಪಾಡುವುದು ಹೇಗೆ ಎಂಬುದನ್ನು ಕುರಿತು ತಿಳಿಹೇಳುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಆಕರ್ಷಕ ಮೇಕಪ್ ಗೆ ಬೇಕು ಬ್ರೆಷ್ ಸಹಾಯ

Cleaning Makeup Brushes Naturally

ಕೇವಲ ದುಬಾರಿ ಮೇಕಪ್ ಸಾಮಾಗ್ರಿಗಳು ಮಾತ್ರವೇ ಹಾಳಾಗದೇ ದೀರ್ಘ ಸಮಯದವರೆಗೆ ಬಾಳಿಕೆ ಬರುತ್ತದೆ ಎಂದು ಭಾವಿಸಬೇಡಿ. ಮಿತದರದ ಪ್ರಸಾಧನಾ ಸಾಮಾಗ್ರಿಗಳ ಬಳಕೆ ಮುಗಿದ ನಂತರ ಅವುಗಳನ್ನು ಜೋಪಾನವಾಗಿ ಇರಿಸುವುದರಿಂದ ಕೂಡ ಅವುಗಳ ಬಾಳ್ವೆ ಸಾಧ್ಯ ಎಂಬುದನ್ನು ನೆನಪಿನಲ್ಲಿಡಿ.

ಹಾಗಿದ್ದರೆ ನೈಸರ್ಗಿಕವಾಗಿ ಬ್ರಶ್‌ಗಳನ್ನು ಮೇಕಪ್ ಸಾಮಾಗ್ರಿಗಳನ್ನು ಸ್ವಚ್ಛಗೊಳಿಸುವುದು ಹೇಗೆ ಎಂಬುದನ್ನು ಮುಂದೆ ತಿಳಿದುಕೊಳ್ಳಿ. ನಿಮ್ಮ ಮೇಕಪ್ ಬ್ರಶ್‌ಗಳನ್ನು ಕುದಿಸುವ ಇಲ್ಲವೇ ಮೈಕ್ರೋವೇವ್ ಮಾಡುವ ಸಾಹಸಕ್ಕೆ ಮುಂದಾಗದಿರಿ. ಇದನ್ನು ಸ್ವಚ್ಛಗೊಳಿಸಲು ನಿಮಗೆ ಬೇಕಾಗಿರುವುದು ಸ್ವಲ್ಪ ತಾಳ್ಮೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಸುಂದರ ಕಣ್ಣಿಗಾಗಿ ಮೇಕಪ್‌ನ ಸ್ಪರ್ಶ

ಮೇಕಪ್ ಬ್ರಶ್ ಸ್ವಚ್ಛಕಗಳು:
ಮೇಕಪ್ ಬ್ರಶ್‌ಗಳನ್ನು ಸ್ವಚ್ಛಗೊಳಿಸಲು ಕ್ಲೀನರ್‌ಗಳನ್ನು ಬಳಸಿ. ಚೀಪ್ ಬ್ರಾಂಡ್ ಅನ್ನು ಬಳಸುವ ಬದಲಿಗೆ ಮಾರುಕಟ್ಟೆಯಲ್ಲಿ ದೊರೆಯುವ ಉತ್ತಮ ಬ್ರಾಂಡ್‌ನ ಸ್ವಚ್ಛಕಗಳನ್ನು ಬಳಸಿ ಬ್ರಶ್ ಶುಭ್ರಗೊಳಿಸಿ.

ಲ್ಯೂಕ್‌ವಾರ್ಮ್ ನೀರು:
ನಿಮಗೆ ತ್ವರಿತ ಫಲಿತಾಂಶ ಬೇಕಿದ್ದಲ್ಲಿ ಲ್ಯೂಕ್‌ವಾರ್ಮ್ ನೀರಿಗೆ ಬ್ರಶ್ ಅನ್ನು ಮುಳುಗಿಸಿ. ಆದರೆ ನೀರನ್ನು ಕುದಿಸುವುದು ಮಾಡದಿರಿ ಇದರಿಂದ ನಿಮ್ಮ ಬ್ರಶ್‌ಗೆ ಹಾನಿ. ಲೂಸ್ ಪೌಡರ್ ಬ್ರಶ್ ಅನ್ನು ನೀವು ಸ್ವಚ್ಛಗೊಳಿಸುವುದು ಎಂದಲ್ಲಿ ಈ ವಿಧಾನ ಸಾಕು.

ಹರಿಯುವ ನೀರು:
ನಿಮ್ಮ ಮೇಕಪ್ ಬ್ರಶ್ ಸ್ವಲ್ಪ ಗಲೀಜಾಗಿದ್ದಲ್ಲಿ ಹರಿಯುವ ನೀರಿಗೆ ಬ್ರಶ್ ಹಿಡಿದು ಅದನ್ನು ಸ್ವಚ್ಛಗೊಳಿಸಿ. ಇದು ನಿಮ್ಮ ಬ್ರಶ್ ಅನ್ನು ಶೀಘ್ರವಾಗಿ ತೊಳೆಯುತ್ತದೆ ಮತ್ತು ಸ್ವಚ್ಛಗೊಳಿಸುತ್ತದೆ ಕೂಡ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಬಾಚಣಿಕೆ, ಹೇರ್ ಬ್ರಶ್ ಸುಲಭವಾಗಿ ಕ್ಲೀನ್ ಮಾಡೋದು ಹೇಗೆ?

ಶಾಂಪೂ:
ಸ್ವಲ್ಪ ನೀರು ಮತ್ತು ಶ್ಯಾಂಪೂ ಬಳಸಿ ನಿಮ್ಮ ಮೇಕಪ್ ಬ್ರಶ್ ಅನ್ನು ತೊಳೆಯಬಹುದು. ಈ ಮಿಶ್ರಣಕ್ಕೆ ಬ್ರಶ್ ಅನ್ನು ಮುಳುಗಿಸಿ ತ್ವರಿತವಾಗಿ ನೀರು ತೆಗೆಯಿರಿ.

ಆಲೀವ್ ಆಯಿಲ್:
ಸಣ್ಣ ಬ್ರಶ್‌ಗಳನ್ನು ತೊಳೆಯಲು ಆಲೀವ್ ಆಯಿಲ್ ಅನ್ನು ಕೂಡ ಬಳಸಬಹುದು. ಎಣ್ಣೆಯಲ್ಲಿ ಮೇಕಪ್ ಬ್ರಶ್‌ಗಳನ್ನು ಮುಳುಗಿಸಿ ಹಾಗೂ ನಿಮ್ಮ ಬೆರಳು ಅಥವಾ ಮೃದು ಸ್ಪಾಂಜ್ ಬಳಸಿ ಅವುಗಳನ್ನು ಉಜ್ಜಿ.

ಫೇಸ್ ವಾಶ್:
ಮೈಲ್ಡ್ ಫೇಸ್ ವಾಶ್ ಬಳಸಿ ಮೇಕಪ್ ಬ್ರಶ್ ಅನ್ನು ಸ್ವಚ್ಛಗೊಳಿಸಿ.

ಸರಿಯಾದ ಸ್ಥಳದಲ್ಲಿ ಬ್ರಶ್ ಇರಿಸಿ:
ನಿಮ್ಮ ಬ್ರಶ್‌ಗಳನ್ನು ಸರಿಯಾದ ಸ್ಥಳದಲ್ಲಿ ಇರಿಸದೇ ಇರುವುದು ಕೂಡ ಅವುಗಳನ್ನು ಹಾಳು ಮಾಡುತ್ತವೆ. ಬ್ರಶ್‌ನ ಮುಂಭಾಗಕ್ಕೆ ಪೆಟ್ಟಾಗದಂತೆ ಅದನ್ನು ನೇತಾಡಿಸುವುದು ಚಪ್ಪಟೆಯಾಗಿ ಇಡುವುದು ಮೊದಲಾದ ವಿಧಾನದಲ್ಲಿ ಬ್ರಶ್ ಅನ್ನು ತೆಗೆದಿರಿಸಬಹುದು.

ವಿನೇಗರ್:
ಸ್ವಲ್ಪ ವಿನೇಗರ್ ತೆಗೆದುಕೊಂಡು ಸಮಪ್ರಮಾಣದಲ್ಲಿ ನೀರು ಬೆರೆಸಿ. ಸ್ವಲ್ಪ ಸಮಯ ಬ್ರಶ್ ಅನ್ನು ಇದರಲ್ಲಿ ಮುಳುಗಿಸಿಡಿ. ಸ್ಪಾಂಜ್ ಅಥವಾ ಹರಿಯುವ ನೀರಿನಲ್ಲಿ ಬ್ರಶ್ ಒರೆಸಿ.

English summary

Cleaning Makeup Brushes Naturally

Women tend to have elaborate makeup sets, but they often forget the importance of keeping the application brushes spick-and-span for hygiene and longevity. You will get a lot of suggestions and opinions about selecting the best makeup brushes available in the market.
X
Desktop Bottom Promotion