For Quick Alerts
ALLOW NOTIFICATIONS  
For Daily Alerts

ಆಕರ್ಷಕ ಕಣ್ಣಿಗಾಗಿ ನೀಲಿ ಬಣ್ಣದ ಐಶ್ಯಾಡೊ

By Super
|

ಕಾಲಕ್ಕೆ ತಕ್ಕಂತೆ ಮೇಕಪ್ ಬದಲಾಗುತ್ತಾ ಇರುತ್ತದೆ. ಅದರಲ್ಲೂ ಕಾಲೆಜು ಯುವತಿಯರು, ಕಾರ್ಪೋರೇಟ್ ಸಂಸ್ಥೆಗಳಲ್ಲಿ ಕೆಲಸ ಮಾಡುವ ಹೆಚ್ಚಿನ ಯುವತಿಯರು ಫ್ಯಾಷನ್ ಆಗಿ ಇರಲು ಇಷ್ಟಪಡುತ್ತಾರೆ. ಈಗ ನೀಲಿ ಬಣ್ಣದ ಈ ಶ್ಯಾಡೊ ಹಚ್ಚುವುದು ಟ್ರೆಂಡ್. ಐ ಶ್ಯಾಡೊ ಹಚ್ಚಿ ಮತ್ತಷ್ಟು ಆಕರ್ಷಕವಾಗಿ ಕಾಣಲು ಈ ಕೆಳಗಿನ ವಿಧಾನಗಳನ್ನು ಅನುಸರಿಸಬಹುದು.

1.
ನೀಲಿ ಬಣ್ಣದ ಐ ಶ್ಯಾಡೊ ಕಂದು ಮತ್ತು ಸಾಧಾರಣ ಕಣ್ಣಿನ ಬಣ್ಣಕ್ಕೆ ಚೆನ್ನಾಗಿ ಕಾಣಿಸುವುದು. ಈ ಐಶ್ಯಾಡೊವನ್ನು ಹಗಲಿನಲ್ಲಿ ಹಚ್ಚುವಾಗ ಅದಕ್ಕೆ ಕಂದು ಬಣ್ಣವನ್ನು ಮಿಶ್ರ ಮಾಡಿ ಹಚ್ಚಿದರೆ ಮತ್ತಷ್ಟು ಆಕರ್ಷಕವಾಗಿ ಕಾಣುವುದು. ರಾತ್ರಿ ಪಾರ್ಟಿಗಳಿಗೆ ಹಚ್ಚುವುದಾದರೆ ನೀಲಿ ಮತ್ತು ಸಿಲ್ವರ್ ಬಣ್ಣದ ಐ ಶ್ಯಾಡೊ ಮಿಶ್ರ ಮಾಡಿ ಹಚ್ಚಿದರೆ ಮುಖದ ಹೊಪು ಹೆಚ್ಚುವುದು.

TipsTo Apply Blue Eyesshadow

2. ಇದನ್ನು ಹಚ್ಚುವ ಮೊದಲು ಮುಖವನ್ನು ಕ್ಲೆನ್ಸ್ ಮಾಡಬೇಕು. ನಂತರ ಐ ಶ್ಯಾಡೊ ಹಚ್ಚುವಾಗ ಅದು ಕಣ್ಣಿನ ಒಳಭಾಗದಂತೆ ತಾಗದಂತೆ ಎಚ್ಚರಿಕೆವಹಿಸಬೇಕು.

3. ಐ ಶ್ಯಾಡೊ ಹಚ್ಚುವ ಮೊದಲು ಮುಖ ಮತ್ತು ಕಣ್ಣಿನ ರೆಪ್ಪೆಗಳ ಮೇಲೆ ಫೌಂಡೇಶನ್ ಹಚ್ಚಬೇಕು. ಇದರಿಂದ ಕಣ್ಣಿನ ಮೇಕಪ್ ಬೇಗನೆ ಹಾಳಾಗುವುದಿಲ್ಲ.

4. ಐ ಬ್ರಷ್ ಬಳಸಿ ಕಣ್ಣಿನ ಮೇಲಿನ ರೆಪ್ಪೆಗಳಿಗೆ ಐ ಶ್ಯಾಡೊ ಹಚ್ಚಬೇಕು. ಹೀಗೆ ಹಚ್ಚುವಾಗ ಹುಬ್ಬಿನವರೆಗೆ ಹಚ್ಚಬಾರದು.

5. ತೆಳ್ಳನೆಯ ಬ್ರಷ್ ಮೂಗಿನ ತುದಿಗೆ ಸ್ವಲ್ಪ ಗೆರೆ ರೀತಿ ಎಳೆಯಬೇಕು.

6. ಬೇರೆ ಯಾವುದೇ ಬಣ್ಣ ಮಿಶ್ರ ಮಾಡದೆ ಐ ಶ್ಯಾಡೊವನ್ನು ತೆಳುವಾಗಿ ಕೆಳ ರೆಪ್ಪೆಗಳಿಗೆ ಹಚ್ಚಬೇಕು.

7. ಈಗ ಕಂದು ಬಣ್ಣದ ಐ ಶ್ಯಾಡೊವನ್ನು ನೀಲಿ ಬಣ್ಣದ ಜೊತೆ ಮಿಶ್ರ ಮಾಡಿ ಹುಬ್ಬಿನ ಕೆಳಭಾಗದ ಮೂಳೆ ಭಾಗಕ್ಕೆ ಹಚ್ಚಿದರೆ ಫ್ಯಾಷನೇಬಲ್ ಆಗಿ ಕಾಣುವುದು ಮತ್ತು ಅಂದ ಹೆಚ್ಚುವುದು.

English summary

Best TipsTo Apply Blue Eyesshadow | Tips For Eye Beauty | ನೀಲಿ ಬಣ್ಣದ ಐ ಶ್ಯಾಡೊವನ್ನು ಆಕರ್ಷಕವಾಗಿ ಹಚ್ಚುವ ವಿಧಾನ | ಕಣ್ಣಿನ ಸೌಂದರ್ಯಕ್ಕೆ ಕೆಲ ಸಲಹೆಗಳು

Blue eyeshadow is the summer makeup trend for this year. This bold colour cannot be used by every woman. Therefore, choose your blue colour wisely.
X
Desktop Bottom Promotion