For Quick Alerts
ALLOW NOTIFICATIONS  
For Daily Alerts

ಸುಂದರ ಕಣ್ಣಿಗಾಗಿ ಮೇಕಪ್‌ನ ಸ್ಪರ್ಶ

By Manohar.V
|

ಮೇಕಪ್ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ ? ಉತ್ತಮವಾದ ಮೇಕಪ್‌ ಹಲವಾರು ಜನರ ಗಮನವನ್ನು ನಿಮ್ಮ ಕಡೆಗೆ ಸೆಳೆಯುವಂತೆ ಮಾಡುತ್ತದೆ. ನಿಜವಾದ ಸಂದೇಶವನ್ನು ವಿನಿಮಯ ಮಾಡಿಕೊಳ್ಳುವ ನಮ್ಮ ದೇಹದ ಪ್ರಮುಖ ಅಂಗ ಕಣ್ಣುಗಳಾಗಿವೆ ಮತ್ತು ಅವುಗಳನ್ನು ಆಕರ್ಷಣೀಯ ಹಾಗೂ ಸುಂದರವನ್ನಾಗಿಸುವುದು ಮುಖ್ಯವಾಗಿದೆ. ಹೊಳೆಯುವ ಕಣ್ಣುಗಳು ಶ್ರೇಷ್ಟತೆಯ ಸಂಕೇತ! ನಿಮ್ಮ ಕಣ್ಣುಗಳು ನಿಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ ಎಂದು ನಿಮಗನಿಸಿದರೆ ಸಣ್ಣ ಹಾಗೂ ಸರಳ ಮೇಕಪ್ ಮೂಲಕ ಜಾದೂವನ್ನು ಮಾಡಬಹುದು. ಸರಳ ಮೇಕಪ್ ಸ್ಪರ್ಶ ಹಾಗೂ ಸಣ್ಣ ಕಾಳಜಿಯೊಂದಿಗೆ ನಿಮ್ಮ ಕಣ್ಣುಗಳನ್ನು ಹೊಳೆಯುವಂತೆ ಮಾಡಿ.

ಮೇಕಪ್ ನಿಮ್ಮ ವಯಸ್ಸಿನ ಅಂತರವನ್ನು ಕಡಿಮೆಗೊಳಿಸುವುದರ ಜೊತೆಗೆ ನಿಮ್ಮ ಸೌಂದರ್ಯವನ್ನು ಇನ್ನಷ್ಟು ಇಮ್ಮಡಿಗೊಳ್ಳುವಂತೆ ಮಾಡುತ್ತದೆ. ಮೇಕಪ್ ಮಾಡುವಾಗ ಕೆಲವೊಂದು ಸೂಕ್ಷ್ಮತೆಗಳ ಬಗೆಗೂ ನಾವು ಗಮನಹರಿಸಬೇಕು, ಅಪಾಯವಾಗದಂತೆ ನೋಡಿಕೊಳ್ಳಬೇಕು ಕೆಲವೊಂದು ಮೇಕಪ್ ನಿಮ್ಮ ಮುಖದ ಅಂದವನ್ನು ಹಾಳುಗೆಡುವುತ್ತದೆ ಹಾಗೂ ನಿಮ್ಮ ನಿಮ್ಮಲ್ಲಿ ನಿರಾಸಕ್ತಿ ಮೂಡಿಸುತ್ತದೆ. ಇದಿಷ್ಟರ ಬಗೆಗೆ ನೀವು ಕಾಳಜಿ ವಹಿಸಿದರೆ ಸಾಕು ಸರಳ ಸುಂದರ ಮೇಕಪ್ ಕಲೆ ನಿಮಗೆ ಕರತಲಾಮಲಕವಾಗುತ್ತದೆ ಇಂದು ನಾವು ನಿಮಗಾಗಿ ನೀಡಿರುವ ಮೇಕಪ್ ಸಲಹೆಗಳು ಕಣ್ಣಿಗೆ ಸಂಬಂಧಪಟ್ಟದ್ದಾಗಿದೆ. ಸರಳ ಹಾಗೂ ಉತ್ತಮ ಅಂಶವುಳ್ಳ ಮೇಕಪ್‌ನೊಂದಿಗೆ ನಿಮ್ಮ ಕಣ್ಣನ್ನು ಇನ್ನಷ್ಟು ಕಂಗೊಳಿಸುವಂತೆ ಮಾಡಿ.

ಯಾವಾಗ ಬೇಕಾದರೂ ಮಾಡಿಕೊಳ್ಳಬಹುದಾದ ಸರಳ ಸುಂದರ ಮೇಕಪ್ ಸಲಹೆಗಳನ್ನು ನೀವು ಆವಶ್ಯವಾಗಿ ಪಾಲಿಸಲೇಬೇಕು. ಅಂತಹ ಕೆಲವೊಂದು ನಿಮಗಾಗಿ

ನಿಮ್ಮ ಅಂದವನ್ನು ಮೇಕಪ್ ಮೂಲಕ ಹೊರತೆಗೆಯಲು ಬಯಸಿರುವಿರೆಂದರೆ ಮುಂದೆ ಓದಿ :

1. ನಿಮ್ಮ ಕಣ್ರೆಪ್ಪೆಗಳು ಮಾತನಾಡಲಿ

1. ನಿಮ್ಮ ಕಣ್ರೆಪ್ಪೆಗಳು ಮಾತನಾಡಲಿ

ಕಣ್ಣಿನ ಮೇಕಪ್ ವಿಷಯಕ್ಕೆ ಬಂದಾಗ ನಿಮ್ಮ ಕಣ್ರೆಪ್ಪೆಗಳು ಹೆಚ್ಚು ಗಮನಸೆಳೆಯುತ್ತವೆ. ಕಣ್ಣಿಗಿರುವ ಮೇಕಪ್‌ಗಳು ಹಲವಾರಿವೆ, ಕಣ್ರೆಪ್ಪೆಗಳನ್ನು ಆಕರ್ಷಣೀಯಗೊಳಿಸಲು ಅವುಗಳನ್ನು ಕರ್ಲ್ ಮಾಡಬಹುದು. ಮಸ್ಕರಾವನ್ನು ಬಳಸಿಕೊಂಡು ಆರೋಗ್ಯವಂತ ಮತ್ತು ಸುಂದರಗೊಳಿಸಬಹುದು. ಮಸ್ಕರಾ ಕಣ್ರೆಪ್ಪೆಗಳನ್ನು ವಿಶಾಲಗೊಳಿಸಿ ಇನ್ನಷ್ಟು ಸುಂದರಗೊಳಿಸುತ್ತವೆ. ನಕಲಿ ಕಣ್ರೆಪ್ಪೆಗಳನ್ನು ಕೂಡ ನೀವು ಬಳಸಿಕೊಳ್ಳಬಹುದು.

2. ನಿಮ್ಮ ಹುಬ್ಬುಗಳ ಆಕಾರದ ಕಡೆ ಗಮನವಿರಲಿ:

2. ನಿಮ್ಮ ಹುಬ್ಬುಗಳ ಆಕಾರದ ಕಡೆ ಗಮನವಿರಲಿ:

ನಿಮ್ಮ ಕಣ್ಣಿನ ಆಕಾರ ಮತ್ತು ಹೊಳಪನ್ನು ವ್ಯಾಖ್ಯಾನಿಸುವಲ್ಲಿ ಹುಬ್ಬುಗಳು (eyebrows)ಕೂಡ ಪ್ರಮುಖ ಪಾತ್ರವಹಿಸುತ್ತವೆ. ನಿಮ್ಮ ಕಣ್ಣಿನ ಅಂದ ಹೆಚ್ಚಬೇಕಿದ್ದರೆ, ನಿಮ್ಮ ಹುಬ್ಬುಗಳ ಕಡೆ ಗಮನ ನೀಡುವುದು ಅವಶ್ಯಕ. ಆಕಾರ ನೀಡಿದ ಹುಬ್ಬುಗಳು ಕಣ್ಣುಗಳನ್ನು ಹೊಳೆಯುವಂತೆ ಮಾಡುತ್ತವೆ. ನಾವು ಸುಂದರ ಆಕಾರ ನೀಡಿದಂತೆ ಹುಬ್ಬಿನೊಂದಿಗೆ ಕಣ್ಣುಗಳೂ ಕೂಡ ತೀಕ್ಷ್ಣವಾಗಿ ಹೊಳೆಯುವಂತೆ ಕಾಣುತ್ತದೆ. ಸ್ವಲ್ಪ ದಪ್ಪವಿರುವ ಹುಬ್ಬುಗಳು ನಿಮ್ಮ ಕಣ್ಣಿನ ಅಂದವನ್ನು ಇನ್ನಷ್ಟು ಹೆಚ್ಚಿಸುತ್ತವೆ.

3. ಸೂಕ್ತ ಸಲಹೆ :

3. ಸೂಕ್ತ ಸಲಹೆ :

ನಿಮ್ಮ ಕಣ್ಣು ಹೊಳೆಯುವಂತೆ ಕಾಣಬೇಕಿದ್ದರೆ, ಸೂಕ್ತವಾಗಿರುವ ಲೈನರ್ ಅಥವಾ ಕಾಡಿಗೆಯನ್ನು ಬಳಸಿ. ನಿಮ್ಮ ಕಣ್ಣನ್ನು ಅಗಲವಾಗಿ ಮತ್ತು ದೊಡ್ಡದನ್ನಾಗಿ ಕಾಣುವಂತೆ ಮಾಡಲು ಕಣ್ಣಿನ ಕೆಳಗೆ ನಿಮ್ಮ ಮೇಕಪ್ ಅನ್ನು ಗಾಢಗೊಳಿಸಿ ಇದು ಒಂದು ಸರಳ ಕಣ್ಣಿನ ಮೇಕಪ್ ಆಗಿದ್ದು, ನೀವು ಎಂದಿಗೂ ಅನುಸರಿಸಬಹುದು.

4. ವಾರ್ಮ್ ಶೇಡ್:

4. ವಾರ್ಮ್ ಶೇಡ್:

ಇದು ಖಂಡಿತವಾಗಿಯೂ ನಿಮ್ಮ ಕಣ್ಣಿನ ಸೌಂದರ್ಯವನ್ನು ಹೆಚ್ಚಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಕಣ್ಣಿನ ವಿಶಾಲತೆಗೆ ಚೆನ್ನಾಗಿ ಹೊಂದಿಕೊಳ್ಳುವ ಇದು ನಿಮ್ಮ ಕಣ್ಣಿನ ಸುತ್ತಲಿರುವ ಕಪ್ಪು ಕಲೆಯನ್ನು ತೆಗೆದು ಹಾಕುವುದರ ಜೊತೆಗೆ, ನಿಮ್ಮ ಕಣ್ಣನ್ನು ಇನ್ನಷ್ಟು ಕಂಗೊಳಿಸುವಂತೆ ಮಾಡುತ್ತದೆ. ಸೂಕ್ತ ರೀತಿಯಲ್ಲಿ ಇದನ್ನು ಪಾಲಿಸಿದರೆ, ನಿಮ್ಮ ಕಣ್ಣು ಪ್ರಕಾಶಮಾನವಾಗಿ ಕಾಣುತ್ತದೆ.

5. ಬಣ್ಣಗಳನ್ನು ಪ್ರಯತ್ನಿಸಿ:

5. ಬಣ್ಣಗಳನ್ನು ಪ್ರಯತ್ನಿಸಿ:

ನಿಮ್ಮ ಚರ್ಮಕ್ಕೆ ಸರಿಹೊಂದುವ ವಿಭಿನ್ನ ರೀತಿಯ ಬಣ್ಣಗಳನ್ನು ನೀವು ಪ್ರಯತ್ನಿಸಬಹುದು. ಬಣ್ಣಗಳು ಸೌಂದರ್ಯವನ್ನು ನೀಡುವುದರ ಜೊತೆಗೆ ನಿಮ್ಮ ಮೇಕಪ್ ಅನ್ನು ಎದ್ದುಕಾಣುವಂತೆ ಮಾಡುತ್ತದೆ. ಎರಡು ಶೇಡ್‌ಗಳ ಬಣ್ಣಗಳನ್ನು ಬಳಸಿ ಕಣ್ಣಿನ ಮೇಲ್ಭಾಗಕ್ಕೆ ಮೇಕಪ್ ಮಾಡಿ, ಬಣ್ಣಗಳನ್ನು ಆರಿಸಿಕೊಳ್ಳುವಾಗ ಜಾಗರೂಕರಾಗಿರಿ.

6. ವಿತರಿಸುವುದು ಹೇಗೆ:

6. ವಿತರಿಸುವುದು ಹೇಗೆ:

ವಿತರಣೆಯು ಕಣ್ಣಿನ ಮೇಕಪ್‌ನ ವಿಷಯದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ನಿಮ್ಮ ಐಶ್ಯಾಡೋವನ್ನು ಸೂಕ್ತವಾಗಿ ಮತ್ತು ಹೊಂದಿಕೊಳ್ಳುವಂತೆ ಇದು ಮಾಡುತ್ತದೆ. ನೀವು ಸೂಕ್ತ ಬಣ್ಣಗಳನ್ನು ಕೂಡ ಆರಿಸಬೇಕು. ಐಶ್ಯಾಡೋದ ದಪ್ಪ ಗೆರೆಯನ್ನು ಮಧ್ಯಭಾಗದಲ್ಲಿ ಹಚ್ಚಿ ಇದೊಂದು ಸರಳ ತಂತ್ರವಾಗಿದೆ. ಮಧ್ಯಭಾಗವು ಕಣ್ಣಿನ ಅಗಲವಾದ ಭಾಗವಾಗಿದೆ, ಇಲ್ಲಿ ಐಶ್ಯಾಡೋವನ್ನು ನೀವು ಹಚ್ಚಿಕೊಳ್ಳುವುದರಿಂದ ಇದು ನಿಮ್ಮ ಕಣ್ಣನ್ನು ವಿಶಾಲ ಮತ್ತು ಹೊಳೆಯುವಂತೆ ಮಾಡುತ್ತದೆ.

7. ಗುಲಾಬಿ ತುಟಿಗಳು:

7. ಗುಲಾಬಿ ತುಟಿಗಳು:

ನಿಮಗೆ ಕಣ್ಣಿನ ಮೇಕಪ್ ಮಾಡಿಕೊಳ್ಳಲು ಇಷ್ಟವಿಲ್ಲದಿದ್ದರೆ ನಿಮ್ಮ ತುಟಿಗೆ ಗಾಢ ಬಣ್ಣದ ಲಿಪ್‌ಸ್ಟಿಕ್ ಅನ್ನು ಹಚ್ಚಿಕೊಳ್ಳಿ. ಇದು ನಿಮ್ಮ ಕಣ್ಣನ್ನು ಇನ್ನಷ್ಟು ಉತ್ತಮವಾಗಿ ಕಾಣುವಂತೆ ಮಾಡುತ್ತದೆ. ಇದು ನಿಜವಾಗಿಯೂ ಜಾದೂ ಮಾಡುತ್ತದೆ!! ಸುಮ್ಮನೆ ಪ್ರಯತ್ನಿಸಿ!!

English summary

Make Your Eyes Brighter With Makeup: Tips

A makeup is more of an illusion. With a good makeup you can catch everyone’s attention. Eyes are those special organs that convey the real message and it is important you make them attractive and alluring.
Story first published: Monday, December 23, 2013, 9:55 [IST]
X
Desktop Bottom Promotion