For Quick Alerts
ALLOW NOTIFICATIONS  
For Daily Alerts

ದೊಡ್ಡ ಹಣೆ ಇರುವವರಿಗೆ ಕೆಲ ಸ್ಟೈಲಿಷ್ ಹೇರ್ ಸ್ಟೈಲ್

|

ಹೇರ್ ಸ್ಟೈಲ್ ಅನ್ನು ನಮ್ಮ ಮುಖಕ್ಕೆ ಹೊಂದುವಂತೆ ಕತ್ತರಿಸಿದರೆ ಮಾತ್ರ ಆಕರ್ಷವಾಗಿ ಕಾಣುವುದು. ನಮ್ಮ ಫ್ರೆಂಡ್ ಮಾಡಿದ ಹೇರ್ ಸ್ಟೈಲ್ ಚೆನ್ನಾಗಿದೆಯೆಂದು ಅದನ್ನೇ ನಾವು ಮಾಡುವ ಮೊದಲು ಆ ಹೇರ್ ಸ್ಟೈಲ್ ನಮಗೆ ಆಕರ್ಷಕ ಲುಕ್ ನೀಡುವುದಾದರೆ ಮಾತ್ರ ಮಾಡಿಸುವುದು ಒಳ್ಳೆಯದು.

ಕೆಲವರಿಗೆ ಹಣೆ ದೊಡ್ಡದಾಗಿರುತ್ತದೆ. ಅಂಥವರು ಕೂದಲನ್ನು ನೇರವಾಗಿ ಹಿಂದೆಕ್ಕೆ ಬಾಚಿದರೆ ಹಣೆ ಮತ್ತಷ್ಟು ದೊಡ್ಡದಾಗಿ ಕಾಣುವುದು. ಹಣೆ ದೊಡ್ಡದಾಗಿ ಕಾಣದೆ, ನಮ್ಮ ಲುಕ್ ಹೆಚ್ಚಿಸಲು ಇರುವ ಮಾರ್ಗವೆಂದರೆ ಹೇರ್ ಸ್ಟೈಲ್.

ಇಲ್ಲಿ ಕೆಲವು ಸ್ಟೈಲಿಷ್ ಹೇರ್ ಸ್ಟೈಲ್ ಮಾಡಲ್ ನೀಡಿದ್ದೇವೆ. ಈ ಹೇರ್ ಸ್ಟೈಲ್ ದೊಡ್ಡ ಹಣೆಯವರಿಗೆ ಆಕರ್ಷಕ ಲುಕ್ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ:

ಡೆನ್ಸ್ ಸ್ಟ್ರೈಟ್ ಫ್ರಿಂಜ್(dence stright fringes)

ಡೆನ್ಸ್ ಸ್ಟ್ರೈಟ್ ಫ್ರಿಂಜ್(dence stright fringes)

ಈ ಹೇರ್ ಸ್ಟೈಲ್ ಮಾಡರ್ನ್ ಡ್ರೆಸ್ ಗೂ , ಚೂಡಿ, ಮಿಡಿ ಈ ರೀತಿಯ ಡ್ರೆಸ್ಸಿಂಗ್ ಗೂ ಒಪ್ಪುತ್ತದೆ. ಇದು ಹಣೆಯನ್ನು ಮರೆಮಾಚಿ, ನಿಮ್ಮ ಲುಕ್ ಹೆಚ್ಚಿಸುತ್ತದೆ.

ಸೈಡ್ ಬ್ಯಾಂಗ್ಸ್ (side bangs)

ಸೈಡ್ ಬ್ಯಾಂಗ್ಸ್ (side bangs)

ಫ್ರಿಂಜ್ ಹೇರ್ ಕಟ್ ಮಾಡಿಸಿದವರು ಈ ರೀತಿ ಕೂಡ ಹೇರ್ ಸ್ಟೈಲ್ ಮಾಡಬಹುದು. ಇದು ನಿಮ್ಮ ಮುಖಕ್ಕೆ ತುಂಬಾ ಸ್ಟೈಲಿಷ್ ಲುಕ್ ನೀಡುವುದು. ಯಾವುದೇ ಮಾಡರ್ನ್ ಡ್ರೆಸ್ ಗೆ ಹೊಂದುವ ಹೇರ್ ಕಟ್ ಇದಾಗಿದೆ.

 ಸೈಡ್ ಸ್ವೆಪ್ಟ್ ಹೇರ್ (side swept hait)

ಸೈಡ್ ಸ್ವೆಪ್ಟ್ ಹೇರ್ (side swept hait)

ಈ ಹೇರ್ ಸ್ಟೈಲ್ ನಲ್ಲಿ ಕೂದಲನ್ನು ಮುಂದುಗಡೆ ಬಾಚುವುದಿಲ್ಲ. ನೀಳ ಕೂದಲಿಗೆ ಮುಂದುಗಡೆ ಈ ರೀತಿ ವಿನ್ಯಾಸದಲ್ಲಿ ಕಟ್ಟಬೇಕು. ಫಂಕ್ಷನ್ ಗೆ ಹೋಗುವಾಗ ಮಾಡಲು ಸೂಕ್ತವಾದ ಹೇರ್ ಸ್ಟೈಲ್ ಇದಾಗಿದೆ.

 ಲೂಸ್ ಬನ್ ವಿಥ್ ಸೈಡ್ ಫ್ರಿಂಜ್ಸ್

ಲೂಸ್ ಬನ್ ವಿಥ್ ಸೈಡ್ ಫ್ರಿಂಜ್ಸ್

ಕೂದಲನ್ನು ತುರುಬು ಕಟ್ಟಿ ಮುಂದು ಗಡೆ ಈ ಲೂಸ್ ಬನ್ ವಿಥ್ ಸೈಡ್ ಫ್ರಿಂಜ್ಸ್ (loose bun with side fringes) ಹೇರ್ ಸ್ಟೈಲ್ ಮಾಡಿ. ಫ್ಯಾಷನಬಲ್ ಆಗಿ ಕಾಣುವಿರಿ. ಸೀರೆ ಧರಿಸಿದಾಗ ಕೂಡ ಈ ರೀತಿಯ ಹೇರ್ ಸ್ಟೈಲ್ ಮಾಡಬಹುದು.

ಅಸಿಮೆಟ್ರಿಕಲ್ ಸ್ಟ್ರಿಂಜ್(asymmetrical fringes)

ಅಸಿಮೆಟ್ರಿಕಲ್ ಸ್ಟ್ರಿಂಜ್(asymmetrical fringes)

ಕೂದಲನ್ನು ಸಮವಾಗಿ ಕತ್ತರಿಸದೆ ಈ ರೀತಿ ಉದ್ದ ಗಿಡ್ಡವಾಗಿ ಕತ್ತರಿಸಿದರೆ (ಇದನ್ನು ಅಸಿಮೆಟ್ರಿಕಲ್ ಸ್ಟ್ರಿಂಜ್ ಹೇರ್ ಸ್ಟೈಲ್ ಅನ್ನುತ್ತಾರೆ) ಹಣೆ ಎದ್ದು ಕಾಣುವುದಿಲ್ಲ.

ಮೆಸ್ಸೀ ಬಾಬ್ಡ್ ಹೇರ್ ಸ್ಟೈಲ್ (messy bobbed hairstyle)

ಮೆಸ್ಸೀ ಬಾಬ್ಡ್ ಹೇರ್ ಸ್ಟೈಲ್ (messy bobbed hairstyle)

ತುಂಬಾ ಮಂದವಾದ ಕೂದಲಿರುವವರು ಈ ರೀತಿಯ ಹೇರ್ ಸ್ಟೈಲ್ ಟ್ರೈ ಮಾಡಬಹುದು. ಬಾಬ್ ಕಟ್ ನಲ್ಲಿ ಮೆಸ್ಸಿ ಲುಕ್ ನೀಡಲಾಗುವುದು.

 ಚೈನೀಸ್ ಕಟ್(chinese cut)

ಚೈನೀಸ್ ಕಟ್(chinese cut)

ಈ ಹೇರ್ ಸ್ಟೈಲ್ ಅನ್ನು ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಪ್ರಯತ್ನಿಸಬಹುದು. ತುಂಬಾ ತೆಳುವಾದ ಕೂದಲಿರುವವರೆಗೆ ಈ ಹೇರ್ ಸ್ಟೈಲ್ ಬೆಸ್ಟ್.

 ಸೈಡ್ ಸ್ವೆಪ್ಟ್ ಬನ್(side swept bun)

ಸೈಡ್ ಸ್ವೆಪ್ಟ್ ಬನ್(side swept bun)

ಮುಂದುಗಡೆ ಕೂದಲನ್ನು ಕತ್ತರಿಸಿ, ಅದನ್ನು ಬದಿಗೆ ಬಾಚಿ, ನಂತರ ನೀಳ ಕೂದಲನ್ನು ಹಿಂದೆಕ್ಕೆ ಬಾಚಿ ತುರುಬು ಅಥವಾ ಜುಟ್ಟು ಕಟ್ಟಿ.

 ಮಿಡಲ್ ಪಾರ್ಟಟ್ಡ್ ಫ್ರಿಂಜ್ಸ್ (middle parted fringes)

ಮಿಡಲ್ ಪಾರ್ಟಟ್ಡ್ ಫ್ರಿಂಜ್ಸ್ (middle parted fringes)

ಇದು ಸೈಡ್ ಫ್ರಿಂಜ್ಸ್ ಗೆ ಹೋಲುವ ಹೇರ್ ಸ್ಟೈಲ್. ದೊಡ್ಡ ಹಣೆಯವರಿಗೆ ಈ ಹೇರ್ ಸ್ಟೈಲ್ ಕೂಡ ಆಕರ್ಷಕವಾಗಿ ಕಾಣುವುದು. ಈ ಹೇರ್ ಸ್ಟೈಲ್ ನಿಮಗೆ ಬೋಲ್ಡ್ ಅಂಡ್ ಬ್ಯೂಟಿಫುಲ್ ಲುಕ್ ನೀಡುವುದು.

 ಮೆಸ್ಸಿ ಬ್ಲಂಟ್ ಕಟ್(messy blunt cut)

ಮೆಸ್ಸಿ ಬ್ಲಂಟ್ ಕಟ್(messy blunt cut)

ಈ ಹೇರ್ ಸ್ಟೈಲ್ ನೋಡಲು ತುಂಬಾ ನೀಟಾಗಿ, ಆಕರ್ಷಕವಾಗಿ ಕಾಣುವುದು. ಅದರಲ್ಲೂ ಗುಂಗುರು ಕೂದಲಿನವರಿಗೆ ಈ ಹೇರ್ ಸ್ಟೈಲ್ ತುಂಬಾ ಆಕರ್ಷಕವಾಗಿ ಕಾಣುವುದು.

<blockquote class="twitter-tweet blockquote"><p>ಕೂದಲಿನ ಸಮಸ್ಯೆಗಳಿಗೆನೆಲ್ಲಿಕಾಯಿ ಎಣ್ಣೆಪರಿಹಾರವೇ? <a href="http://t.co/wrC9z9XEtt" title="/beauty/hair-care/2013/hair-care-with-amla-005123.html">kannada.boldsky.com/beauty/hair-ca…</a> <a href="https://twitter.com/search/%23Hair">#Hair</a></p>— Boldsky Kannada (@BoldskyKa) <a href="https://twitter.com/BoldskyKa/status/321515076605599745">April 9, 2013</a></blockquote> <script async src="//platform.twitter.com/widgets.js" charset="utf-8"></script>
English summary

Hairstyles To Cover A Broad Forehead | Tips For Hair Style | ದೊಡ್ಡ ಹಣೆ ಮರೆಮಾಚುವ ಹೇರ್ ಸ್ಟೈಲ್ | ಕೂದಲಿನ ವಿನ್ಯಾಸಕ್ಕೆ ಕೆಲ ಸಲಹೆಗಳು

Few women have a very large forehead. There is not much you can do about a large forehead. It is partly hereditary and sometimes it happens due to your wrong combing techniques. The best you can do is to hide your broad forehead with a nice hairstyle.
X
Desktop Bottom Promotion