For Quick Alerts
ALLOW NOTIFICATIONS  
For Daily Alerts

ಸಣ್ಣ ಕಣ್ಣಿಗೆ ಹೀಗೆ ಮೇಕಪ್ ಮಾಡಿ

By Arpitha Rao
|

ಮುಖದ ಸೌಂದರ್ಯ ಹೆಚ್ಚುವುದು ಸುಂದರವಾದ ಕಣ್ಣುಗಳಿಂದ.ಕಣ್ಣುಗಳು ಭಾವನೆಗಳನ್ನು ವ್ಯಕ್ತಪಡಿಸುವ ಅಂಗ.ಹುಡುಗಿಯರ ಸುಂದರ ಕಣ್ಣುಗಳಿಗೆ ಮರುಳಾಗುವ ಹುಡುಗರು ಕೂಡ ಹೆಚ್ಚು.ಮೇಕಪ್ ಮಾಡಿಕೊಳ್ಳುವುದರ ಮೂಲಕ ಕಣ್ಣಿನ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬಹುದು.

ಕಣ್ಣುಗಳು ನಮ್ಮ ಮುಖದ ಅತಿ ಮೌಲ್ಯಯುತ ಅಂಗ. ನಿಗದಿತ ಸನ್ನಿವೇಶದ ಭಾವನೆಗಳನ್ನು ಕಣ್ಣುಗಳು ತಿಳಿಸುತ್ತವೆ.ಕಣ್ಣುಗಳು ಒಳ್ಳೆಯ ಮತ್ತು ಕೆಟ್ಟ ಎರಡೂ ಭಾವನೆಗಳನ್ನು ತಿಳಿಸುತ್ತವೆ.ಸಾಮಾನ್ಯವಾಗಿ ಜನರು ದೊಡ್ಡ ಕಣ್ಣನ್ನು ಹೊಂದಲು ಇಷ್ಟಪಡುತ್ತಾರೆ.ಹುಡುಗಿಯರು ದೊಡ್ಡ ಹೊಳೆಯುವ ಮೀನಿನಂತ ಕಣ್ಣನ್ನು ಹೊಂದಿದ್ದರೆ ನೋಡಲು ಸುಂದರವಾಗಿ ಕಾಣುತ್ತಾರೆ.ಕಣ್ಣಿನ ಕೆಳಗೆ ಕಾಜಲ್ ಅಥವಾ ಮಸ್ಕರಾ ಹಚ್ಚಿದರೆ ಸೌಂದರ್ಯ ಇನ್ನಷ್ಟು ಹೆಚ್ಚುತ್ತದೆ.

ಆದರೆ ಸಣ್ಣ ಕಣ್ಣನ್ನು ಹೊಂದಿದ ಹುಡಿಗಿಯರ ಗತಿಯೇನು?ಕೆಲವೊಮ್ಮೆ ಸಣ್ಣ ಕಣ್ಣುಗಳು ಮುಖ ಊದಿಕೊಂಡಂತೆ ಕಾಣುವಂತೆ ಮಾಡುತ್ತದೆ.ಹಾಗೆಯೇ ಸಣ್ಣ ಕಣ್ಣಿಗೆ ಸರಿಯಾದ ಮೇಕಪ್ ಮಾಡದಿದ್ದಲ್ಲಿ ಮುಖದ ಸೌಂದರ್ಯವನ್ನು ಇನ್ನಷ್ಟು ಹಾಳುಮಾಡಿ ಕಣ್ಣು ಇನ್ನೂ ಚಿಕ್ಕದೆನಿಸುವಂತೆ ಮಾಡುತ್ತದೆ.ಸಾಕಷ್ಟು ಮೇಕಪ್ ಗಳ ಮೂಲಕ ಸಣ್ಣ ಕಣ್ಣು ದೊಡ್ಡದಾಗಿ ಕಾಣಿಸುವಂತೆ ಸುಂದರವಾಗಿ ಮುಖಕ್ಕೆ ಹೊಂದಿಕೆಯಾಗುವಂತೆ ಮಾಡಬಹುದು.

Eye Makeup Tips For Small Eyes

ಸಣ್ಣ ಕಣ್ಣುಗಳಿಗೆ ಮಾಡಬೇಕಾದ ಮೇಕಪ್ ನ ಕೆಲವು ಟಿಪ್ಸ್:-
ಮಸ್ಕರಾ:
ಸಣ್ಣ ಕಣ್ಣುಗಳಿಗೆ ಮಸ್ಕರಾ ಹಚ್ಚುವ ಮೂಲಕ ಸುಂದರವಾಗಿ ಕಾಣುವಂತೆ ಮಾಡಬಹುದು.ಸಣ್ಣ ಕಣ್ಣುಗಳನ್ನು ಹೊಂದಿದವರು ಸಾಮಾನ್ಯವಾಗಿ ದಪ್ಪ ಮಸ್ಕರಾ ಬಳಸುತ್ತಾರೆ ಇದರಿಂದ ಕಣ್ಣುಗಳು ಸ್ವಲ್ಪ ದೊಡ್ಡದಾಗಿ ಸುಂದರವಾಗಿ ಕಾಣುತ್ತವೆ.ಸಣ್ಣ ಕಣ್ಣುಗಳನ್ನು ಹೊಂದಿದವರು ಕಣ್ಣುಗಳ ಮೇಲೆ ಮತ್ತು ಕೆಳಗಿನ ರೆಪ್ಪೆಗಳಿಗೆ ಮಸ್ಕರ ಬಳಸುವುದು ಉತ್ತಮ.ಕಣ್ಣಿನ ಆಕಾರ ಇರುವ ರೀತಿಯಲ್ಲಿ ಮಸ್ಕರಾ ಹಚ್ಚುವ ಮೊದಲು ಒಂದು ಶೇಡ್ ಕೊಡಬಹುದು.ಇದರಿಂದ ಕಣ್ಣಿನ ಆಕಾರ ಸುಂದರವಾಗಿ ಕಾಣುತ್ತದೆ.

ಐ ಲೈನರ್ :-
ಐ ಲೈನರ್ ಬಳಸುವುದರಿಂದ ಸಣ್ಣ ಕಣ್ಣುಗಳು ಸುಂದರವಾಗಿ ಕಾಣುತ್ತವೆ.ಇದು ಕಣ್ಣಿಗೆ ಸರಿಯಾದ ಆಕರ ನೀಡುತ್ತವೆ.ಲೈಟ್ ಅಥವಾ ಬಿಳಿ ಬಣ್ಣದ ಐ ಲೈನರ್ ಬಳಸುವುದರಿಂದ ಅದು ಮಸ್ಕರಾ ಶೇಡ್ ಜೊತೆಗೆ ಸುಂದರವಾಗಿ ಕಾಣುತ್ತದೆ.ನೀವು ಡಾರ್ಕ್ ಬಣ್ಣದ ಐ ಲೈನರ್ ಅನ್ನು ಕೂಡ ಬಳಸಬಹುದು.ಐ ಲೈನರ್ ಬಳಸುವಾಗ ಎರಡೂ ರೀತಿಯದನ್ನು ಬಳಸಿ ನೋಡಿ, ನಿಮಗೆ ಯಾವುದು ಸೂಕ್ತವಾಗಿ ಕಾಣಿಸುತ್ತದೆಯೋ ಅದನ್ನೇ ಬಳಸಿ.

ಐ ಶಾಡೋಸ್ ಬಳಸಿ :-
ಸಣ್ಣ ಕಣ್ಣುಗಳನ್ನು ಹೊಂದಿದವರಿಗೆ ಐ ಶಾಡೋಸ್ ಉತ್ತಮ ಮೇಕಪ್ ಎನ್ನಬಹುದು.ಸಂಜೆ ಸಮಯದ ಕಾರ್ಯಕ್ರಮಗಳಿಗೆ ಡಾರ್ಕ್ ಬಣ್ಣಗಳ ಶಾಡೋ ಅಂದರೆ ಗ್ರೇ,ಕಪ್ಪು,ನೇರಳೆ ಬಣ್ಣಗಳನ್ನು ಬಳಸಿ.ಮಧ್ಯಾನ್ಹದ ಕಾರ್ಯಕ್ರಮಗಳಿಗೆ ಹೋಗುವುದಾದರೆ ಗುಲಾಬಿ,ಬ್ರೌನ್ ಮತ್ತು ಮರೂನ್ ಬಣ್ಣದ ಐ ಶಾಡೋ ಬಳಸಿ.ಹುಡುಗಿಯರಿಗೆ ಗಾಡ ಬಣ್ಣದ ಐ ಶಾಡೋಗಳು ಒಪ್ಪುತ್ತವೆ.ಐ ಶಾಡೋಗಳು ನೀವು ತೊಟ್ಟ ಬಟ್ಟೆಗೆ ಅಥವಾ ಆಭರಣಗಳಿಗೆ ಹೊಂದುವಂತಹವಾಗಿರಬೇಕು.

ಪ್ರೈಮರ್ ಮತ್ತು ಫೌಂಡೆಶನ್:-
ಇದು ಮೊದಲು ಕಣ್ಣಿಗೆ ಬಳಸಬೇಕಾದ ಮೇಕಪ್ ಸಾಧನ.ಫೌಂಡೆಶನ್ ಅಥವಾ ಐ ಶಾಡೋ ಇವುಗಳನ್ನು ಹಚ್ಚುವ ಮೊದಲು ಪ್ರೈಮರ್ ಅನ್ನು ಹಚ್ಚಬೇಕು.ಇದು ಮೇಕಪ್ ಹೆಚ್ಚು ಹೊತ್ತು ಉಳಿಯಲು ಸಹಕರಿಸುತ್ತದೆ.ಫೌಂಡೆಶನ್ ಅಥವಾ ಕನ್ಸೀಲರ್ ಕಣ್ಣಿನ ಸುತ್ತ ಕಪ್ಪು ಕಲೆಯನ್ನು ಕಾಣದಂತೆ ತಡೆಯುತ್ತದೆ.

ಐ ಶಿಮ್ಮರ್ :-
ಶಿಮ್ಮರ್ ಪೌಡರ್ ಉಪಯೋಗಿಸುವುದರಿಂದ ಕಣ್ಣುಗಳು ಹೊಳೆಯುವಂತೆ ಮಾಡಿ ಸುಂದರವಾಗಿ ಕಾಣುವಂತೆ ಮಾಡುತ್ತವೆ.ಶಿಮ್ಮರ್ ಬಳಸುವುದರಿಂದ ಸಣ್ಣ ಕಣ್ಣುಗಳಿಂದ ಕೆನ್ನೆಗಳು ಊದಿಕೊಂಡಂತೆ ಕಾಣುವುದನ್ನು ತಪ್ಪಿಸಬಹುದು.ಶಿಮ್ಮರ್ ಅನ್ನು ಬಳಸುವಾಗ ಕಾಳಜಿ ವಹಿಸಿ,ಹೆಚ್ಚು ಶಿಮ್ಮರ್ ಬಳಸಿದರೆ ಮುಖ ಆಡಂಬರ ಎನಿಸುತ್ತದೆ.ಶಿಮ್ಮರ್ ಪೌಡರ್ ಅನ್ನು ಕಣ್ಣಿನ ಮೇಲ್ಭಾಗ ಮತ್ತು ಕಣ್ಣಿನ ಅಡಿಯಲ್ಲಿ ಮಾತ್ರ ಬಳಸಬೇಕು.

ಈ ಮೇಲೆ ತಿಳಿಸಿದ ಮೇಕಪ್ ಸಣ್ಣ ಕಣ್ಣುಗಳನ್ನು ಹೊಂದಿದವರು ಬಳಸಬಹುದಾದ ಮೇಕಪ್ ಗಳು.ಜೊತೆಗೆ ರಾತ್ರಿ ಮಲಗುವ ಮುನ್ನ ಮೇಕಪ್ ಅನ್ನು ಸಂಪೂರ್ಣವಾಗಿ ತೆಗೆದು ಮಲಗಲು ಮರೆಯದಿರಿ.ಯಾವಾಗಲು ಒಳ್ಳೆಯ ಮೇಕಪ್ ಬಳಸಿ.ಕಣ್ಣುಗಳು ನಮಗೆ ದೇವರು ನೀಡಿದ ಉಡುಗೊರೆ ಅವುಗಳನ್ನು ಜೋಪಾನವಾಗಿ ಕಾಪಾಡಿ.

English summary

Eye Makeup Tips For Small Eyes

Eyes are the most expressive feature of our face.People are very fond of big eyes.But what about the girls having smaller eyes. Sometimes, small eyes make the cheeks look swollen and give a bad look. Also, if appropriate make up is not applied on smaller eyes, they tend to look much more smaller.
Story first published: Thursday, November 28, 2013, 9:15 [IST]
X
Desktop Bottom Promotion