For Quick Alerts
ALLOW NOTIFICATIONS  
For Daily Alerts

ಎಣ್ಣೆಯುಕ್ತ ತ್ವಚೆಗೆ ಇಲ್ಲಿದೆ 10 ಬೇಸಿಗೆ ಮೇಕಪ್‌ಗಳು

|

ಬೇಸಿಗೆ ಇನ್ನೇನು ಬಂದೇ ಬಿಟ್ಟಿದೆ. ಈ ಕಾಲದಲ್ಲಿ ನಿಮ್ಮ ಮುಖಾರವಿಂದವನ್ನು ಆವರಿಸಿರುವ ಮೇಕಪ್ ಅನ್ನು ಕರಗದಂತೆ ಕಾಪಾಡಿಕೊಳ್ಳುವುದು ಹರಸಾಹಸದ ಕೆಲಸವೇ ಸರಿ. ಬೆಳಗ್ಗೆ ಅರಳಿದ ಹೂವಿನಂತೆ ಕಂಡುಬರುವ ನೀವು ಹೊತ್ತು ಸರಿದಂತೆ ಬಾಡಿದ ಹೂವಿನಂತಾಗುತ್ತೀರಿ. ಇದಕ್ಕೆ ಕಾರಣ ಬೇಸಿಗೆಯ ಧಗೆಯಾಗಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಕಿತ್ತಳೆ ಸಿಪ್ಪೆಯಿಂದ ಹೆಚ್ಚಿಸಿ ಮುಖದ ಬಿಳುಪು

ನೀವು ಎಣ್ಣೆ ಚರ್ಮವನ್ನು ಹೊಂದಿದ್ದರಂತೂ ಮೇಕಪ್ ಅನ್ನು ಮುಖದಲ್ಲಿ ನಿಲ್ಲುವಂತೆ ಮಾಡಲು ಹರಸಾಹಸವನ್ನೇ ಮಾಡಬೇಕಾಗುತ್ತದೆ. ಇದಕ್ಕೆ ಪರಿಹಾರ ಏನೆಂದರೆ ಮೇಕಪ್ ಅನ್ನು ಸರಿಯಾಗಿ ಹಚ್ಚಿಕೊಳ್ಳಿವ ವಿಧಾನ ಮತ್ತು ಅದನ್ನು ಸಂರಕ್ಷಿಸುವುದು ಹೇಗೆಂಬುದನ್ನು ತಿಳಿಯುವುದಾಗಿದೆ.

ಸುಂದರವಾಗಿ ಕಾಣಬೇಕೆಂದು ಬಯಕೆಯುಳ್ಳ ಎಲ್ಲಾ ಹದಿಹರೆಯದವರು, ಮಹಿಳೆಯರೂ ಇತ್ತ ನೋಡಿ. ಈ ಲೇಖನದಲ್ಲಿ ನಿಮ್ಮ ಮೇಕಪ್ ಸ್ಥಿರವಾಗಿ ಉಳಿಯಲು ಕೆಲವೊಂದು ಸಲಹೆಗಳನ್ನು ನಾವು ನೀಡಿದ್ದೇವೆ. ಬೇಸಿಗೆಯಲ್ಲಿ ಎಣ್ಣೆ ಚರ್ಮದವರಿಗಾಗಿ ಉಪಯೋಗಕಾರಿಯಾಗಿರುವ ಈ ಮೇಕಪ್ ಸಲಹೆಗಳನ್ನು ತಪ್ಪದೆ ಓದಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ನೈಸರ್ಗಿಕವಾಗಿ ಮೇಕಪ್ ಬ್ರಶ್‌ಗಳನ್ನು ಸ್ವಚ್ಛಗೊಳಿಸಿ

ನಿಮ್ಮ ತುಟಿಗಳಿಗೆ ಕಾಳಜಿ ನೀಡಿ:

ನಿಮ್ಮ ತುಟಿಗಳಿಗೆ ಕಾಳಜಿ ನೀಡಿ:

ನಿಮ್ಮ ತುಟಿಯನ್ನು ಆರೈಕೆ ಮಾಡಲು ಯಾವ ಸೀಸನ್‌ನಲ್ಲೂ ಮರೆಯದಿರಿ, ನಿಮ್ಮ ತುಟಿಗಳಿಗೆ ಸ್ವಲ್ಪ ಪೆಟ್ರೋಲಿಯಂ ಜೆಲ್ಲಿಯನ್ನು ಹಚ್ಚಿ ಆದರೆ ಇದು ಲಿಪ್‌ಸ್ಟಿಕ್ ಹಚ್ಚುವ ಮುನ್ನ ಆಗಿರಬೇಕು. ಇದು ನಿಮ್ಮ ತುಟಿಗೆ ಮೃದುತ್ವವನ್ನು ನೀಡುತ್ತದೆ.

ಪೌಡರ್ ಬೇಡವೇ ಬೇಡ:

ಪೌಡರ್ ಬೇಡವೇ ಬೇಡ:

ಬೇಸಿಗೆಯಲ್ಲಿ ನಿಮ್ಮನ್ನು ಪೌಡರ್ ತಾಜಾ ಆಗಿ ಇರಿಸುತ್ತದೆ, ಆದರೆ ಪೌಡರ್‌ನಿಂದ ದೂರವಿರುವುದು ತುಂಬಾ ಒಳ್ಳೆಯದು. ಏಕೆಂದರೆ ಪೌಡರ್ ಹಚ್ಚಿದಂತೆ ನಿಮಗೆ ಬೆವರು ಉಂಟಾಗುವುದೂ ಹೆಚ್ಚು.

ಎಕ್ಸ್‌ಪೋಲಿಯೇಟ್ ಮಾಡಲು ಮರೆಯದಿರಿ:

ಎಕ್ಸ್‌ಪೋಲಿಯೇಟ್ ಮಾಡಲು ಮರೆಯದಿರಿ:

ಎಣ್ಣೆ ತ್ವಚೆ ಉಳ್ಳವರಿಗೆ ಎಕ್ಸ್‌ಪೋಲಿಯೇಟ್ ಉಪಯೋಗಕಾರಿ ವಿಧಾನವಾಗಿದೆ. ತ್ವಚೆಯ ಅಡಿಭಾಗದಲ್ಲಿರುವ ಕೊಳೆಯನ್ನು ನಿವಾರಿಸಲು ಈ ವಿಧಾನ ಸಹಕಾರಿ.

ಡೀಪ್ ಕ್ಲೆನ್ಸಿಂಗ್:

ಡೀಪ್ ಕ್ಲೆನ್ಸಿಂಗ್:

ವಾರಕ್ಕೊಮ್ಮೆಯಾದರೂ ಡೀಪ್ ಕ್ಲೆನ್ಸಿಂಗ್ ಅನ್ನು ನಿಮ್ಮ ಮುಖಕ್ಕೆ ಮಾಡಿಕೊಳ್ಳುವುದು ಎಣ್ಣೆ ತ್ವಚೆಗೆ ಉತ್ತಮ ಪರಿಹಾರವಾಗಿದೆ.

ಎಣ್ಣೆ ರಹಿತ ಮಾಯಿಶ್ಚರೈಸರ್:

ಎಣ್ಣೆ ರಹಿತ ಮಾಯಿಶ್ಚರೈಸರ್:

ನೀವು ಎಣ್ಣೆ ತ್ವಚೆಯನ್ನು ಹೊಂದಿದ್ದರೆ ಎಣ್ಣೆ ರಹಿತ ಮಾಯಿಶ್ಚರೈಸರ್ ಅನ್ನು ಆಯ್ದುಕೊಳ್ಳಿ. ನಿಮ್ಮ ಮುಖದಲ್ಲಿ ಎಣ್ಣೆಯನ್ನು ಈ ಮಾಯಿಶ್ಚರೈಸರ್ ಉಳಿಸುವುದಿಲ್ಲ.

ಬ್ಲೋಟಿಂಗ್ ಪೇಪರ್:

ಬ್ಲೋಟಿಂಗ್ ಪೇಪರ್:

ಬೇಸಿಗೆಯಲ್ಲಿ ಎಣ್ಣೆ ತ್ವಚೆಯನ್ನು ಕಾಪಾಡಿಕೊಳ್ಳುವ ವಿಧಾನವಾಗಿದೆ ಬ್ಲೋಟಿಂಗ್ ಪೇಪರ್‌ನ ಬಳಕೆ. ನಿಮ್ಮ ಮುಖದಲ್ಲಿರುವ ಹೆಚ್ಚುವರಿ ಎಣ್ಣೆಯನ್ನು ಹೋಗಲಾಡಿಸಲು ಇದು ಸಹಕಾರಿ.

ಬೇಸಿಗೆಗೆ ಶಿಮ್ಮರ್ ಬೇಡ:

ಬೇಸಿಗೆಗೆ ಶಿಮ್ಮರ್ ಬೇಡ:

ಶಿಮ್ಮರ್ ಅನ್ನು ಬೇಸಿಗೆಗೆ ಬಳಸುವುದು ಬೇಡ. ಮೇಕಪ್‌ನಲ್ಲಿ ಲೈಟಾಗಿ ಇರುವುದು ಉತ್ತಮ.

ಅಗತ್ಯವಿದ್ದಲ್ಲಿ ಬ್ಲಶ್ ಮಾಡಿ:

ಅಗತ್ಯವಿದ್ದಲ್ಲಿ ಬ್ಲಶ್ ಮಾಡಿ:

ಬ್ಲಶ್ ಇಲ್ಲದೆ ನಿಮ್ಮ ಮೇಕಪ್ ಪೂರ್ಣವಾಗುವುದಿಲ್ಲ. ಬೇಸಿಗೆಯಲ್ಲಿ ಬೇಕಿದ್ದರೆ ಮಾತ್ರ ಬ್ಲಶ್ ಮಾಡಿಕೊಳ್ಳಿ.

ಲೈಟ್ ಐ ಶ್ಯಾಡೋ:

ಲೈಟ್ ಐ ಶ್ಯಾಡೋ:

ಸ್ಮೋಕಿ ಐ ಮೇಕಪ್ ಅನ್ನು ಮಾಡಿಕೊಳ್ಳುವುದಕ್ಕಿಂತ ಲೈಟ್ ಮೇಕಪ್ ನಿಮ್ಮ ಆಯ್ಕೆಯಾಗಿರಲಿ. ನಿಮ್ಮ ತ್ವಚೆಗೆ ಹೊಂದುವ ಬಣ್ಣವನ್ನು ಆಯ್ಕೆಮಾಡಿ.

ವಾಟರ್ ಪ್ರೂಫ್ ಮಸ್ಕರಾ:

ವಾಟರ್ ಪ್ರೂಫ್ ಮಸ್ಕರಾ:

ಬೇಸಿಗೆಯಲ್ಲಿ ಕಣ್ಣಿಗೆ ವಾಟರ್ ಪ್ರೂಫ್ ಮಸ್ಕರಾವನ್ನು ಹಚ್ಚಿಕೊಳ್ಳುವುದು ದೀರ್ಘ ಕಾಲ ಕಣ್ಣಿನ ಮೇಕಪ್ ಬರುವಂತೆ ಮಾಡುತ್ತದೆ.

English summary

10 Summer Makeup Tips For Oily Skin

Summer is here and one of the things which you will face right through the day is your makeup sliding down your face. It is painful to experience this as it takes a lot of time in applying the makeup.
Story first published: Monday, April 7, 2014, 11:53 [IST]
X
Desktop Bottom Promotion