For Quick Alerts
ALLOW NOTIFICATIONS  
For Daily Alerts

ಎಣ್ಣೆಗೆಂಪಿನ ಮೈ ಬಣ್ಣದವರಿಗೆ ಮೇಕಪ್ ಟಿಪ್ಸ್

|

ಕೆಲವರಿಗೆ ನನ್ನ ತ್ವಚೆ ಕಪ್ಪಾಗಿದೆ ಎಂಬ ಕೀಳಿರಿಮೆ ಇರುತ್ತದೆ. ಈ ರೀತಿಯ ಕೀಳಿರಿಮೆ ಇದ್ದರೆ ಇಂದೇ ಅದನ್ನು ಬಿಟ್ಟು ಬಿಡಿ. ಬೆಳ್ಳಗಿದ್ದ ಮಾತ್ರ ಸುಂದರವಾಗಿ ಕಾಣುತ್ತೇವೆ ಅನ್ನುವುದು ಸುಳ್ಳು, ಸಿನಿಮಾ ರಂಗದಲ್ಲಿ ಎಷ್ಟೊಂದು ಮಂದಿ ಪ್ರಸಿದ್ಧ ಕೃಷ್ಣ ಸುಂದರಿಯರು ಇಲ್ಲವೇ? ಬಣ್ಣಕ್ಕಿಂತ, ನಮ್ಮಲ್ಲಿರುವ ಮೇಕಪ್ ಸೆನ್ಸ್ ನಮ್ಮ ಲುಕ್ ನ ಮೇಲೆ ಪ್ರಭಾವ ಬೀರುತ್ತದೆ ಅನ್ನುವುದನ್ನು ಮರೆಯದಿರಿ.

ಎಣ್ಣೆ ತ್ವಚೆಗೆ ಸರಿಹೊಂದುವ ಮೇಕಪ್ ಆಯ್ಕೆ ಮಾಡಿದರೆ ತುಂಬಾ ಆಕರ್ಷಕವಾಗಿ ಕಾಣಿಸುವುದು. ಇಲ್ಲಿ ನಾವು ಕೆಲ ಮೇಕಪ್ ಟಿಪ್ಸ್ ನೀಡಿದ್ದೇವೆ, ಇವುಗಳನ್ನು ಪಾಲಿಸಿದ್ದೇ ಆದರೆ ಪರ್ಫೆಕ್ಟ್ ಸೌಂದರ್ಯ ನಿಮ್ಮದಾಗುವುದು.

Easy Makeup Tips For Dark Skin Tone

ಲಿಕ್ವಿಡ್ ಪೌಂಡೇಶನ್
ಎಣ್ಣೆಗೆಂಪಿನ ಮೈ ಬಣ್ಣಕ್ಕೆ ಪೌಡರ್ ಪೌಂಡೇಶನ್ ಕ್ಕಿಂತ ಲಿಕ್ವಿಡ್ ಪೌಂಡೇಶನ್ ಬಳಸುವುದು ಒಳ್ಳೆಯದು. ತ್ವಚೆ ಬಣ್ಣದ ಪೌಂಡೇಶನ್ ಹಚ್ಚಿ, ಪೌಂಡೇಶನ್ ಗೆ ಸ್ವಲ್ಪ ಮಾಯಿಶ್ಚರೈಸರ್ ಹಾಕಿ ಚೆನ್ನಾಗಿ ಬ್ಲೆಂಡ್ ಮಾಡಿ ಮುಖಕ್ಕೆ ಹಚ್ಚಿದರೆ ನುಣಪಾಗಿ ಕಾಣುವುದು.

ಪೌಡರ್
ಮುಖ ಎಣ್ಣೆ-ಎಣ್ಣೆಯಾಗುವುದನ್ನು ತಡೆಗಟ್ಟಲು ಪೌಡರ್ ಹಚ್ಚಿ, ಪೌಂಡೇಶನ್ ಹಚ್ಚಿ ಅದು ಸ್ವಲ್ಪ ಒಣಗಿದ ಬಳಿಕ ಲೈಟಾಗಿ ಪೌಡರ್ ಹಚ್ಚಿ.

ಲಿಪ್ ಲೈನರ್
ಲಿಪ್ ಸ್ಟಿಕ್ ಹಚ್ಚುವ ಮುನ್ನ ತುಟಿಗೆ ಲಿಪ್ ಸ್ಟಿಕ್ ಗೆ ಮ್ಯಾಚ್ ಆಗುವ ಬಣ್ಣದ ಲಿಪ್ ಲೈನರ್ ಹಚ್ಚಬೇಕು.

ಲಿಪ್ ಸ್ಟಿಕ್ ಬಣ್ಣ
ಲಿಪ್ ಸ್ಟಿಕ್ ಬಣ್ಣ ನಿಮ್ಮ ತ್ವಚೆಗೆ ಹೊಂದುವಂತಿರಲಿ, ಕಡು ಕೆಂಪು ಬಣ್ಣ, ನೇರಳೆ ಬಣ್ಣ, ಚಾಕಲೇಟ್ ಬಣ್ಣದ ಲಿಪ್ ಸ್ಟಿಕ್ ಎಣ್ಣೆಗೆಂಪಿನ ಮೈ ಬಣ್ಣದವರಿಗೆ ಚೆನ್ನಾಗಿ ಒಪ್ಪುತ್ತದೆ.

ಕಣ್ಣಿನ ಅಲಂಕಾರ
ಕಣ್ಣಿನ ಅಲಂಕಾರ ಸಿಂಪಲ್ ಆಗಿರಲಿ. ಐ ಶ್ಯಾಡೋ ಹಚ್ಚುವುದಾದರೆ ಕಾಪರ್, ಗ್ರೀನ್ , ಪರ್ಪಲ್ ಕಲರ್ ಚೆನ್ನಾಗಿ ಹೊಂದುತ್ತದೆ.

ಐ ಬ್ರೋ
ಐ ಬ್ರೋ ಶೇಪ್ ನಲ್ಲಿರಲಿ. ಐ ಬ್ರೋ ತುಂಬಾ ತೆಳುವಾಗಿದ್ದರೆ ಮಾತ್ರ ಐಬ್ರೋ ಪೆನ್ಸಿಲ್ ಬಳಸಿ, ಇಲ್ಲದಿದ್ದರೆ ಅವಶ್ಯಕತೆ ಇಲ್ಲ.

English summary

Easy Makeup Tips For Dark Skin Tone

Who said you have no right to appear vibrant with a dark skin texture? Make up can do it all for you. Here you have the trusted make up tips which would really turn the way you look.
X
Desktop Bottom Promotion