For Quick Alerts
ALLOW NOTIFICATIONS  
For Daily Alerts

ಸೂಕ್ಷ್ಮ ಸ್ವಭಾವದ ಕಣ್ಣುಗಳ ಮೇಕಪ್‌ಗಾಗಿ 10 ಸಲಹೆಗಳು

By Viswanath S
|

ಸೂಕ್ಷ್ಮ ಕಣ್ಣುಗಳಿದ್ದವರಿಗೆ ಕಿರಿಕಿರಿಯಾಗುವ ಸಮಸ್ಯೆ ಸಾಮಾನ್ಯ ಅನುಭವ. ಇಂತಹ ಸಮಸ್ಯೆ ಇರುವವರಿಗೆ ದೈನಂದಿನ ಕಾರ್ಯಗಳನ್ನು ಮಾಡಲು ಕಷ್ಟವಾಗುವ ಸಂಭವ ಹೆಚ್ಚು ಮತ್ತು ಕೆಲವು ವೇಳೆ ಕೆಲಸಗಳ ನಿರ್ವಹಣೆಯನ್ನು ಮಾಡುವುದಕ್ಕೆ ಅಗದೇ ಕೂಡ ಇರಬಹುದು. ಸಾಮಾನ್ಯವಾಗಿ ಸೂಕ್ಷ್ಮ ಕಣ್ಣಿರುವ ಮಹಿಳೆಯರಿಗೆ ಕಣ್ಣುಗಳ ಮೇಕಪ್ ಮಾಡುವುದು ಒಂದು ಕುಶಲ ಕೆಲಸ. ಮೇಕಪ್ ಸರಿಯಾಗಿಮಾಡಿಕೊಳ್ಳದಿದ್ದರೆ ಕಣ್ಣುಗಳು ಕೆಂಪಾಗುವುದು, ಕಿರಿಕಿರಿಯಾಗುವುದು ಮತ್ತು ಕಣ್ಣುಗಳ ಸುತ್ತ ತುರಿತದ ನವೆ ಇಂತಹ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

ಈ ಲೇಖನದಲ್ಲಿ ನಾವು ಸೂಕ್ಷ್ಮಕಣ್ಣುಳ್ಳವರಿಗೆ ಮೇಕಪ್ ಮಾಡಿಕೊಂಡು ಮೇಲೆಹೇಳಿದ ಸಮಸ್ಯೆಗಳಿಂದ ದೂರವಿರಲು ಕೆಲವು ಕಾರ್ಯತಃ ತೋರಿಸಲಾಗುವ ಸಲಹೆಗಳನ್ನು ಕೊಟ್ಟಿರುತ್ತೇವೆ. ಈ ಕೆಳಗೆ ಕೊಟ್ಟಿರುವ ಸಲಹೆಗಳಿಂದ ನಿಮಗೆ ಸೂಕ್ಷ್ಮ ಕಣ್ಣುಗಳಿದ್ದಲ್ಲಿ ಪರಿಣಾಮಕಾರಿಯಾಗಿ ಮೇಕಪ್ ಮಾಡಿಕೊಳ್ಳಲು ಸಹಾಯವಾಗುತ್ತದೆ:

ಮೊಡವೆ ಕಲೆಗಳ ನಿವಾರಣೆಗೆ ನೈಸರ್ಗಿಕ ಉಪಾಯಗಳು

ನೀವು ಉಪಯೋಗಿಸುವ ಬ್ರಶ್‍‌ಗಳನ್ನು ಸ್ವಚ್ಛಗೊಳಿಸಿ

ನೀವು ಉಪಯೋಗಿಸುವ ಬ್ರಶ್‍‌ಗಳನ್ನು ಸ್ವಚ್ಛಗೊಳಿಸಿ

ಈ ಸಲಹೆಗಳಲ್ಲಿ ಅತಿ ಮುಖ್ಯವಾದುದೆಂದರೆ ಸೂಕ್ಷ್ಮಕಣ್ಣುಗಳನ್ನು ಮೇಕಪ್ ಮಾಡಿಕೊಳ್ಳುವವರು ಬ್ರಶ್‌ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಲು ನೆನಪಿನಲ್ಲಿಟ್ಟುಕೊಂಡಿರಬೇಕು. ಬ್ರಶ್‌ಗಳನ್ನು ಉಪಯೋಗಿಸುತ್ತದಂತೆ ಕೊಳೆ ಸೇರಿಕೊಳ್ಳುತ್ತದೆಯಾದ್ದರಿಂದ ಕೊಳೆಯಾದ ಬ್ರಶ್ ಉಪಯೋಗಿಸಿದಾಗ ಕಣ್ಣಿನ ಸೋಂಕು ಬರಲು ಕಾರಣವಾಗಬಹುದು. ಬ್ರಶ್‌ಗಳನ್ನು ಸೌಮ್ಯ ಸೋಪ್ ಅಥವಾ ಶಾಂಪೂ ಬಳಸಿ ಶುಚಿಗೊಳಿಸಿ, ನಂತರ ಶುಚಿಯಾದ ಬಟ್ಟೆ ಅಥವ ಚೌಕದಿಂದ ಒರಸಿ ಒಣಗಲು ಬಿಡಿ.

ಕ್ರೀಮ್ ಐ ಶಾಡೋಗಳು

ಕ್ರೀಮ್ ಐ ಶಾಡೋಗಳು

ಸೂಕ್ಷ್ಮಕಣ್ಣುಳ್ಳವರಿಗೆ ಪೌಡರ್ ಐ ಶಾಡೋ ಉಪಯೋಗಿಸಿದಾಗ ಒಂದು ಸಮಸ್ಯೆ ಯಾವಾಗಲೂ ಇರುತ್ತದೆ. ಪೌಡರ್ ಐ ಶಾಡೋ ಉಪಯೋಗದಿಂದ ಪುಡಿಯು ಹಲ್ಲೆಹಲ್ಲೆಯಾಗಿ ಉದುರುವುದರಿಂದ ಕ್ರೀಮ್ ಐ ಶಾಡೋ ಹೆಚ್ಚು ಸೂಕ್ತವಾಗಿರುತ್ತದೆ ಮತ್ತು ಅದರ ಉಪಯೋಗದಿಂದ ಹಲ್ಲೆ ಹಲ್ಲೆಯಾಗುವುದಿಲ್ಲ. ಹೊಳಪುಳ್ಳ ಅಥವ ಹೊಳೆಯುವ ಐ ಶಾಡೋಗಳಿಂದ ನೀವು ದೂರವಿರಬೇಕಾಗುತ್ತದೆ. ಏಕೆಂದರೆ ಅವುಗಳು ಸೂಕ್ಷ್ಮಕಣ್ಣುಗಳಿಗೆ ಇನ್ನೂ ಹೆಚ್ಚು ಕಿರಿಕಿರಿ ಮಾಡುತ್ತವೆ.

ಕಣ್ಣಿನ ಒಳಭಾಗಕ್ಕೆ ಕಾಡಿಗೆ ಪೆನ್ಸಿಲ್ ತಪ್ಪಿಸಿ

ಕಣ್ಣಿನ ಒಳಭಾಗಕ್ಕೆ ಕಾಡಿಗೆ ಪೆನ್ಸಿಲ್ ತಪ್ಪಿಸಿ

ಅನೇಕ ಮೇಕಪ್ ಕಲಾವಿದರು ಕಣ್ಣುಗಳು ದೊಡ್ಡದಾಗಿ ಕಾಣಿಸುವ ಸಲುವಾಗಿ ಕಣ್ಣಿನ ಒಳಭಾಗಕ್ಕೆ ಕಾಡಿಗೆ ಪೆನ್ಸಿಲ್ ಬಳಸುತ್ತಾರೆ. ಇದು ನೋಡುವುದಕ್ಕೆ ಚೆನ್ನಾಗಿ ಕಂಡರೂ ಸೂಕ್ಷ್ಮ ಕಣ್ಣುಗಳಿರುವವರು ಕಣ್ಣುಗಳ ಒಳಭಾಗಕ್ಕೆ ಲೈನಿಂಗ್ ಮಾಡುವುದನ್ನು ತಪ್ಪಿಸಬೇಕು. ಸೂಕ್ಷ್ಮ ಕಣ್ಣುಗಳಿರುವವರು ಕಣ್ಣುಗಳ ಪ್ರಹಾರದ ಸಾಲಿನ ಹೊರಗೆ ಒಂದು ಲೈನರ್ ಅಥವ ಪೆನ್ಸಿಲ್ ಬಳಸಬೇಕು.

ಯಾವಾಗಲೂ ಅತ್ಯುತ್ತಮ ಉತ್ಪನ್ನಗಳನ್ನೇ ಆಯ್ಕೆಮಾಡಿ

ಯಾವಾಗಲೂ ಅತ್ಯುತ್ತಮ ಉತ್ಪನ್ನಗಳನ್ನೇ ಆಯ್ಕೆಮಾಡಿ

ನಿಮಗೆ ಸೂಕ್ಷ್ಮಕಣ್ಣುಗಳಿದ್ದರೆ ಮೇಕಪ್ ಮಾಡಿಕೊಳ್ಳಲು ಚಿಂತಿಸಬೇಕಾಗಿಲ್ಲ, ಆದರೂ ನೀವು ಮೇಕಪ್ ಮಾಡಿಕೊಳ್ಳಬಹುದು. ಇಂದು ತಯಾರಕರಿಂದ ಅನೇಕ ವಿನ್ಯಾಸಗಳ ಉತ್ಪನ್ನಗಳು ದೊರೆಯುತ್ತವೆ, ಅದರಲ್ಲೂ ಸೂಕ್ಷ್ಮಕಣ್ಣುಗಳು ಇರುವವರಿಗೆ ವಿಶೇಷವಾಗಿ ಲಕ್ಷ್ಯವಿಟ್ಟು ಬಿಡುಗಡೆ ಮಾಡಿರುತ್ತಾರೆ. ಆದಾಗ್ಯೂ ನೀವು ಇಂತಹ ಉತ್ಪನ್ನಗಳನ್ನು ಎಚ್ಚರಿಕೆಯಿಂದ ಆಯ್ಕೆಮಾಡುವ ಅಗತ್ಯವಿದೆ. ಯಾವಾಗಲೂ ಕೆಲವು ವಿನ್ಯಾಸಗಳನ್ನು ಪ್ರಯತ್ನಿಸಿ ನಿಮಗೆ ಸರಿಹೊಂದುವ ವಿನ್ಯಾಸದ ಉತ್ಪನ್ನವನ್ನು ತೆಗೆದುಕೊಳ್ಳಿ.

ನೀವು ಬಳಸುವ ಉತ್ಪನ್ನಗಳನ್ನು ಅಗಾಗ್ಗೆ ಹೊಸದಾಗಿ ತನ್ನಿ

ನೀವು ಬಳಸುವ ಉತ್ಪನ್ನಗಳನ್ನು ಅಗಾಗ್ಗೆ ಹೊಸದಾಗಿ ತನ್ನಿ

ನಮ್ಮಲ್ಲಿ ಅನೇಕರು ಕೆಲವು ತಿಂಗಳುಗಳ ಸಮಯ ಬಳಸದೇ ಇರುವ ಪದಾರ್ಥಗಳನ್ನು ಎಸೆಯಬಹುದು. ಹಾಗೆ ಮಾಡುವುದರಿಂದ ನಿಮ್ಮ ಸೂಕ್ಷ್ಮಕಣ್ಣುಗಳಿಗೆ ಒಳ್ಳೆಯದೇ ಆಗುತ್ತದೆ. ನೀವು ಆ ಪದಾರ್ಥಗಳನ್ನು ಸ್ವಚ್ಚವಾಗಿಟ್ಟುಕೊಂಡಿದ್ದರೂ ಸಹ ಹಳೆಯಾದಂತೆ ಅವುಗಳಲ್ಲಿ ಬ್ಯಾಕ್ಟೀರಿಯ ಅಪಾಯದ ಸಂಭವವಿರುತ್ತದೆ. ಆದ್ದರಿಂದ ವಿಶೇಷವಾಗಿ ನಿಮ್ಮ ಕಣ್ಣುಗಳಲ್ಲಿ ಸಂಭವಿಸಬಹುದಾದ ಕಿರಿಕಿರಿಯನ್ನು ತಪ್ಪಿಸಲು ಆಗಾಗ್ಗೆ ಹೊಸದಾಗಿ ಕೊಳ್ಳಿರಿ.

ಅಡಿಲೇಪ (ಪ್ರೈಮರ್) ಮತ್ತು ಫೌಂಡೇಶನ್

ಅಡಿಲೇಪ (ಪ್ರೈಮರ್) ಮತ್ತು ಫೌಂಡೇಶನ್

ಅಡಿಲೇಪ ಮತ್ತು ಫೌಂಡೇಶನ್ ಮೇಕಪ್ ಅನ್ನು ಭದ್ರವಾಗಿ ಕೂಡಿಸಿಕೊಳ್ಳುವುದಲ್ಲದೆ ನಿಮ್ಮ ಕಣ್ಣುಗಳ ಸುತ್ತ ಇರುವ ಸೂಕ್ಷ್ಮ ಚರ್ಮ ಮತ್ತು ಮೇಕಪ್ ನಡುವೆ ಇದ್ದು ರಕ್ಷಣೆ ಕೊಡುತ್ತದೆ. ನಿಮ್ಮ ಕಣ್ಣುಗಳ ಬಳಿ ಲೇಪಿಸಲು ಸಾಮಾನ್ಯ ಉತ್ಪನ್ನಗಳಿಗಿಂತಾ ಮಹತ್ತರವಾದ ಮತ್ತು ನಯವಾದ ವಿಶೇಷ ಅಡಿಲೇಪ ಮತ್ತು ಫೌಂಡೇಶನ್‌ಗಳು ಲಭ್ಯವಿವೆ. ಆದರೆ ಅಂತಹ ಉತ್ಪನ್ನಗಳಲ್ಲಿ ಸರಿಯಾದದನ್ನು ಆಯ್ಕೆಮಾಡಿ, ಅದರಲ್ಲಿರುವ ಕ್ರೀಮನ್ನು ನಿಮ್ಮ ಚರ್ಮದ ಮೇಲೆ ಮೃದುವಾಗಿ ಲೇಪಿಸಿ ಅಡ್ಡ ಪರಿಣಾಮವಿಲ್ಲದಿದ್ದರೆ ಮಾತ್ರ ನಿಮ್ಮ ಮೇಕಪ್ಪಿಗೆ ಬಳಸಿ.

ಕಣ್ಣಿಗೆ ಹಚ್ಚುವ ಕಪ್ಪು (ಮಸ್ಕರಾ)

ಕಣ್ಣಿಗೆ ಹಚ್ಚುವ ಕಪ್ಪು (ಮಸ್ಕರಾ)

ನಿಮ್ಮ ಕಣ್ಣುಗಳ ರೆಪ್ಪೆಗಳು ದೊಡ್ಡದಾಗಿ ಕಾಣಿಸಲು ಕಪ್ಪು ಹಚ್ಚುವುದನ್ನು ತಪ್ಪಿಸಿ, ಏಕೆಂದರೆ ಅವುಗಳಲ್ಲಿ ನಾರುಗಳಿದ್ದು ನಿಮ್ಮ ಸೂಕ್ಷ್ಮ ಕಣ್ಣುಗಳಿಗೆ ಕಿರಿಕಿರಿಯನ್ನುಂಟು ಮಾಡಬಹುದು. ಕೆಲವರು ಕಣ್ಣು ರೆಪ್ಪೆಗಳ ರಂಗನ್ನು ಬಳಸಬಹುದು. ಅದರೂ ಅಂತಹ ವಸ್ತುವನ್ನು ಬಳಸುವ ಮುನ್ನ ನಿಮ್ಮ ಚರ್ಮದ ಮೇಲೆ ಲೇಪಿಸಿ ಪರೀಕ್ಷಿಸಿರಿ.

ಮೃದುವಾಗಿ ಸ್ಪರ್ಶಿಸಿ

ಮೃದುವಾಗಿ ಸ್ಪರ್ಶಿಸಿ

ಸೂಕ್ಷ್ಮಕಣ್ಣುಗಳ ಸುತ್ತಲೂ ಯಾವಾಗಲೂ ಹಿತಕರವಾಗಿ ಸ್ಪರ್ಶಮಾಡಿ. ನೀವು ಶುಭ್ರವಾದ ಬ್ರಶ್ ಬಳಸುವ ಮುನ್ನ ಯಾವಾಗಲೂ ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆದುಕೊಂಡ ನಂತರವೇ ಮೇಕಪ್ ಬಳಿಯಿರಿ. ಉಪದ್ರವಕಾರಿಗಳು ಕಣ್ಣುಗಳಿಗೆ ಬಹಳ ಬೇಗ ಸುಲಭವಾಗಿ ಪರಿಣಾಮ ಬೀರುವುದರಿಂದ ನೀವು ಶುಚಿಯಾಗಿದ್ದಲ್ಲಿ ಅಂತಹ ಸಮಸ್ಯೆಗಳನ್ನು ತಪ್ಪಿಸಬಹುದು. ಹಾಗೂ ಮೇಕಪ್ ತೆಗೆಯುವ ಮತ್ತು ಹಚ್ಚುವ ಸಮಯದಲ್ಲಿ ನಿಮ್ಮ ಕಣ್ಣುಗಳನ್ನು ಉಜ್ಜಬೇಡಿ.

ಯಾವಾಗಲೂ ಮೇಕಪ್ಪನ್ನು ತೆಗೆದುಹಾಕಿ

ಯಾವಾಗಲೂ ಮೇಕಪ್ಪನ್ನು ತೆಗೆದುಹಾಕಿ

ನಮ್ಮಲ್ಲಿ ಕೆಲವರು ಮೇಕಪ್ಪನ್ನು ತೆಗೆಯಲು ಮರೆಯುತ್ತಾರೆ ಅಥವಾ ಸೋಮಾರಿತನ ತೋರಿಸುತ್ತಾರೆ. ಆದರೆ ನಿಮ್ಮ ಕಣ್ಣುಗಳು ಸೂಕ್ಷ್ಮವಾಗಿದ್ದಲ್ಲಿ ಹೀಗೆ ಮಾಡಬಾರದು. ನೀವು ಯಾವಾಗಲೂ ಪೂರ್ತಿಯಾಗಿ ಮೇಕಪ್ ತೆಗೆಯುವುದಕ್ಕೆ ಸೌಮ್ಯವಾಗಿ ಶುದ್ಧಿಮಾಡುವ ಲೋಶನ್ ಅಥವಾ ಮೇಕಪ್ ರಿಮೂವರ್ ಬಳಸುವದನ್ನು ಖಾತ್ರಿ ಮಾಡಿಕೊಳ್ಳಬೇಕು. ಮೇಕಪ್ ಅನ್ನು ತೆಗೆಯುವುದರ ಮೂಲಕ ಕಣ್ಣಿಗೆ ಬರಬಹುದಾದ ಸೋಂಕುಗಳು ಮತ್ತು ಕೊಳಕು ಪದಾರ್ಥ ಸೇರುವುದರಿಂದ ರಕ್ಷಿಸಬಹುದು.

ವಿವಿಧ ಬಣ್ಣಗಳನ್ನು ಆಯ್ಕೆಮಾಡಿರಿ

ವಿವಿಧ ಬಣ್ಣಗಳನ್ನು ಆಯ್ಕೆಮಾಡಿರಿ

ಕೆಲವರು ಹಲವು ನಿರ್ದಿಷ್ಟ ಬಣ್ಣಗಳ ವ್ಯತ್ಯಾಸವು ಐಲೈನರ್‌ಗಳಿಗೆ ಹೇಗೆ ಪ್ರತಿಕ್ರಿಯೆಯಾಗುತ್ತದೆಂಬುದನ್ನು ಗಮನಿಸುತ್ತಾರೆ. ಇದನ್ನು ಕಂಡುಹಿಡಿಯಲು ನೀವು ಗಾಢ ಕಪ್ಪು ಬಣ್ಣದ ಐಲೈನರ್ ಬಳಸುತ್ತಿದ್ದರೆ, ಹಗುರವಾದ ಬಣ್ಣವನ್ನು ಅಂದರೆ ಮಸುಕಿನ ಅಥವಾ ಡಾರ್ಕ್ ಬ್ರೌನ್ ಬಣ್ಣವನ್ನು ಪ್ರಯತ್ನಿಸಿ ನಿಮ್ಮ ಸೂಕ್ಷ್ಮಕಣ್ಣುಗಳಿಗೆ ಏನಾದರೂ ವ್ಯತ್ಯಾಸವಿದೆಯೇ ಎಂಬುದನ್ನು ಗಮನಿಸಿ.

English summary

10 Simple Makeup Tips For Sensitive Eyes

Irritation is common problem, experienced by people who have sensitive eyes. This problem can make the everyday work difficult and sometimes unmanageable. For women with sensitive eyes, applying eye makeup might be a skillful task. Here, we give you a few practical tips for eye makeup for sensitive eyes to stay away from the above issues.
X
Desktop Bottom Promotion