For Quick Alerts
ALLOW NOTIFICATIONS  
For Daily Alerts

ಮನೆಯಲ್ಲೇ ಸಿಗುವ 5 ಮೇಕಪ್ ರಿಮೂವರ್ !

By Hemanth P
|

ತ್ವಚೆಯ ಹೊಳಪನ್ನು ಉಳಿಸಿಕೊಳ್ಳುವ ಸಲುವಾಗಿ ಅದನ್ನು ರಕ್ಷಿಸುವುದು ತುಂಬಾ ಮುಖ್ಯ. ಯಾವ ಟಿಪ್ಸ್ ಅಥವಾ ಉತ್ಪನ್ನಗಳು ತ್ವಚೆಯನ್ನು ಆರೋಗ್ಯವಾಗಿಡಬಲ್ಲದು ಎಂದು ತಿಳಿದುಕೊಳ್ಳುವುದು ತುಂಬಾ ಮುಖ್ಯ. ಮೇಕಪ್ ನಮ್ಮ ನೈಸರ್ಗಿಕ ಸೌಂದರ್ಯ ಎದ್ದು ಕಾಣುವಂತೆ ಮಾಡುತ್ತದೆ. ಆದರೆ ಮುಖದಿಂದ ಸರಿಯಾಗಿ ಮೇಕಪ್ ತೆಗೆಯದೆ ಇದ್ದರೆ ಅದು ತುಂಬಾ ಹಾನಿಕಾರಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸುಂದರ ಕಣ್ಣಿಗಾಗಿ ಮೇಕಪ್‌ನ ಸ್ಪರ್ಶ

ಮೇಕಪ್ ನೊಂದಿಗೆ ಮಲಗುವುದರಿಂದ ಮೊಡವೆ ಏಳಬಹುದು ಮತ್ತು ನಿಮ್ಮ ತ್ವಚೆಗೆ ಅಕಾಲಿಕ ವೃದ್ಧಾಪ್ಯ ಬರಬಹುದು. ಪ್ರತಿಯೊಬ್ಬ ಮಹಿಳೆಯು ನೆನಪಿನಲ್ಲಿಡಬೇಕಾದ ಸೌಂದರ್ಯದ ಟಿಪ್ಸ್ ಎಂದರೆ ಮಲಗುವ ಮೊದಲು ಮೇಕಪ್ ತೆಗೆಯುವುದು.

ಮಾರುಕಟ್ಟೆಯಲ್ಲಿ ಸಿಗುವಂತಹ ಕೆಲವೊಂದು ಮೇಕಪ್ ರಿಮೂವರ್ ಗಳು ತುಂಬಾ ಜನಪ್ರಿಯ ಮತ್ತು ಖರೀದಿಸಲು ಸುಲಭ. ಆದರೆ ನೈಸರ್ಗಿಕ ಆಯ್ಕೆಯನ್ನು ಪರಿಗಣಿಸಬೇಕು. ಕೆಲವೊಂದು ನೈಸರ್ಗಿಕ ವಸ್ತುಗಳಿಂದ ಮಾಡಿದಂತಹ ಮೇಕಪ್ ರಿಮೂವರ್ ಗಳು ನಿಮ್ಮ ಮನೆಯಲ್ಲೇ ಸಿಗುತ್ತದೆ. ಇದರಿಂದ ನಿಮ್ಮ ತ್ವಚೆಗೆ ಯಾವುದೇ ರೀತಿಯ ಅಡ್ಡಪರಿಣಾಮವಿಲ್ಲ. ಇದು ಪರಿಸರ ಸ್ನೇಹಿ, ತುಂಬಾ ಸುರಕ್ಷಿತ ಮತ್ತು ನೈಸರ್ಗಿಕ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಕಲೆ ಬೀಳದಂತೆ ಮೊಡವೆ ನಿವಾರಣೆಗೆ ಮನೆಮದ್ದು

ಬಾದಾಮಿ ಹಾಲು

ಬಾದಾಮಿ ಹಾಲು

ಬಾದಾಮಿ ಬೀಜಗಳಿಂದ ಬಾದಾಮಿ ಹಾಲನ್ನು ತೆಗೆಯಲಾಗುತ್ತದೆ. ಇತರ ಹಾಲುಗಳಂತೆ ಇದರಲ್ಲಿ ಲ್ಯಾಕ್ಟೋಸ್ ಇರುವುದಿಲ್ಲ. ಬಾದಾಮಿ ಹಾಲನ್ನು ಪಡೆಯಲು ಹಸಿ ಬಾದಾಮಿಯನ್ನು ರುಬ್ಬಬೇಕು ಮತ್ತು ಅದು ಕ್ರೀಮ್ ಆಗುವ ತನಕ ಮಿಶ್ರಣ ಮಾಡಬೇಕು. ಬಾದಾಮಿ ಹಾಲಿನಲ್ಲಿ ನೈಸರ್ಗಿಕ ಶುದ್ಧೀಕರಣವಿದೆ ಮತ್ತು ಇದರ ಕಿಣ್ವಗಳು ಸುಲಭವಾಗಿ ಎಣ್ಣೆ, ಮಣ್ಣು ಮತ್ತು ಮೇಕಪ್ ನ್ನು ತೆಗೆಯುತ್ತದೆ. ಬಾದಾಮಿ ಹಾಲನ್ನು ಹತ್ತಿ ಉಂಡೆಗಳಿಗೆ ಹಾಕಿ ನಿಮ್ಮ ಮುಖದ ಮೇಲೆ ವೃತ್ತಕಾರವಾಗಿ ಉಜ್ಜಬೇಕು. ಇದರಿಂದ ಮೇಕಪ್ ಹೋಗುತ್ತದೆ. ಇದರ ಬಳಿಕ ಮುಖವನ್ನು ತೊಳೆಯಿರಿ. ಉಳಿದ ಬಾದಾಮಿ ಹಾಲನ್ನು ಫ್ರಿಡ್ಜ್ ನಲ್ಲಿಡಿ ಮತ್ತು ಇದನ್ನು ವಾರದೊಳಗೆ ಬಳಸಿ.

ಸೌತೆಕಾಯಿ

ಸೌತೆಕಾಯಿ

ಸೌತೆಕಾಯಿಯಲ್ಲಿರುವ ಮೊಶ್ಚಿರೈಸರ್ ಗುಣಗಳು ಮೇಕಪ್ ತೆಗೆದ ಬಳಿಕ ನಿಮ್ಮ ಮುಖ ಒಣಗದಂತೆ ಮತ್ತು ನಿಸ್ತೇಜವಾಗಿ ಕಾಣದಂತೆ ನೋಡಿಕೊಳ್ಳುತ್ತದೆ. ಸೌತೆಕಾಯಿ ತುಂಬಾ ಲಾಭಕಾರಿ ಯಾಕೆಂದರೆ ಇದು ಚರ್ಮದ ಸತ್ತ ಪದರವನ್ನು ತೆಗೆದು ನೈಸರ್ಗಿಕ ಸ್ಕ್ರಬ್ ರೀತಿ ಕೆಲಸ ಮಾಡುತ್ತದೆ. ನಿಮ್ಮ ಮುಖವನ್ನು ತೊಳೆಯಲು ಸೌತೆಕಾಯಿ ಜ್ಯೂಸ್ ಬಳಸಬಹುದು ಅಥವಾ ಮುಖಕ್ಕೆ ಹಚ್ಚುವ ಮೊದಲು ಸೌತೆಕಾಯಿಯನ್ನು ಮಿಕ್ಸಿಗೆ ಹಾಕಿ ಹುಡಿ ಮಾಡಿ.

ಸೋಯಾ ಹಾಲು ಮತ್ತು ಬಾಳೆಹಣ್ಣು

ಸೋಯಾ ಹಾಲು ಮತ್ತು ಬಾಳೆಹಣ್ಣು

ನಿಮ್ಮ ಮುಖದಿಂದ ಮೇಕಪ್ ನ್ನು ತೆಗೆಯಲು ಬಾಳೆಹಣ್ಣು ಮತ್ತು ಸೋಯಾ ಹಾಲು ಅತ್ಯುತ್ತಮ ಮಿಶ್ರಣ. ಬಾಳೆಹಣ್ಣು ಮತ್ತು ಸೋಯಾ ಹಾಲಿನಲ್ಲಿರು ಕಿಣ್ವಗಳು ಮೇಕಪ್ ತೆಗೆದು ನಿಮ್ಮ ಮುಖದಲ್ಲಿ ಅಂಟಿಕೊಂಡಿರುವ ಕೊಳೆ ಮತ್ತು ಧೂಳನ್ನು ತೆಗೆಯುತ್ತದೆ. ಇದನ್ನು ತಯಾರಿಸಲು ಬಾಳೆಹಣ್ಣನ್ನು ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿದ ಬಳಿಕ ಸೋಯಾ ಹಾಲಿನೊಂದಿಗೆ ಮಿಶ್ರ ಮಾಡಿ. ಸರಿಯಾಗಿ ಮಿಶ್ರಣ ಮಾಡಿದ ಬಳಿಕ ಅದನ್ನು ನಿಮ್ಮ ಮುಖಕ್ಕೆ ಹಚ್ಚಿ. ಕೆಲವು ನಿಮಿಷ ಹಾಗೆ ಇರಲಿ, ಬಳಿಕ ತೊಳೆಯಿರಿ.

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಇದು ನಿಮಗೆ ತುಂಬಾ ಆರೋಗ್ಯಕರ. ಬಾಹ್ಯ ಹಾಗೂ ಆಂತರಿಕವಾಗಿಯೂ. ಇದು ಮಾರುಕಟ್ಟೆಯಲ್ಲಿ ಸಿಗುವ ಮೇಕಪ್ ರಿಮೂವರ್ ಗಿಂತ ಅತ್ಯುತ್ತಮವಾದದ್ದು. ಯಾಕೆಂದರೆ ಇದು ನೈಸರ್ಗಿಕ ಮತ್ತು ಚರ್ಮಕ್ಕೆ ಹೆಚ್ಚು ಹಾನಿ ಉಂಟುಮಾಡಲ್ಲ. ಆಲಿವ್ ಎಣ್ಣೆಯನ್ನು ನೇರವಾಗಿ ಹಚ್ಚಬಹುದು ಅಥವಾ ಹಜೆಲ್ ನೊಂದಿಗೆ ಮಿಶ್ರಣ ಮಾಡಿ ಬಳಸಬಹುದು. ಯಾಕೆಂದರೆ ಹಜೆಲ್ ನಲ್ಲಿ ಸಂಕೋಚನ ಗುಣಗಳಿವೆ ಮತ್ತು ಆಲಿವ್ ಎಣ್ಣೆಯಲ್ಲಿ ಮೊಶ್ಚಿರೈಸರ್ ಗುಣಗಳಿವೆ. ಇದು ರಂಧ್ರಗಳು ಮುಚ್ಚಿಹೋಗುವುದನ್ನು ತಡೆಯುತ್ತದೆ ಮತ್ತು ಮೇಕಪ್ ರಿಮೂವರ್ ನಿಂದ ಉಂಟಾಗುವ ಒಣ ತ್ವಚೆ ತಡೆಯುತ್ತದೆ.

ತೆಂಗಿನ ಎಣ್ಣೆ

ತೆಂಗಿನ ಎಣ್ಣೆ

ಸ್ಯಾಚುರೇಟೆಡ್ ಕೊಬ್ಬು ತೆಂಗಿನ ಎಣ್ಣೆಯಲ್ಲಿ ಅಧಿಕವಾಗಿದೆ. ಆದರೆ ಇದು ಒಣ ತ್ವಚೆಗೆ ತೇವಾಂಶ ನೀಡಲು ಅತ್ಯುತ್ತಮ ವಿಧಾನ. ಇದು ಕಣ್ಣಿನ ಮೇಕಪ್ ನಿಂದ ಸುಲಭವಾಗಿ ತೆಗೆಯುತ್ತದೆ. ಇದು ಮೇಕಪ್ ತೆಗೆಯುವುದು ಮಾತ್ರವಲ್ಲದೆ, ಇದು ಶಿಲೀಂಧ್ರ ನಿರೋಧಕ, ವೈರಸ್ ನಿರೋಧಕ ಅಂಶಗಳಿಂದ ಕೂಡಿದೆ. ಇದನ್ನು ಮೊಶ್ಚಿರೈಸರ್ ಆಗಿ ಬಳಸಬಹುದು ಮತ್ತು ಮುಖದಿಂದ ಮೇಕಪ್ ತೆಗೆದ ಬಳಿಕ ತ್ವಚೆಯನ್ನು ರಕ್ಷಿಸುತ್ತದೆ. ಈ ಎಲ್ಲಾ ವಸ್ತುಗಳು ನೀವು ಮನೆಯಲ್ಲೇ ಪಡೆಯಬಹುದು. ಮೇಕಪ್ ತೆಗೆಯಲು ಇದನ್ನೊಮ್ಮೆ ಬಳಸಿ ನೋಡಿ. ಮಾರುಕಟ್ಟೆಯಲ್ಲಿ ಸಿಗುವ ಮೇಕಪ್ ರಿಮೂವರ್ ಖರೀದಿಸುವ ಅಗತ್ಯವಿರದು.

English summary

Best 5 Makeup Removers You Can Find At Home

Makeup enhances our natural looks, but it can also be highly damaging if it is not properly removed from the face. Makeup enhances our natural looks, but it can also be highly damaging if it is not properly removed from the face.
Story first published: Friday, March 7, 2014, 15:04 [IST]
X
Desktop Bottom Promotion