For Quick Alerts
ALLOW NOTIFICATIONS  
For Daily Alerts

ಗೋಧಿ ಮತ್ತು ಎಣ್ಣೆಗೆಂಪಿನ ಮೈ ಬಣ್ಣದವರಿಗೆ ಮೇಕಪ್ ಟಿಪ್ಸ್

|

ಮೇಕಪ್ ಹೆಣ್ಣಿನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂಬ ಮಾತು ಸುಳ್ಳಲ್ಲ. ಮೇಕಪ್ ಪರ್ಫೆಕ್ಟ್ ಆಗಿದ್ದರೆ ಪ್ರತಿಯೊಬ್ಬರೂ ಆಕರ್ಷಕವಾಗಿ ಕಾಣುತ್ತಾರೆ. ನಾವು ಆಕರ್ಷಕವಾಗಿ ಮೇಕಪ್ ಹೇಗಿರಬೇಕೆಂಬ ಕಾನ್ಸೆಪ್ಟ್ ನಮ್ಮಲ್ಲಿ ಇರಬೇಕು. ಇಲ್ಲದಿದ್ದರೆ ನಾವು ಮಾಡುವ ಮೇಕಪ್ ಸಾಕು ನಮ್ಮನ್ನು ವಿಚಿತ್ರವಾಗಿ ಕಾಣುವಂತೆ ಮಾಡಲು.

ಅದರಲ್ಲೂ ಭಾರತೀಯರಲ್ಲಿ ಹೆಚ್ಚಿನವರದ್ದು ಕಂದು ಬಣ್ಣದ್ದ ಮೈ ಬಣ್ಣ, ಅದಕ್ಕೆ ಹೊಂದುವ ಮೇಕಪ್ ಮಾಡಬೇಕು, ಇಲ್ಲಿ ನಾವು ಗೋಧಿ ಮತ್ತು ಎಣ್ಣೆಗೆಂಪಿನ ಮೈ ಬಣ್ಣದವರು ತಮ್ಮ ಅಂದವನ್ನು ಹೆಚ್ಚಿಸಲು ಪಾಲಿಸಬೇಕಾದ ಮೇಕಪ್ ಟೆಕ್ನಿಕ್ ಏನು ಎಂದು ಟಿಪ್ಸ್ ನೀಡಿದ್ದೇವೆ ನೋಡಿ:

ಫೌಂಡೇಶನ್

ಫೌಂಡೇಶನ್

ಫೌಂಡೇಶನ್ ಆಯ್ಕೆ ಮಾಡುವಾಗ ಎಚ್ಚರದಿಂದ ಆಯ್ಕೆ ಮಾಡಿ. ನಿಮ್ಮ ತ್ವಚೆಯ ಬಣ್ಣಕ್ಕೆ ಹೊಂದುವ ಬಣ್ಣದ ಫೌಂಡೇಶನ್ ಆಯ್ಕೆ ಮಾಡಿ. ಅದರಲ್ಲೂ ಲಿಕ್ವಿಟ್ ಅಥವಾ ಕ್ರೀಮ್ ರೀತಿಯ ಫೌಂಡೇಶನ್ ಬಳಸುವುದು ಒಳ್ಳೆಯದು.

ಪೌಡರ್

ಪೌಡರ್

ಫೌಂಡೇಶನ್ ಹಚ್ಚಿದ ನಂತರ ಪೌಡರ್ ಹಚ್ಚಿದರೆ ಮಾತ್ರ ಪರ್ಫೆಕ್ಟ್ ಫಿನಿಶಿಂಗ್ ಸಿಗುವುದು. ಫೌಂಡೇನ್ ಗೆ ಸರಿ ಹೊಂದುವ ಕಾಂಪ್ಯಾಕ್ಟ್ ಪೌಡರ್ ಬಳಸುವುದು ಒಳ್ಳೆಯದು.

ಬ್ಲಶರ್

ಬ್ಲಶರ್

ಗೋಧಿ ಮತ್ತು ಎಣ್ಣೆಗೆಂಪಿನ ಮೈ ಬಣ್ಣದವರು ಬ್ಲಶರ್ ಬಳಸಿದರೆ ಮತ್ತಷ್ಟು ಆಕರ್ಷಕವಾಗಿ ಕಾಣುವುದು. ಅದರಲ್ಲೂ ಲಿಕ್ವಿಡ್ ಬಣ್ಣದ ಬ್ಲಶರ್ ತುಂಬಾ ಆಕರ್ಷಕವಾಗಿ ಕಾಣುವುದು.

ನೇಲ್ ಪಾಲಿಶ್

ನೇಲ್ ಪಾಲಿಶ್

ನೇಲ್ ಪಾಲಿಶ್ ನಲ್ಲಿ ಶೈನಿ ಕಲರ್ ನೇಲ್ ಪಾಲಿಶ್, ಪರ್ಪಲ್, ಲೈಟ್ ಬ್ರೌನ್ , ಲೈಟ್ ಮೆರೂನ್ ಕಲರ್ ನೇಲ್ ಪಾಲಿಶ್ ಚೆನ್ನಾಗಿ ಕಾಣುತ್ತದೆ.

ಐ ಶ್ಯಾಡೋ

ಐ ಶ್ಯಾಡೋ

ಬ್ರೌನ್ ಕಲರ್, ಕಾಪರ್ ಕಲರ್ ಐ ಶ್ಯಾಡೋ ಕಣ್ಣಿನ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ತುಂಬಾ ಎದ್ದು ಕಾಣುವ ಬಣ್ಣದ ಐ ಶ್ಯಾಡೋ ಹಚ್ಚದಿರುವುದು ಒಳ್ಳೆಯದು.

 ಐ ಲೈನರ್

ಐ ಲೈನರ್

ಕಪ್ಪು ಅಥವಾ ನೇರಳೆ ಬಣ್ಣದ ಐ ಲೈನರ್ ಬಳಸಬಹುದು. ಕಾಜಲ್ ಹಾಕುವುದಾದರೆ ಸ್ಪ್ರೆಡ್ ಆಗದಿರಲು, ಕಣ್ಣಿನ ಸುತ್ತ ಪೌಡರ್ ಹಚ್ಚಿ ನಂತರ ಕಾಜಲ್ ಬಳಸಿ.

 ತುಟಿಯ ಬಣ್ಣ

ತುಟಿಯ ಬಣ್ಣ

ಹೆಚ್ಚಿನವರಿಗೆ ನಮಗೆ ಹೊಂದುವ ಲಿಪ್ ಸ್ಟಿಕ್ ಯಾವುದು ಎಂಬ ಐಡಿಯಾ ಇಲ್ಲದೆಯೇ ಹಾಕುತ್ತಾರೆ. ಹಾಗೇ ಮಾಡಬೇಡಿ, ಮೈ ಬಣ್ಣಕ್ಕೆ ಹೊಂದುವ ಲಿಪ್ ಸ್ಟಿಕ್ ಮಾತ್ರ ನಮ್ಮ ಅಂದವನ್ನು ಹೆಚ್ಚಿಸುವುದು. ಗೋಧಿ ಅಥವಾ ಎಣ್ಣೆಗೆಂಪಿನವರಿಗೆ ವೈನ್, ರೆಡ್, ಪ್ಲಮ್ ಕಲರ್ ಲಿಪ್ ಸ್ಟಿಕ್ ಆಕರ್ಷಕವಾಗಿ ಕಾಣುವುದು.

 ಕಾಸ್ಟ್ಯೂಮ್

ಕಾಸ್ಟ್ಯೂಮ್

ಮೇಕಪ್ ಗೆ ತಕ್ಕಂತೆ ನಿಮ್ಮ ಕಾಸ್ಟ್ಯೂಮ್ ಕೂಡ ನಿಮ್ಮ ಮೈ ಬಣ್ಣಕ್ಕೆ ಹೊಂದುವಂತೆ ಇರಲಿ. ಲೈಟ್ ಕಲರ್ ಡ್ರೆಸ್ ಎಣ್ಣೆಗೆಂಪಿನ ಮೈ ಬಣ್ಣದವರಿಗೆ ಆಕರ್ಷಕವಾಗಿ ಕಾಣುತ್ತದೆ.

English summary

Makeup Tips For Dusky Complexions

Your dusky complexion is suitable for a diverse range of makeover trials. Selection of the right makeup is very important because a wrong choice that does not match your skin tone may spoil your beauty.
X
Desktop Bottom Promotion