For Quick Alerts
ALLOW NOTIFICATIONS  
For Daily Alerts

ನೆರಿಗೆ ಮರೆ ಮಾಚಿಸುವ ಕಣ್ಣಿನ ಮೇಕಪ್

|
Make Up To Hide Wrinkles
ಎಲ್ಲರನ್ನು ಸೆಳೆಯುವ ಕಣ್ಣಿನ ಸೌಂದರ್ಯ ಕುರಿತು ನಿತ್ಯ ಕಾಳಜಿ ವಹಿಸಬೇಕು. ಕೆಲಸದ ಒತ್ತಡ, ಸರಿಯಾಗಿ ನಿದ್ದೆ ಮಾಡದಿರುವುದು, ತ್ವಚೆ ಆರೈಕೆ ಮಾಡದಿದ್ದರೆ ಕಣ್ಣಿನ ಕೆಳಗೆ ಕಪ್ಪು ಕಲೆ ಮತ್ತು ನೆರಿಗೆ ಬರುತ್ತದೆ. ಕಣ್ಣಿನ ಕೆಳಗೆ ನೆರಿಗೆ ಬಂದರೆ ಅದು ಮುಖದ ಕಾಂತಿಯನ್ನೇ ಮಂಕಾಗಿಸುತ್ತದೆ. ಈ ರೀತಿಯ ನೆರಿಗೆ ಉಂಟಾದರೆ ಈ ಕೆಳಗಿನ ಮೇಕಪ್ ಬಳಸಿ ನೆರಿಗೆಯನ್ನು ಮರೆಮಾಚಿ.

1. ಕನ್ಸೀಲರ್ ಅಥವಾ ಲಿಕ್ವಿಡ್ ಫೌಂಡೇಶನ್ ಕಣ್ಣಿನ ಕೆಳಗೆ ಹಚ್ಚಿ ಅದು ಸ್ವಲ್ಪ ಒಣಗಿದ ಮೇಲೆ ಪೌಂಡೇಶನ್ ಕ್ರೀಮ್ ಹಚ್ಚಬೇಕು.

2. ಕಪ್ಪು ಐ ಲೈನರ್ ನಿಂದ ಕಣ್ಣಿನ ಕೆಳಬಾಗದಲ್ಲಿ ಸ್ವಲ್ಪ ಗಾಢವಾಗಿ ಹಚ್ಚಬೇಕು ಆಗ ನೆರಿಗೆ ಎದ್ದು ಕಾಣುವುದಿಲ್ಲ.

3. ಐಶಾಡೊ ಹಚ್ಚುವುದಾದರೆ ತ್ವಚೆಗೆ ಹೊಂದುವ ಬಣ್ಣವನ್ನು ಹಚ್ಚಿ. ಶಾಡೊ ಹಚ್ಚಿದರೆ ಕಣ್ಣು ಮತ್ತಷ್ಟು ಹೊಳಪಿನಿಂದ ಕಾಣುವುದು.

4. ಮಸ್ಕರಾ ಹಚ್ಚಿದರೆ ಕಣ್ರೆಪ್ಪೆ ಉದ್ದವಾಗಿ ಆಕರ್ಷಕವಾಗಿ ಕಾಣುತ್ತದೆ.

5. ಕೆನ್ನೆಗೆ ಶಿಮ್ಮರ್ ಹಚ್ಚುವುದಾದರೆ ಗಾಢವಾಗಿ ಹಚ್ಚಬಾರದು. ಹೀಗೆ ಶಿಮ್ಮರ್ ಹಚ್ಚುವುದಾದರೆ ತ್ವಚೆಗೆ ಹೊಂದುವ ಬಣ್ಣದ ಶಿಮ್ಮರ್ ಹಚ್ಚಿ.

English summary

Eye Make Up To Hide Wrinkles | Tips For Beauty | ನೆರಿಗೆಯನ್ನು ಮರೆಮಾಚಲು ಕಣ್ಣಿನ ಮೇಕಪ್ | ಸೌಂದರ್ಯಕ್ಕಾಗಿ ಕೆಲ ಸಲಹೆ

If you are having wrinkles under your eye don't worry. Here there few tips that will help you to hide wrinkles on your face and made you to look beautiful.
Story first published: Friday, February 3, 2012, 12:07 [IST]
X
Desktop Bottom Promotion