For Quick Alerts
ALLOW NOTIFICATIONS  
For Daily Alerts

ಮದರಂಗಿ ಬಣ್ಣ ಬೇಗನೆ ಮಾಸದಿರಲು ಟಿಪ್ಸ್

|

ನಮ್ಮಲ್ಲಿ ಯಾವುದೇ ಶುಭ ಸಮಾರಂಭಗಳಿರಲಿ ಹೆಣ್ಣು ಮಕ್ಕಳಲ್ಲಿ ಮೆಹಂದಿ ಹಚ್ಚುವ ಸಂಭ್ರಮ ಅಂತೂ ಇದ್ದೇ ಇರುತ್ತದೆ. ಮದುವೆ ಮತ್ತೆ ಕೆಲವೊಂದು ಸಮಾರಂಭಗಳಲ್ಲಿ ಮೆಹಂದಿ ಹಚ್ಚುವ ಶಾಸ್ತ್ರ ಕೂಡ ಇದೆ. ಕೈ ಮತ್ತು ಕಾಲಿಗೆ ಆಕರ್ಷಕ ವಿನ್ಯಾಸ ಮೆಹಂದಿ ಹಚ್ಚಿ, ನಂತರ ಮೆಹಂದಿ ಬಣ್ಣ ಗಾಢವಾಗಿ ಬಂದರೆ ಅದನ್ನು ತನ್ನ ಗೆಳತಿಯರಿಗೆ ತೋರಿಸಿ ಸಂತೋಷ ಪಡುವಾಗ, ಅದನ್ನು ನೋಡುವವರಿಗೆ ತಾವೂ ಮೆಹಂದಿ ಹಾಕಿಸಬೇಕೆಂದು ಅನಿಸುವುದು ಸಹಜ.

ಈಗಂತೂ ಮೆಹಂದಿ ಹಾಕುವುದು ಒಂದು ವ್ಯಾಪಾರವಾಗಿದೆ. ಒಂದು ಕೈಗೆ ಮೆಂಹಂದಿ ಹಾಕಲು 50-100 ರುಪಾಯಿ ತೆಗೆದುಕೊಳ್ಳುತ್ತಾರೆ. ಹಾಕಿಸಿಕೊಳ್ಳುವರಿಗೂ ಹಾಗೇ ನೋಡಿದರೆ ಲಾಭವೇ. ಬ್ಯೂಟಿ ಪಾರ್ಲರ್ ಗೆ ಹೋಗಿ ಮದು ಮಗಳು ಮೆಹಂದಿ ಹಾಕಿಸಿದರೆ ಸಾವಿರದಿಂದ ಎರಡು ಸಾವಿರ ರುಪಾಯಿ ತೆಗೆದುಕೊಳ್ಳುತ್ತಾರೆ. ಅದೇ ಬೀದಿ ಬದಿಯಲ್ಲಿಯಾದರೆ 200-300 ರುಪಾಯಿ ಒಳಗೆ ಕೈ ಮತ್ತು ಕಾಲಿನಲ್ಲಿ ಆಕರ್ಷಕ ವಿನ್ಯಾಸದ ಮೆಹಂದಿಯ ವಿನ್ಯಾಸವನ್ನು ಹಾಕಿಸಬಹುದು.

ತಾವು ಹಾಕಿಸಿದ ಮೆಹಂದಿ ಕಡು ಕೆಂಪಾಗಿ ಬರಬೇಕೆಂದು ಎಲ್ಲರೂ ಆಶಿಸುತ್ತಾರೆ. ಅಲ್ಲದೆ ಹಚ್ಚಿದ ಮೆಹಂದಿ ಒಂದು ವಾರದೊಳಗೆ ಸ್ವಲ್ಪ-ಸ್ವಲ್ಪವಾಗಿ ಮಾಸುವಾಗ ಛೇ... ಇಷ್ಟು ಬೇಗ ಹೋಯ್ತಲ್ಲಾ ಅಂತ ಬೇಜಾರುಗುತ್ತದೆ. ಮೆಹಂದಿ ಬೇಗನೆ ಮಾಸುವುದನ್ನು ತಡೆಯಲು ಕೆಲವೊಂದು ಉಪಾಯಗಳಿವೆ. ಅವುಗಳತ್ತ ಕಣ್ಣಾಡಿಸೋಣವೇ?

 ಮೆಹಂದಿ ಹಚ್ಚುವ ಮುನ್ನ

ಮೆಹಂದಿ ಹಚ್ಚುವ ಮುನ್ನ

* ಮೆಹಂದಿ ಹಚ್ಚುವ ಮುನ್ನ ಕೈಯನ್ನು ತೊಳೆದು, ಹಚ್ಚುವ ಭಾಗಕ್ಕೆ ಟೋನರ್ ಅಥವಾ ಆಸ್ಟ್ರೋಜೆಂಟ್ ಹಚ್ಚಿ. ಇದು ಕೈಯಲ್ಲಿರುವ ಎಣ್ಣೆಯಂಶ ತೆಗೆದು ಕೈಗೆ ಮೆಹಂದಿ ಚೆನ್ನಾಗಿ ಹಿಡಿಯುವಂತೆ ಮಾಡುತ್ತದೆ.

ಗಾಢವಾಗಿ ಹಚ್ಚಿ

ಗಾಢವಾಗಿ ಹಚ್ಚಿ

* ಮೆಹಂದಿ ವಿನ್ಯಾಸವನ್ನು ಸ್ವಲ್ಪ ಗಾಢವಾಗಿ ಹಾಕಿ, ಗಾಢವಾದ ಲೈನ್ ಇದ್ದರೆ ಬೇಗನೆ ಮಾಸುವುದಿಲ್ಲ.

 ಮೆಹಂದಿ ಹಚ್ಚಿ ಬೇಗನೆ ತೆಗೆಯಬೇಡಿ

ಮೆಹಂದಿ ಹಚ್ಚಿ ಬೇಗನೆ ತೆಗೆಯಬೇಡಿ

* ಮೆಹಂದಿ ಹಚ್ಚಿ ಬೇಗನೆ ತೆಗೆಯಬೇಡಿ, ಅದು ಸಂಪೂರ್ಣ ಒಣಗಿದ ಮೇಲೆ ಮೆಹಂದಿಯನ್ನು ತೊಳೆಯಿರಿ. ಇದರಿಂದ ಮೆಹಂದಿ ಕೈಗೆ ಚೆನ್ನಾಗಿ ಹಿಡಿಯುತ್ತದೆ. ಆದ್ದರಿಂದ ಮೆಹಂದಿ ಹಚ್ಚುವಾಗ ಸ್ವಲ್ಪ ಪುರುಸೊತ್ತು ಮಾಡಿಕೊಂಡು ಹಚ್ಚುವುದು ಒಳ್ಳೆಯದು.

ಹಚ್ಚಿದ ಬಳಿಕ ಈ ರೀತಿ ಮಾಡಿ

ಹಚ್ಚಿದ ಬಳಿಕ ಈ ರೀತಿ ಮಾಡಿ

* ಸಕ್ಕರೆ ಮತ್ತು ನಿಂಬೆರಸವನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಅದನ್ನು ಸ್ವಲ್ಪ ಬಿಸಿ ಮಾಡಿ ತಣ್ಣಗಾಗಲು ಇಡಿ, ಮೆಹಂದಿ ಹಚ್ಚಿದ ನಂತರ ಮೆಹಂದಿ ಸ್ವಲ್ಪ ಒಣಗುವಾಗ ಈ ದ್ರಾವಣವನ್ನು ಕೈ ಮೇಲೆ ಚಿಮುಕಿಸಿ. ದ್ರಾವಣ ತುಂಬಾ ಗಟ್ಟಿಯಾಗಿದ್ದರೆ ಸ್ವಲ್ಪ ನಿಂಬೆ ರಸ ಹಿಂಡಿ ಮಿಕ್ಸ್ ಮಾಡಿ ಹಚ್ಚಿ. ಪ್ರತೀ 30 ನಿಮಿಷಕ್ಕೆ ಈ ರೀತಿ ಮಾಡಿ.

ಮೆಹಂದಿ ತೆಗೆದ ಬಳಿಕ

ಮೆಹಂದಿ ತೆಗೆದ ಬಳಿಕ

* ಮೆಹಂದಿಯನ್ನು ಹಚ್ಚಿದ ನಂತರ 2 ಗಂಟೆಗಳವರೆಗೆ ಅದನ್ನು ತೆಗೆಯಬೇಡಿ. ನಂತರ ಮೆಹಂದಿಯನ್ನು ಮೊದಲು ಕೈಯಿಂದ ಕೆರೆದು ತೆಗೆದು ನಂತರ ತೆಂಗಿನೆಣ್ಣೆ ಹಚ್ಚಿ.

ಒಂದು ದಿನದವರೆಗೆ ಸೋಪು ತಾಗಿಸಬೇಡಿ

ಒಂದು ದಿನದವರೆಗೆ ಸೋಪು ತಾಗಿಸಬೇಡಿ

* ಮೆಹಂದಿ ಹಚ್ಚಿದ ನಂತರ 24 ಗಂಟೆ ಕೈಯನ್ನು ಸೋಪು ಹಾಕಿ ಉಜ್ಜಬೇಡಿ.

ಹೇಗಿದೆ ಟಿಪ್ಸ್?

ಹೇಗಿದೆ ಟಿಪ್ಸ್?

ಈ ಟಿಪ್ಸ್ ಬಳಸಿದರೆ ಮೆಹಂದಿ ವಿನ್ಯಾಸ ಸ್ವಲ್ಪ ಅಧಿಕ ದಿನಗಳವರೆಗೆ ನಿಮ್ಮ ಕೈಯಲ್ಲಿ ರಾರಾಜಿಸುತ್ತಿರುತ್ತದೆ.

English summary

Tips To Make Mehndi Last Longer

Mehndi designs fade within two to four weeks or even faster if the person has a lot of work to do with water. So here are some tips to make mehndi last for a longer period of time.
X
Desktop Bottom Promotion