For Quick Alerts
ALLOW NOTIFICATIONS  
For Daily Alerts

ಎಣ್ಣೆ ತ್ವಚೆಯವರಿಗೆ ಮೇಕಪ್ ಟಿಪ್ಸ್

|

ಎಣ್ಣೆ ತ್ವಚೆಯವರಿಗೆ ಮೇಕಪ್ ಮಾಡಿದರೆ ಸ್ವಲ್ಪ ಹೊತ್ತಿನಲ್ಲಿಯೇ ತ್ವಚೆ ಎಣ್ಣೆ-ಎಣ್ಣೆಯಾಗಿ ಕಾಣುತ್ತದೆ. ಎಣ್ಣೆ ತ್ವಚೆಯವರು ಸಾಮಾನ್ಯ ತ್ವಚೆಗೆ ಮಾಡುವಂತೆ ಮೇಕಪ್ ಮಾಡಿದರೆ ತುಂಬಾ ಹೊತ್ತು ಉಳಿಯುವುದಿಲ್ಲ.

ಎಣ್ಣೆ ತ್ವಚೆಗೆ ಮೇಕಪ್ ಮಿಸ್ಟೇಕ್ ಮಾಡಿದರೆ, ಮೇಕಪ್ ಮಾಡಿದರೂ ಆಕರ್ಷಕವಾಗಿ ಕಾಣಲು ಸಾಧ್ಯವಿಲ್ಲ. ಆದ್ದರಿಂದ ಎಣ್ಣೆ ತ್ವಚೆಯವರು ಮೇಕಪ್ ನ ನಂತರ ಆಕರ್ಷಕವಾಗಿ ಕಾಣಲು ಈ ಕೆಳಗಿನ ಟಿಪ್ಸ್ ಅನುಸರಿಸಬಹುದು:

Makeup Tips For Oily Skin

ಮೇಕಪ್ ಗೆ ಮುನ್ನ ಮುಖವನ್ನು ತೊಳೆಯಿರಿ: ಮೇಕಪ್ ಮಾಡುವ ಮೊದಲು ಮುಖವನ್ನು ತೊಳೆಯಬೇಕು. ಅದರಲ್ಲೂ ಸ್ಕ್ರಬ್ಬರ್ ಬಳಸಿ ಮುಖ ತೊಳೆಯುವುದು ಒಳ್ಳೆಯದು. ಆದ್ದರಿಂದ ತ್ವಚೆಯಲ್ಲಿ ಎಣ್ಣೆಯಂಶ ಇರುವುದಿಲ್ಲ.

ಐಸ್ ಕ್ಯೂಬ್ : ಮುಖ ತೊಳೆದು ಒರೆಸಿದ ನಂತರ ಮುಖಕ್ಕೆ ಐಸ್ ಉಜ್ಜಿ ಹಾಗೆಯೇ ಒಣಗಲು ಬಿಡಿ. ನಂತರ ಮೇಕಪ್ ಮಾಡಿದರೆ ತ್ವಚೆ ಎಣ್ಣೆಯಾಗಿ ಕಾಣುವುದಿಲ್ಲ, ಮೇಕಪ್ ಕೂಡ ತುಂಬಾ ಸಮಯ ಉಳಿಯುತ್ತದೆ.

ಲಿಕ್ವಿಡ್ ಪೌಂಡೇಷನ್ ಬಳಸಬೇಡಿ: ಲಿಕ್ವಿಡ್ ಪೌಂಡೇಷನ್ ಹಚ್ಚಿದರೆ ಮುಖ ಮತ್ತಷ್ಟು ಎಣ್ಣೆಯಾಗುತ್ತದೆ. ಆದ್ದರಿಂದ ಪೌಂಡೆಷನ್ ಪೌಡರ್ ಬಳಸಿ.

ಸಲಹೆ: ಕೈಯಲ್ಲಿ ಟಿಶ್ಯೂ ಪೇಪರ್ ಇರಲಿ. ಮುಖ ಎಣ್ನೆಯಾಗುವಾಗ ಒರೆಸಬೇಕು. ಈ ರೀತಿ ಮಾಡಿದರೆ ತ್ವಚೆಯಲ್ಲಿ ಎಣ್ಣೆಯಂಶ ಎದ್ದು ಕಾಣುವುದಿಲ್ಲ.

English summary

Makeup Making Your Face Oily? Try These | Makeup Tips | ಎಣ್ಣೆ ತ್ವಚೆಯವರಿಗೆ ಮೇಕಪ್ ಟಿಪ್ಸ್ | ಮೇಕಪ್ ಟಿಪ್ಸ್

Our face gets oily after makeup due to many reasons. Oily makeup could mean that you have committed some fundamental makeup mistakes. If you already have oily skin, then your face might look sticky after makeup.
 
X
Desktop Bottom Promotion